
ಭಾರತೀಯ ರೈಲ್ವೆ ತನ್ನ ತುರ್ತು ಕೋಟಾ (Indian Railways new EQ guidelines) ಸಂಬಂಧಿತ ಮಾರ್ಗಸೂಚಿಗಳನ್ನು ಪರಿಷ್ಕರಿಸಿ ಹೊಸ ನಿಯಮಗಳನ್ನು ಪ್ರಕಟಿಸಿದೆ. ಇನ್ನು ಮುಂದೆ ತುರ್ತು ಕೋಟಾ (ತತ್ಕಾಲ್ ಟಿಕೆಟ್) ಅಡಿಯಲ್ಲಿ ಪ್ರಯಾಣಕ್ಕೆ ಕನಿಷ್ಠ ಒಂದು ದಿನ ಮುಂಚಿತವಾಗಿ ವಿನಂತಿಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಈ ಹೊಸ ನಿಯಮದ ಉದ್ದೇಶ, ಸಕಾಲಿಕವಾಗಿ ಮೀಸಲಾತಿ ಚಾರ್ಟ್‌ಗಳನ್ನು ತಯಾರಿಸುವುದು ಮತ್ತು ಕಾರ್ಯಾಚರಣಾ ವಿಳಂಬವನ್ನು ತಪ್ಪಿಸುವುದು.
ಮಂಗಳವಾರ ಹೊರಡಿಸಿದ ಸುತ್ತೋಲೆಯ ಪ್ರಕಾರ, ಮಧ್ಯರಾತ್ರಿ 12:00ರಿಂದ ಮಧ್ಯಾಹ್ನ 2:00ರೊಳಗೆ ಹೊರಡುವ ರೈಲುಗಳಿಗೆ, ತುರ್ತು ಕೋಟಾ ವಿನಂತಿಗಳನ್ನು ಪ್ರಯಾಣದ ಹಿಂದಿನ ದಿನದ ಮದ್ಯಾಹ್ನ 12:00ರೊಳಗೆ EQ ಸೆಲ್‌ಗೆ ಸಲ್ಲಿಸಬೇಕು. ಮಧ್ಯಾಹ್ನ 2:01 ರಿಂದ ರಾತ್ರಿ 11:59ರೊಳಗೆ ಹೊರಡುವ ರೈಲುಗಳಿಗೆ, EQ ವಿನಂತಿಗಳನ್ನು ಹಿಂದಿನ ದಿನದ ಸಂಜೆ 4:00ರೊಳಗೆ ಸಲ್ಲಿಸಬೇಕು. ಭಾನುವಾರಗಳು ಅಥವಾ ಸಾರ್ವಜನಿಕ ರಜಾದಿನಗಳು ಇದ್ದಲ್ಲಿ, EQ ಅರ್ಜಿಗಳನ್ನು ಮುಂಚಿತ ಕಾರ್ಯದಿನದ ಕಚೇರಿ ಸಮಯದೊಳಗೆ ಸಲ್ಲಿಸಬೇಕು.
ರೈಲ್ವೆ EQ ಸೆಲ್‌ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಇತರ ಇಲಾಖೆಗಳಿಂದ ಹೆಚ್ಚಿನ ಪ್ರಮಾಣದಲ್ಲಿ ವಿನಂತಿಗಳು ಬರುತ್ತವೆ. ಈ ಹಿನ್ನೆಲೆ, "ಕೋಟಾ ಹಂಚಿಕೆಯನ್ನು ವಿವೇಚನೆಯಿಂದ ಅಗತ್ಯತೆ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ" ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಸೂಕ್ತ ಸಮಯದಲ್ಲಿ ಅರ್ಜಿಗಳನ್ನು ಸ್ವೀಕರಿಸಲು ಹಾಗೂ ಚಾರ್ಟ್ ತಯಾರಿಕೆಯಲ್ಲಿ ವಿಳಂಬವಾಗದಂತೆ ವಿನಂತಿ ಸಲ್ಲಿಕೆಗೆ ನಿಗದಿತ ವೇಳಾಪಟ್ಟಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ವಿಳಂಬದ ಪರಿಣಾಮ ಪ್ರಯಾಣಿಕರಿಗೆ ತೊಂದರೆ ಉಂಟಾಗುವ ಸಾಧ್ಯತೆಯಿದೆ.
ಪ್ರತಿಯೊಂದು EQ ಅರ್ಜಿಯ ದೃಢತೆಯನ್ನು ಪರಿಶೀಲಿಸುವುದು ಮತ್ತು ದುರುಪಯೋಗವನ್ನು ತಡೆಗಟ್ಟುವುದು ಮುಖ್ಯವಾಗಿದ್ದು, ಇದಕ್ಕಾಗಿ ಸಂಬಂಧಪಟ್ಟ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಸೂಚಿಸಲಾಗಿದೆ.
