ಐಎನ್‌ಎಸ್‌ ಬ್ರಹ್ಮಪುತ್ರಕ್ಕೆ ಬೆಂಕಿ ದುರಂತ: ನಾಪತ್ತೆಯಾಗಿದ್ದ ಸೈಲರ್ ಮೃತದೇಹ ಪತ್ತೆ

By Anusha Kb  |  First Published Jul 25, 2024, 11:36 AM IST

ಎರಡು ದಿನಗಳ ಹಿಂದೆ ನಡೆದ ಭಾರತೀಯ ನೌಕಾಪಡೆಯ ಯುದ್ಧನೌಕೆ ಐಎನ್‌ಎಸ್‌ ಬ್ರಹ್ಮಪುತ್ರದಲ್ಲಿ ಬೆಂಕಿ ಬಿದ್ದ  ಸಂದರ್ಭದಲ್ಲಿ ನಾಪತ್ತೆಯಾಗಿದ್ದ ಸೈಲರ್‌ ಶವ ಘಟನೆ ನಡೆದ 48 ಗಂಟೆಗಳ ನಂತರ ಪತ್ತೆಯಾಗಿದೆ. 


ಮುಂಬೈ: ಎರಡು ದಿನಗಳ ಹಿಂದೆ ನಡೆದ ಭಾರತೀಯ ನೌಕಾಪಡೆಯ ಯುದ್ಧನೌಕೆ ಐಎನ್‌ಎಸ್‌ ಬ್ರಹ್ಮಪುತ್ರದಲ್ಲಿ ಬೆಂಕಿ ಬಿದ್ದ  ಸಂದರ್ಭದಲ್ಲಿ ನಾಪತ್ತೆಯಾಗಿದ್ದ ಸೈಲರ್‌ ಶವ ಘಟನೆ ನಡೆದ 48 ಗಂಟೆಗಳ ನಂತರ ಪತ್ತೆಯಾಗಿದೆ. 

ಭಾರತೀಯ ನೌಕಾಪಡೆಯಲ್ಲಿ ಕೆಲಸ ಮಾಡುತ್ತಿದ್ದ ಸೀಮನ್‌ ಸತ್ಯೇಂದ್ರ ಸಿಂಗ್ ಅವರು ಬೆಂಕಿ ದುರಂತದ ಬಳಿಕ ನಾಪತ್ತೆಯಾಗಿದ್ದರು. ಅವರ ಶವ ಈಗ ಪತ್ತೆಯಾಗಿದೆ. ಸುಮಾರು 48 ಗಂಟೆಗಳ ಶೋಧ ಕಾರ್ಯಾಚರಣೆಯ ನಂತರ ಅವರ ಶವ ಪತ್ತೆಯಾಗಿದೆ. ಐಎಸ್‌ಎಸ್ ಬ್ರಹ್ಮಪುತ್ರ ಯುದ್ಧನೌಕೆಯ ನಿರ್ವಹಣೆ ಹಾಗೂ ಮರುಜೋಡಣೆ ವೇಳೆ ಹಠಾತ್ ಆಗಿ ನೌಕೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.  ಘಟನೆಯಲ್ಲಿ ಯುದ್ಧನೌಕೆಗೂ ತೀವ್ರವಾಗಿ ಹಾನಿಯಾಗಿದ್ದು, ಸಂಪೂರ್ಣ ಒಂದು ಕಡೆಗೆ ವಾಲಿ ಬಿದ್ದಿದೆ. ಭಾನುವಾರ ರಾತ್ರಿ ಈ ಘಟನೆ ನಡೆದಿತ್ತು.  ಮುಂಬೈನ ನೌಕಾಪಡೆಗೆ ಸೇರಿದ ಬಂದರಿನಲ್ಲಿ ನಿರ್ವಹಣೆಯ ಕಾರಣಕ್ಕಾಗಿ ಈ ಹಡಗನ್ನು ನಿಲ್ಲಿಸಲಾಗಿತ್ತು.  

