G20 Summit: ಮೋದಿಗೆ ಬೈಡೆನ್‌ ಸೆಲ್ಯೂಟ್‌, ಮ್ಯಾಂಗ್ರೋವ್‌ ಅರಣ್ಯದಲ್ಲಿ ವಿಶ್ವ ನಾಯಕರ ಸಭೆ!

By Santosh NaikFirst Published Nov 16, 2022, 11:35 AM IST
Highlights

ಇಂಡೋನೇಷ್ಯಾದ ಬಾಲಿಯಲ್ಲಿ 2ನೇ ದಿನದ ಜಿ20 ಶೃಂಗಸಭೆ ಬಾಲಿಯ ಮ್ಯಾಂಗ್ರೋವ್‌ ಅರಣ್ಯದಲ್ಲಿ ನಡೆದಿದೆ. ವಿಶ್ವ ನಾಯಕರನ್ನು ಇಂಡೋನೇಷ್ಯಾ ಅಧ್ಯಕ್ಷ ಜೊಕೊ ವಿಡೊಡೊ ಸ್ವಾಗತಿಸಿದರು. ಈ ವೇಳೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ಪ್ರಧಾನಿ ಮೋದಿಗೆ ಸೆಲ್ಯೂಟ್‌ ಮಾಡಿರುವ ಚಿತ್ರ ವೈರಲ್‌ ಆಗಿದೆ.

ಬಾಲಿ (ನ.16): ಇಂಡೋನೇಷ್ಯಾದ ಆತಿಥ್ಯದಲ್ಲಿ ಬಾಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಗೆ ಇಂದು ಕೊನೆಯ ದಿನ. ಬುಧವಾರ ಬಾಲಿಯ ಮ್ಯಾಂಗ್ರೋವ್‌ ಕಾಡಿನಲ್ಲಿ ವಿಶ್ವನಾಯಕರ ಸಭೆ ನಡೆದಿದೆ. ಇಂಡೋನೇಷ್ಯಾ ಅಧ್ಯಕ್ಷ ಜೊಕೊ ವಿಡೊಡೊ, ವಿಶ್ವ ನಾಯಕರನ್ನು ಈ ವೇಳೆ ಸ್ವಾಗತಿಸಿದರು. ಈ ವೇಳೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೆಲ್ಯೂಟ್‌ ಮಾಡಿದ ಚಿತ್ರ ವೈರಲ್‌ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಅದಕ್ಕೆ ಧ್ಯನವಾದ ಅರ್ಪಿಸುವಂತೆ ಕೈ ಮೇಲೆತ್ತಿ ಬೈಡೆನ್‌ ಸೆಲ್ಯೂಟ್‌ಗೆ ಪ್ರತಿಕ್ರಿಯಿಸಿದ್ದಾರೆ. ಶೃಂಗಸಭೆಯ ಮೊದಲ ದಿನ ಬೈಡೆನ್‌ ಮೋದಿಗೆ ಅವರಿಗ ಹಸ್ತಲಾಘವ ಮಾಡಲು ಓಡಿ ಬಂದಿದ್ದಲ್ಲದೆ, ಸಭೆಯಲ್ಲಿ ಅವರ ಪಕ್ಕದಲ್ಲಿಯೇ ಆಸೀನರಾಗಿದ್ದರು. ಆ ಬಳಿಕ ಮೋದಿ ಹಾಗೂ ಬೈಡೆನ್‌ ಅವರ ಚಿತ್ರ ವೈರಲ್‌ ಆಗಿದ್ದವು. ಪ್ರಧಾನಿ ನರೇಂದ್ರ ಮೋದಿ ಕೂಡ ತಮ್ಮ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಮ್ಯಾಂಗ್ರೋವ್‌ ಕಾಡುಗಳಲ್ಲಿ ಸಸಿ ನೆಡುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಆ ಮೂಲಕ ಜಾಗತಿಕ ಹವಾಮಾನ ಬದಲಾವಣೆಗೆ ವಿರುದ್ಧ ತಮ್ಮ ಹೋರಾಟ ಅಚಲವಾಗಿದೆ ಎನ್ನುವ ಸಂದೇಶ ನೀಡಿದ್ದಾರೆ. ಒಂದು ಚಿತ್ರದಲ್ಲಿ ಅಮೆರಿಕ ಬೈಡೆನ್‌, ಪ್ರಧಾನಿ ನರೇಂದ್ರ ಮೋದಿ ಹಾಗೂ ಇಂಡೋನೇಷ್ಯಾದ ಅಧ್ಯಕ್ಷ ಜೊಕೊ ವಿಡೊಡೊ ಸಸಿಗಳನ್ನು ನೆಟ್ಟ ಬಳಿಕ ಹಾರೆಯನ್ನು ಎತ್ತಿ ಚಿತ್ರಕ್ಕೆ ಪೋಸ್‌ ನೀಡಿದ್ದಾರೆ.

