ಬಿಬಿಸಿಯಲ್ಲಿ ಚೀನಾ ಹಣ ಹೂಡಿಕೆ ತನಿಖೆ ನಡೆಸಿ: ಹಿರಿಯ ವಕೀಲ ಮಹೇಶ್‌ ಜೇಠ್ಮಲಾನಿ

By Kannadaprabha News  |  First Published Feb 16, 2023, 12:50 PM IST

ಬ್ರಿಟನ್‌ನ ವಾರ್ತಾ ಸಂಸ್ಥೆ ಬಿಬಿಸಿಯಲ್ಲಿ ಚೀನಾದ ಹಲವು ಕಂಪನಿಗಳು ಹೂಡಿಕೆ ಮಾಡಿರವುದರ ಕುರಿತಾಗಿಯೂ ತನಿಖೆ ನಡೆಯಬೇಕು ಎಂದು ಬಿಜೆಪಿ ಸಂಸದ, ಹಿರಿಯ ವಕೀಲ ಮಹೇಶ್‌ ಜೇಠ್ಮಲಾನಿ ಆಗ್ರಹಿಸಿದ್ದಾರೆ.


ನವದೆಹಲಿ: ಬ್ರಿಟನ್‌ನ ವಾರ್ತಾ ಸಂಸ್ಥೆ ಬಿಬಿಸಿಯಲ್ಲಿ ಚೀನಾದ ಹಲವು ಕಂಪನಿಗಳು ಹೂಡಿಕೆ ಮಾಡಿರವುದರ ಕುರಿತಾಗಿಯೂ ತನಿಖೆ ನಡೆಯಬೇಕು ಎಂದು ಬಿಜೆಪಿ ಸಂಸದ, ಹಿರಿಯ ವಕೀಲ ಮಹೇಶ್‌ ಜೇಠ್ಮಲಾನಿ ಆಗ್ರಹಿಸಿದ್ದಾರೆ. ಭಾರತದಲ್ಲಿರುವ ಬಿಬಿಸಿ ಕಚೇರಿಗಳ ಮೇಲೆ ಐಟಿ ದಾಳಿ ನಡೆಸಿದ ಬೆನ್ನಲೇ ಜೇಠ್ಮಲಾನಿ (BJP MP, senior lawyer) ಈ ಹೇಳಿಕೆ ನೀಡಿದ್ದಾರೆ.

ಇದಲ್ಲದೆ, ಚೀನಾದ ಕಂಪನಿಗಳಲ್ಲಿ ತನ್ನ ನೌಕರರ ಪಿಂಚಣಿ ಫಂಡ್‌ ಅನ್ನು ಚೀನೀ ಕಂಪನಿಗಳಲ್ಲಿ ಹೂಡಿಕೆ ಮಾಡಿದೆ. ಚೀನಾದ ಕಂಪನಿಗಳಿಂದ ಹಣಕಾಸಿನ ಸಹಾಯ ಪಡೆದುಕೊಂಡಿದೆ. ಹಾಗಾಗಿಯೇ ಭಾರತ ವಿರೋಧಿ ವರದಿಗಳನ್ನು ಪ್ರಕಟ ಮಾಡುತ್ತಿದೆ. ಚೀನಾದ ಸರ್ಕಾರದೊಂದಿಗೆ (china Govt) ಸಂಬಂಧ ಹೊಂದಿರುವ ಹುವಾಯಿ ಬಿಬಿಸಿಯಲ್ಲಿ ಹೂಡಿಕೆ ಮಾಡಿದೆ. ಈ ಕುರಿತಾಗಿ ತನಿಖೆ ನಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ. ಈ ಮೊದಲು ಚೀನಾದ ಕಂಪನಿಗಳಿಂದ ಹಣಕಾಸಿನ ನೆರವು ಪಡೆದ ಕಾರಣಕ್ಕೆ ಬಿಬಿಸಿ ಪ್ರಧಾನಿ ಮೋದಿ ವಿರುದ್ಧ ವರದಿಗಳನ್ನು ಪ್ರಕಟಿಸುತ್ತಿದೆ ಎಂದು ಜೇಠ್ಮಲಾನಿ (Mahesh Jethmalani)ಆರೋಪಿಸಿದ್ದರು.

