ಏಕತೆ ಒಡೆಯಲು ವಿದೇಶದಲ್ಲಿ ಯತ್ನ: ರಾಹುಲ್‌ ಗಾಂಧಿ ವಿರುದ್ಧ ಮೋದಿ ಕಿಡಿ

By Kannadaprabha News  |  First Published Sep 17, 2024, 7:15 AM IST

ನನ್ನ ಮೂರನೇ ಅವಧಿಯ 100 ದಿನ ಗಳ ಆಡಳಿತದಲ್ಲಿ ನನ್ನನ್ನು ವಿಪಕ್ಷಗಳು ಅವಮಾನಿಸಿದವು. ಆದರೆ 100 ದಿನದ ಅಜೆಂಡಾ ಮುಗಿಸೋಣ ಎಂದು ಸುಮ್ಮನಿದ್ದೆ. ನನ್ನ ಮೌನದಿಂದ ಜನರು ಅಚ್ಚರಿಗೊಂಡಿದ್ದರು. ನಾನು ಜನರಿಗಾಗಿ ಬದುಕುತ್ತಿ ದ್ದೇನೆ. ನಿಮಗಾಗಿ ಹೋರಾಟ, ತ್ಯಾಗ ಮಾಡುತ್ತಿದ್ದೇನೆ. ಹೀಗಾಗಿ ಸುಮ್ಮನಿದ್ದೆ: ಪ್ರಧಾನಿ ನರೇಂದ್ರ ಮೋದಿ
 


ಅಹಮದಾಬಾದ್(ಸೆ.17): 'ದ್ವೇಷ ಮತ್ತು ನಕಾರಾತ್ಮಕತೆಯಿಂದ ತುಂಬಿರುವ ಕೆಲವು ವ್ಯಕ್ತಿಗಳು ಭಾರತದ ಏಕತೆ ಮತ್ತು ಸಮಗ್ರತೆಯನ್ನು ವಿದೇಶದ ನೆಲದಿಂದ ನಾಶಮಾಡಲು ಹೊರಟಿದ್ದಾರೆ' ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಈ ಮೂಲಕ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಅಮೆರಿಕದಲ್ಲಿ ಭಾರತದಲ್ಲಿನ ವ್ಯವಸ್ಥೆಯ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆಗಳ ಬಗ್ಗೆ ಪರೋಕ್ಷವಾಗಿ ಕಿಡಿಕಾರಿದ್ದಾರೆ. 

ಭುಜ್-ಅಹಮದಾಬಾದ್ ನಡುವೆ ಸಂಚರಿಸುವ ದೇಶದ ಮೊದಲ ನಮೋ ಭಾರತ ರಾಪಿಡ್ ರೈಲಿಗೆ ಹಾಗೂ ಹುಬ್ಬಳ್ಳಿ-ಪುಣೆ ವಂದೇ ಭಾರತ್ ಸೇರಿ ಹಲವು ವಂದೇ ಭಾರತ್ ರೈಲುಗಳಿಗೆ ಅಹಮದಾ ಬಾದ್‌ನಲ್ಲಿ ಸೋಮವಾರ ಚಾಲನೆ ನೀಡಿ ಮಾತನಾಡಿ, 'ನನ್ನ 3ನೇ ಅವಧಿಯ 100 ದಿನದಲ್ಲಿ ವಿಪಕ್ಷಗಳು ಅವಮಾನಿಸಿದ್ದವು ಎಂದು ಹೇಳಿದ್ದಾರೆ. 

Tap to resize

Latest Videos

undefined

ಇಫ್ತಾರ್‌ಗೆ ಹೋದರೆ ವಿರೋಧವಿಲ್ಲ, ಪ್ರಧಾನಿ ಗಣಪತಿ ಪೂಜೆಗೆ ಹೋದರೆ ತಕರಾರೇಕೆ?: ಪ್ರಹ್ಲಾದ ಜೋಶಿ

100 ದಿನ ಬೇಕಂತಲೇ ಸುಮ್ಮನಿದ್ದೆ 

ನನ್ನ ಮೂರನೇ ಅವಧಿಯ 100 ದಿನ ಗಳ ಆಡಳಿತದಲ್ಲಿ ನನ್ನನ್ನು ವಿಪಕ್ಷಗಳು ಅವಮಾನಿಸಿದವು. ಆದರೆ 100 ದಿನದ ಅಜೆಂಡಾ ಮುಗಿಸೋಣ ಎಂದು ಸುಮ್ಮನಿದ್ದೆ. ನನ್ನ ಮೌನದಿಂದ ಜನರು ಅಚ್ಚರಿಗೊಂಡಿದ್ದರು. ನಾನು ಜನರಿಗಾಗಿ ಬದುಕುತ್ತಿದ್ದೇನೆ. ನಿಮಗಾಗಿ ಹೋರಾಟ, ತ್ಯಾಗ ಮಾಡುತ್ತಿದ್ದೇನೆ. ಹೀಗಾಗಿ ಸುಮ್ಮನಿದ್ದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ. 

click me!