ಬಾಹ್ಯಾಕಾಶ ಅವಶೇಷ ಕಡಿಮೆ ಮಾಡುವ ಇಸ್ರೋ ಪ್ರಯೋಗ ಯಶಸ್ವಿ: ರಾಕೆಟ್ ಅವಶೇಷ ಎರಡೇ ತಿಂಗಳಲ್ಲಿ ಧ್ವಂಸ

By Kannadaprabha NewsFirst Published Jul 31, 2023, 6:39 AM IST
Highlights

ಭಾನುವಾರ ಸಿಂಗಾಪುರದ 7 ಉಪಗ್ರಹಗಳನ್ನು ಯಶಸ್ವಿಯಾಗಿ ಹಾರಿಬಿಟ್ಟಇಸ್ರೋ, ಇದರ ಜೊತೆ ಜೊತೆಗೆ ಇನ್ನೊಂದು ವಿನೂತನ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿದೆ. ಈ ಮೂಲಕ ಬಾಹ್ಯಾಕಾಶ ಅವಶೇಷ ಪ್ರಮಾಣ ಕಡಿಮೆ ಮಾಡುವ ತನ್ನ ಬದ್ಧತೆಯನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸಿದೆ.

ಶ್ರೀಹರಿಕೋಟ: ಭಾನುವಾರ ಸಿಂಗಾಪುರದ 7 ಉಪಗ್ರಹಗಳನ್ನು ಯಶಸ್ವಿಯಾಗಿ ಹಾರಿಬಿಟ್ಟಇಸ್ರೋ, ಇದರ ಜೊತೆ ಜೊತೆಗೆ ಇನ್ನೊಂದು ವಿನೂತನ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿದೆ. ಈ ಮೂಲಕ ಬಾಹ್ಯಾಕಾಶ ಅವಶೇಷ ಪ್ರಮಾಣ ಕಡಿಮೆ ಮಾಡುವ ತನ್ನ ಬದ್ಧತೆಯನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸಿದೆ. ಸಾಮಾನ್ಯವಾಗಿ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ರಾಕೆಟ್‌ನ 4ನೇ ಹಂತವು, ನಂತರ ದಶಕಗಳ ಕಾಲ ಬಾಹ್ಯಾಕಾಶದಲ್ಲೇ ಸುತ್ತುತ್ತಾ ಕೊನೆಗೊಂದು ದಿನ ಭೂಮಿಯತ್ತ ಧಾವಿಸಿ ಉರಿದು ಬೂದಿಯಾಗುತ್ತದೆ. ರಾಕೆಟ್‌ ಹೀಗೆ ಕಕ್ಷೆಯಲ್ಲಿ ಸುದೀರ್ಘ ಕಾಲ ಸುತ್ತುವ ಕಾರಣ, ಆ ಕಕ್ಷೆಯಲ್ಲಿ ಬಾಹ್ಯಾಕಾಶ ಅವಶೇಷ ಹೆಚ್ಚಾಗುತ್ತದೆ. ಅವುಗಳ ಮೇಲೆ ಸದಾ ನಿಗಾ ಇಡುವ ಸಮಸ್ಯೆಯ ಜೊತೆಗೆ ಬೇರೆ ಬೇರೆ ದೇಶಗಳಿಗೆ ತಮ್ಮ ಉಪಗ್ರಹಗಳನ್ನು ಕೂರಿಸಲು ಜಾಗದ ಕೊರತೆ ಎದುರಾಗುವ ಸಾಧ್ಯತೆಯೂ ಇರುತ್ತದೆ.

ಇದಕ್ಕೆ ಪರಿಹಾರ ಕಂಡುಕೊಳ್ಳುವ ಯೋಜನೆಯ ಭಾಗವಾಗಿ ಇಸ್ರೋ ವಿಜ್ಞಾನಿಗಳು (ISRO scientist), ಭಾನುವಾರ ಕೊನೆಯ ಉಪಗ್ರಹ ಬೇರ್ಪಟ್ಟ(536 ಕಿ.ಮೀ ಎತ್ತರದ) ಬಳಿಕ ಪಿಎಎಸ್‌ಎಲ್‌ವಿ ರಾಕೆಟ್‌ ಅನ್ನು 300 ಕಿ.ಮೀ ಎತ್ತರದ ಕಕ್ಷೆಗೆ ಕರೆ ತಂದರು.

Latest Videos

Chandrayaan 3: ಇಸ್ರೋಗೆ ಮತ್ತಷ್ಟು ಯಶಸ್ಸು: ಐದನೇ ಭೂಕಕ್ಷೆ ಪೂರ್ಣ; ಚಂದ್ರನಿಗೆ ಮತ್ತಷ್ಟು ಹತ್ತಿರವಾಗ್ತಿದೆ ನೌಕೆ

ಲಾಭ ಏನು?:

536 -570 ಕಿ.ಮೀ ಎತ್ತರ ಕಕ್ಷೆಯ ಅತ್ಯಂತ ಬೇಡಿಕೆಯ ಪ್ರದೇಶ. ಬಹುತೇಕ ದೇಶಗಳು ಈ ಕಕ್ಷೆಯಲ್ಲೇ ತಮ್ಮ ಉಪಗ್ರಹಗಳನ್ನು ಇರಿಸಲು ಬಯಸುತ್ತವೆ. ಇದೀಗ ಪಿಎಸ್‌ಎಲ್‌ವಿ ರಾಕೆಟ್‌ ಅನ್ನು ಈ ಕಕ್ಷೆಯಿಂದ ತೆರವುಗೊಳಿಸಿ 300 ಕಿ.ಮೀ ಎತ್ತರಕ್ಕೆ ಇಳಿಸಿದ ಕಾರಣ ಅಲ್ಲಿ ಬಾಹ್ಯಾಕಾಶ ಅವಶೇಷ ಉಳಿಯುವ ಸಾಧ್ಯತೆ ಇಲ್ಲವಾಯಿತು. ಅಲ್ಲಿ ಬೇರೆ ಉಪಗ್ರಹಗಳಿಗೆ ಜಾಗ ಲಭ್ಯವಾಯಿತು. 536 ಕಿ.ಮೀ ಎತ್ತರದ ಕಕ್ಷೆಯಲ್ಲಾದರೆ ರಾಕೆಟ್‌ನ ದಶಕಗಳಿಗೂ ಹೆಚ್ಚಿನ ಕಾಲ ಇದ್ದು, ಕೊನೆಗೆ ಭೂಮಿಗೆ ಮರಳುತ್ತಿತ್ತು. ಆದರೆ ಅದಕ್ಕಿಂತ ಕೆಳಗಿನ ಕಕ್ಷೆಗೆ ಇದೀಗ ರಾಕೆಟ್‌ (Rocket) ಇಳಿದಿರುವ ಕಾರಣ ಅದು ಕೇವಲ ಇನ್ನು 2 ತಿಂಗಳಲ್ಲೇ ಮರಳಿ ಭೂಮಿಯತ್ತ ಪ್ರಯಾಣ ಮಾಡಿ ಬೂದಿಯಾಗಲಿದೆ, ಉಳಿದ ಒಂದಷ್ಟುಅವಶೇಷ ಸಮುದ್ರದಲ್ಲಿ ಪತನವಾಗಲಿದೆ.

ಚಂದ್ರಯಾನ-3 ಯಶಸ್ಸಿನ ಬೆನ್ನಲ್ಲೇ ಸಿಂಗಾಪುರದ 7 ಉಪಗ್ರಹ ಉಡಾವಣೆ ಮಾಡಿದ ಇಸ್ರೋ!

click me!