Tap to resize

Latest Videos

undefined

ಬೆಂಕಿ ಬಿದ್ದು ಐಎನ್‌ಎಸ್ ಬ್ರಹ್ಮಪುತ್ರಕ್ಕೆ ಭಾರಿ ಹಾನಿ : ಸೈಲರ್ ನಾಪತ್ತೆ

ಐಎನ್‌ಎಸ್ ಬ್ರಹ್ಮಪುತ್ರವನ್ನು ಮತ್ತೆ ಸರಿಯಾದ ಸ್ಥಿತಿಗೆ ತರಲು ಹಾಗೂ ಯುದ್ಧಕ್ಕೆ ಸನ್ನದ್ಧ ಸ್ಥಿತಿಯಲ್ಲಿ ಇಡಲು ಎಲ್ಲಾ ಕ್ರಮಗಳನ್ನು ತಕ್ಷಣವೇ ಆರಂಭಿಸಲುಯ ಕಮಾಂಡ್ ಮತ್ತು ನೌಕಾ ಪ್ರಧಾನ ಕಚೇರಿಗೆ ಎಲ್ಲಾ ಕ್ರಮಗಳನ್ನು ತಕ್ಷಣವೇ ಪ್ರಾರಂಭಿಸಬೇಕು ಎಂದು ನೌಕಾಪಡೆಯ ಮುಖ್ಯಸ್ಥರು ಸೂಚಿಸಿದ್ದಾರೆ ಎಂದು ಭಾರತೀಯ ನೌಕಾಪಡೆ ಹೇಳಿಕೆಯಲ್ಲಿ ತಿಳಿಸಿದೆ ಮತ್ತು ತೀವ್ರವಾದ ಡೈವಿಂಗ್ ಕಾರ್ಯಾಚರಣೆಯ ನಂತರ ಸಿಂಗ್ ಅವರ ಮೃತದೇಹಗಳು ಪತ್ತೆಯಾಗಿವೆ. ಘಟನಾ ಸ್ಥಳಕ್ಕೆ ನೌಕಾಪಡೆ ಸಿಬ್ಬಂದಿಯ ಮುಖ್ಯಸ್ಥ (CNS) ಅಡ್ಮಿರಲ್ ದಿನೇಶ್ ತ್ರಿಪಾಠಿ  ಭೇಟಿ ನೀಡಿದ್ದು, ಘಟನೆಯ ಮಾಹಿತಿ ಪಡೆದಿದ್ದಾರೆ ಜೊತೆ ಪಶ್ಚಿಮ ನೌಕಾ ಕಮಾಂಡ್‌ನಲ್ಲಿ (Western Naval Command) ಸುರಕ್ಷತಾ ನಿಯಮಗಳನ್ನು ಪರಿಶೀಲಿಸಿದ್ದಾರೆ. 

ಭಾನುವಾರ ಸಂಜೆ ಮುಂಬೈ ನೌಕಾನೆಲೆಯ ಬಂದರಿನಲ್ಲಿ ಐಎನ್‌ಎಸ್‌ ಬ್ರಹ್ಮಪುತ್ರದ ಭಾಗಗಳನ್ನು ಮರು ಜೋಡಿಸುವ ವೇಳೆ ಈ ಬೆಂಕಿ ಅನಾಹುತ ಸಂಭವಿಸಿತ್ತು. ಕೂಡಲೇ  ಬಂದರಿನಲ್ಲಿರುವ ಇತರ ಹಡಗುಗಳ ಅಗ್ನಿಶಾಮಕ ಸಿಬ್ಬಂದಿಯ ನೆರವಿನಿಂದ ಹಡಗಿನ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯ್ತು. ಅಲ್ಲದೇ ಮುಂದೆಯೂ ಬೆಂಕಿ ಬೀಳುವಂತಹ ಯಾವುದಾದರೂ ಅಪಾಯಗಳಿವೆಯೇ ಎಂದು ಮರುಪರಿಶೀಲನೆ ನಡೆಸಿ ನೈರ್ಮಲ್ಯ ತಪಾಸಣೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಯ್ತು ಎಂದು ನೌಕಾಪಡೆ ಹೇಳಿತ್ತು.

