ದೆಹಲಿಯಲ್ಲಿ 2450 ಕೊಲೆಗಳು! ರಾಜ್ಯಸಭೆಗೆ ವರದಿ ಕೊಟ್ಟ ಕೇಂದ್ರ ಸರ್ಕಾರ

Published : Jul 23, 2025, 06:55 PM IST
Rain lashes several parts of Delhi

ಸಾರಾಂಶ

ಕಳೆದ ಐದು ವರ್ಷಗಳಲ್ಲಿ ದೆಹಲಿಯಲ್ಲಿ 2,450 ಕೊಲೆ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ತಿಳಿಸಿದೆ. 2022 ರಲ್ಲಿ ಅತಿ ಹೆಚ್ಚು ಕೊಲೆಗಳು (509) ನಡೆದಿವೆ.

ದೆಹಲಿ: ಐದು ವರ್ಷಗಳಲ್ಲಿ 2,450 ಕೊಲೆ ಪ್ರಕರಣಗಳು – ಕೇಂದ್ರ ಸರ್ಕಾರದಿಂದ ರಾಜ್ಯಸಭೆಗೆ ಮಾಹಿತಿ

ದೆಹಲಿ ನಗರದಲ್ಲಿ ಕಳೆದ ಐದು ವರ್ಷಗಳಲ್ಲಿ ಒಟ್ಟು 2,450 ಕೊಲೆ ಪ್ರಕರಣಗಳು ನಡೆದಿದೆ. ಕೇಂದ್ರ ಸರ್ಕಾರ ಈ ಮಾಹಿತಿಯನ್ನು ರಾಜ್ಯಸಭೆಗೆ ನೀಡಿದೆ. ಈ ಅಂಕಿಅಂಶಗಳನ್ನು ಕೇಂದ್ರ ಗೃಹ ರಾಜ್ಯ ಸಚಿವ ನಿತ್ಯಾನಂದ ರೈ ಅವರು ರಾಜ್ಯಸಭೆಯಲ್ಲಿ ಹಂಚಿಕೊಂಡಿದ್ದಾರೆ.

2020 ರಿಂದ 2024ರವರೆಗೆ ಕೊಲೆ ಪ್ರಕರಣಗಳು ಈ ರೀತಿ ದಾಖಲಾಗಿವೆ:

2020: 472 ಕೊಲೆಗಳು

2021: 459 ಕೊಲೆಗಳು

2022: 509 ಕೊಲೆಗಳು (ಅತಿ ಹೆಚ್ಚು)

2023: 506 ಕೊಲೆಗಳು

2024: 504 ಕೊಲೆಗಳು

ಈ ಮಾಹಿತಿಯನ್ನು ರಾಜ್ಯಸಭಾ ಸದಸ್ಯ ರಾಮ್‌ಜೀಲಾಲ್ ಸುಮನ್ ಅವರು ದೆಹಲಿಯಲ್ಲಿ ನಡೆಯುತ್ತಿರುವ ಕೊಲೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರವಾಗಿ ಸಚಿವ ನಿತ್ಯಾನಂದ ರೈ ಅವರು ಅಂಕಿಅಂಶಗಳನ್ನು ನೀಡಿದರು.

ಕೊವಿಡ್‌ನ ಮೊದಲ ಎರಡು ವರ್ಷಗಳಾದ 2020 ಮತ್ತು 2021ರಲ್ಲಿಯೂ ಸಹ ದೆಹಲಿಯಲ್ಲಿ 500ಕ್ಕಿಂತ ಹೆಚ್ಚಿನ ಕೊಲೆ ಪ್ರಕರಣಗಳು ವರದಿಯಾಗಿರುವುದು ಗಮನಾರ್ಹ. ಈ ಅಂಕಿಅಂಶಗಳನ್ನು ನೋಡಿದಾಗ, ಕೊಲೆಗಳ ಪ್ರಮಾಣದಲ್ಲಿ ವರ್ಷದಿಂದ ವರ್ಷಕ್ಕೆ ಸಣ್ಣ ಬದಲಾವಣೆಗಳಿದ್ದರೂ, ದೆಹಲಿಯಲ್ಲಿ ಕೊಲೆಗಳ ಪ್ರಮಾಣ ಸ್ಥಿರವಾಗಿ ಉಳಿದಿರುವುದು ಸ್ಪಷ್ಟವಾಗುತ್ತದೆ.

ಆಪರೇಷನ್ ಸಿಂದೂರ್ ಪ್ರಕರಣ: ಶಾ ಸಚಿವ ಸ್ಥಾನ ತೆರವಿಗೆ ಒತ್ತಾಯ

ಆಪರೇಷನ್ ಸಿಂದೂರ್ ಕುರಿತಾಗಿ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಮಧ್ಯಪ್ರದೇಶದ ಸಚಿವ ವಿಜಯ್ ಶಾ ಅವರನ್ನು ಸಚಿವ ಸ್ಥಾನದಿಂದ ತೆರವುಗೊಳಿಸಬೇಕೆಂದು ಆಗ್ರಹಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಈ ಅರ್ಜಿಯನ್ನು ಕಾಂಗ್ರೆಸ್ ನಾಯಕ ಡಾ. ಜಯ ಠಾಕೂರ್ ಅವರು ಸಲ್ಲಿಸಿದ್ದು, ಆಪರೇಷನ್ ಸಿಂದೂರಿನ ಭಾಗವಾಗಿ ಕಾರ್ಯನಿರ್ವಹಿಸಿದ್ದ ಭಾರತದ ಮೊದಲ ಮಹಿಳಾ ಆರ್ಮಿ ಕಮಾಂಡರ್ ಕರ್ಣಲ್ ಸೋಫಿಯಾ ಖುರೇಷಿ ಅವರ ಕುರಿತು ನೀಡಿದ ವಿಜಯ್ ಶಾರ ವಿವಾದಾತ್ಮಕ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಕೋರಲಾಗಿದೆ.

ಅರ್ಜಿಯಲ್ಲಿ, ಅವರ ಹೇಳಿಕೆ ಮಹಿಳಾ ಸೇನಾ ಅಧಿಕಾರಿ ಹಾಗೂ ಭಾರತೀಯ ಸೈನ್ಯದ ಗೌರವಕ್ಕೆ ಧಕ್ಕೆಯುಂಟುಮಾಡುವಂತಹದ್ದಾಗಿದೆ ಎಂಬ ಆರೋಪ ಹೊರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಮಂತ್ರಿಗಿರಿಯಿಂದ ತೆಗೆಯುವಂತೆ ನ್ಯಾಯಾಲಯವನ್ನು ವಿನಂತಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್