ಡಿಜಿ ಲಾಕರ್ ಆ್ಯಪ್ ಈಗಾಗಲೇ ಹಲವು ಸೌಲಭ್ಯಗಳನ್ನು ನೀಡುತ್ತಿದೆ. ಇದರ ಜೊತೆಗೆ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ರೈಲ್ವೇ ಇಲಾಖೆ ಸಹಯೋಗದೊಂದಿಗೆ ಆ್ಯಪ್ ಬಳಕೆದಾರರಿಗೆ ಮಹತ್ವದ ಸೌಲಭ್ಯ ನೀಡುತ್ತಿದೆ.
ನವದೆಹಲಿ(ಆ.29) ಡಿಜಿಟಲ್ ಡಾಕ್ಯುಮೆಂಟ್ ವಾಲೆಟ್ ಮೂಲಕ ಭಾರತದ ಡಿಜಿಟಲ್ ಇಂಡಿಯಾಗೆ ಮಹತ್ವದ ಕೊಡುಗೆ ನೀಡಿರುವ ಸರ್ಕಾರದ ಡಿಜಿ ಲಾಕರ್ ಆ್ಯಪ್ ಇದೀಗ ಮತ್ತೊಂದು ಹೆಜ್ಜೆ ಇಟ್ಟಿದೆ. ಲೈಸೆನ್ಸ್, ಕೋವಿಡ್ ಲಸಿಕೆ ಪ್ರಮಾಣ ಪತ್ರ ಸೇರಿದಂತೆ ಎಲ್ಲಾ ರೀತಿಯ ಮಹತ್ವದ ದಾಖಲೆಗಳನ್ನು ಇ ವೆರಿಫಿಕೇಶನ್ ಮೂಲಕ ಡಿಜಿ ಲಾಕರ್ ಸೇವೆ ನೀಡುತ್ತಿದೆ. ಇದೀಗ ಡಿಜಿ ಲಾಕರ್ ಹಾಗೂ ಭಾರತೀಯ ರೈಲ್ವೇ ಜಂಟಿಯಾಗಿ ಮಹತ್ವದ ಹೆಜ್ಜೆ ಇಟ್ಟಿದೆ. ರೈಲ್ವೇ ನೇಮಕಾತಿ ವಿಭಾಗದ ಜೊತೆ ಕೈಜೋಡಿಸಿರುವ ಡಿಜಿ ಲಾಕರ್, ಇದೀಗ ಉದ್ಯೋಗ ಆಕಾಂಕ್ಷಿಗಳು ಸುಲಭವಾಗಿ ಡಿಜಿ ಲಾಕರ್ ಮೂಲಕ ರೈಲ್ವೇಯ ಖಾಲಿ ಹುದ್ದೆಗೆ ಅರ್ಜಿ ಸಲ್ಲಿಸಲು ಸಾಧ್ಯವಿದೆ.
ಕೇಂದ್ರ ಮಾಹಿತಿ ಹಾಗೂ ತಂತ್ರಜ್ಞಾನ ಇಲಾಖೆಯ ಡಿಜಿಲಾಕರ್ ಆ್ಯಪ್ ಇದೀಗ ಭಾರತೀಯ ರೈಲ್ವೇ ನೇಮಕಾತಿ ಜೊತೆ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ಡಿಜಿಲಾಕರ್ ಆ್ಯಪ್ ಮೂಲಕ ರೈಲ್ವೇ ವಿಭಾಗದಲ್ಲಿ ಖಾಲಿ ಇರುವ ಹುದ್ದೆಗಳ ಮಾಹಿತಿ ಸುಲಭವಾಗಿ ತಲುಪಲಿದೆ. ಇಷ್ಟೇ ಅಲ್ಲ, ಈ ಖಾಲಿ ಹುದ್ದೆಗಳಿಗೆ ಅರ್ಹರೂ ಹಾಗೂ ಆಸಕ್ತರು ಸುಲಭವಾಗಿ ಅರ್ಜಿ ಸಲ್ಲಿಕೆ ಮಾಡಲು ಸಾಧ್ಯವಿದೆ.
ಭಾರತೀಯ ರೈಲ್ವೆಯಲ್ಲಿ 12 ಸಾವಿರ TTE ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನಿಸಿದ ಇಲಾಖೆ!
