Surprise Foreign Trip: ವಿದೇಶಕ್ಕೆ ತೆರಳುವ ಯೋಗ ಇದ್ದರೆ ಹೀಗೂ ಆಗುತ್ತೆ...!

By Suvarna NewsFirst Published Dec 15, 2021, 9:43 AM IST
Highlights
  • ಮುಂಬೈನಲ್ಲಿ ನಿದ್ದೆಗೆ ಜಾರಿದ ಕಾರ್ಮಿಕ ಎದ್ದಿದ್ದು ದುಬೈನಲ್ಲಿ
  • ವಿಮಾನದ ಸರಕು ಸಾಗಿಸುವ ಕಂಪಾರ್ಟ್‌ಮೆಂಟ್‌ನಲ್ಲಿ ಮಲಗಿದ್ದ ಕಾರ್ಮಿಕ
  • ಮುಂಬೈನಿಂದ ಅಬುಧಾಬಿಗೆ ತೆರಳುತ್ತಿದ್ದ ಇಂಡಿಗೋ ವಿಮಾನ

ಮುಂಬೈ(ಡಿ.15) ವಿಮಾನಗಳಲ್ಲಿ ಪ್ರಯಾಣಿಕರಿಗೆಂದೇ ಬೇರೆ ಆಸನಗಳು ಮತ್ತು ಸರಕುಗಳಿಗೆಂದೇ ಪ್ರತ್ಯೇಕ ಕಾರ್ಗೋ ಕಂಪಾರ್ಟ್‌ಮೆಂಟ್‌ ಇರುತ್ತದೆ. ಆದರೆ ಸರಕುಗಳನ್ನು ತುಂಬಲು ಬಂದ ಕಾರ್ಮಿಕನೊಬ್ಬ ಸರಕುಗಳ ಮಧ್ಯೆಯೇ ನಿದ್ದೆಗೆ ಜಾರಿ ಅಬುದಾಬಿವರೆಗೂ ಹೋಗಿ ಬಂದ ಘಟನೆ ಮುಂಬೈ(Mumbai) ಅಬುಧಾಬಿ(Abhudhabi) ಇಂಡಿಗೋ ವಿಮಾನದಲ್ಲಿ ನಡೆದಿದೆ. ಭಾನುವಾರ ವಿಮಾನದ ಕಾರ್ಗೋ ಕಂಪಾರ್ಟ್‌ಮೆಂಟ್‌ನಲ್ಲಿ ಸರಕುಗಳನ್ನು ತುಂಬಿದ ನಂತರ ಕಾರ್ಮಿಕನೊಬ್ಬ ಅಲ್ಲೇ ನಿದ್ದೆಗೆ ಜಾರಿದ್ದ. ಕಾರ್ಗೋ ಬಾಗಿಲು ಮುಚ್ಚಿ, ವಿಮಾನ ಟೇಕ್‌ ಆಫ್‌ ಆದ ನಂತರ ಆತ ಎಚ್ಚರಗೊಂಡಿದ್ದಾರೆ. ಹಾಗಾಗಿ ದುಬೈನಲ್ಲಿ ವಿಮಾನ ಇಳಿದ ನಂತರವೇ ಈ ವಿಷಯ ಬಹಿರಂಗವಾಗಿದೆ. ಬಳಿಕ ಆತನ ವೈದ್ಯಕೀಯ ಪರೀಕ್ಷೆ ನಡೆಸಿ, ಪ್ರಯಾಣಿಕ ವಿಮಾನದಲ್ಲಿ ವಾಪಸ್‌ ಮುಂಬೈಗೆ ಕಳುಹಿಸಿ ಕೊಡಲಾಗಿದೆ.

