ತಾಯಿಯಾಗಲಿದ್ದಾರೆ ಜೈಸಲ್ಮೇರ್‌ ಜಿಲ್ಲಾಧಿಕಾರಿ ಟೀನಾ ಡಾಬಿ

By Santosh NaikFirst Published Jun 30, 2023, 3:14 PM IST
Highlights

ಜೈಸಲ್ಮೇರ್‌ ಜಿಲ್ಲಾಧಿಕಾರಿಯಾಗಿರುವ ಟೀನಾ ಡಾಬಿ, ರಾಜಸ್ಥಾನ ಸರ್ಕಾರಕ್ಕೆ ನಾನ್‌ ಫೀಲ್ಡ್‌ ಪೋಸ್ಟಿಂಗ್‌ಗಾಗಿ ಮನವಿ ಮಾಡಿದ್ದಾರೆ. ಗರ್ಭಿಣಿಯಾಗಿರುವ ಆಕೆ ಮುಂದಿನ ಸೆಪ್ಟೆಂಬರ್‌ ವೇಳೆಗೆ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
 

ನವದೆಹಲಿ (ಜೂ.30): ಈ ವರ್ಷದ ಸೆಪ್ಟೆಂಬರ್‌ನಲ್ಲಿ ತನ್ನ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಕಾರಣ ಜೈಸಲ್ಮೇರ್‌ನ ಜಿಲ್ಲಾಧಿಕಾರಿ ಟೀನಾ ದಾಬಿ, ಜೈಪುರದಲ್ಲಿ ನಾನ್‌ ಫೀಲ್ಡ್‌ ಪೋಸ್ಟಿಂಗ್‌ಗೆ ನೇಮಕ ಮಾಡುವಂತೆ ರಾಜಸ್ಥಾನ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಅವರು ಹೆರಿಗೆ ರಜೆಯಲ್ಲಿ ಮುಂದುವರಿಯಲು ನಿರ್ಧಾರ ಮಾಡಿದ್ದಾರೆ. ರಾಜ್ಯ ಸರ್ಕಾರಕ್ಕೆ ಬರೆದ ಪತ್ರದಲ್ಲಿ ಟೀನಾ ದಾಬಿ, ಫೀಲ್ಡ್‌ ಪೋಸ್ಟಿಂಗ್‌ ಇದ್ದಲ್ಲಿ ನನ್ನ ಮೇಲೆ ತಿಯಾದ ಹೊರ ಬಿದ್ದಂತೆ ಅನಿಸುತ್ತದೆ. ಆ ಕಾರಣಕ್ಕಾಗಿ ನಾನ್‌ ಫೀಲ್ಡ್‌ ಪೋಸ್ಟಿಂಗ್‌ (ಹೆಚ್ಚಿನ ತಿರುಗಾಟ ಇಲ್ಲದೇ ಇರುವಂಥ ಕೆಲಸ) ನೀಡುವಂತೆ ಅವರು ಪತ್ರ ಬರೆದಿದ್ದಾರೆ.  ಮುಂದಿನ ದಿನಗಳಲ್ಲಿ ವರ್ಗಾವಣೆಯಾಗುವ ಸಾಧ್ಯತೆಯನ್ನೂ ಅವರು ವ್ಯಕ್ತಪಡಿಸಿದ್ದಾರೆ. ವರ್ಗಾವಣೆ ಪಟ್ಟಿಯನ್ನು ಸ್ವೀಕರಿಸುವವರೆಗೆ ಮತ್ತು ಔಪಚಾರಿಕತೆಗಳು ಪೂರ್ಣಗೊಳ್ಳುವವರೆಗೆ, ಟೀನಾ ದಾಬಿ ಜೈಸಲ್ಮೇರ್ ಕಲೆಕ್ಟರ್ ಆಗಿ ತಮ್ಮ ಕೆಲಸವನ್ನು ಮುಂದುವರಿಯಲು ನಿರ್ಧರಿಸುವುದಾಗಿ ತಿಳಿಸಿದ್ದಾರೆ. ಟೀನಾ ದಾಬಿ ಅವರು ಜೈಸಲ್ಮೇರ್‌ನಿಂದ ಜೈಪುರಕ್ಕೆ ತೆರಳಲು ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದಾರೆ ಮತ್ತು ಒಂದೆರಡು ದಿನಗಳಲ್ಲಿ ವರ್ಗಾವಣೆ ಆದೇಶವನ್ನು ಸ್ವೀಕರಿಸುವ ಭರವಸೆಯಲ್ಲಿದ್ದಾರೆ.

