ಲಖನೌ ಆ.(10) :: ಸ್ವಾತಂತ್ರ್ಯ ದಿನದಂದೇ ದೇಶದಲ್ಲಿ ಉಗ್ರದಾಳಿ ನಡೆಸುವ ಘೋರ ಸಂಚು ಹೂಡಿದ್ದ ಇಸ್ಲಾಮಿಕ್ ಸ್ಟೇಟ್ (ಐಸಿಸ್) ನಂಟಿರುವ ಶಂಕಿತ ಉಗ್ರನನ್ನು ಉತ್ತರ ಪ್ರದೇಶದ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಅಸಾದುದ್ದೀನ್(Asaduddin Owisi) ಒವೈಸಿಯವರ ಎಐಎಂಐಎಂ(MIMIM) ಪಕ್ಷದ ಸದಸ್ಯನಾದ ಸಬಾವುದ್ದೀನ್ ಅಜ್ಮಿ(Sabavuddin azmi) ಬಂಧನಕ್ಕೊಳಗಾದ ಶಂಕಿತ ಉಗ್ರ. ಈತ ಸ್ವಾತಂತ್ರ್ಯ ದಿನದಂದೇ ದೇಶದಲ್ಲಿ ಬಾಂಬ್ ದಾಳಿ ನಡೆಸಲು ಸಂಚು ಹೂಡಿದ್ದನು. ಅಲ್ಲದೇ ಈತನಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಹಿರಿಯ ನಾಯಕರನ್ನು ಕೊಲ್ಲುವ ಗುರಿ ನೀಡಲಾಗಿತ್ತು ಎಂದು ಆಘಾತಕಾರಿ ಮಾಹಿತಿ ಬಯಲಾಗಿದೆ.
ಸ್ವಾತಂತ್ರ್ಯ ದಿನಾಚರಣೆಗೆ ಭಾರಿ ವಿದ್ವಂಸಕ ಕೃತ್ಯಕ್ಕೆ ಪ್ಲಾನ್, ISIS ಉಗ್ರನ ಬಂಧಿಸಿದ NIA!
ಮುಂಬೈಯಲ್ಲಿ ಎಲೆಕ್ಟ್ರಿಶನ್ ಆಗಿ ಮುಂಚೆ ಕೆಲಸ ಮಾಡುತ್ತಿದ್ದ ಆಜ್ಮಿ ಈತ ಐಸಿಸ್ ವಿಚಾರಧಾರೆಯಿಂದ ಪ್ರಭಾವಿತನಾಗಿದ್ದು, ಜಿಹಾದ್ ಸಂಬಂಧಿತ ಮಾಹಿತಿ ರವಾನಿಸುತ್ತಿದ್ದ. ಈತ ಟೆಲಿಗ್ರಾಂನಲ್ಲಿ ಬೈರಾಮ್ ಖಾನ್ ಎಂಬ ನಕಲಿ ಖಾತೆ ಬಳಸುತ್ತಿದ್ದ. ಸಾಮಾಜಿಕ ಜಾಲತಾಣಗಳ ಮೂಲಕ ಭಾರತದಲ್ಲೂ ಐಸಿಸ್ ಸ್ಥಾಪನೆಗೆ ಈತ ಕುಮ್ಮಕ್ಕು ನೀಡುತ್ತಿರುವುದು ಈತನ ಬಿಡುಗಡೆ ಮಾಡಿದ ವಿಡಿಯೋಗಳಿಂದ ತಿಳಿದುಬಂದಿದೆ ಎಂದು ಮೂಲಗಳು ತಿಳಿಸಿವೆ.
ಅಲ್ಲದೇ ಈತ ಆಫ್ರಿಕಾದಿಂದ ನಿರ್ವಹಣೆ ಮಾಡಲಾಗುತ್ತಿರುವ ಅಬುಬಕರ್ ಅಲ್ ಸೋಮಾನಿ ಅವರೊಂದಿಗೆ ಸಂಪರ್ಕದಲ್ಲಿದ್ದು ‘ಜಿಹಾದ್ ಅಪ್ನೇ ತರೀಖೆ ಸೆ’ (ನಮ್ಮ ಮಾದರಿಯ ಜಿಹಾದ್) ಎಂಬ ಗ್ರೂಪ್‌ನ ಭಾಗವಾಗಿದ್ದ. ಸೋಮಾನಿ ಆತನಿಗೆ ಬಾಂಬ್ ತಯಾರಿಸುವ ಬಗ್ಗೆ ಮಾಹಿತಿ ರವಾನಿಸುತ್ತಿದ್ದ. ಅಲ್ಲದೇ ಈತ ಪಾಕಿಸ್ತಾನ, ಸಿರಿಯಾ, ಇರಾಕ್‌ನ ಐಸಿಸ್ ಉಗ್ರರ ಜೊತೆಗೂ ಸಂಪರ್ಕದಲ್ಲಿದ್ದ ಎಂದು ಮೂಲಗಳು ಹೇಳಿವೆ.
ಬೆಂಗಳೂರಲ್ಲಿ ಸೆರೆಸಿಕ್ಕ ಉಗ್ರರಿಗೆ ಅಲ್ಖೈದಾ ಸಂಬಳ: ಬೆಚ್ಚಿ ಬೀಳಿಸುತ್ತೆ ಟೆರರಿಸ್ಟ್ ಬ್ಯಾಕ್‌ಗ್ರೌಂಡ್
ಈ ಹಿನ್ನೆಲೆಯಲ್ಲಿ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಪೊಲೀಸರು ಆಜ್ಮಿಯನ್ನು ಬಂಧಿಸಿ ಲಖನೌ ಕೇಂದ್ರ ಕಚೇರಿಯಲ್ಲಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಈತ ಎಲೆಕ್ಟ್ರಾನಿಕ್ ಬಾಂಬ್, ಹ್ಯಾಂಡ್ ಗ್ರೆನೇಡ್ ತಯಾರಿಸುವುದನ್ನು ಕಲಿತುಕೊಳ್ಳುತ್ತಿದ್ದ. ಅಲ್ಲದೇ ಐಸಿಸ್ ಉಗ್ರ ಸಂಸ್ಥೆಗೆ ಯುವಕರನ್ನು ಸೇರಿಸಲು ಪ್ರಯತ್ನಿಸುತ್ತಿದ್ದ ಎಂದು ತಿಳಿದು ಬಂದಿದೆ. ಹೀಗಾಗಿ ಕಾನೂನು ಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ ಹಾಗೂ ಶಸ್ತ್ರಾಸ್ತ್ರ ಕಾಯ್ದೆ ಅಡಿ ಆಜ್ಮಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪೊಲೀಸರು ಬಾಂಬ್ ತಯಾರಿಕಾ ಸಾಮಗ್ರಿಗಳು, ಅಕ್ರಮ ಶಸ್ತ್ರಾಸ್ತ್ರಗಳನ್ನು ಈತನ ಬಳಿಯಿಂದ ವಶಪಡಿಸಿಕೊಂಡಿದ್ದಾರೆ.