Asianet Suvarna News Asianet Suvarna News

ಜಮ್ಮು ಕಾಶ್ಮೀರದಲ್ಲಿ ಡಬಲ್‌ ಎನ್‌ಕೌಂಟರ್‌, ಸೇನೆಗೆ ಸವಾಲು ಹಾಕಿದ ನಾಲ್ವರು ಭಯೋತ್ಪಾದಕರು ಹತ!

ಗುಪ್ತಚರ ಮಾಹಿತಿಯ ಆಧಾರದ ಮೇಲೆ ಭದ್ರತಾ ಪಡೆಗಳು ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ ಕುಲ್ಗಾಮ್ ಜಿಲ್ಲೆಯ ಮೊದರ್ಗಾಮ್ ಗ್ರಾಮದಲ್ಲಿ ಮೊದಲ ಗುಂಡಿನ ಚಕಮಕಿ ನಡೆದಿತ್ತು.

twin encounters break out in Jammu and Kashmir 4 terrorists killed san
Author
First Published Jul 6, 2024, 10:11 PM IST

ಶ್ರೀನಗರ (ಜು.6): ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಶನಿವಾರ ನಡೆದ ಪ್ರತ್ಯೇಕ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಗಳು ನಾಲ್ವರು ಭಯೋತ್ಪಾದಕರನ್ನು ಹೊಡೆದುರುಳಿಸಿದರೆ ಕನಿಷ್ಠ ಒಬ್ಬ ಯೋಧ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುಪ್ತಚರ ಮಾಹಿತಿಯ ಆಧಾರದ ಮೇಲೆ ಭದ್ರತಾ ಪಡೆಗಳು ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ ಕುಲ್ಗಾಮ್ ಜಿಲ್ಲೆಯ ಮೊದರ್ಗಾಮ್ ಗ್ರಾಮದಲ್ಲಿ ಮೊದಲ ಗುಂಡಿನ ಚಕಮಕಿ ನಡೆಯಿತು. ಕನಿಷ್ಠ ಎರಡರಿಂದ ಮೂರು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಅವರ ಅಡಗುತಾಣದಲ್ಲಿ ಹೊಡೆದುರುಳಿಸಿವೆ. ಗುಂಡಿನ ಚಕಮಕಿಯ ಬಗ್ಗೆ ಮಾಹಿತಿ ನೀಡಿದ ಕಾಶ್ಮೀರ ವಲಯ ಪೊಲೀಸರು ಮೈಕ್ರೋಬ್ಲಾಗಿಂಗ್ ಸೈಟ್ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು"ಕುಲ್ಗಾಮ್ ಜಿಲ್ಲೆಯ ಮೊಡೆರ್ಗಾಮ್ ಗ್ರಾಮದಲ್ಲಿ ಎನ್‌ಕೌಂಟರ್ ಪ್ರಾರಂಭವಾಗಿದೆ. ಪೊಲೀಸ್ ಮತ್ತು ಭದ್ರತಾ ಪಡೆಗಳು ಕಾರ್ಯದಲ್ಲಿವೆ. ಹೆಚ್ಚಿನ ವಿವರಗಳನ್ನು ತಿಳಿಸಲಾಗುವುದು' ಎಂದಿದೆ.

ಮೊದಲ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ಕೆಲವು ಗಂಟೆಗಳ ನಂತರ, ಕುಲ್ಗಾಮ್ ಜಿಲ್ಲೆಯ ಫ್ರಿಸಲ್ ಚಿನ್ನಿಗಮ್ ಗ್ರಾಮದಲ್ಲಿ ಮತ್ತೊಂದು ಗುಂಡಿನ ಚಕಮಕಿ ನಡೆಯಿತು. ಈ ಪ್ರದೇಶದಲ್ಲಿ ಲಷ್ಕರ್ ಗುಂಪು ಭಯೋತ್ಪಾದಕರು ಇರುವ ಸಾಧ್ಯತೆಯ ಬಗ್ಗೆ ಸುಳಿವು ಪಡೆದ ನಂತರ ಭದ್ರತಾ ಪಡೆಗಳು ಕ್ಷಿಪ್ರ ಕ್ರಮ ಕೈಗೊಂಡವು.  ಭದ್ರತಾ ಪಡೆಗಳು ಗ್ರಾಮವನ್ನು ತಲುಪಿದ ಕೂಡಲೇ ಗ್ರಾಮದ ಮನೆಯೊಂದರಲ್ಲಿ ಅಡಗಿಕೊಂಡಿದ್ದ ಉಗ್ರರು ಗುಂಡಿನ ದಾಳಿ ನಡೆಸಿ ಗುಂಡಿನ ಚಕಮಕಿ ನಡೆಸಿದರು. ಎರಡೂ ಸ್ಥಳಗಳಲ್ಲಿ ಗುಂಡಿನ ಚಕಮಕಿ ಮುಂದುವರಿದಿದೆ.

ಜಮ್ಮು ಕಾಶ್ಮೀರಲ್ಲಿ 3 ಭಯೋತ್ಪಾದಕರ ಹತ್ಯೆ ಮಾಡಿದ ಭಾರತೀಯ ಸೇನೆ!

ಕಳೆದ ತಿಂಗಳ ಆರಂಭದಲ್ಲಿ, ಪುಲ್ವಾಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾದ ಶಾಖೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್‌ನ ಇಬ್ಬರು ಉನ್ನತ ಕಮಾಂಡರ್‌ಗಳು ಅವರು ಅಡಗುತಾಣವಾಗಿ ಬಳಸಿದ ಮನೆಯಲ್ಲಿ ಸಿಕ್ಕಿಬಿದ್ದರು.

ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ, ಸೇನಾಪಡೆಗಳ ಪೂರ್ಣ ನಿಯೋಜನೆಗೆ ಮೋದಿ ಸೂಚನೆ!

Latest Videos
Follow Us:
Download App:
  • android
  • ios