Tap to resize

Latest Videos

ಸ್ಟಾರ್ಟಪ್‌ ಇಂಡಿಯಾ ಬಳಿಕ ಶಟಪ್‌ ಇಂಡಿಯಾ

ನವದೆಹಲಿ: ಬಿಬಿಸಿ ಕಚೇರಿ ಮೇಲಿನ ಐಟಿ ದಾಳಿಯನ್ನು ಪ್ರಮುಖ ವಿಪಕ್ಷಗಳಾದ ಕಾಂಗ್ರೆಸ್‌, ಟಿಎಂಸಿ ಮತ್ತು ಆಮ್‌ಆದ್ಮಿ ಪಕ್ಷ ಕಟುವಾಗಿ ಖಂಡಿಸಿವೆ. ಈ ಕುರಿತು ಹೇಳಿಕೆ ನೀಡಿರುವ ಕಾಂಗ್ರೆಸ್‌ ವಕ್ತಾರ ಪವನ್‌ ಖೇರಾ (Pawan Khera) ಭಾರತೀಯ ಮಾಧ್ಯಮಗಳನ್ನು ಸತತವಾಗಿ ಕತ್ತು ಹಿಸುಕುವ, ಬಾಯಿ ಮುಚ್ಚಿಸುವ ಮತ್ತು ಮಟ್ಟಹಾಕುವ ಕೆಲಸವನ್ನು ಮೋದಿ ಸರ್ಕಾರ ನಿರಂತವಾಗಿ ನಡೆಸುತ್ತಿದೆ. ಪ್ರಜಾಪ್ರಭುತ್ವದ ನಾಲ್ಕನೇ ಅಂಗವನ್ನು ಧ್ವಂಸಗೊಳಿಸುವುದು ‘ಹೊಸ ಭಾರತ’ದಲ್ಲಿ ಇದೀಗ ಸಾಮಾನ್ಯ ವಿಷಯ ಎನ್ನುವಂತಾಗಿದೆ. 

ಆಡಳಿತ ಹಾಗೂ ಪ್ರತಿಪಕ್ಷ ಮಧ್ಯೆ ಭಾರೀ ವಾಕ್ಸಮರಕ್ಕೆ ನಾಂದಿ ಹಾಡಿದ ಬಿಬಿಸಿ ಮೇಲಿನ ಐಟಿ ರೈಡ್

ಮೋದಿ ಅವರುು ಸ್ಟಾರ್ಟಪ್‌ ಇಂಡಿಯಾದ (Startup India) ಬಗ್ಗೆ ಭರವಸೆ ನೀಡಿದ್ದರು, ಆದರೆ ಈ ‘ಅಮೃತ ಕಾಲ’ದಲ್ಲಿ ಅದು ‘ಶಟಪ್‌ ಇಂಡಿಯಾ’ ಆಗಿ ಬದಲಾಗಿದೆ. ಈ ವರ್ಷ ಭಾರತ ‘ಜಿ20’ ದೇಶಗಳ ಅಧ್ಯಕ್ಷತೆ ವಹಿಸಿಕೊಂಡಿದೆ. ಇಂಥ ದೊಡ್ಡ ಕಾರ್ಯಕ್ರಮದ ಸನ್ನಿವೇಶದಲ್ಲಿ ಇಂಥ ದಾಳಿಯ ಮೂಲಕ ಭಾರತದ ಯಾವ ವ್ಯಕ್ತಿತ್ವನ್ನು ಮೋದಿ ಸರ್ಕಾರ ವಿಶ್ವದ ಮುಂದಿಡಲು ಮುಂದಾಗಿದೆ? ಭಾರತವನ್ನು ಪ್ರಜಾಪ್ರಭುತ್ವದ ತಾಯ್ನಾಡು ಎನ್ನುವ ಮೋದಿ ವಾಸ್ತವವಾಗಿ ತಾವೇ ಬೂಟಾಟಿಕೆಯ ಪಿತಾಮಹನಾಗಿ ಹೊರಹೊಮ್ಮಿದ್ದಾರೆ’ ಎಂದು ಕಿಡಿಕಾರಿದ್ದಾರೆ.

ಪ್ರಧಾನಿ ಮೋದಿ ಹಲವು ವಿದೇಶಗಳಿಂದ ಗೌರವ, ಸನ್ಮಾನ ಸ್ವೀಕರಿಸಿದ್ದಾರೆ. ಆದರೆ ಯಾವುದೇ ವಿದೇಶಿ ಸಂಸ್ಥೆಗಳುನ್ನು ತಮ್ಮನ್ನು ಟೀಕಿಸಿದಾಗ ಅವರನ್ನು ದೇಶದ್ರೋಹಿಗಳೆಂದು ಬಿಂಬಿಸಿ ಅವರ ಮೇಲೆ ರೇಡ್‌ ಮಾಡಲಾಗುತ್ತದೆ ಎಂದು ಖೇರಾ ಟೀಕಿಸಿದ್ದಾರೆ. ಇನ್ನು ಬಿಬಿಸಿ ಕಚೇರಿ ಮೇಲಿ ಐಟಿ ದಾಳಿಯು, ಸ್ವತಂತ್ರ ಪತ್ರಿಕೋದ್ಯಮ ಮೇಲೆ ಪರಿಣಾಮ ಬೀರುತ್ತದೆ. ಇದು ಹೀಗೇ ಮುಂದುವರೆದಲ್ಲಿ ಮುಂದೊಂದು ದಿನ ಭಾರತದಲ್ಲಿ ಯಾವುದೇ ಮಾಧ್ಯಮಗಳೇ ಇರುವುದಿಲ್ಲ ಎಂದು ಟಿಎಂಸಿ ನಾಯಕಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಟೀಕಿಸಿದ್ದಾರೆ.

