ಇಂಡೋನೇಷ್ಯಾ ಅಧ್ಯಕ್ಷ ಜೊಕೊ ವಿಡೊಡೊ ಭಾರತಕ್ಕೆ ಅಧಿಕೃತವಾಗಿ ಜಿ20 ಶೃಂಗಸಭೆಯ ಅಧ್ಯಕ್ಷ ಸ್ಥಾನವನ್ನು ಹಸ್ತಾಂತರ ಮಾಡಿದ್ದಾರೆ. ಬಾಲಿ ಶೃಂಗಸಭೆಯ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷ ಪದವಿಯನ್ನು ನರೇಂದ್ರ ಮೋದಿ ಅವರಿಗೆ ನೀಡಲಾಯಿತು.
ಬಾಲಿ (ನ.16): ಭಾರತಕ್ಕೆ ಅಧಿಕೃತವಾಗಿ ಜಿ20 ಶೃಂಗಸಭೆಯ ಅಧ್ಯಕ್ಷ ಸ್ಥಾನ ಹಸ್ತಾಂತರವಾಗಿದೆ. ಬುಧವಾರ ನಡೆದ ಬಾಲಿ ಶೃಂಗಸಭೆಯ ಸಮಾರೋಪ ಸಮಾರಂಭದಲ್ಲಿ ಇಂಡೋನೇಷ್ಯಾದ ಅಧ್ಯಕ್ಷ ಜೊಕೊ ವಿಡೊಡೊ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಿ20 ಶೃಂಗಸಭೆಯ ಅಧ್ಯಕ್ಷ ಸ್ಥಾನವನ್ನು ಹಸ್ತಾಂತರ ಮಾಡಿದರು. ಡಿಸೆಂಬರ್ 1 ರಿಂದ ಭಾರತ ಅಧಿಕೃತವಾಗಿ ಜಿ20ಯ ಅಧ್ಯಕ್ಷ ಸ್ಥಾನದಲ್ಲಿ ಆಸೀನವಾಗಲಿದೆ. ಬಾಲಿಯ ಈ ಪ್ರಾಚೀನ ಮತ್ತು ಮಹಾನ್ ಭೂಮಿಯಲ್ಲಿ ಜಿ 20 ಅಧ್ಯಕ್ಷ ಸ್ಥಾನವನ್ನು ಏರಿದ್ದು, ವೈಯಕ್ತಿಕವಾಗಿ ನನಗೆ ಹಾಗೂ ಭಾರತಕ್ಕೆ ಅದೃಷ್ಟದ ಕ್ಷಣ ಎಂದು ಭಾವಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಈ ವೇಳೆ ಹೇಳಿದ್ದಾರೆ.ಭಾರತದ ಮುಂಬರುವ ಜಿ 20 ಅಧ್ಯಕ್ಷ ಸ್ಥಾನವು ಡಿಜಿಟಲ್ ವಿಭಜನೆಗೆ ಸೇತುವೆಯಾಗಿ ಕೆಲಸ ಮಾಡುತ್ತದೆ. ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ, ಮತ್ತು ಡಿಜಿಟಲ್ ತಂತ್ರಜ್ಞಾನಗಳು ಮತ್ತು ರೂಪಾಂತರದಿಂದ ಹೆಚ್ಚಿನ ಪ್ರಯೋಜನಗಳನ್ನು ಖಾತರಿಪಡಿಸುವುದರ ಮೇಲೆ ಕೇಂದ್ರೀಕರಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ. ಬಾಲಿಯಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ಡಿಜಿಟಲ್ ರೂಪಾಂತರದ ಕುರಿತು ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಮುಂದಿನ ದಶಕದಲ್ಲಿ ಡಿಜಿಟಲ್ ಸೇರ್ಪಡೆಗಾಗಿ ಒಟ್ಟಾಗಿ ಕೆಲಸ ಮಾಡುವುದಾಗಿ ಪ್ರತಿಜ್ಞೆ ಮಾಡುವಂತೆ ಇತರ ಜಿ 20 ನಾಯಕರನ್ನು ಒತ್ತಾಯಿಸಿದರು.
Watch! Indonesian President symbolically hands over Presidency to Prime Minister
India🇮🇳 will formally assume G20 Presidency from 1st December this year. pic.twitter.com/CyIv97kwby
"ಅಭಿವೃದ್ಧಿಗಾಗಿ ಡೇಟಾ" ತತ್ವವು ನಮ್ಮ ಅಧ್ಯಕ್ಷತೆಯ ಒಟ್ಟಾರೆ ವಿಷಯವಾದ 'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ'ದ ಅವಿಭಾಜ್ಯ ಅಂಗವಾಗಿರುತ್ತದೆ" ಎಂದು ಅವರು ಹೇಳಿದರು. "ಎಲ್ಲಾ ದೇಶಗಳ ಪ್ರಯತ್ನಗಳೊಂದಿಗೆ, ನಾವು G20 ಶೃಂಗಸಭೆಯನ್ನು ಜಾಗತಿಕ ಕಲ್ಯಾಣಕ್ಕೆ ವೇದಿಕೆಯಾಗಿ ಖಂಡಿತವಾಗಿ ಬಳಕೆ ಮಾಡಿಕೊಳ್ಳುತ್ತೇವೆ' ಎಂದು ಮೋದಿ ಹೇಳಿದ್ದಾರೆ. ಹಸ್ತಾಂತರ ಸಮಾರಂಭದೊಂದಿಗೆ ಎರಡು ದಿನಗಳ ಜಿ20 ಶೃಂಗಸಭೆ ಕೊನೆಗೊಂಡಂತಾಗಿದೆ. ಎಲ್ಲಾ ಸದಸ್ಯ ರಾಷ್ಟ್ರಗಳು ಜಂಟಿ ಘೋಷಣೆಯನ್ನು ಅಂತಿಮ ಮಾಡುವುದರೊಂದಿಗೆ ಬಾಲಿ ಶೃಂಗಸಭೆ ಕೊನೆಗೊಂಡಿದೆ. ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಅವರು ಜಿ20ಕರಡು ರಚನೆಗೆ ಭಾರತ 'ರಚನಾತ್ಮಕವಾಗಿ' ಕೊಡುಗೆ ನೀಡಿದೆ ಎಂದು ಹೇಳಿದರು.