ಬೆಂಕಿ ಬಿದ್ದ ನಂತರ ಹಡಗು ಸಂಪೂರ್ಣ ನಿಯಂತ್ರಣ ಕಳೆದುಕೊಂಡಿದ್ದು, ಅದನ್ನು ಸರಿಯಾದ ಸ್ಥಾನಕ್ಕೆ ತರುವ ಎಲ್ಲಾ ಪ್ರಯತ್ನಗಳು ವಿಫಲವಾಗಿದ್ದವು. ಐಎನ್‌ಎಸ್‌ ಬ್ರಹ್ಮಪುತ್ರ ಹಡಗು ದೇಶಿಯವಾಗಿ ನಿರ್ಮಿಸಿದ ಬ್ರಹ್ಮಪುತ್ರ ಕ್ಲಾಸ್‌ನ ಮಾರ್ಗದರ್ಶಿ ಕ್ಷಿಪಣಿ ಹೊಂದಿರುವ ಯುದ್ಧನೌಕೆಗಳಲ್ಲಿ ಮೊದಲನೆಯದಾಗಿದೆ. 2000ನೇ ಇಸವಿಯ ಏಪ್ರಿಲ್‌ನಲ್ಲಿ ಭಾರತೀಯ ನೌಕಾಪಡೆಗೆ ಇದನ್ನು ನಿಯೋಜಿಸಲಾಯ್ತು. ಇದರಲ್ಲಿ 40 ಅಧಿಕಾರಿಗಳು ಹಾಗೂ 330 ಸೈಲರ್‌ಗಳು ಅಂದರೆ ನಾವಿಕ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ.

ಮಾಲ್ಡೀವ್ಸ್‌ನತ್ತ ಚೀನಾ ಗೂಢಚರ್ಯೆ ನೌಕೆ: ಭಾರತ-ಮಾಲ್ಡೀವ್ಸ್‌ ಸಂಘರ್ಷದ ಬೆನ್ನಲ್ಲೇ ಈ ಬೆಳವಣಿಗೆ

ಈ ಹಡಗು ಮಧ್ಯಮ ಶ್ರೇಣಿಯೊಂದಿಗೆ ಹೊಂದಿಕೊಂಡಿದ್ದು, , ಹತ್ತಿರದ ವ್ಯಾಪ್ತಿಯ ಮತ್ತು ವಿಮಾನ ವಿರೋಧಿ ಬಂದೂಕುಗಳನ್ನು ಹೊಂದಿದೆ.  ಮೇಲ್ಮೈಯಿಂದ ಮೇಲ್ಮೈ ಏರ್‌ ಕ್ಷಿಪಣಿಗಳು ಮತ್ತು ಟಾರ್ಪಿಡೊ ಲಾಂಚರ್‌ಗಳನ್ನು ಇದರಲ್ಲಿ ಅಳವಡಿಸಲಾಗಿದೆ. ಈ ಯುದ್ಧ ವಿಮಾನವೂ ನೀರಿನ ಮೇಲಿನ ಅಥವಾ ಸಾಗರದಲ್ಲಿ ನಡೆಸಬಹುದಾದ  ಎಲ್ಲಾ ಯುದ್ಧಗಳಿಗೂ ಸಾಥ್ ನೀಡುವ ಅಂಶಗಳನ್ನು ಒಳಗೊಂಡಿದೆ. ಇದರ ಜೊತೆಗೆ ಚೇತಕ್ ಹೆಲಿಕಾಪ್ಟರ್‌ಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.

click me!