ಭಾರತೀಯರಲ್ಲಿ ಸಹಿಷ್ಣುತೆ ಹೆಚ್ಚು, ವೇಗವಾಗಿ ಬೆಳೆಯುತ್ತಿರುವ ಧರ್ಮ ಇಸ್ಲಾಂ: Pew ವರದಿ!

By Suvarna NewsFirst Published Jul 1, 2021, 6:05 PM IST
Highlights
  • ವಾಷಿಂಗ್ಟನ್ ಡಿಸಿ ಮೂಲದ ರಿಸರ್ಚ್ ಸೆಂಟರ್ ನಡೆಸಿದ ಅಧ್ಯಯನ ವರದಿ
  • ವಿಶ್ವದಲ್ಲೇ ಭಾರತೀಯರಲ್ಲಿ ಅತೀ ಹೆಚ್ಚು ಸಹಿಷ್ಣುತೆ 
  • ಇಸ್ಲಾಂ ವೇಗವಾಗಿ ಬೆಳೆಯುತ್ತಿರುವ ಹಾಗೂ ಕ್ರೈಸ್ತ ಅತಿ ದೊಡ್ಡ ಧರ್ಮ

ವಾಶಿಂಗ್ಟನ್(ಜು.01): ಕೆಲ ವರ್ಷಗಳ ಹಿಂದೆ ಭಾರತದಲ್ಲಿ ಅಸಹಿಷ್ಣುತೆ (Intolerance)ಭಾರಿ ಸದ್ದು ಮಾಡಿತ್ತು.  ಇದಾದ ಬಳಿಕ ಪ್ರಶಸ್ತಿ ವಾಪಸ್ ಸೇರಿದಂತೆ ಹಲವು ಅಭಿಯಾನಗಳು ಭಾರತದಲ್ಲಿ ನಡೆದಿದೆ. ಇದೀಗ ಅಮೆರಿಕದ ವಾಷಿಂಗ್ಟನ್ ಡಿಸಿ ಮೂಲದ ಥಿಂಕ್ ಟ್ಯಾಂಕ್‌ನ ಪ್ಯೂ ರಿಸರ್ಚ್ ಸೆಂಟರ್‌ ನಡೆಸಿದ ಅಧ್ಯಯನ ವರದಿಯೊಂದು ಬಿಡುಗಡೆಯಾಗಿದೆ. ಇದರಲ್ಲಿ ಭಾರತೀಯರು ಅತೀ ಹೆಚ್ಚು ಸಹಿಷ್ಣುತೆಯುಳ್ಳವರು ಎಂದಿದೆ.

ಮುಸ್ಲಿಮರನ್ನು ಪ್ರೀತಿಸಲು ಹೇಳಿಕೊಟ್ಟಿದ್ದೇ ಹಿಂದೂ ಧರ್ಮ: ಸೋನಂ ಕಪೂರ್‌.

ವಿಶ್ವದ ಇತರ ಎಲ್ಲಾ ರಾಷ್ಟ್ರಗಳಿಗೆ ಹೋಲಿಸಿದರೆ, ಭಾರತೀಯರಲ್ಲಿ ಸಹಿಷ್ಣುತೆ ಹೆಚ್ಚು. ಧಾರ್ಮಿಕ ಸಹಿಷ್ಣುತೆಯನ್ನು ಗೌರವಿಸುತ್ತಾರೆ . ಇದರ ಜೊತೆಗೆ ಎಲ್ಲಾ ಧರ್ಮಗಳಿಗೆ ನೀಡುವ ಗೌರವವೇ ಭಾರತದ ಸುಂದರ ಕಲ್ಪನೆಗೆ ಕೇಂದ್ರವಾಗಿದೆ ಎಂದು ಜನ ಅಚಲವಾಗಿ ನಂಬಿದ್ದಾರೆ. ಇಷ್ಟೇ ಅಲ್ಲ ಭಾರತೀಯರು ಧಾರ್ಮಿಕ ಸ್ವಾತಂತ್ರ್ಯವನ್ನು ಆನಂದಿಸುತ್ತಾರೆ.

ಭಾರತಕ್ಕೆ ಕೊರೋನಾ ವಕ್ಕರಿಸಿವು ಮೊದಲು ಭಾರತದಲ್ಲಿ ಈ ಕುರಿತು ಪ್ಯೂ ಸಮೀಕ್ಷೆ ನಡೆಸಿತ್ತು. ಇದಕ್ಕಾಗಿ 29,999 ಭಾರತೀಯ ವಯಸ್ಕರ ಅಭಿಪ್ರಾಯವನ್ನು ಸಂಗ್ರಹಿಸಿತ್ತು. ಇತರ ದೇಶಗಳಿಗೆ ಹೋಲಿಸಿದೆ ಭಾರತದಲ್ಲಿನ ಎಲ್ಲಾ ಧರ್ಮದ ಜನರು ತಮ್ಮ ತಮ್ಮ ಧಾರ್ಮಿಕ ಆಚರಣೆ, ಸಂಪ್ರದಾಯ,  ಹಬ್ಬಗಳನ್ನು ಆಚರಿಸಲು ಮುಕ್ತರಾಗಿದ್ದಾರೆ ಎಂದು ಅಧ್ಯಯನ ವರದಿ ಹೇಳುತ್ತಿದೆ. ಇತರ  ದೇಶಗಳಿಗೆ ಹೋಲಿಸಿದರೆ ಅಲ್ಪ ಸಂಖ್ಯಾತ ಸಮುದಾಯಗಳಿಗೆ ಹೆಚ್ಚಿನ ಸ್ವಾತಂತ್ರ್ಯ ಭಾರತದಲ್ಲಿದೆ ಎಂದು Pew ಅಧ್ಯಯನ ವರದಿ ಹೇಳುತ್ತಿದೆ.

