ನಾಗಪುರದಲ್ಲಿ ತಯಾರಾಯ್ತು ಕಪ್ಪು ಇಡ್ಲಿ
ಇನ್ಸ್ಟಾಗ್ರಾಮ್‌ನಲ್ಲಿ ಹರಿದಾಡುತ್ತಿದೆ ವಿಡಿಯೋ
ಕಪ್ಪು ಇಡ್ಲಿ ನೋಡಿ ಗಾಬರಿಯಾದ ನೆಟ್ಟಿಜನ್‌ಗಳು
ನಾಗ್ಪುರ(ಡಿ.15): ಸಾಮಾನ್ಯವಾಗಿ ಇಡ್ಲಿ ಬಿಳಿ ಬಣ್ಣ ಇರುತ್ತದೆ. ಆದರೆ ಕಪ್ಪು ಬಣ್ಣದ ಇಡ್ಲಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನಾಗ್ಪುರ(Nagpur) ಮೂಲದ ಫುಡ್ ಬ್ಲಾಗರ್( food bloggers) ವಿವೇಕ್ (Vivek) ಮತ್ತು ಆಯೇಷಾ (Ayesha) ತಮ್ಮ ಇನ್‌ಸ್ಟಾಗ್ರಾಂ (Instagram)ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಕಪ್ಪು ಬಣ್ಣದ ಇಡ್ಲಿ ಹಿಟ್ಟಿನಿಂದ ಇಡ್ಲಿ ತಯಾರಿಸಿ, ಅದರ ಮೇಲೆ ತುಪ್ಪ ಸುರಿದು, ಅದರ ಮೇಲೆ ಸ್ವಲ್ಪ ಮೆಣಸಿನ ಪುಡಿ ಹಾಕಿ, ಮತ್ತೆ ತುಪ್ಪ ಸುರಿಯುತ್ತಾರೆ. ನಂತರ ಕಾಯಿ ಚಟ್ನಿಯೊಂದಿಗೆ ಗ್ರಾಹಕರಿಗೆ ನೀಡುವ ದೃಶ್ಯವಿದೆ. ನಾಗಪುರದ ವಾಲ್ಕರ್ಸ್ ಸ್ಟ್ರೀಟ್‌ನಲ್ಲಿ ಕಪ್ಪು ಇಡ್ಲಿ ದೊರೆಯುತ್ತದೆ ಎಂಬ ಒಕ್ಕಣೆಯೊಂದಿಗೆ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಆದರೆ ವಿಡಿಯೋ ಕಂಡು ಕಂಗಾಲಾದ ನೆಟ್ಟಿಗರು, ‘ಬ್ರೋ ದಯವಿಟ್ಟು ಇಡ್ಲಿ ಮೇಲಿನ ದೌರ್ಜನ್ಯ ನಿಲ್ಲಿಸಿ’ ಎಂದು ಮನವಿ ಮಾಡಿದ್ದಾರೆ. ಮತ್ತೆ ಕೆಲವು ಇದು ಪಾತ್ರೆ ತೊಳೆಯುವ ಮೆಟಲ್ ಬ್ರೆಶ್‌ನಂತೆ ಕಾಣುತ್ತಿದೆ ಎಂದಿದ್ದಾರೆ.
ಭಾರತ ವೈವಿಧ್ಯತೆಯ ನಾಡು ಇಲ್ಲಿ ಸಂಸ್ಕೃತಿ, ಭಾಷೆ, ಸಂಪ್ರದಾಯ ಹಬ್ಬ ಮುಂತಾದವುಗಳ ಆಚರಣೆ ಒಂದು ಪ್ರದೇಶದಿಂದ ಒಂದು ಪ್ರದೇಶಕ್ಕೆ ಹೋಲಿಸಿದರೆ ತುಂಬಾ ವಿಭಿನ್ನವಾಗಿರುತ್ತೆ. ಆಹಾರೋದ್ಯಮದಲ್ಲಿ ಇಂದು ಸಾಕಷ್ಟು ಹೊಸತನಗಳು ಬಂದಿವೆ. ಭಾರತೀಯ ಹಾಗೂ ವಿದೇಶಿ, ಉತ್ತರ ಭಾರತ(North India) ಹಾಗೂ ದಕ್ಷಿಣ ಭಾರತ, ಪಶ್ಚಿಮ ಬಂಗಾಳ(West Bengal) ಗುಜರಾತ್ ಹೀಗೆ ನೀವು ಯಾವುದೇ ಪ್ರದೇಶಗಳಿಗೆ ಹೋದರೂ ಅಲ್ಲಿ ಬೇರೆಯದೇ ಆಹಾರ ಶೈಲಿ ಇರುತ್ತದೆ.