ಕೆಲವೊಮ್ಮೆ, ಈ ಜಗತ್ತಿನಲ್ಲಿ ಕೆಲವು ನಾವು ನಂಬಲು ಸಾಧ್ಯವಾಗದಂತಹ  ಘಟನೆಗಳು ಸಂಭವಿಸುತ್ತವೆ. ಇಲ್ಲಿ ಈಗ ನಡೆದ  ಘಟನೆ ಬಹುತೇಕ ಚಲನಚಿತ್ರದ ಕಥಾವಸ್ತುವಿನ ಹಾಗಿದೆ. ಇಂಡಿಗೋದಾ ಕಾರ್ಗೋ ಕಂಪಾರ್ಟ್‌ಮೆಂಟ್‌ನಲ್ಲಿ  ಸರಕುಗಳನ್ನು ಲೋಡ್‌ ಮಾಡಿ ಅಲ್ಲೇ ನಿದ್ದೆಗೆ ಜಾರಿದ ಪ್ರಯಾಣಿಕ ತಲುಪಿದ್ದು ಅಬುಧಾಬಿಯನ್ನು. ನಂತರ ಅಲ್ಲಿನ ಅಧಿಕಾರಿಗಳು ಈತನನ್ನು ಅಗತ್ಯ ವಿಚಾರಣೆ ನಡೆಸಿ ಅದೇ ವಿಮಾನದಲ್ಲಿ ಪ್ರಯಾಣಿಕರಂತೆ ವಾಪಸ್‌ ಮುಂಬೈಗೆ ಕಳುಹಿಸಿ ಕೊಟ್ಟಿದ್ದಾರೆ ಎಂದು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ ಈ ಬಗ್ಗೆ ತನಿಖೆಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಆದೇಶಿಸಿದೆ ಎಂದು ತಿಳಿದು ಬಂದಿದೆ. 

Sleep and Health: 6 ಗಂಟೆಗಿಂತ ಹೆಚ್ಚು ನಿದ್ರಿಸೋದೂ ಒಳ್ಳೇಯದಲ್ವಂತೆ!

ಡಿಜಿಸಿಎಯ ಮಹಾನಿರ್ದೇಶಕ ಅರುಣ್ ಕುಮಾರ್ (Arun Kumar) ಮಾತನಾಡಿ, ಭಾನುವಾರ ಇಂಡಿಗೋ ಎ320 ವಿಮಾನವು (ಮುಂಬೈನಿಂದ ಅಬುಧಾಬಿ)  6E-1835 ವಿಮಾನವಾಗಿ  ಕಾರ್ಯನಿರ್ವಹಿಸಲು ನಿರ್ಧರಿಸಲಾಗಿತ್ತು. ಈ ವಿಮಾನಕ್ಕೆ ಸರಕುಗಳನ್ನು ಲೋಡ್ ಮಾಡಿದ ನಂತರ, ಲೋಡರ್‌ಗಳಲ್ಲಿ ಒಬ್ಬರು ಲಗೇಜ್ ಕಂಪಾರ್ಟ್‌ಮೆಂಟ್ 1 ರಲ್ಲಿಸರಕುಗಳ ಹಿಂದೆ ನಿದ್ರಿಸಿದರು. ಇದನ್ನು ನೋಡದೇ  ಸಿಬ್ಬಂದಿಯೊಬ್ಬರು ಸರಕು ಕಂಪಾರ್ಟ್‌ಮೆಂಟ್‌ನ ಬಾಗಿಲು ಮುಚ್ಚಿದರು. ನಂತರ ಮುಂಬೈ ವಿಮಾನ ನಿಲ್ದಾಣದಿಂದ ವಿಮಾನ ಟೇಕಾಫ್ ಆಗುತ್ತಿದ್ದಂತೆ ಲೋಡರ್‌ಗೆ ಎಚ್ಚರವಾಯಿತು. ನಂತರ ಅಬುಧಾಬಿಯಲ್ಲಿ ಕಂಪಾರ್ಟ್ಮೆಂಟ್‌ ಬಾಗಿಲು ತೆಗೆದಾಗ ಈತ ಪತ್ತೆಯಾಗಿದ್ದಾನೆ. ಬಳಿಕ ಲೋಡರ್‌ನ ವೈದ್ಯಕೀಯ ಪರೀಕ್ಷೆಯನ್ನು ಅಬುಧಾಬಿ ಅಧಿಕಾರಿಗಳು ನಡೆಸಿದ್ದರು. ಅವರ ದೈಹಿಕ ಸ್ಥಿತಿ ಸ್ಥಿರವಾಗಿದೆ ಮತ್ತು ಸಾಮಾನ್ಯವಾಗಿದೆ ಎಂದು ಪರೀಕ್ಷೆಯಿಂದ ತಿಳಿದುಬಂತು. ನಂತರ ಅಬುಧಾಬಿಯಲ್ಲಿ ಸ್ಥಳೀಯ ಅಧಿಕಾರಿಗಳಿಂದ ಅಗತ್ಯವಾದ ಅನುಮತಿಗಳನ್ನು ಪಡೆದು ಅವರನ್ನು ಅದೇ ವಿಮಾನದಲ್ಲಿ ಮುಂಬೈಗೆ ಪ್ರಯಾಣಿಕನಾಗಿ ಕಳುಹಿಸಲಾಯಿತು.

