ನವದೆಹಲಿ: ಕುಖ್ಯಾತ ಭಯೋತ್ಪಾದಕ ಸಂಘಟನೆ ‘ಅಲ್ - ಖೈದಾ’, ತನ್ನ ಕಾರ್ಯಾಚರಣೆಯನ್ನು ಜಮ್ಮು-ಕಾಶ್ಮೀರ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ಗೆ ಹರಡಲು ಭಾರತೀಯ ಉಪಖಂಡದಲ್ಲಿ ತನ್ನ ಪ್ರಾದೇಶಿಕ ಅಂಗಸಂಸ್ಥೆಯನ್ನು ರೂಪಿಸುತ್ತಿದೆ. ಈಗಾಗಲೇ 200 ಉಗ್ರರು ಅಲ್ ಖೈದಾ ಭಾರತ ಉಪಖಂಡದ ಸಂಘಟನೆ ಸೇರಿಕೊಂಡಿದ್ದಾರೆ ಎಂದು ವಿಶ್ವಸಂಸ್ಥೆ ವರದಿ ತಿಳಿಸಿದೆ.
ಈ ವಾರ ಬಿಡುಗಡೆಯಾದ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ‘ಐಸಿಸ್’ ಮತ್ತು ಅಲ್ - ಖೈದಾ ನಿರ್ಬಂಧಗಳ ಸಮಿತಿಯ 32ನೇ ವರದಿಯು, ಅಲ್ ಖೈದಾ ಸಂಘಟನೆ ಭಾರತೀಯ ಉಪಖಂಡದಲ್ಲಿ ತನ್ನ ಸಂಘಟನೆ ಸ್ಥಾಪಿಸುವ ಪ್ರಕ್ರಿಯೆಯಲ್ಲಿ ತೊಡಗಿದೆ. ಈ ಮೂಲಕ ಅದು ತನ್ನ ಕಾರ್ಯಾಚರಣೆಯನ್ನು ನೆರೆಯ ಬಾಂಗ್ಲಾದೇಶ, ಜಮ್ಮು-ಕಾಶ್ಮೀರ ಮತ್ತು ಮ್ಯಾನ್ಮಾರ್‌ಗೆ ವಿಸ್ತರಿಸಲು ಹುನ್ನಾರ ನಡೆಸುತ್ತಿದೆ ಎಂದು ತನ್ನ ಸದಸ್ಯ ದೇಶವೊಂದಕ್ಕೆ ಗೊತ್ತಾಗಿದೆ ಎಂದಿದೆ.
ಇದನ್ನು ಓದಿ: ಕಾಶ್ಮೀರದಲ್ಲಿ ನಾಪತ್ತೆಯಾದ 25 ವರ್ಷದ ಯೋಧ: ಕಾರಿನಲ್ಲಿ ರಕ್ತದ ಕಲೆ ಪತ್ತೆ; ಉಗ್ರರಿಂದ ಕಿಡ್ನ್ಯಾಪ್?
ಈ ಅಲ್‌ಖೈದಾ ಭಾರತ ಉಪಖಂಡ ಸಂಘಟನೆ (ಎಕ್ಯುಎಎಸ್), ಇರಾಕ್‌ನ ಐಸಿಸ್ ಸಂಘಟನೆ (ಐಸಿಸ್-ಕೆ) ಸಂಘಟನೆ ಜತೆ ಕೈಜೋಡಿಸಲು ಸಿದ್ಧವಾಗಿದೆ. ಅಷ್ಘಾನಿಸ್ತಾನದಲ್ಲಿ ಅಲ್ - ಖೈದಾ ಇನ್ನೂ ಸ್ಥಿರವಾಗಿದ್ದು, 30ರಿಂದ 60 ಸದಸ್ಯರಿದ್ದಾರೆ ಹಾಗೂ 400 ಉಗ್ರರಿದ್ದಾರೆ. ಇವರೆಲ್ಲರ ಕುಟುಂಬದ ಸದಸ್ಯರನ್ನು ತೆಗೆದುಕೊಂಡರೆ ಸಂಖ್ಯೆ 2,000 ತಲುಪುತ್ತದೆ. ಇನ್ನು ಭಾರತ ಉಪಖಂಡದಲ್ಲಿ 200 ಉಗ್ರರು ಈಗಾಗಲೇ ಅಲ್ ಖೈದಾ ಸೇರಿಕೊಂಡಿದ್ದು, ಅವರಿಗೆ ಒಸಾಮಾ ಮೆಹಮೂದ್ ಎಂಬಾತ ಮುಖ್ಯಸ್ಥನಾಗಿದ್ದಾನೆ ಎಂದು ವರದಿ ಹೇಳಿದೆ.
