
ಅಪ್ರಾಪ್ತ ಹುಡುಗಿ ಮೇಲೆ ಬಲಾತ್ಕರ ಮಾಡಿ ಗಲ್ಫ್ ಕಂಟ್ರಿಸ್‌ಗೆ ಪರಾರಿಯಾಗಿದ್ದ ಆರೋಪಿಯೊಬ್ಬನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಇಂಟರ್ಪೋಲ್ ಸಹಾಯದಿಂದ ಆರೋಪಿ ಸುಹೈಲ್‌ನನ್ನು ಪೊಲೀಸರು ಬಂಧಿಸಿದ್ದಾರೆ. 2022ರಲ್ಲಿ ಅಪ್ರಾಪ್ತ ಹುಡುಗಿಯೊಬ್ಬಳನ್ನು ಅತ್ಯಾಚಾರವೆಸಗಿದ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಈತ ಬಳಿಕ ಸೌದಿ ರಾಷ್ಟ್ರ ಅಬುಧಾಬಿಗೆ ಪರಾರಿಯಾಗಿದ್ದ. ಈಗ ಒಂದೂವರೆ ವರ್ಷದ ನಂತರ ಇಂಟರ್ಪೋಲ್ ಸಹಾಯದಿಂದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಕೇರಳದ ಮೂವಾಟುಪುಳ ಮೂಲದ ಪುತ್ತನ್ಪುರೈಲ್ ಮನೆಯಲ್ಲಿ ಆರೋಪಿ ಸುಹೈಲ್‌ನಲ್ಲಿ ಪೊಲೀಸರು ಬಂಧಿಸಿದ್ದು ಬಳಿಕ ಮೂವಾಟುಪುಳ ಠಾಣೆಗೆ ಹಾಜರುಪಡಿಸಲಾಗಿದೆ. 2022ರಲ್ಲಿ ಈತ ಅಪ್ರಾಪ್ತ ಹುಡುಗಿಯ ಮನೆಗೆ ನುಗ್ಗಿ ಬಲಾತ್ಕಾರವೆಸಗಿದ ಆರೋಪವಿದೆ. ಒಂದೂವರೆ ವರ್ಷದ ನಂತರ ಇಂಟರ್ಪೋಲ್ ಸಹಾಯದಿಂದ ಆರೋಪಿಯನ್ನು ಊರಿಗೆ ಕರೆತರಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 2023ರಲ್ಲಿ ಪೊಲೀಸರು ತನಿಖೆ ಮುಗಿಸಿ ಮೂವಾಟುಪುಳ ಪೋಕ್ಸೋ ಕೋರ್ಟಿಗೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ನಂತರ ಕೋರ್ಟ್ ಆರೋಪಿ ವಿರುದ್ಧ ಓಪನ್ ಎಂಡೆಡ್ ನಾನ್‌ಬೈಲೇಬಲ್ ವಾರೆಂಟ್ (ಜಾಮೀನು ರಹಿತ ವಾರೆಂಟ್) ಹೊರಡಿಸಿತ್ತು. ಅದಾದ ಮೇಲೆ ಲುಕ್ ಔಟ್ ನೋಟಿಸ್ ಹೊರಡಿಸಿ, ಇಂಟರ್ಪೋಲ್ ಸಹಾಯದಿಂದ ಅಬುಧಾಬಿಯಲ್ಲಿ ಆತನನ್ನು ಹಿಡಿಯಲಾಗಿತ್ತು. ಜಿಲ್ಲಾ ಪೊಲೀಸ್ ಮುಖ್ಯಸ್ಥ ವೈಭವ್ ಸಕ್ಸೇನಾ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಕೈಗೊಳ್ಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