ಜಿ20ಯಲ್ಲಿ ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ದಕ್ಷಿಣ ಕೊರಿಯಾ, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಯುಕೆ, ಯುಎಸ್ ಮತ್ತು ಯುರೋಪಿಯನ್ ಯೂನಿಯನ್ ಅನ್ನು ಒಳಗೊಂಡಿದೆ. ಒಟ್ಟಾರೆಯಾಗಿ, ಅವರು ಜಾಗತಿಕ ಜಿಡಿಪಿ ಯ 80 ಪ್ರತಿಶತದಷ್ಟು, ಅಂತಾರಾಷ್ಟ್ರೀಯ ವ್ಯಾಪಾರದ 75 ಪ್ರತಿಶತ ಮತ್ತು ವಿಶ್ವದ ಜನಸಂಖ್ಯೆಯ ಮೂರನೇ ಎರಡರಷ್ಟು ಭಾಗವನ್ನು ಹೊಂದಿದೆ.
G20 ಲೋಗೋ ವಿವಾದ, ರಾಜೀವ್ ಅಂದರೆ ಏನು ಗೊತ್ತಾ? ಕಾಂಗ್ರೆಸ್‌ಗೆ ಬಿಜೆಪಿ ತಿರುಗೇಟು?
2023ರ ಜಿ20 ಅಧ್ಯಕ್ಷತೆಯಲ್ಲಿ ಭಾರತವು ಈ ಉದ್ದೇಶವನ್ನು ಸಾಧಿಸಲು ವಿಶ್ವದ 20 ದೊಡ್ಡ ಆರ್ಥಿಕತೆಗಳ ಗುಂಪಿನಲ್ಲಿ ಪಾಲುದಾರರೊಂದಿಗೆ ಜಂಟಿಯಾಗಿ ಕೆಲಸ ಮಾಡುತ್ತದೆ ಎಂದು ಮೋದಿ ಹೇಳಿದರು. ಭಾರತವು ಮುಂದಿನ ಶೃಂಗಸಭೆಯನ್ನು ಸೆಪ್ಟೆಂಬರ್ 2023 ರಲ್ಲಿ (September 2023) ನವದೆಹಲಿಯಲ್ಲಿ (New Delhi) ಆಯೋಜಿಸಲಿದೆ. ಬಹುಪಕ್ಷೀಯ ಹಣಕಾಸು ಸಂಸ್ಥೆಗಳ ಡಿಜಿಟಲ್ ಸಮಸ್ಯೆಗಳು ಮತ್ತು ಸುಧಾರಣೆಗಳು ಭಾರತದ ಜಿ20 ಅಧ್ಯಕ್ಷ ಸ್ಥಾನದ ಕೇಂದ್ರಬಿಂದುಗಳಾಗಿವೆ.
ಜಿ20 ಶೃಂಗಕ್ಕೆ ಭಾರತ ಬಿಡುಗಡೆ ಮಾಡಿದ ಲೋಗೋದಲ್ಲೂ ಲೋಟಸ್: ನೆಟ್ಟಿಗರು ಏನಂದ್ರು ನೋಡಿ
‘ಇಂದಿನ ಯುಗವನ್ನು ಯುದ್ಧದಲ್ಲ’ ಎಂದು ಉಕ್ರೇನ್-ರಷ್ಯಾ ಸಂಘರ್ಷದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿದ್ದ ಪ್ರಬಲ ಸಂದೇಶವು ಈಗ ಜಿ20ಯ ನಾಯಕ ಜಂಟಿ ಘೋಷಣೆಯಲ್ಲಿ ದಾಖಲಾಗಿದೆ. ಜಿ20 ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ನರೇಂದ್ರ ಮೋದಿ, ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದೊಂದಿಗೆ ವಿಶ್ವದ ವಿವಿಧ ಭಾಗಗಳಲ್ಲಿನ ಉದ್ವಿಗ್ನ ವಾತಾವರಣವನ್ನು ಉಲ್ಲೇಖಿಸಿ ಮಾತನಾಡಿದರು. ಈ ವೇಳೆ ಇಂದಿನ ಯುಗವೆನ್ನುವುದು ಯುದ್ಧದಲ್ಲ ಎಂದು ಹೇಳಿದ್ದರು. ಅವರ ಈ ಮಾತು ಜಂಟಿ ಘೋಷಣೆಯ ಹೇಳಿಕೆಯಲ್ಲಿ ದಾಖಲಾಗಿದೆ.