ಇನ್ನು ಅಲ್ ಖೈದಾ ಹಾಲಿ ಮುಖ್ಯಸ್ಥ ಐಮನ್ ಅಲ್ ಜವಾಹಿರಿಯ ಉತ್ತರಾಧಿಕಾರಿ ಆಗಿ ಸೈಫ್ ಅಲಿ ಅದಲ್ ಎಂಬಾತ ನೇಮಕವಾಗುವ ಸಾಧ್ಯತೆ ಇದೆ. ಈತ ಇರಾನ್‌ನಲ್ಲಿ ಇದ್ದಾನೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಮಣಿಪುರದಲ್ಲಿ ಮತ್ತೆ ಹಿಂಸೆ: 15 ತಾಸು ಗುಂಡಿನ ಚಕಮಕಿ; ಇಬ್ಬರು ಭದ್ರತಾ ಸಿಬ್ಬಂದಿಗೆ ಗಾಯ, ಉಗ್ರರು ಪರಾರಿ
ಅಲ್ ಖೈದಾ ಜತೆ ವಿಲೀನಕ್ಕೆ ಪಾಕ್ ತಾಲಿಬಾನ್ ಸಜ್ಜು: ವಿಶ್ವಸಂಸ್ಥೆ ವರದಿ
ಅಲ್ ಖೈದಾ ಸಂಘಟನೆಯಲ್ಲಿ ವಿಲೀನ ಆಗಲು ಪಾಕಿಸ್ತಾನದ ಕುಖ್ಯಾತ ಉಗ್ರಗಾಮಿ ಸಂಘಟನೆ ತೆಹ್ರೀಕ್ ಎ ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಸಂಘಟನೆ ಉತ್ಸುಕವಾಗಿದೆ ಎಂದು ವಿಶ್ವಸಂಸ್ಥೆ ಭದ್ರತಾ ಸಮಿತಿಗೆ ಸಲ್ಲಿಕೆಯಾದ ಸಂಸ್ಥೆಯ ವರದಿಯೊಂದು ಹೇಳಿದೆ. ಪಾಕ್‌ನಲ್ಲಿ ತಾಲಿಬಾನ್ ಸಂಘಟನೆಯನ್ನು ವಿಲೀನ ಮಾಡಿದರೆ ಎಲ್ಲ ಉಗ್ರ ಸಂಘಟನೆಗಳನ್ನು ಒಂದೇ ಸೂರಿನ ಅಡಿ ತರಬಹುದು ಹಾಗೂ ಉಗ್ರ ಚಟುವಟಿಕೆಯನ್ನು ಇನ್ನಷ್ಟು ತೀವ್ರಗೊಳಿಸಬಹುದು ಎಂಬುದು ತಾಲಿಬಾನ್ ಲೆಕ್ಕಾಚಾರ ಎಂದು ವರದಿ ಮಾಹಿತಿ ನೀಡಿದೆ.
‘ಒಂದು ಸದಸ್ಯ ರಾಷ್ಟ್ರವು ಅಲ್ ಖೈದಾ ಮತ್ತು ಟಿಟಿಪಿ ವಿಲೀನದ ಸಾಧ್ಯತೆಯನ್ನು ಗಮನಿಸಿದೆ. ಪಾಕಿಸ್ತಾನದೊಳಗೆ ಹೆಚ್ಚಿದ ದಾಳಿಗಳನ್ನು ನಡೆಸಲು ಟಿಟಿಪಿಗೆ ಅಲ್ ಖೈದಾ ಮಾರ್ಗದರ್ಶನ ನೀಡುತ್ತಿದೆ ಎಂದು ಅಧ್ಯಯನದಿಂದ ಗೊತ್ತಾಗಿದೆ’ ಎಂದಿದೆ.
ಇದನ್ನೂ ಓದಿ: ಸೈಬರ್‌ಕ್ರೈಂ ಮೂಲಕ 700 ಕೋಟಿ ವಂಚನೆ ಪತ್ತೆಹಚ್ಚಿದ ಪೊಲೀಸರು: ಉಗ್ರರು, ಚೀನಾ ಪಾಲಾಗ್ತಿದ್ದ ಹಣ