ಸದ್ಯ ರೈಲ್ವೇ ಇಲಾಖೆಯ ಖಾಲಿ ಹುದ್ದೆಯ ನೇಮಕಾತಿ ಪ್ರಕ್ರಿಯೆ ಸುದೀರ್ಘ ದಿನಗಳನ್ನು ತೆಗೆದುಕೊಳ್ಳುತ್ತದೆ. ಅಧಿಸೂಚನೆ ಹೊರಡಿಸುವಿಕೆ, ಅರ್ಜಿ ಸಲ್ಲಿಕೆಗೆ ಸಮಯ, ದಾಖಲೆಗಳ ಪರಿಶೀಲನೆ ಸೇರಿದಂತೆ ಇತರ ಪ್ರಕ್ರಿಯೆಗೆ ಕನಿಷ್ಠ 18 ರಿಂದ 24 ತಿಂಗಳ ಅವಶ್ಯಕತೆ ಇದೆ. ಆದರೆ ಈ ಸುದೀರ್ಘ ಸಮಯ ಡಿಜಿ ಲಾಕರ್ ಮೂಲಕ ಕೇವಲ 6 ತಿಂಗಳಿಗೆ ಇಳಿಕೆಯಾಗಲಿದೆ. ಪ್ರಮುಖವಾಗಿ ಡಿಜಿ ಲಾಕರ್ ಮೂಲಕ ಅರ್ಜಿ ಸಲ್ಲಿಸುವಾಗ ಅಗತ್ಯ ದಾಖಲೆಗಳನ್ನು ಲಗತ್ತಿಸಬೇಕು. ಈ ವೇಳೆ ಡಿಜಿ ಲಾಕರ್ ಈ ದಾಖಲೆಗಳ ಇ ವೇರಿಫಿಕೇಶನ್ ಮಾಡಲಿದೆ. ಸರ್ಕಾರಿ ಅಧಿಕೃತ ಇಲಾಖೆಯ ದಾಖಲೆಗಳು ಇ ವೆರಿಫಿಕೇಶನ್ ಮೂಲಕ ಡಿಜಿ ಲಾಕರ್‌ನಲ್ಲಿ ಲಭ್ಯಲಿದೆ. ಈ ದಾಖಲೆಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಕೆ ಮಾಡಬೇಕು. ಇದರಿಂದ ಅಭ್ಯರ್ಥಿ ಸಲ್ಲಿಸಿದ ದಾಖಲೆಗಳ ಪರಿಶೀಲನೆಯನ್ನು ರೈಲ್ವೇ ಇಲಾಖೆ ಮಾಡಬೇಕಾದ ಅವಶ್ಯಕತೆ ಇರುವುದಿಲ್ಲ.
ಅಭ್ಯರ್ಥಿಗಳು ತಮ್ಮ ಪೇಪರ್ ದಾಖಲೆಗಳನ್ನು ಲಗತ್ತಿಸಿ ಕೋರಿಯರ್ ಮಾಡುವ ಪ್ರಮೇಯವೂ ಇರುವುದಿಲ್ಲ. ಸರ್ಕಾರಿ ದಾಖಲೆಗಳಲ್ಲಿರುವ ದಾಖಲೆಗಳನ್ನು ಸುಲಭವಾಗಿ ಆ್ಯಟಾಚ್ ಮಾಡಿ ರೈಲ್ವೇ ಇಲಾಖೆಯ ಖಾಲಿ ಹುದ್ದೆಗೆ ಅರ್ಜಿ ಸಲ್ಲಿಸಲು ಸಾಧ್ಯವಿದೆ.ಇತ್ತ ರೈಲ್ವೇ ಇಲಾಖೆ ಅಷ್ಟೇ ವೇಗದಲ್ಲಿ ಅರ್ಹರಿಗೆ ಪ್ರವೇಶಾತಿ ಪರೀಕ್ಷೆ ಸೇರಿದಂತೆ ಇತರ ಸಂದರ್ಶನ ಪರೀಕ್ಷೆಗಳಿಗೆ ಆಹ್ವಾನ ನೀಡಲಿದೆ.
ರೈಲು ಹಳಿಗೆ ತಲೆ ಇಟ್ಟು ಗಡದ್ ನಿದ್ದೆಗೆ ಜಾರಿದ ಭೂಪ, ಟ್ರೈನ್ ಬಂದರೂ ಏಳಲೇ ಇಲ್ಲ!