
ಮುಂಬೈ(ಆ.03) ಭಾರತ ಹಾಗೂ ದುಬೈ ಹಲವು ದ್ವಿಪಕ್ಷೀಯ ಒಪ್ಪಂದಗಳೊಂದಿಗೆ ಹೆಜ್ಜೆ ಹಾಕುತ್ತಿದೆ. ವ್ಯಾಪಾರ ವಹಿವಾಟು, ಅತೀ ಹಚ್ಚಿನ ಭಾರತೀಯರು ದುಬೈನಲ್ಲಿ ಉದ್ಯೋಗದಲ್ಲಿದ್ದಾರೆ. ವ್ಯಾಪಾರ ವಹಿವಾಟು ಸೇರಿದಂತೆ ಹಲವು ಕಾರಣಗಳಿಂದ ಭಾರತ ಹಾಗೂ ದುಬೈ ನಿಕಟ ಸಂಪರ್ಕದಲ್ಲಿದೆ. ಆದರೆ ದುಬೈ ಹಾಗೂ ಭಾರತ ನಡುವಿನ ಪ್ರಯಾಣ ದುಬಾರಿ. ಬೆಂಗಳೂರು, ಮುಂಬೈ, ದೆಹಲಿ ಸೇರಿದಂತೆ ಯಾವುದೇ ನಗರದ ವಿಮಾನ ನಿಲ್ದಾಣದಿಂದ ದುಬೈಗೆ ಪ್ರಯಾಣಿಸಲು ಕನಿಷ್ಠ 3 ಗಂಟೆ ಬೇಕು. ಇದೀಗ ಹೊಸ ಯೋಜನೆ ಮೂಲಕ ಕೇವಲ 2 ಗಂಟೆಯಲ್ಲಿ ಮಂಬೈನಿಂದ ದುಬೈ ತಲುಲು ಸಾಧ್ಯವಿದೆ. ಇದು ಕೂಡ ಅತೀ ಕಡಿಮೆ ಬೆಲೆಯಲ್ಲಿ. ಕಾರಣ ಇದು ರೈಲು ಸೇವೆ. ಅತೀ ಕಡಿಮೆ ಬಲೆ, ಅತೀ ಕಡಿಮೆ ಸಮಯದಲ್ಲಿ ದುಬೈ ತಲಪಲು ಸಾಧ್ಯವಿದೆ.
UAE ನ್ಯಾಷನಲ್ ಅಡ್ವೈಸರ್ ಬ್ಯೂರೋ ಲಿಮಿಟೆಡ್ ಈ ರೈಲು ಯೋಜನೆಯನ್ನು ಕಾರ್ಯಗತಗೊಳಿಸಲು ಮುಂದಾಗಿದೆ. ಈ ಯೋಜನೆ ಹೊಸದಲ್ಲ. ಆದರೆ ಹಳಯ ಯೋಜನೆಯನ್ನು 2020ರ ವೇಳೆಗೆ ಕಾರ್ಯಗತ ಮಾಡಲು ಕೆಲಸಗಳು ಆರಂಭಗೊಂಡಿದೆ. ಈ ರೈಲು ಗಂಟೆಗೆ 600 ರಿಂದ 1,000 ಕಿಲೋಮೀಟರ್ ವೇಗದಲ್ಲಿ ಸಾಗಲಿದೆ.
ರೈಲಿನಿಂದ ಎಸೆದ ವಾಟರ್ ಬಾಟಲ್ ಎದೆಗೆ ಬಡಿದು ಬಾಲಕ ಸಾವು
ಸಮುದ್ರದಡಿಯಿಂದ ರೈಲು ಮಾರ್ಗ
ಮುಂಬೈ ದುಬೈ ರೈಲು ಸೇವೆ ಸಮುದ್ರದ ಅಡಿಯಿಂದ ಮಾಡಲು ಯೋಜಿಸಲಾಗಿದೆ. ಸಮುದ್ರ ಅಡಿಯಿಂದ ಯಾವುದೇ ಅಡೆ ತಡೆ ಇಲ್ಲದೆ ರೈಲು ಸೇವೆ ಒದಗಿಸಲು ಪ್ಲಾನ್ ರೆಡಿಯಾಗಿದೆ. ಇದು ಅತೀ ದೊಡ್ಡ ಮೊತ್ತದ ಯೋಜನೆಯಾಗಿದೆ. ಆದರೆ ಕಾರ್ಯಗತ ಗೊಂಡರೆ ಉಭಯ ದೇಶಗಳ ನಡುವಿನ ಅಂತರ ಕಡಿಮೆಯಾಗಲಿದೆ. ಇಷ್ಟೇ ಅಲ್ಲ ಈ ಯೋಜನೆಯಿಂದ ಉಭಯ ದೇಶಗಲ ವ್ಯಾಪಾರ ವಹಿವಾಟು ಸೇರಿದಂತೆ ದ್ವಿಪಕ್ಷೀಯ ಸಂಬಂಧಗಳು ವೃದ್ಧಿಸಲಿದೆ.