PM Modi and US President Biden exchange greetings at the Mangrove forest visit in Bali, Indonesia during the pic.twitter.com/qv7cqKWmab

— ANI (@ANI)


ಇನ್ನೊಂದು ಚಿತ್ರದಲ್ಲಿ ನರೇಂದ್ರ ಮೋದಿ, ಬೈಡೆನ್‌ ಹಾಗೂ ಫ್ರಾನ್ಸ್‌ ಅಧ್ಯಕ್ಷ ಎಮಾನ್ಯುಯೆಲ್‌ ಮ್ಯಾಕ್ರನ್‌ ಅವರೊಂದಿಗೆ ಸಂವಾದ ನಡೆಸುತ್ತಿರುವುದನ್ನು ಕಾಣಬಹುದಾಗಿದೆ. ಇದಕ್ಕೂ ಮುನ್ನ ಮ್ಯಾಂಗ್ರೋವ್‌ ಅರಣ್ಯದ ಮಧ್ಯೆ ಹಾಕಿದ್ದ ವೇದಿಕೆಯಲ್ಲಿ ಜಿ20 ದೇಶಗಳ ನಾಯಕರನ್ನು ಇಂಡೋನೇಷ್ಯಾದ ಅಧ್ಯಕ್ಷ ಸ್ವಾಗತ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ವೇದಿಕೆಯ ಬಳಿ ಬಂದ ಬಳಿಕ, ಅವರ ಬಳಿ ಆಗಮಿಸಿದ ವಿಡೊಡೊ ಅವರನ್ನು ವೇದಿಕೆಯ ಮೇಲೆ ಕರೆದುಕೊಂಡು ಹೋದರು. ಆ ಬಳಿಕ ಅಮೆರಿಕ ಅಧ್ಯಕ್ಷ ಬೈಡೆನ್‌ ಕೂಡ ಆಗಮಿಸಿದರು. ಅವರ ಕೈ ಹಿಡಿದು ವಿಡೊಡೊ ಕರೆದುಕೊಂಡು ಬಂದರು. ಮೆಟ್ಟಿಲಿನ ಮೇಲೆ ಕಾಲೂರುವ ವೇಳೆ ಬೈಡೆನ್‌ ಎಡವಿದ ಘಟನೆಯೂ ನಡೆಯಿತು. ಈ ವೇಳೆ ವಿಡೊಡೊ ಅವರನ್ನು ಆಧರಿಸಿದರು.

With G-20 leaders at the Mangrove Forest in Bali. pic.twitter.com/D5L5A1B72e

— Narendra Modi (@narendramodi)


ರಷ್ಯಾ ಹಾಗೂ ಉಕ್ರೇನ್‌ ನಡುವೆ ಯುದ್ಧ ನಡೆಯುತ್ತಿರುವ ಹಿನ್ನಲೆಯಲ್ಲಿ ಅಮೆರಿಕ, ರಷ್ಯಾದ ಮೇಲೆ ದೊಡ್ಡ ಮಟ್ಟದ ನಿರ್ಬಂಧಗಳನ್ನು ಹಾಕಿದೆ. ಆದರೆ, ಭಾರತ ಈ ನಿರ್ಬಂಧಗಳನ್ನು ಪರಿಗಣಿಸದೇ ಕಡಿಮೆ ಮೊತ್ತಕ್ಕೆ ರಷ್ಯಾದ ಇಂಧನಗಳನ್ನು ಖರೀದಿ ಮಾಡುತ್ತಿದೆ. ಇದು ಭಾರತ ಹಾಗೂ ಅಮೆರಿಕ ನಡುವಿನ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ ಎನ್ನಲಾಗಿತ್ತು. ಆದರೆ, ಮೋದಿ ಹಾಗೂ ಬೈಡೆನ್‌ ನಡುವಿನ ಮಾತುಕತೆ ಹಾಗೂ ಸ್ನೇಹ ಸಂಬಂಧ ಈ ಆತಂಕವನ್ನು ದೂರ ಮಾಡಿದೆ.