Flight Emergency Landing : ರೋಜಾ ಪ್ರಯಾಣಿಸುತ್ತಿದ್ದ ವಿಮಾನ ಬೆಂಗಳೂರಿನಲ್ಲಿ ತುರ್ತು ಲ್ಯಾಂಡ್‌

ಈ ಪ್ರಮಾದದ ಬಗ್ಗೆ ಮಾತನಾಡುತ್ತಾ ಘಟನೆಯ ಬಗ್ಗೆ ನಮಗೆ ತಿಳಿದಿದೆ ಮತ್ತು ಅಗತ್ಯವಿರುವ ಅಧಿಕಾರಿಗಳಿಗೆ ತಿಳಿಸಲಾಗಿದ್ದು ವಿಷಯವು ತನಿಖೆಯಲ್ಲಿದೆ ಎಂದು ಇಂಡಿಗೋ ಏರ್‌ಲೈನ್ಸ್(Indigo Airlines) ಹೇಳಿಕೆ ನೀಡಿದೆ. ಒಟ್ಟಿನಲ್ಲಿ ವಿದೇಶಕ್ಕೆ ಹೋಗುವ ಯೋಗವೊಂದಿದ್ದರೆ ಪಾಸ್‌ಪೋರ್ಟ್‌(Passport) ಇಲ್ಲದೆಯೂ ಹೀಗೂ ವಿದೇಶಕ್ಕೆ ಹೋಗಬಹುದು ಎಂಬುದಕ್ಕೆ ಈ ವಿಚಿತ್ರ ಘಟನೆ ಸಾಕ್ಷಿಯಾಗಿದೆ.  


ವಿಮಾನದಲ್ಲಿ ವಿಚಿತ್ರ ಘಟನೆಗಳು ಸಾಮಾನ್ಯವಾಗಿ ನಡೆಯುತ್ತಿರುತ್ತವೆ. ಈ ಹಿಂದೆ ವಿಮಾನದಲ್ಲಿ ದುಬೈನಿಂದ ಲಕ್ನೋಗೆ ತೆರಳುತ್ತಿದ್ದ ಪ್ರಯಾಣಿಕನೊಬ್ಬ ಇದ್ದಕ್ಕಿದ್ದಂತೆ ತನ್ನ ಬಟ್ಟೆ ಬಿಚ್ಚಿ ವಿಮಾನದಲ್ಲಿ ಓಡಾಡಿರುವ ವಿಚಿತ್ರ ಘಟನೆ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದಲ್ಲಿ ನಡೆದಿತ್ತು. ಕಳೆದ ಎಪ್ರಿಲ್‌ನಲ್ಲಿ ಏರ್‌ ಏಷ್ಯಾ ಫ್ಲೈಟ್‌( Air Asia flight) ನಲ್ಲಿ ಪ್ರಯಾಣಿಕನೊಬ್ಬ ಎರಡು ಬಾರಿ ಬೆತ್ತಲೆಯಾಗಿ ಗಗನ ಸಖಿಯನ್ನು ಚುಂಬಿಸಲು ಯತ್ನಿಸಿದ್ದ ಘಟನೆ ನಡೆದಿತ್ತು. ದೆಹಲಿ(Delhi)ಯಿಂದ ಬೆಂಗಳೂರಿ(Banglore)ಗೆ ಬರುತ್ತಿದ್ದ ವಿಮಾನದಲ್ಲಿ ಈ ವಿಚಿತ್ರ ಘಟನೆ ನಡೆದಿತ್ತು. 

click me!