ಯಾರಿವರು ಟೀನಾ ಡಾಬಿ: 2015ರ ಯುಪಿಎಸ್‌ಸಿ ಬ್ಯಾಚ್‌ನ ಟಾಪರ್‌ ಆಗಿರುವ ಟೀನಾ ಡಾಬಿ, ರಾಜಸ್ಥಾನದ ಜೈಸಲ್ಮೇರ್‌ನ ಮೊದಲ ಮಹಿಳಾ ಜಿಲ್ಲಾಧಿಕಾರಿ. ಕಳೆದ ಏಪ್ರಿಲ್‌ನಲ್ಲಿ ಐಎಎಸ್‌ ಅಧಿಕಾರಿ ಪ್ರದೀಪ್‌ ಗವಾಂಡೆ ಅವರನ್ನು ವಿವಾಹವಾಗಿದ್ದರು. ಸೋಶಿಯಲ್‌ ಮೀಡಿಯಾದಲ್ಲಿ ಟೀನಾ ಡಾಬಿಗೆ ದೊಡ್ಡ ಮಟ್ಟ್ ಫಾಲೋವರ್‌ಗಳೂ ಇದ್ದಾರೆ. ಇನ್ನು ಜೈಸಲ್ಮೇರ್‌ನಲ್ಲಿಯೂ ಸಹ, ಕಲೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ವೇಳೆ ಅವರು ಮೂರು ತಿಂಗಳ ಕಾಲ "ಜೈಸಲ್ಮೇರ್ ಶಕ್ತಿ ಲೇಡೀಸ್ ಫಸ್ಟ್" ಎಂಬ ವಿಶೇಷ ಅಭಿಯಾನವನ್ನು ಆಯೋಜಿಸುವಂತಹ ಹಲವಾರು ಗಮನಾರ್ಹ ಕಾರ್ಯಕ್ರಮ ಕೈಗೊಂಡಿದ್ದರು. ಮಹಿಳೆಯರ ಸಬಲೀಕರಣ ಮತ್ತು ವಿವಿಧ ಸಾಮಾಜಿಕ ಅಡೆತಡೆಗಳನ್ನು ಮುರಿಯುವ ಕೆಲಸವನ್ನು ಮಾಡುವುದರೊಂದಿಗೆ ಮಹಿಳೆಯರ ಶಿಕ್ಷಣಕ್ಕೆ ಹೆಚ್ಚಿನ ಒಲವು ತೋರಿದ್ದರು.

Latest Videos

IPS ಆಫೀಸರನ್ನು ಮದ್ವೆಯಾದ ಟೀನಾ ಡಾಬಿ ತಂಗಿ IAS ರಿಯಾ ಡಾಬಿ

ಕಳೆದ ತಿಂಗಳು, ಸ್ಥಳಾಂತರಗೊಂಡ ಮತ್ತು ಪುನರ್ವಸತಿ ಬಯಸುತ್ತಿರುವ ಹಲವಾರು ಹಿರಿಯ ಪಾಕಿಸ್ತಾನಿ ಹಿಂದೂ ಮಹಿಳೆಯರ ಅಕ್ರಮ ನಿವಾಸವನ್ನು ಇವರು ಧ್ವಂಸ ಮಾಡಿದ್ದರು. ಆ ಬಳಿಕ ಸ್ವತಃ ಇವರೇ ಬೇರೆ ಕಡೆ ಜಾಗ ತೋರಿಸಿ ಅವರೆಲ್ಲರಿಗೂ ಪುನರ್ವಸತಿ ವ್ಯವಸ್ಥೆ ಮಾಡಿದ್ದರು. ಈ ವೇಳೆ ಗರ್ಭಿಣಿಯಾಗಿರುವ ಟೀನಾ ಡಾಬಿಯನ್ನು ನೋಡಿ, ನಿಮಗೆ ಮಗನೇ ಹುಟ್ಟಲಿ ತಾಯಿ ಎಂದಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಆಕೆ, ನನಗೆ ಮಗ ಅಥವಾ ಮಗಳು ಯಾರೇ ಹುಟ್ಟಿದರೂ ಭೇದಭಾವ ಮಾಡೋದಿಲ್ಲ ಎಂದು ತಿಳಿಸಿದ್ದರು.

ಐಎಸ್‌ಎಸ್‌ ಅಧಿಕಾರಿ ಟೀನಾ ಡಾಬಿಯ ತಾಯಿ ಕೂಡ ಐಇಎಸ್‌, ಕಾಲೇಜ್‌ ಟಾಪರ್‌ ಆಗಿದ್ರು ಹಿಮಾಲಿ ಡಾಬಿ!

click me!