ವಿದ್ಯಾರ್ಥಿಗಳ ಜೀವನವನ್ನ ಅಪಾಯಕ್ಕೆ ಸಿಲುