ಸತತ 2ನೇ ದಿನವೂ ಬಿಬಿಸಿಗೆ ಐಟಿ ಬಿಸಿ: ಪತ್ರಿಕಾ ಸ್ವಾತಂತ್ರ್ಯಕ್ಕೆ ಬೆಂಬಲ ಎಂದ ಅಮೆರಿಕಾ

Published : Feb 16, 2023, 12:29 PM IST
ಸತತ 2ನೇ ದಿನವೂ ಬಿಬಿಸಿಗೆ ಐಟಿ ಬಿಸಿ:  ಪತ್ರಿಕಾ  ಸ್ವಾತಂತ್ರ್ಯಕ್ಕೆ  ಬೆಂಬಲ ಎಂದ ಅಮೆರಿಕಾ

ಸಾರಾಂಶ

ಮಂಗಳವಾರ ದೆಹಲಿ ಮತ್ತು ಮುಂಬೈನಲ್ಲಿನ ಬಿಬಿಸಿ ಕಚೇರಿ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸತತ 2ನೇ ದಿನವಾದ ಬುಧವಾರ ಕೂಡಾ ತಮ್ಮ ತಪಾಸಣೆ ಮುಂದುವರೆಸಿದ್ದಾರೆ.

ನವದೆಹಲಿ/ಮುಂಬೈ: ಮಂಗಳವಾರ ದೆಹಲಿ ಮತ್ತು ಮುಂಬೈನಲ್ಲಿನ ಬಿಬಿಸಿ ಕಚೇರಿ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸತತ 2ನೇ ದಿನವಾದ ಬುಧವಾರ ಕೂಡಾ ತಮ್ಮ ತಪಾಸಣೆ ಮುಂದುವರೆಸಿದ್ದಾರೆ. ಮೂಲಗಳ ಪ್ರಕಾರ ಈ ಪರಿಶೀಲನೆ ಇನ್ನೂ 2-3 ದಿನ ಮುಂದುವರೆಯುವ ಸಾಧ್ಯತೆ ಇದೆ. ಮೊದಲ ದಿನ ಕಂಪನಿಯ ಲೆಕ್ಕಪತ್ರದ ಕುರಿತು ದಾಖಲೆಗಳನ್ನು ಕೇಳಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು(Income Tax Department), ಬುಧವಾರ ಎಲೆಕ್ಟ್ರಾನಿಕ್‌ ಮತ್ತು ಹಣಕಾಸು ದಾಖಲೆಗಳ ಕಾಪಿಗಳನ್ನು ಸಂಗ್ರಹಿಸಿದ್ದಾರೆ ಎನ್ನಲಾಗಿದೆ.

ಬಿಬಿಸಿ ಇಂಡಿಯಾದ (BBC India)ಅಂತಾರಾಷ್ಟ್ರೀಯ ತೆರಿಗೆ (international tax irregularities) ವಿಷಯದಲ್ಲಿನ ಅಕ್ರಮ ಹಾಗೂ ಭಾರತದಲ್ಲಿನ ಲಾಭದ ಹಣವನ್ನು ಬ್ರಿಟನ್‌ಗೆ ಅಕ್ರಮವಾಗಿ ವರ್ಗಾವಣೆ ಮಾಡಿದ್ದಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆಸಲಾಗಿದೆ ಎನ್ನಲಾಗಿದೆ. ಮಂಗಳವಾರ ಬೆಳಗ್ಗೆ 11.30 ಗಂಟೆ ವೇಳೆಗೆ ದಾಳಿ ಆರಂಭಿಸಿದ್ದ ಅಧಿಕಾರಿಗಳು, ಸಿಬ್ಬಂದಿಗಳ ಮೊಬೈಲ್‌ ಮತ್ತು ಎಲೆಕ್ಟ್ರಾನಿಕ್‌ ಉಪಕರಣಗಳನ್ನು ವಶಪಡಿಸಿಕೊಂಡಿದ್ದರು. ಬಳಿಕ, ರಾತ್ರಿ ವೇಳೆಗೆ ಬಹುತೇಕ ಸಿಬ್ಬಂದಿಗಳಿಗೆ ಮನೆಗೆ ತೆರಳಲು ಅವಕಾಶ ನೀಡಿ ಕೆಲವರನ್ನು ಮಾತ್ರ ಮಾಹಿತಿ ಪಡೆಯಲು ಕಚೇರಿಯಲ್ಲಿ ಉಳಿಸಿಕೊಂಡಿದ್ದರು. ಬುಧವಾರ ಕೂಡಾ ಸೀಮಿತ ಸಂಖ್ಯೆಯ ಸಿಬ್ಬಂದಿ ಮಾತ್ರ ಕಚೇರಿಗೆ ಹಾಜರಾಗಿದ್ದರು ಎನ್ನಲಾಗಿದೆ.

ಬಿಬಿಸಿ ಮೇಲೆ ಐಟಿ ದಾಳಿಗೆ ಸಂಪಾದಕರ ಸಂಘ ತೀವ್ರ ಕಳವಳ

ಈ ನಡುವೆ ದಾಳಿ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಬಿಬಿಸಿ, ಅಧಿಕಾರಿಗಳೊಂದಿಗೆ ನಮ್ಮ ಸಿಬ್ಬಂದಿ ಸಹಕರಿಸುತ್ತಿದ್ದಾರೆ. ಆದಷ್ಟು ಬೇಗ ಪರಿಸ್ಥಿತಿ ಸಾಮಾನ್ಯವಾಗುವ ವಿಶ್ವಾಸವಿದೆ ಎಂದು ಹೇಳಿದೆ. ಜೊತೆಗೆ, ನಮ್ಮ ಪತ್ರಿಕೋದ್ಯಮ (journalism) ಎಂದಿನಂತೆ ಸಾಮಾನ್ಯವಾಗಿ ಮುಂದುವರೆದಿದೆ, ನಮ್ಮ ಭಾರತೀಯ ವೀಕ್ಷಕರಿಗೆ ಸೇವೆ ನೀಡಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದೆ.

ತನಿಖಾಧಿಕಾರಿಗಳಿಗೆ ಸಹಕರಿಸಿ: ಬಿಬಿಸಿ:

ಈ ನಡುವೆ ತನ್ನ ಸಿಬ್ಬಂದಿಗೆ ಪ್ರತ್ಯೇಕ ಇ-ಮೇಲ್‌ ಮಾಹಿತಿ ರವಾನಿಸಿರುವ ಬಿಬಿಸಿ, ಎಲ್ಲಾ ಸಿಬ್ಬಂದಿ ತೆರಿಗೆ ಅಧಿಕಾರಿಗಳೊಂದಿಗೆ ಸಹಕರಿಸಬೇಕು. ನಿಮ್ಮ ವೇತನದ ಬಗ್ಗೆ ಮಾತ್ರ ಮಾಹಿತಿ ನೀಡಿ, ವೈಯಕ್ತಿಕ ಆದಾಯದ ಕುರಿತು ಮಾಹಿತಿ ನೀಡುವ ಅಗತ್ಯವಿಲ್ಲ. ಪ್ರಸಾರ ವಿಭಾಗದಲ್ಲಿ ಕೆಲಸ ಮಾಡುವ ಸಿಬ್ಬಂದಿ ಮಾತ್ರವೇ ಕಚೇರಿಗೆ ಹಾಜರಾದರೆ ಸಾಕು. ಉಳಿದ ಸಿಬ್ಬಂದಿ ಮನೆಯಿಂದಲೇ ಕಾರ್ಯನಿರ್ವಹಿಸಬಹುದು ಎಂದು ಹೇಳಿದೆ.

ಆಡಳಿತ ಹಾಗೂ ಪ್ರತಿಪಕ್ಷ ಮಧ್ಯೆ ಭಾರೀ ವಾಕ್ಸಮರಕ್ಕೆ ನಾಂದಿ ಹಾಡಿದ ಬಿಬಿಸಿ ಮೇಲಿನ ಐಟಿ ರೈಡ್

ಪತ್ರಿಕಾ, ವಾಕ್‌ ಸ್ವಾತಂತ್ರ್ಯಕ್ಕೆ ಬೆಂಬಲ: ಅಮೆರಿಕ

ವಾಷಿಂಗ್ಟನ್‌: ಪ್ರಜಾಪ್ರಭುತ್ವದ ತಳಹದಿಯಾಗಿರುವ ಸ್ವತಂತ್ರ ಪತ್ರಿಕೋದ್ಯಮ, ವಾಕ್‌ ಸ್ವಾತಂತ್ರ್ಯ ಮತ್ತು ಧಾರ್ಮಿಕ ಸ್ವಾತಂತ್ರ್ಯವನ್ನು ಭಾರತ ಸೇರಿದಂತೆ ವಿಶ್ವದಾದ್ಯಂತ ತಾನು ಬೆಂಬಲಿಸುವುದಾಗಿ ಅಮೆರಿಕ (United States) ಹೇಳಿದೆ. ಭಾರತದಲ್ಲಿನ ಬಿಬಿಸಿ ಕಚೇರಿ ದಾಳಿಯ ಬೆನ್ನಲ್ಲೇ ಅಮೆರಿಕ ಈ ಹೇಳಿಕೆ ನೀಡಿದೆ.  ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಇಲಾಖೆ ವಕ್ತಾರ ನೆಡ್‌ ಪ್ರೈಸ್‌ (Ned Price), ದೆಹಲಿಯಲ್ಲಿನ ಬಿಬಿಸಿ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಬಗ್ಗೆ ನಮಗೆ ಮಾಹಿತಿ ಲಭಿಸಿದೆ. ದಾಳಿಗೆ ಕಾರಣವಾದ ಅಂಶಗಳ ಕುರಿತು ಭಾರತೀಯ ಅಧಿಕಾರಿಗಳು ಹೆಚ್ಚಿನ ಮಾಹಿತಿ ನೀಡಬಲ್ಲರು. ಆದರೆ ಸಮಗ್ರ ದೃಷ್ಟಿಕೋನದಲ್ಲಿ ಹೇಳುವುದಾದರೆ ಸ್ವತಂತ್ರ ಪತ್ರಿಕೋದ್ಯಮ, ವಾಕ್‌ ಸ್ವಾತಂತ್ರ್ಯ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಮಹತ್ವವನ್ನು ನಾವು ಎತ್ತಿಹಿಡಿಯುತ್ತೇವೆ ಎಂದು ಹೇಳಿದ್ದಾರೆ.

BBC ಅಂದ್ರೆ ಭ್ರಷ್ಟ ಬಕ್ವಾಸ್ ಕಾರ್ಪೋರೇಶನ್, ಐಟಿ ದಾಳಿ ಬೆನ್ನಲ್ಲೇ ಬಿಜೆಪಿ ನಾಯಕನ ಹೇಳಿಕೆ ವೈರಲ್!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ
ಪುಟಿನ್‌ಗೆ ರಷ್ಯನ್ ಭಾಷೆ ಭಗವದ್ಗೀತೆ ಉಡುಗೊರೆ ನೀಡಿದ ಪ್ರಧಾನಿ ಮೋದಿ, ಭಾರಿ ಮೆಚ್ಚುಗೆ