ರಾಜಸ್ಥಾನದ ಜೈಸಲ್ಮೇರ್ ಕಲೆಕ್ಟರ್ ಆಗಿರುವ ಟೀನಾ ಡಾಬಿ ಅವರು ಲವ್ ಮ್ಯಾರೇಜ್ ಆದ ಮೇಲೆ ಇದೀಗ ಅವರ ಸಹೋದರಿ IAS ರಿಯಾ ಡಾಬಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
women Jun 19 2023
Author: Suvarna News Image Credits:facebook
Kannada
ಮಹಾರಾಷ್ಟ್ರದ IPS ಆಫೀಸರ್ ಮನೀಷ್ ಕುಮಾರ್
ಐಎಎಸ್ ಆಫೀಸರ್ ರಿಯಾ ಡಾಬಿಯವರು ಮಹಾರಾಷ್ಟ್ರ ಕೇಡರ್ ಐಪಿಎಸ್ ಆಫಿಸರ್ ಮನಿಷ್ ಕುಮಾರ್ ಅವರನ್ನು ಮದುವೆಯಾಗಿದ್ದಾರೆ. ಇಬ್ಬರೂ ಕೋರ್ಟ್ ಮ್ಯಾರೇಜ್ ಆಗಿದ್ದು, ಕೇವಲ ಕುಟುಂಬ ಸದಸ್ಯರು ಭಾಗಿಯಾಗಿದ್ದರು.
Image credits: facebook
Kannada
ವೆಡ್ಡಿಂಗ್ ರಿಸೆಪ್ಶನ್ ಗೆ ತಯಾರಿ
ಮೀಡಿಯಾ ರಿಪೋರ್ಟ್ ಅನುಸಾರ IPS ಮನಿಷ್ ಕುಮಾರ್ ಮತ್ತು ಐಎಎಸ್ ರಿಯಾ ಡಾಬಿ ಎಪ್ರಿಲ್ ತಿಂಗಳಲ್ಲೆ ಕೋರ್ಟ್ ಮ್ಯಾರೇಜ್ ಆಗಿದ್ದರು. ಇನ್ನು ಕೆಲವು ದಿನಗಳಲ್ಲಿ ವೆಡ್ಡಿಂಗ್ ರಿಸೆಪ್ಶನ್ ಮಾಡುವ ತಯಾರಿಯಲ್ಲಿದ್ದಾರೆ.
Image credits: facebook
Kannada
ಗೃಹಮಂತ್ರಾಲಯದಿಂದ ಮದುವೆಯ ನೋಟಿಫಿಕೇಶನ್
ಗೃಹಮಂತ್ರಾಲಯದ ಒಂದು ನೋಟಿಫಿಕೇಶನ್ ಬಂದ ಹಿನ್ನೆಲೆಯಲ್ಲಿ ಐಪಿಎಸ್ ಮನಿಷ್ ಕುಮಾರ್ ಮತ್ತು ಐಎಎಸ್ ರಿಯಾ ಡಾಬಿ ಮದುವೆಯಾಗಿದ್ದಾರೆ ಅನ್ನೋದು ಬಹಿರಂಗವಾಗಿದೆ.
Image credits: facebook
Kannada
ರಾಜಸ್ಥಾನಕ್ಕೆ ವರ್ಗಾವಣೆಯಾದ ಮನೀಷ್ ಕುಮಾರ್
ರಾಜಸ್ಥಾನದಲ್ಲಿ ರಿಯಾ ಡಾಬಿ ಇರೋದರಿಂದ ಐಪಿಎಸ್ ಆಫೀಸರ್ ಮನೀಷ್ ಕುಮಾರ್ ಅವರನ್ನು ಮಹಾರಾಷ್ಟ್ರದಿಂದ ಇದೀಗ ರಾಜಸ್ಥಾನ ಕೇಡರ್ ಗೆ ಕಳುಹಿಸಲಾಗಿದೆ.
Image credits: facebook
Kannada
ವೈರಲ್ ಆಯ್ತು ಪತಿ ಪತ್ರ
ಕೆಲವು ದಿನಗಳ ಹಿಂದೆ ಐಪಿಎಸ್ ಆಫೀಸರ್ ಮನೀಷ್ ಕುಮಾರ್ ತಮ್ಮ ಕೇಡರ್ ಬದಲಾಯಿಸಲು ಗೃಹ ವಿಭಾಗಕ್ಕೆ ಪತ್ರ ಬರೆದಿದ್ದರು. ಇವರ ಪತ್ರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
Image credits: facebook
Kannada
ಐಎಎಸ್ ಪ್ರದೀಪ್ ಗಾವಂಡೆ ಜೊತೆ ಮದ್ವೆಯಾದ ಟೀನಾ ಡಾಬಿ
ರಿಯಾ ಡಾಬಿಯವರ ಸಹೋದರಿ ಐಎಎಸ್ ಆಫೀಸರ್ ಟೀನಾ ಡಾಬಿ ಕಳೆದ ವರ್ಷವಷ್ಟೇ ಐಎಎಸ್ ಪ್ರದೀಪ್ ಗಾವಂಡೆ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇಬ್ಬರು ಸದ್ಯ ರಾಜಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.