ಗೋಹತ್ಯೆಗಳ ಹೆಸರಿನಲ್ಲಿ ಹಿಂದೂ ಸಂಸ್ಕೃತಿ ಹಾನಿಗೆ ಸಂಚು: ಭಾಗವತ್ ಕಿಡಿ

Pew ಅಧ್ಯಯನ ವರದಿ ಪ್ರಕಾರ ಭಾರತದ ಶೇಕಡಾ 97% ರಷ್ಟು ಮಂದಿ ದೇವರನ್ನು ನಂಬುತ್ತಾರೆ. ಇವರು ತಮ್ಮ ತಮ್ಮ ಧರ್ಮಕ್ಕೆ ಪ್ರಮುಖ ಸ್ಥಾನ ನೀಡಿದ್ದಾರೆ.  ಭಾರತದಲ್ಲಿನ ಶೇಕಡಾ 74 ಮುಸ್ಲಿಮರು ತಮ್ಮ ಕುಟುಂಬದ, ಧರ್ಮದ ಹಾಗೂ ವೈಯುಕ್ತಿಕ ರೀತಿ ರಿವಾಜುಗಳನ್ನು ಪರಿಹರಿಸಲು ಅಥವಾ ನ್ಯಾಯಕ್ಕಾಗಿ ಹೋರಾಡಲು ತಮ್ಮದೇ ಆದ ಧಾರ್ಮಿಕ ನ್ಯಾಯಾಲಯಗಳ ಮೊರೆ ಹೋಗಲು ಇಚ್ಚೆ ಪಡುತ್ತಾರೆ ಎಂದು  Pew ಅಧ್ಯಯನ ವರದಿ ಹೇಳುತ್ತಿದೆ.

ಅಂತರ್ಜಾತಿ ವಿವಾಹ ವಿರೋಧದಲ್ಲಿ ಮುಸ್ಲಿಂರ ಪ್ರಮಾಣ ಹೆಚ್ಚಿದೆ. ಭಾರತದ ಶೇಕಡಾ 78ರಷ್ಟು ಮುಸ್ಲಿಂರು ಬೇರೆ ಧರ್ಮದವರನ್ನು ಮದುಯಾಗಲು ವಿರೋಧಿಸಿದ್ದಾರೆ. ಶೇಕಡಾ 66 ಹಿಂದೂಗಳು ಇತರ ಧರ್ಮದವರನ್ನು ಮದುವೆಯಾಗುವುದನ್ನು ವಿರೋಧಿಸಿದ್ದಾರೆ. ಶೇಕಡಾ 47.5 ಕ್ರಿಶ್ಚಿಯನ್ನರು ವಿರೋಧ ವ್ಯಕ್ತಪಡಿಸಿದ್ದಾರೆ.

ಸಿಖ್ ಮಹಿಳೆ, ಇಬ್ಬರು ಮಕ್ಕಳನ್ನು ಬಲತ್ಕಾರವಾಗಿ ಇಸ್ಲಾಂಗೆ ಮತಾಂತರ; ನಾಲ್ವರ ಬಂಧನ!.

  ಪ್ಯೂ ಅಧ್ಯಯನದ ಪ್ರಕಾರ, ಹಿಂದೂಗಳಿಗೆ ದೀಪಾವಳಿ ಅತೀ ದೊಡ್ಡ ಹಾಗೂ ಪ್ರಮುಖ ಹಬ್ಬವಾಗಿದೆ. ಭಾರತದಲ್ಲಿ 95 ಪ್ರತಿಶತ ಹಿಂದೂಗಳನ್ನು ಹೊರತುಪಡಿಸಿ, 20 ಪ್ರತಿಶತ ಮುಸ್ಲಿಮರು, 31 ಪ್ರತಿಶತ ಕ್ರಿಶ್ಚಿಯನ್ನರು, 90 ಪ್ರತಿಶತ ಸಿಖ್ಖರು, 79 ಪ್ರತಿಶತ ಬೌದ್ಧರು ಮತ್ತು 98 ಪ್ರತಿಶತ ಜೈನರು ದೀಪಾವಳಿ ಹಬ್ಬವನ್ನು ಆಚರಿಸುತ್ತಾರೆ.

ಭಾರತ ಹಿಂದೂ ಬಹುಸಂಖ್ಯಾರನ್ನು ಹೊಂದಿದೆ ರಾಷ್ಟ್ರ. ಆದರೆ ಅತೀ ಹೆಚ್ಚು ಮುಸ್ಲಿಂರನ್ನು ಹೊಂದಿರುವ ದೇಶ ಕೂಡ ಹೌದು. ಇತ್ತೀಚೆಗೆ ಭಾರತ ಇಂಡೋನೇಷಿಯಾವನ್ನು ಹಿಂದಿಕ್ಕಿದೆ ಎಂದು ಪ್ಯೂ ವರದಿ ಹೇಳುತ್ತಿದೆ. ಭಾರತ ಸೇರಿದಂತೆ ವಿಶ್ವದಲ್ಲಿ ಇಸ್ಲಾಂ ಅತೀ ವೇಗವಾಗಿ ಬೆಳೆಯುತ್ತಿರುವ ಧರ್ಮವಾಗಿದೆ. ಇನ್ನು ಕ್ರಿಶ್ಚಿಯನ್ ವಿಶ್ವದ ಅತೀ ದೊಡ್ಡ ಧರ್ಮ ಎಂದು ಪ್ಯೂ ವರದಿ ಹೇಳಿದೆ.
 

click me!