ಇದೀಗ ಪ್ರಯಾಣಿಕರು ಕಳೆದುಕೊಂಡು ವಸ್ತುಗಳನ್ನು ಹಿಂದಿರುಗಿಸಲು ಭಾರತೀಯ ರೈಲ್ವೆ ಇಲಾಖೆ ಹೊಸ ಆನ್‌ಲೈನ್ ಸೇವೆಯನ್ನು ತಂದಿದೆ. ಪ್ರಯಾಣಿಕರು ಕಳೆದುಕೊಂಡ ವಸ್ತುಗಳು ಈಗ ಆನ್‌ಲೈನ್‌ನಲ್ಲಿ ಕಾಣಿಸುತ್ತವೆ.
ನವದೆಹಲಿ: ಪ್ರಯಾಣಿಕರಿಗೆ ಭಾರತೀಯ ರೈಲ್ವೆ (Indian Railway) ಗುಡ್‌ನ್ಯೂಸ್ ನೀಡಿದೆ. ಭಾರತೀಯ ರೈಲ್ವೆ ಹೊಸ ಆನ್‌ಲೈನ್ ಸೇವೆಯನ್ನು (Online Service) ಆರಂಭಿಸಿದೆ. ರೈಲು ಪ್ರಯಾಣಕ್ಕೆ (Railway Journey) ಎಲ್ಲಾ ವರ್ಗದವರು ಮೊದಲ ಆದ್ಯತೆ ನೀಡುತ್ತಾರೆ. ಹಾಗಾಗಿ ಭಾರತೀಯ ರೈಲ್ವೆಯನ್ನು ಜನಸ್ನೇಹಿ ಪ್ರಯಾಣ ಎಂದು ಕರೆಯಲಾಗುತ್ತದೆ. ದೀರ್ಘ ಪ್ರಯಾಣದ ವೇಳೆ ರೈಲಿನಲ್ಲಿ ಕೆಲವು ವಸ್ತುಗಳನ್ನು ಬಿಟ್ಟು ಇಳಿದ್ರೆ ಅದು ಸಿಗೋದು ಅನುಮಾನ. ತುಂಬಾ ಬೆಲೆ ಬಾಳುವ ವಸ್ತುಗಳಿದ್ದರೆ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕಾಗುತ್ತದೆ. ಅಧಿಕಾರಿಗಳು ಮುಂದಿನ ನಿಲ್ದಾಣದಲ್ಲಿ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳುತ್ತಾರೆ. ಆದ್ರೆ ಕೆಲ ಪ್ರಯಾಣಿಕರಿಗೆ ರೈಲಿನಿಂದ ಹೊರ ಬಂದ ತುಂಬಾ ಗಂಟೆಗಳ ನಂತರ ನೆನಪಿಗೆ ಬಂದಿರುತ್ತದೆ. ಹಾಗಾಗಿ ಬ್ಯಾಗ್ ಸೇರಿದಂತೆ ಅನೇಕ ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ.
ಇದೀಗ ಪ್ರಯಾಣಿಕರು ಕಳೆದುಕೊಂಡು ವಸ್ತುಗಳನ್ನು ಹಿಂದಿರುಗಿಸಲು ಭಾರತೀಯ ರೈಲ್ವೆ ಇಲಾಖೆ ಹೊಸ ಆನ್‌ಲೈನ್ ಸೇವೆಯನ್ನು ತಂದಿದೆ. ಪ್ರಯಾಣಿಕರು ಕಳೆದುಕೊಂಡ ವಸ್ತುಗಳು ಈಗ ಆನ್‌ಲೈನ್‌ನಲ್ಲಿ ಕಾಣಿಸುತ್ತವೆ. ಭಾರತೀಯ ರೈಲ್ವೆಯ ಪಶ್ಚಿಮ ವಿಭಾಗವು ಆನ್‌ಲೈನ್ ಪೋರ್ಟಲ್ ಅನ್ನು ಪರಿಚಯಿಸಿದೆ. ಈ ಪೋರ್ಟಲ್ ಮೂಲಕ ಪ್ರಯಾಣಿಕರು ತಮ್ಮ ಕಳೆದುಹೋದ ಲಗೇಜ್ ಹಿಂಪಡೆದುಕೊಳ್ಳಬಹುದಾಗಿದೆ.