ತೈಲ ಆಮದಿಗೆ ಸುಲಭ ಮಾರ್ಗ
ಮುಂಬೈ ದುಬೈ ರೈಲು ಸೇವೆ ಪ್ರಯಾಣಿಕರಿಗೆ ಮಾತ್ರವಲ್ಲ, ಇದರ ಜೊತೆಗೆ ವ್ಯಾಪಾರ ವಹಿವಾಟು ಪ್ರಮಖವಾಗಲಿದೆ. ಈ ಪೈಕಿ ಇದೇ ರೈಲು ಮಾರ್ಗದಲ್ಲಿ ದುಬೈನಿಂದ ತೈಲ ಆಮದು ಮಾಡಿಕೊಳ್ಳುವುದು ಅತೀ ಸುಲಭಾಗಲಿದೆ. ಇದರಿದ ಸಾಗಣೆ ವೆಚ್ಚ ಉಳಿತಾಯವಾಗಲಿದೆ. ಜೊತೆಗೆ ಇಂಧನ ಬೆಲೆಯಲ್ಲಿ ವ್ಯತ್ಯಾಸಗಳಾಗುವ ಸಾಧ್ಯತೆಗಳಿವೆ.
ಭಾರತ ಹಾಗೂ ಮುಂಬೈ ನಡುವೆ ಸರಗು ಸಾಗಾಣೆ, ತೈಲ ಆಮದು ಸೇರಿದಂತೆ ಇತರ ವ್ಯಾಪಾರ ವಹಿವಾಟಿಗೆ ಈ ರೈಲು ಮಾರ್ಗ ಹೆಚ್ಚು ಸೂಕ್ತವಾಗಿದೆ. ಜೊತೆಗೆ ಉಭಯ ದೇಶಗಳಿಗೆ ಸಾಗಣೆ ಹಾಗೂ ಸಾರಿಗೆ ಮೇಲಿನ ಹೆಚ್ಚಿನ ಹೂಡಿಕೆ ತಪ್ಪಲಿದೆ. ದುಬೈನ ನ್ಯಾಷನಲ್ ಅಡ್ವೈಸರ್ ಬ್ಯೂರೋ ಲಿಮಿಟೆಡ್ ಈ ಯೋಜನೆ ಕಾರ್ಯಗತಗೊಳಿಸಲು ಇದೀಗ ಪಣತೊಟ್ಟಿದೆ. ಇದಕ್ಕಾಗಿ ಸರ್ಕಾರದ ಮಟ್ಟದಲ್ಲಿ ಈ ಯೋದನೆ ಅನುಷ್ಟಾನಕ್ಕೆ ತರಲು ಆರಂಭಿಕ ಹಂತದ ಪ್ರಕ್ರಿಯೆಗಳು ಆರಂಭಗೊಂಡಿದೆ. ಈ ಯೋಜನೆ ಕಾರ್ಯಗತಗೊಂಡರೆ ಭಾರತ ಹಾಗು ದುಬೈ ನಡುವಿನ ಅಂತರ ಕಡಿಮೆಯಾಗಲಿದೆ.
ಮಂಬೈ ದುಬೈ ವಿಮಾನ ಪ್ರಯಾಣ ಸರಿಸುಮಾರು 3 ಗಂಟೆ 15 ನಿಮಿಷ ತೆಗೆದುಕೊಳ್ಳಲಿದೆ. ಇನ್ನು ವಿಮಾನ ಪ್ರಯಾಣದ ಸಾಮಾನ್ಯ ದರ 10,000 ರೂಪಾಯಿಗಿಂತ ಮೇಲ್ಪಟ್ಟು. ಭಾರತದ ಯಾವುದೇ ನಗರದಿಂದ ದುಬೈ ಟಿಕೆಟ್ 10,000 ರೂಪಾಯಿಗಿಂತ ಮೇಲಿದೆ. ಬಹುಬೇಗನೆ ಬುಕ್ ಮಾಡಿಕೊಂಡರೆ ಈ ಬೆಲೆಯಲ್ಲಿ ಲಭ್ಯವಾಗಲಿದೆ. ಆದರೆ ತಕ್ಷಣಕ್ಕೆ ಬುಕಿಂಗ್ ಮಾಡುವುದಾದರೆ, ಅಥವಾ ಸೀಸನ್ ಸಮಯದಲ್ಲಿ ಬುಕಿಂಗ್ ಮಾಡುವುದಾದರೆ 35,000 ರೂಪಾಯಿಗಿಂತ ಅಧಿಕವಾಗಿದೆ. ಆದರೆ ಹೊಸ ರೈಲು ಸೇವೆ ಕಾರ್ಯಗತ ಗೊಂಡರೆ ಈ ಎಲ್ಲಾ ಸಮಸ್ಯೆಗೆ ಪರಿಹಾರ ಸಿಗಲಿದೆ.
ಮಂಗಳೂರು-ಮುಂಬೈ ಇನ್ನು ಕೇವಲ 12 ಗಂಟೆ, ಶೀಘ್ರದಲ್ಲೇ ಹೊಸ ವಂದೇ ಭಾರತ್ ರೈಲು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