ಗಲ್ವಾನ್ ಗಡಿ ಘರ್ಷಣೆ ಬಳಿಕ ಮೋದಿ ಚೀನಾ ಅಧ್ಯಕ್ಷ ಜಿನ್‌ಪಿಂಗ್ ಭೇಟಿ, ಕೈಕುಲುಕಿ ಶುಭಾಶಯ ವಿನಿಮಯ!

ಹವಾಮಾನ ರಕ್ಷಣೆಗೆ ಮ್ಯಾಂಗ್ರೋವ್‌ ಕಾಡುಗಳು ಪ್ರಮುಖ: ಜಾಗತಿಕ ಹವಾಮಾನ ರಕ್ಷಣೆಯ ಪ್ರಯತ್ನಗಳಲ್ಲಿ ಮ್ಯಾಂಗ್ರೋವ್‌ಗಳು ಪ್ರಮುಖ ಪಾತ್ರವಹಿಸುತ್ತವೆ. ಇಂಡೋನೇಷ್ಯಾ G-20 ಪ್ರೆಸಿಡೆನ್ಸಿ ಅಡಿಯಲ್ಲಿ ಇಂಡೋನೇಷ್ಯಾ ಮತ್ತು ಯುಎಇ ಜಂಟಿ ಉಪಕ್ರಮವಾದ ಮ್ಯಾಂಗ್ರೋವ್ ಅಲೈಯನ್ಸ್ ಫಾರ್ ಕ್ಲೈಮೇಟ್ (MAC) ಸಂಘಕ್ಕೆ ಭಾರತ ಕೂಡ ಇತ್ತೀಚೆಗೆ ಸೇರಿದೆ. 'ತಮನ್ ಹುತಾನ್ ರಾಯ ನ್ಗುರಾ ರೈ' ಮ್ಯಾಂಗ್ರೋವ್ ಕಾಡುಗಳಲ್ಲಿ ಇತರ ಜಿ-20 ನಾಯಕರು ಭೇಟಿ ನೀಡಿ ಮ್ಯಾಂಗ್ರೋವ್‌ ಸಸಿಗಳನ್ನು ನೆಟ್ಟಿದ್ದಾರೆ. 

G20 Summit ಯುದ್ಧದ ಸಮಯವಲ್ಲ,ಮೋದಿ ಮಾತು ಪುನರುಚ್ಚರಿಸಿದ ವಿಶ್ವ ನಾಯಕರು!

ಭಾರತದಲ್ಲಿ 5000 ಚದರ ಕಿಲೋಮೀಟರ್‌ಗಳಲ್ಲಿ 50 ಕ್ಕೂ ಹೆಚ್ಚು ಮ್ಯಾಂಗ್ರೋವ್ ಪ್ರಭೇದಗಳನ್ನು ಕಾಣಬಹುದು. ಭಾರತವು ಮ್ಯಾಂಗ್ರೋವ್‌ಗಳ ರಕ್ಷಣೆ ಮತ್ತು ಪುನಃಸ್ಥಾಪನೆಗೆ ಒತ್ತು ನೀಡುತ್ತಿದೆ, ಅವುಗಳು ಜೀವವೈವಿಧ್ಯತೆಯ ಶ್ರೀಮಂತ ತಾಣಗಳಾಗಿವೆ ಮತ್ತು ಪರಿಣಾಮಕಾರಿ ಕಾರ್ಬನ್ ಸಿಂಕ್‌ಗಳಾಗಿ ಕಾರ್ಯನಿರ್ವಹಿಸುತ್ತವೆ.

 

 

click me!