undefined
ಅಂತಿಮ ನಿಲ್ದಾಣದಲ್ಲಿ ಸಿಗುವ ವಸ್ತುಗಳನ್ನು ರೈಲ್ವೆ ಪೊಲೀಸರು ಕಳೆದುಹೋದ ಲಗೇಜ್‌ನ ಫೋಟೋವನ್ನು ಕ್ಲಿಕ್ ಮಾಡಿ ಮತ್ತು ಅದನ್ನು ತಮ್ಮ ವಿಭಾಗಕ್ಕೆ ಸಲ್ಲಿಸುತ್ತಾರೆ. ಇದನ್ನು ಭಾರತೀಯ ರೈಲ್ವೆ ಆಪರೇಷನ್ ಅಮಾನತ್ ಎಂದು ಕರೆಯುತ್ತದೆ. ಈ ಫೋಟೋಗಳು ಆನ್‌ಲೈನ್ ಪೋರ್ಟಲ್‌ನಲ್ಲಿ ನೋಡಬಹುದು ಮತ್ತ ಹಿಂಪಡೆಯಬಹುದಾಗಿದೆ. ಕಳೆದುಹೋದ ಸರಕುಗಳನ್ನು ಮರುಪಡೆಯಲು ಪಶ್ಚಿಮ ವಿಭಾಗವು ಮುಂಬೈ ಕೇಂದ್ರ ವಿಭಾಗ, ವಡೋದರಾ, ಅಹಮದಾಬಾದ್, ರತ್ಲಾಮ್, ರಾಜ್‌ಕೋಟ್, ಭಾವನಗರ ವಿಭಾಗದಂತಹ ಹಲವಾರು ವಲಯಗಳಾಗಿ ವಿಂಗಡಿಸಿದೆ.
ರಾಂಗ್ ಸಿಗ್ನಲ್ ನೀಡಿದ ಸ್ಟೇಷನ್ ಮಾಸ್ಟರ್: ಎಲ್ಲೋ ಹೋಗ್ಬೇಕಾದ ರೈಲು ಎಲ್ಲೋ ಹೋಯ್ತು
ಕಳೆದುಹೋದ ಬ್ಯಾಗ್ ಅಥವಾ ಸರುಕು ಹಿಂಪಡೆಯೋದು ಹೇಗೆ?
ಕಳೆದು ಹೋದ ಅಥವಾ ಮರೆತು ಬಿಟ್ಟು ಬಂದ ಲಗೇಜ್ ಹುಡುಕಲು ನೀವು https://wr.indianrailways.gov.in/view_section.jsp?lang=0&id=0,2,753 ವೆಬ್‌ಸೈಟ್‌ಗೆ ಭೇಟಿ ನೀಡಬೇಕು.
ಈಗ ನಿಮಗೆ ಮುಖಪುಟದಲ್ಲಿ ಆಪರೇಷನ್ ಅಮಾನತು ಎಂದು ಕಾಣಿಸುತ್ತದೆ. ಇದರ ಕೆಳಗೆ ಮುಂಬೈ ಕೇಂದ್ರ ವಿಭಾಗ, ವಡೋದರಾ, ಅಹಮದಾಬಾದ್, ರತ್ಲಾಮ್, ರಾಜ್‌ಕೋಟ್, ಭಾವನಗರ ವಿಭಾಗದ ಹೆಸರು ಕಾಣಿಸುತ್ತವೆ. ನಿಮ್ಮ ಲಗೇಜ್ ಯಾವ ವಿಭಾಗದಲ್ಲಿ ಕಳೆದಿದೆಯೋ ಅದರ ಮೇಲೆ ಕ್ಲಿಕ್ ಮಾಡಬೇಕು.
ಮಾನ್ಸೂನ್ ಎಫೆಕ್ಟ್, ಕೊಂಕಣ್ ಲೈನ್‌ನಲ್ಲಿ ಪ್ರಯಾಣಿಸಲಿರುವ ರೈಲುಗಳ ವೇಳಾಪಟ್ಟಿ ಬದಲು!
ವಿಭಾಗದ ಮೇಲೆ ಕ್ಲಿಕ್ ಮಾಡಿದ ನಂತರ ಕಳೆದು ಹೋಗಿರುವ ವಸ್ತುಗಳ ಸಂಪೂರ್ಣ ವಿವರ ನಿಮಗೆ ಕಾಣಿಸುತ್ತದೆ. ಇದರಲ್ಲಿ ಸಾಮಾನು ಕಳೆದು ಹೋಗಿದ್ದು ಯಾವಾಗ? ಅಲ್ಲದೆ ಸರಕುಗಳನ್ನು ಯಾರು ಸಲ್ಲಿಸಿದ್ದಾರೆ. ಆ ವಸ್ತುವಿನ ಬೆಲೆಯೇ ಬೆಲೆ. ಕಳೆದುಹೋದ ವಸ್ತುಗಳನ್ನು ಹರಾಜು ಮಾಡಲಾಗಿದೆಯೇ ಅಥವಾ ಇಲ್ಲವೇ ಎಂಬುದರ ಕುರಿತ ಎಲ್ಲಾ ಮಾಹಿತಿ ಸಿಗುತ್ತದೆ. ಈ ಮೂಲಕ ನಿಮ್ಮ ವಸ್ತುಗಳನ್ನು ಹಿಂಪಡೆದುಕೊಳ್ಳಬಹುದು.