ಭಾರತದ ಮುಸ್ಲಿಮರ ಬಗ್ಗೆ ಇರಾನ್ ಅಧ್ಯಕ್ಷನ ಹೇಳಿಕೆಗೆ ಭಾರತದ ವಿದೇಶಾಂಗ ಇಲಾಖೆ ತೀವ್ರ ಖಂಡನೆ

By Kannadaprabha News  |  First Published Sep 17, 2024, 9:12 AM IST

ಇರಾನ್‌ನ ಸರ್ವೋಚ್ಚ ನಾಯಕ ಅಯೋತುಲ್ಲಾ ಅಲಿ ಖಮೇನಿ ಸೋಮವಾರ ಭಾರತ, ಗಾಜಾ ಮತ್ತು ಮ್ಯಾನ್ಮಾರ್‌ನಲ್ಲಿರುವ ಮುಸ್ಲಿಮರು ಸಂಕಟ ಪಡುತ್ತಿದ್ದಾರೆ ಎಂದು ಆರೋ ಪಿಸಿದ್ದು, ಮುಸ್ಲಿಮರ ಒಗ್ಗಟ್ಟಿಗೆ ಕರೆ ನೀಡಿದ್ದಾರೆ. 


ತೆಹರಾನ್‌: ಇರಾನ್‌ನ ಸರ್ವೋಚ್ಚ ನಾಯಕ ಅಯೋತುಲ್ಲಾ ಅಲಿ ಖಮೇನಿ ಸೋಮವಾರ ಭಾರತ, ಗಾಜಾ ಮತ್ತು ಮ್ಯಾನ್ಮಾರ್‌ನಲ್ಲಿರುವ ಮುಸ್ಲಿಮರು ಸಂಕಟ ಪಡುತ್ತಿದ್ದಾರೆ ಎಂದು ಆರೋ ಪಿಸಿದ್ದು, ಮುಸ್ಲಿಮರ ಒಗ್ಗಟ್ಟಿಗೆ ಕರೆ ನೀಡಿದ್ದಾರೆ. 

ಈದ್ ಮಿಲಾದ್ ಹಬ್ಬದಂದು ಟ್ವಿಟ್‌ ಮಾಡಿರುವ ಅವರು, ಮ್ಯಾನ್ಮಾರ್, ಗಾಜಾ, ಭಾರತ ಅಥವಾ ಇನ್ನಾವುದೇ ಸ್ಥಳದಲ್ಲಿ ಮುಸ್ಲಿಮರು ಅನುಭವಿಸುತ್ತಿರುವ ನೋವನ್ನು ನಾವು ನಿರ್ಲಕ್ಷಿಸಿದರೆ ನಮ್ಮನ್ನು  ನಮ್ಮನ್ನು ಮುಸ್ಲಿಮರು ಎಂದು ಪರಿಗಣಿಸಲಾಗದು ಎಂದು ಹೇಳಿದ್ದಾರೆ. 'ಇಸ್ಲಾಮಿನ ಶತ್ರುಗಳು ನಮ್ಮನ್ನು ಅಸಡ್ಡೆ ಮಾಡಲು ಯತ್ನಿಸುತ್ತಿದ್ದಾರೆ. ಇಸ್ಲಾಮಿಕ್ ಗೌರವ ಏಕತೆ ಮೂಲಕ ಮಾತ್ರ ಸಾಕಾರಗೊಳ್ಳಬಹುದು. ಇಂದು ಗಾಜಾ, ಪ್ಯಾಲೆಸ್ತೀನ್‌ನ ತುಳಿತಕ್ಕೊಳಗಾದ ಜನರನ್ನು ಬೆಂಬಲಿಸುವುದು ಖಂಡಿತವಾಗಿಯೂ ನಮ್ಮ ಕರ್ತವ್ಯ. ಈ ಕರ್ತವ್ಯವನ್ನು ನಿರ್ಲಕ್ಷಿಸಿದರೆ ದೇವರು ಪ್ರಶ್ನಿಸುತ್ತಾನೆ'  ಎಂದು ಅವರು ಟ್ವಿಟ್ ಮಾಡಿದ್ದಾರೆ.

