ಶೋಲಾ ಕಾಡಲ್ಲಿ ನಿದ್ದೆಗೆ ಜಾರಿದ ಆನೆ ಹಿಂಡು: ಮರಿಗೆ ಸ್ನಾನ ಮಾಡಿಸಿದ ತಾಯಾನೆ: ವನ್ಯಲೋಕದ ಅದ್ಭುತ ವೀಡಿಯೋ

Published : Jul 23, 2025, 06:57 PM IST
Elephant Motherly Love Animal Bonding Wildlife Video

ಸಾರಾಂಶ

ತಾಯಿ ಆನೆಯೊಂದು ತನ್ನ ಮರಿಗೆ ಸ್ನಾನ ಮಾಡಿಸುತ್ತಿರುವ ಮುದ್ದಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಹಾಗೆಯೇ ಶೋಲಾ ಕಾಡಿನಲ್ಲಿ ಆನೆಗಳ ಹಿಂಡು ನಿದ್ದೆ ಮಾಡುವ ಇನ್ನೊಂದು ವಿಡಿಯೋ ಕೂಡ ವೈರಲ್ ಆಗಿದೆ.

ಪುಟ್ಟ ಮಕ್ಕಳನ್ನು ಅಮ್ಮಂದಿರು ಅಜ್ಜಿಯಂದಿರು ಸ್ನಾನ ಮಾಡಿಸುವುದನ್ನು ನೋಡಿದ್ದೀರಾ ಆದರೆ ಆನೆಯೊಂದು ತನ್ನ ಮರಿಗೆ ಸ್ನಾನ ಮಾಡಿಸುವುದನ್ನು ನೋಡಿದ್ದೀರಾ? ಇಲ್ಲ ಎಂದಾದರೆ ಇಲ್ಲಿದೆ ನೋಡಿ. ಆನೆಯೊಂದು ತನ್ನ ಮುದ್ದು ಮರಿಗೆ ಸ್ನಾನ ಮಾಡಿಸುತ್ತಿರುವ ಮುದ್ದಾದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರಿಗೆ ತಮ್ಮ ಬಾಲ್ಯವನ್ನು ನೆನಪು ಮಾಡಿದೆ ಈ ಗಜಕೇಸರಿ ತಾಯಿ.

elephantsofworld ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದ್ದು ಅಮ್ಮ ಇದ್ದಲ್ಲಿ ಪ್ರತಿಯೊಂದು ಚೆನ್ನಾಗಿರುತ್ತದೆ ಎಂದು ಕ್ಯಾಪ್ಷನ್ ನೀಡಿದೆ. ವೀಡಿಯೋದಲ್ಲಿ ಕಾಣುವಂತೆ ಆನೆಯೊಂದು ಮನುಷ್ನರಂತೆ ಹಿಂದಿನ ಕಾಲುಗಳು ಹಾಗೂ ಬೆನ್ನನ್ನು ನೆಲಕ್ಕೆ ಊರಿ ಕೆಳಗೆ ಕುಳಿತಿದ್ದು, ಅದರ ಅರ್ಧ ಭಾಗಿರುವ ಮುಂಭಾಗದ ಕಾಲುಗಳೆರಡ ಮಧ್ಯದಲ್ಲಿ ಮರಿಯಾನೆ ಇದೆ. ಪೈಪ್ ಮೂಲಕ ಯಾರೋ ಆನೆಗೆ ನೀರು ಹಾಕುತ್ತಿದ್ದು, ತಾಯಿ ಆನೆ ಆ ನೀರನ್ನು ತನ್ನ ಸೊಂಡಿಲಿನ ಮೂಲಕ ಹಿಡಿದು ಮರಿಯ ಹಣೆ ಮುಖದ ಮೇಲೆ ಹಾಕುವ ಮೂಲಕ ಸೊಂಡಿಲಿನಲ್ಲಿ ಉಜ್ಜುತ್ತಿದೆ. ಇತ್ತ ಮರಿಯಾನೆ ನೀರು ಬೀಳುತ್ತಿದ್ದಂತೆ ಎಲ್ಲಿ ಅಡಗಿಕೊಳ್ಳಲ್ಲಿ ಎಂಬಂತೆ ತಾಯಿಯ ಕಾಲುಗಳ ಮಧ್ಯೆ ಓಡುವುದಕ್ಕೆ ನೋಡುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.

