ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ ಪುರುಷರ ಜಾವೆಲಿನ್ ಥ್ರೋ F41 ವಿಭಾಗದ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದಿದ್ದ ಭಾರತದ ನವದೀಪ್ ಸಿಂಗ್‌ಗೆ ಇದೀಗ ಚಿನ್ನದ ಪದಕಕ್ಕೆ ಅಪ್‌ಗ್ರೇಡ್ ಆಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

ಪ್ಯಾರಿಸ್: ಭಾರತದ ಪ್ಯಾರಾ ಅಥ್ಲೀಟ್‌ ನವದೀಪ್ ಸಿಂಗ್ ಪುರುಷರ ಜಾವೆಲಿನ್ ಥ್ರೋ F41 ವಿಭಾಗದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಆದರೆ ಈ ಐತಿಹಾಸಿಕ ಸಾಧನೆ ನಿರ್ಮಾಣವಾಗಲು ಒಂದು ಟ್ವಿಸ್ಟ್‌ ಕಾರಣವಾಗಿರುವುದು ಬಹುತೇಕ ಮಂದಿಗೆ ಗೊತ್ತಿಲ್ಲ. ಮೊದಲಿಗೆ ಬೆಳ್ಳಿ ಪದಕ ಜಯಿಸಿದ್ದ ನವದೀಪ್ ಸಿಂಗ್ ಇದೀಗ ಚಿನ್ನದ ಪದಕ್ಕೆ ಕೊರಳೊಡ್ಡಿದ್ದಾರೆ. ಅರೇ ಬೆಳ್ಳಿ ಗೆದ್ದ ನವದೀಪ್ ಸಿಂಗ್‌ಗೆ ಚಿನ್ನದ ಪದಕ ಏಕೆ ನೀಡಲಾಯಿತು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

ಪುರುಷರ ಜಾವೆಲಿನ್ ಥ್ರೋ F41 ವಿಭಾಗದ ಸ್ಪರ್ಧೆಯಲ್ಲಿ ನವದೀಪ್ ಸಿಂಗ್ ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕ ಜಯಿಸಿದ್ದರು. ಇನ್ನು ಇರಾನಿನ ಬೆಲ್ಟ್‌ ಸಾಯ್‌ ಸದೇಘ್ ಮೊದಲ ಸ್ಥಾನವನ್ನು ಪಡೆದರು. ಬೆಲ್ಟ್‌ ಸಾಯ್‌ ಸದೇಘ್ ಬರೋಬ್ಬರಿ 47.65 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಪ್ಯಾರಾಲಿಂಪಿಕ್ಸ್‌ ದಾಖಲೆಯೊಂದಿಗೆ ಮೊದಲ ಸ್ಥಾನಿಯಾದರೆ, ಭಾರತದ ನವದೀಪ್ ಸಿಂಗ್ 47.32 ಮೀಟರ್ ದೂರ ಜಾವೆಲಿನ್ ಎಸೆದು ಎರಡನೇ ಸ್ಥಾನಿಯಾದರು. ಸ್ಪರ್ಧೆ ಮುಗಿಯುವ ವೇಳೆಗೆ ಭಾರತೀಯ ಜಾವೆಲಿನ್ ಥ್ರೋ ಪಟು ನವದೀಪ್ ಸಿಂಗ್ ಬೆಳ್ಳಿ ಪದಕ ಖಚಿತಪಡಿಸಿಕೊಂಡಿದ್ದರು.

ಮುಲಾಯಂ ಸಿಂಗ್ ಯಾದವ್ ರಿಂದ ಪೋಗಟ್‌ ವರೆಗೆ, ಪ್ರಸಿದ್ಧ ಕುಸ್ತಿಪಟುಗಳ ರಾಜಕೀಯ ಜೀವನ

Scroll to load tweet…

ಚಿನ್ನದ ಪದಕಕ್ಕೆ ಅನರ್ಹವಾದ ಬೆಲ್ಟ್‌ ಸಾಯ್‌ ಸದೇಘ್

ಇನ್ನು ಪ್ಯಾರಾಲಿಂಪಿಕ್ಸ್‌ನಲ್ಲಿ ಈ ಸ್ಪರ್ಧೆ ಮುಗಿಯುತ್ತಿದ್ದಂತೆಯೇ ಬೆಲ್ಟ್‌ ಸಾಯ್‌ ಸದೇಘ್, ವಿಶ್ವ ಪ್ಯಾರಾ ಅಥ್ಲೀಟ್ಸ್‌ ರೂಲ್ಸ್ ಮತ್ತು ರೆಗ್ಯುಲೇಷನ್‌ನ ಆರ್ಟಿಕಲ್ 8.1ರ ಸ್ಪಷ್ಟ ಉಲ್ಲಂಘನೆ ಮಾಡಿದ ಬೆಲ್ಟ್‌ ಸಾಯ್‌ ಸದೇಘ್ ಅವರನ್ನು ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ ಕಮಿಟಿ ಅನರ್ಹಗೊಳಿಸಿದೆ. ಈ ರೂಲ್ಸ್‌ ಅನ್ವಯ ಯಾವುದೇ ಅಥ್ಲೀಟ್‌, ಸ್ಪರ್ಧೆ ನಡೆಯುವ ವೇಳೆಯಲ್ಲಿ ಯಾವುದೇ ರಾಜಕೀಯ ನಿಲುವುಗಳನ್ನು ಪ್ರದರ್ಶಿಸಬಾರದು ಎನ್ನುವುದಾಗಿದೆ. ಆದರೆ ಇರಾನಿನ ಬೆಲ್ಟ್‌ ಸಾಯ್‌ ಸದೇಘ್, ತಾವು ಮೊದಲ ಸ್ಥಾನಿಯಾಗುತ್ತಿದ್ದಂತೆಯೇ ಆಕ್ಷೇಪಾರ್ಹ ಧ್ವಜವನ್ನು ಪ್ರದರ್ಶನ ಮಾಡಿದ್ದಾರೆ. ಈ ಕಾರಣಕ್ಕಾಗಿ ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಕಮಿಟಿಯು ಬೆಲ್ಟ್‌ ಸಾಯ್‌ ಸದೇಘ್ ಅವರನ್ನು ಸ್ಪರ್ಧೆಯಿಂದಲೇ ಅನರ್ಹಗೊಳಿಸಲಾಗಿದೆ.

ಬಂಗಾರದ ದಾಖಲೆ ಬರೆದ ಭಾರತ: ಟೋಕಿಯೋ ಗೇಮ್ಸ್‌ನ ದಾಖಲೆ ಪತನ, ಸಂಭ್ರಮಾಚರಣೆ

Scroll to load tweet…
Scroll to load tweet…

ಕೆಲವರು ಬೆಲ್ಟ್‌ ಸಾಯ್‌ ಸದೇಘ್ ಅವರು ಪ್ರದರ್ಶಿಸಿದ ಧ್ವಜವು ಅದು ಐಸಿಸ್‌ ಧ್ವಜ ಅಲ್ಲ ಅಂತಿದ್ದಾರೆ. ಇನ್ನು ಮತ್ತೆ ಕೆಲವು ನೆಟ್ಟಿಗರು ಇದು ಹಮಾಸ್ ಧ್ವಜ ಎನ್ನುತ್ತಿದ್ದಾರೆ. ಆದರೆ ಒಟ್ಟಿನಲ್ಲಿ ಬೆಲ್ಟ್‌ ಸಾಯ್‌ ಸದೇಘ್ ಅವರು ಪ್ರದರ್ಶಿಸಿದ ಧ್ವಜವು ಆಕ್ಷೇಪಾರ್ಹವಾಗಿದ್ದರಿಂದ ಅವರನ್ನು ಅನರ್ಹಗೊಳಿಸಲಾಗಿದೆ. ಹೀಗಾಗಿ ಎರಡನೇ ಸ್ಥಾನದಲ್ಲಿದ್ದ ನವದೀಪ್ ಸಿಂಗ್‌ ಚಿನ್ನದ ಪದಕ ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.