Tap to resize

Latest Videos

undefined

ಇಸ್ಲಾಮಿಕ್ ಏಕತೆಯ ವಾರದ ಆಚರಣೆಯ ಭಾಗವಾಗಿ ಅವರು ಇರಾನ್‌ನ ಸುನ್ನಿ ಸಮುದಾಯದ ನಾಯಕರನ್ನು ಭೇಟಿ ಮಾಡಿದ ವೇಳೆ ಮಾತನಾಡಿದ ಖಮೇನಿ 'ಇಸ್ಲಾಮಿಕ್ ಉಮ್ಮಾ' (Islamic Ummah) ಎಂಬ ಪರಿಕಲ್ಪನೆಯನ್ನು ಮುಸ್ಲಿಮರು ಎಂದಿಗೂ ಮರೆಯಬಾರದು. ಎಂದು ಹೇಳುತ್ತಾ ಇಸ್ಲಾಂನ ಶಿಯಾ ಮತ್ತು ಸುನ್ನಿ ಪಂಥಗಳ ನಡುವಿನ ಏಕತೆಗಾಗಿ ಮಾತನಾಡಿದರಲ್ಲದೇ.  ಇರಾನ್ ಸಮಾಜಕ್ಕೆ ಸುನ್ನಿ ಸಮುದಾಯದ ಉತ್ತಮ ಕೊಡುಗೆ ನೀಡಿದ್ದಾರೆ ಎಂದು ಶ್ಲಾಘಿಸಿದರು.

ಭಯೋತ್ಪಾದಕರ ಧ್ವಜ ಹಿಡಿದ ಇರಾನ್‌ ಅಥ್ಲೀಟ್‌, ಆತ ಗೆದ್ದ ಚಿನ್ನವನ್ನ ಭಾರತಕ್ಕೆ ನೀಡಿದ ಪ್ಯಾರಾಲಿಂಪಿಕ್ಸ್‌!

ಭಾರತ ತಿರುಗೇಟು
ಭಾರತದಲ್ಲಿ ಮುಸ್ಲಿಮರ ಸ್ಥಿತಿ ಬಗ್ಗೆ, ಸ್ನೇಹಿತ ದೇಶವಾದ ಇರಾನ್ ನಾಯಕ ಖಮೇನಿ ನೀಡಿರುವ ಹೇಳಿಕೆಗೆ ಭಾರತ ಸೋಮವಾರ ತೀವ್ರ ಖಂಡನೆ ವ್ಯಕ್ತಪಡಿಸಿದೆ. 'ತಪ್ಪು ಮಾಹಿತಿ ಇದಾಗಿದ್ದು, ಸ್ವೀಕಾರಾರ್ಹವಲ್ಲ. ಅನ್ಯ ದೇಶಗಳ ಅಲ್ಪಸಂಖ್ಯಾತರ ಬಗ್ಗೆ ಮಾತನಾಡುವ ದೇಶಗಳು ಮೊದಲು ತಮ್ಮ ದೇಶದಲ್ಲಿನ ಅವರ ಸ್ಥಿತಿಯತ್ತ ಗಮನಹರಿಸಲಿ' ಎಂದಿದೆ. 
 

ಬಾಲದಿಂದಲೇ ಬೇಟೆಯಾಡುತ್ತೆ ಈ ಇರಾನಿಯನ್ ಸ್ಪೈಡರ್ ಸ್ನೇಕ್‌: ಅಪರೂಪದ ವೀಡಿಯೋ ವೈರಲ್

BIG: India “strongly deplores” comments made by Iran’s Ayatollah Ali Khamenei regarding the situation of Muslims in the country.

India advises Iran to “look at its own record before making any observations about others.” pic.twitter.com/Ufs8cbiC0N

— Sanbeer Singh Ranhotra (@SSanbeer)

 

click me!