ಭಾರತೀಯ ರೈಲ್ವೆ ತನ್ನ ಮೀಸಲಾತಿ ಚಾರ್ಟ್ ತಯಾರಿಕಾ ಸಮಯವನ್ನು ಪರಿಷ್ಕರಿಸಿದೆ. ಈಗ ಮಧ್ಯಾಹ್ನ 2:00 ಗಂಟೆಗೆ ಮುಂಚಿತವಾಗಿ ಹೊರಡುವ ರೈಲುಗಳಿಗೆ, ಹಿಂದಿನ ದಿನದ ರಾತ್ರಿ 9:00 ಗಂಟೆಗೆ ಮೀಸಲಾತಿ ಚಾರ್ಟ್ ತಯಾರಿಸಲಾಗುತ್ತದೆ.
ತತ್ಕಾಲ್ ಬುಕಿಂಗ್‌ಗಳಲ್ಲೂ ಹೊಸ ನಿಯಮಗಳು ಜಾರಿಗೆ ಬರುತ್ತಿವೆ. ಜುಲೈ 1 ರಿಂದ, ತತ್ಕಾಲ್ ಟಿಕೆಟ್‌ಗಳನ್ನು ಕೇವಲ ದೃಢೀಕೃತ ಬಳಕೆದಾರರು ಮಾತ್ರ ಬುಕ್ ಮಾಡಬಹುದು. ಇದಕ್ಕಾಗಿ OTP ಆಧಾರಿತ ಪರಿಶೀಲನೆ ಜಾರಿಗೆ ಬರಲಿದೆ. ಬಳಕೆದಾರರು ತಮ್ಮ ಗುರುತನ್ನು ಆಧಾರ್ ಅಥವಾ ಡಿಜಿಲಾಕರ್‌ಗೆ ಲಿಂಕ್ ಮಾಡಲಾದ ಸರ್ಕಾರಿ ದಾಖಲೆಗಳ ಮೂಲಕ ದೃಢೀಕರಿಸಬೇಕಾಗುತ್ತದೆ.
ಭಾರತೀಯ ರೈಲ್ವೆ ಹೊಸ, ಸುಧಾರಿತ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯನ್ನು ರೂಪಿಸುತ್ತಿದ್ದು, ಡಿಸೆಂಬರ್ 2025ರ ವೇಳೆಗೆ ಈ ವ್ಯವಸ್ಥೆ ಜಾರಿಗೆ ಬರಲಿದೆ. ಈ ಹೊಸ ವ್ಯವಸ್ಥೆಯಲ್ಲಿ:
ಬಹುಭಾಷಾ ಇಂಟರ್ಫೇಸ್, ಆಸನ ಆದ್ಯತೆ ಆಯ್ಕೆ, ದರ ಕ್ಯಾಲೆಂಡರ್ ವೀಕ್ಷಣೆ, ಮತ್ತು ವಿಶೇಷ ವರ್ಗಗಳ (ದಿವ್ಯಾಂಗರು, ವಿದ್ಯಾರ್ಥಿಗಳು, ರೋಗಿಗಳು) ಟಿಕೆಟ್ ವೈಶಿಷ್ಟ್ಯಗಳೊಂದಿಗೆ ಲಭ್ಯವಿರಲಿದೆ.
ಟಿಕೆಟ್ ರದ್ದುಗೊಳಿಸುವಾಗ ರೈಲ್ವೆ ಮುಂದಿನ ದಿನಗಳಲ್ಲಿ "ಕ್ಲರೇಜ್" ಶುಲ್ಕವನ್ನು ಕಡಿಮೆ ಮಾಡುವ ಅಥವಾ ತೆಗೆದುಹಾಕುವ ಸಾಧ್ಯತೆಯನ್ನು ಪರಿಶೀಲಿಸುತ್ತಿದೆ. ಪ್ರಸ್ತುತ:, ಕಾಯ್ದಿರಿಸಿದ ಎರಡನೇ ದರ್ಜೆ ಟಿಕೆಟ್ ರದ್ದುಪಡಿಸಿದಾಗ ₹60 ನಷ್ಟವಾಗಲಿದೆ. ಕಾಯ್ದಿರಿಸದ ಎರಡನೇ ದರ್ಜೆ ಟಿಕೆಟ್‌ಗೆ ₹30 ನಷ್ಟವಾಗಲಿದೆ. ಈ ಕ್ರಮವು ರದ್ದಾದ ಅಥವಾ ದೃಢೀಕರಿಸದ ವೇಟ್‌ಲಿಸ್ಟ್ ಟಿಕೆಟ್‌ಗಳ ಮೇಲೆ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