ಬಿಜೆಪಿ ಸೇರ್ತಿಲ್ಲ, ಆದರೆ ದೇಶ ದುರ್ಬಲ ಮಾಡುವ ಶಕ್ತಿಗಳ ವಿರುದ್ಧವಿದ್ದೇನೆ: ಅನಿಲ್‌ ಆಂಟನಿ!

ಇನ್ನೊಂದೆಡೆ ಮಾಧ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಬಣ್ಣಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, ಮಾಧ್ಯಮಗಳನ್ನು ಹತ್ತಿಕ್ಕುವುದೆಂದರೆ ಜನರ ಧ್ವನಿಯನ್ನು ಹತ್ತಿಕ್ಕಿದಂತೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. 

ಬಿಬಿಸಿ ಮೇಲೆ ಐಟಿ ದಾಳಿಗೆ ಸುದ್ದಿ ಪ್ರಸಾರಕರ ಸಂಘ ಖಂಡನೆ

ಬಿಬಿಸಿ ಕಚೇರಿಯ ಮೇಲಿನ ಐಟಿ ದಾಳಿಯನ್ನು ಟೀವಿ ಮಾಧ್ಯಮಗಳ ಹಿರಿಯ ಪತ್ರಕರ್ತರು ಪದಾಧಿಕಾರಿಗಳಾಗಿರುವ ದ ನ್ಯೂಸ್‌ ಬ್ರಾಡ್‌ಕಾಸ್ಟ​ರ್ಸ್‌ ಆ್ಯಂಡ್‌ ಡಿಜಿಟಲ್‌ ಅಸೋಸಿಯೇಷನ್‌ (NBDA) ಖಂಡಿಸಿದೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಸಂಘ, ಕಾನೂನಿಗಿಂತ ಯಾರೂ ಮೇಲಲ್ಲ ಎಂಬುದನ್ನು ನಾವು ಒಪ್ಪುತ್ತೇವೆಯಾದರೂ, ಯಾವುದೇ ಮಾಧ್ಯಮವನ್ನು ಹತ್ತಿಕ್ಕುವ ಯತ್ನ ಮತ್ತು ಪತ್ರಕರ್ತರು ಹಾಗೂ ಮಾಧ್ಯಮ ಸಂಸ್ಥೆಗಳ ಸ್ವತಂತ್ರ ಕಾರ್ಯನಿರ್ವಹಣೆಗೆ ಅಡ್ಡಿ ಮಾಡುವ ಯತ್ನವನ್ನು ನಾವು ಖಂಡಿಸುತ್ತೇವೆ. ಇಂಥ ಯತ್ನಗಳು ಸಂವಿಧಾನದಲ್ಲಿ ನೀಡಲಾಗಿರುವ ವಾಕ್‌ ಸ್ವಾತಂತ್ರ್ಯವನ್ನು ಕಡೆಗಣಿಸುವ ಮತ್ತು ಸ್ವತಂತ್ರ ಮತ್ತು ನಿರ್ಭೀತ ಪ್ರಜಾಪ್ರಭುತ್ವದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಹೇಳಿದೆ.

ಜೊತೆಗೆ ಆದಾಯ ತೆರಿಗೆ ಇಲಾಖೆ ಇಂಥ ಸಮೀಕ್ಷೆಗಳು ಮಾಧ್ಯಮಗಳಿಗೆ ನಿರಂತರ ಕಿರುಕುಳವಾಗಿದ್ದು, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿರುವ ಭಾರತದ ಘನತೆಗೆ ಜಾಗತಿಕ ಮಟ್ಟದಲ್ಲಿ ಕುಂದು ತರುತ್ತದೆ. ಹೀಗಾಗಿ ಇಂತ ಯಾವುದೇ ತನಿಖೆಯನ್ನು ಸರ್ಕಾರವು ಸೂಕ್ತ ನಿಯಮಗಳು ಮತ್ತು ನೈಸಗಿರ್ಕ ನ್ಯಾಯದ ಅನ್ವಯವೇ ನಡೆಸಬೇಕು ಎಂದು ನಾವು ಒತ್ತಾಯಿಸುತ್ತೇವೆ ಎಂದು ಎನ್‌ಬಿಡಿಎ ಹೇಳಿದೆ.

click me!