 

 

ಈ ಅದ್ಭುತವಾದ ವೀಡಿಯೋ ನೋಡಿದ ಅನೇಕರು ಭಾವುಕರಾಗಿದ್ದು, ಇಷ್ಟು ಸೊಗಸಾದ ವಿಡಿಯೋವೊಂದನ್ನು ನಾನು ಹಿಂದೆಂದು ನೋಡಿರಲಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಎಂತಹ ಮುದ್ದಾದ ತಾಯಿ ಈಕೆಯನ್ನು ನೋಡಿ ನನ್ನ ಹೃದಯ ಮೆತ್ತಗಾಗುತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಅಮ್ಮ ಮಗ ಇಬ್ಬರು ಮುದ್ದಾಗಿದ್ದಾರೆ ಎಂದು ಮತ್ತೆ ಕೆಲವರು ಕಾಮೆಂಟ್ ಮಾಡಿದ್ದಾರೆ. ಇಂತಹ ವೀಡಿಯೋಗಳನ್ನು ನಾನು ದಿನವೀಡಿ ನೋಡುವೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ಅನೇಕರಿಗೆ ಬಾಲ್ಯ ನೆನಪು ಮಾಡುತ್ತಿದ್ದು, ಅನೇಕರ ಹೃದಯ ಗೆಲ್ಲುತ್ತಿದೆ.

ಅಂದಹಾಗೆ ಆನೆಗಳು ಪ್ರಪಂಚದ ಅತ್ಯಂತ ಬುದ್ಧಿವಂತ ಪ್ರಾಣಿಗಳಾಗಿವೆ. ಮರಿಗಳನ್ನು ನೋಡಿಕೊಳ್ಳುವ ವಿಚಾರದಲ್ಲಿ ಬಹಳ ಕಾಳಜಿ ತೋರುವ ಆನೆಗಳು ತಮ್ಮ ಮರಿಗಳನ್ನು ಅಪಾಯದಿಂದ ರಕ್ಷಿಸುತ್ತಿರುವ ಹಲವು ವೀಡಿಯೋಗಳು ಈ ಹಿಂದೆಯೂ ವೈರಲ್ ಆಗಿದ್ದವು. ಮರಿಗಳು ಹಿಂಡಿನಲ್ಲಿದ್ದ ಸಂದರ್ಭದಲ್ಲಿ ಈ ಆನೆಗಳು ಹಿಂದೆಂದಿಗಿಂತಲೂ ಹೆಚ್ಚು ಜಾಗರೂಕವಾಗಿರುವವು.

ಶೋಲಾ ಕಾಡಿನಲ್ಲಿ ನಿದ್ದೆಗೆ ಜಾರಿದ ಆನೆಗಳ ಹಿಂಡು

ಹಾಗೆಯೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಇನ್ನೊಂದು ಅದ್ಭುತ ವೀಡಿಯೋ ಇದು. ಆನೆಗಳು ಮನುಷ್ಯರಂತೆ ನೆಲದಲ್ಲಿ ಮಲಗಿ ನಿದ್ದೆ ಮಾಡುತ್ತವೆ. ಅದೇ ರೀತಿ ಆನೆಗಳ ಹಿಂಡೊಂದು ಪಶ್ಚಿಮ ಘಟ್ಟದ ಶೋಲಾ ಅರಣ್ಯದಲ್ಲಿ ಹಸಿರು ವನಸಿರಿಯ ಮಧ್ಯೆ ನಿದ್ದೆಗೆ ಜಾರಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಈ ಅದ್ಬುತ ದೃಶ್ಯವನ್ನು ಪ್ರವೀಣ್ ಷಣ್ಮುಗನಂದನ್ ಎಂಬುವವರು ಸೆರೆ ಹಿಡಿದಿದ್ದಾರೆ. ವೀಡಿಯೋದಲ್ಲಿ ಕಾಣುವಂತೆ ಎರಡು ದೊಡ್ಡ ಆನೆಗಳು ಹಾಗೂ ಅವುಗಳ ಮೂರು ಮರಿಗಳು ಇರುವ ಪುಟ್ಟ ಆನೆ ಸಂಸಾರ ಇಲ್ಲಿ ನಿದ್ದೆಗೆ ಜಾರಿದೆ. ಒಂದು ಪುಟ್ಟ ಆನೆಯಾದರೆ ಉಳಿದವು ಬಹುಶಃ ಆ ಪುಟ್ಟ ಮರಿಗಿಂತ 3ರಿಂದ 4 ವರ್ಷ ಅಂತರದಲ್ಲಿ ದೊಡ್ಡವಾಗಿರುವ ಆನೆ ಮರಿಗಳಂತೆ ಕಾಣುತ್ತಿದೆ.

 

 

ಹಸಿರು ವನಸಿರಿಯ ಮಧ್ಯೆ ಈ ಆನೆ ಸಂಸಾರ ಶಾಂತವಾಗಿ ನಿದ್ದೆಗೆ ಜಾರಿದ್ದು, ಈ ಸೊಗಸಾದ ವೀಡಿಯೋ ನೋಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋ ನೋಡಿದ ಅನೇಕರು ಆನೆಯ ಈ ಮುದ್ದಾದ ಕುಟುಂಬವನ್ನು ನೋಡಿ ಭಾವುಕರಾಗಿದ್ದಾರೆ. ಆನೆಗಳ ಈ ವೀಡಿಯೋ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