undefined
Viral video: ಗಂಡಿನ ಹಣೆಗೆ ಕುಂಕಮವಿಟ್ಟು ಸಂಪ್ರದಾಯ ಮುರಿದ ವಧು
ದೇಶದಲ್ಲಿ ಒಂದೆಡೆ, ಕುಲ್ಹಾದ್ ಟೀ ನಂತರ ಕುಲ್ಹಾದ್ ಮೊಮೊಸ್ ಮತ್ತು ಫೈರ್ ಪಾನ್ ನಂತರ ಫೈರ್ ಪಾನಿಪುರಿ ಎಂದು ಸಾಮಾನ್ಯವಾಗಿ ಕಂಡುಬರುವ ಆಹಾರವು ಹೊಸ ಸಂಯೋಜನೆಗಳನ್ನು ಪಡೆಯುತ್ತಿದೆ. ಕೆಲವು ಆಹಾರಪ್ರೇಮಿಗಳು ಅಂತಹ ಆಹಾರ ಸಂಯೋಜನೆಗಳನ್ನು ತರುತ್ತಿದ್ದಾರೆ. ಇದರಿಂದಾಗಿ ನಿಜವಾದ ಆಹಾರದ ಹೆಸರು ಸಂಪೂರ್ಣವಾಗಿ ಅಳಿಸಿಹೋಗುತ್ತಿದೆ ಎಂದು ಕೆಲವರು ಆರೋಪಿಸುತ್ತಾರೆ. ಹೀಗಿರುವಾಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಕಪ್ಪು ಇಡ್ಲಿ ವಿಡಿಯೋ ನೋಡಿ ಜನ ಬೇಸರಗೊಂಡಿದ್ದಾರೆ. ಇದರಲ್ಲಿ ವ್ಯಕ್ತಿಯೊಬ್ಬರು ಇಡ್ಲಿ ಮಾಡುವುದನ್ನು ಕಾಣಬಹುದು. ವೀಡಿಯೋದ ವಿಶೇಷವೆಂದರೆ, ವ್ಯಕ್ತಿಯು ಕಂದು-ಕಪ್ಪು ಇಡ್ಲಿ ಹಿಟ್ಟನ್ನು ಸ್ಟೀಮರ್ ಪ್ಲೇಟ್‌ನಲ್ಲಿ ಇರಿಸಿ ಮತ್ತು ಅಂತಿಮವಾಗಿ ಕಪ್ಪು ಬಣ್ಣದ ಇಡ್ಲಿಗಳ ಮೇಲೆ ತುಪ್ಪ ಮತ್ತು ತೆಂಗಿನಕಾಯಿ ಚಟ್ನಿಯೊಂದಿಗೆ ಬಡಿಸುತ್ತಿರುವುದು ಕಂಡುಬಂದಿದೆ.
ನಾಗ್ಪುರ ಮೂಲದ ವಿವೇಕ್ ಮತ್ತು ಆಯೇಶಾ ಎಂಬ ಆಹಾರ ಬ್ಲಾಗರ್‌ಗಳು ಈ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಡಿಟಾಕ್ಸ್ ಇಡ್ಲಿ, ಇದನ್ನು ಗರ್ಭಿಣಿಯರು ಬಳಸಬಾರದು ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ. ಇದರೊಂದಿಗೆ, ಈ ಇಡ್ಲಿಯು ನಾಗ್ಪುರದ ವಾಕರ್ ಸ್ಟ್ರೀಟ್‌ನಲ್ಲಿ 'ಆಲ್ ಅಬೌಟ್ ಇಡ್ಲಿ ಎಂಬ ಹೊಟೇಲ್‌ನಲ್ಲಿ ಸಿಗುತ್ತಿದೆ. ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋವನ್ನು 2 ಮಿಲಿಯನ್ ಬಾರಿ ವೀಕ್ಷಿಸಲಾಗಿದೆ. ಇದನ್ನು ನೋಡಿದ ನೆಟಿಜನ್‌ಗಳು ಭಿನ್ನ ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಇದು ಲೋಹದ ಸ್ಕ್ರಬ್‌ನಂತೆ ಕಾಣುತ್ತದೆ ಎಂದು ಒಬ್ಬ ಬಳಕೆದಾರ ಹೇಳಿದ್ದಾರೆ.
Social Media Hacking: ನಿಮ್ಮ ಸೋಷಿಯಲ್ ಮೀಡಿಯಾ ಖಾತೆ ಸೇಫಾಗಿಡಲು ಇಲ್ಲಿವೆ ಸರಳ ಸೂತ್ರಗಳು!
ಇತ್ತೀಚೆಗೆ ಆಹಾರೋದ್ಯಮದಲ್ಲಿ ಭಾರಿ ಹೊಸತನಗಳಿವೆ. ಇಡ್ಲಿ ದೋಸೆ ಸಮೋಸಾ, ಚಪಾತಿ ಯಾವುದೇ ಇರಲಿ ಅದರಲ್ಲೇ ಹತ್ತು ಬಗೆಯ ವೆರೈಟಿಗಳು ಕಾಣ ಸಿಗುತ್ತವೆ. ಇನ್ನು ಇಡ್ಲಿಯ ಬಗ್ಗೆಯ ವಿಶೇಷವಾಗಿ ಹೇಳುವುದಾದರೆ ಇಡ್ಲಿ ದಕ್ಷಿಣ ಭಾರತದ ಸಾಂಪ್ರದಾಯಿಕ ತಿನಿಸುಗಳಲ್ಲಿ ಒಂದು. ಪ್ರಧಾನವಾಗಿ ಅಕ್ಕಿ ಮತ್ತು ಉದ್ದಿನ ಬೇಳೆಯಿಂದ ತಯಾರಿಸಲ್ಪಡುವ ಇಡ್ಲಿ ಸಾಮಾನ್ಯವಾಗಿ ತಿಂಡಿಯಾಗಿ ಬಳಸಲ್ಪಡುತ್ತದೆ. ಇಡ್ಲಿಯನ್ನು ಚಟ್ನಿ ಮತ್ತು ಸಾಂಬಾರ್ ಜೊತೆಗೆ ನೀಡಲಾಗುತ್ತದೆ. ಆದರೆ ಅದರಲ್ಲೂ ಈಗ ಹಲವು ವೈವಿಧ್ಯಗಳಿವೆ. ತಟ್ಟೆ ಇಡ್ಲಿ, ಬಟನ್ ಇಡ್ಲಿ, ಕಾಂಜಿಪುರಂ ಇಡ್ಲಿ, ಬಟನ್ ಇಡ್ಲಿ ಜೊತೆಗೆ ಈಗ ಈ ಪಟ್ಟಿಗೆ ಹೊಸ ಸೇರ್ಪಡೆ ಕಪ್ಪು ಇಡ್ಲಿ.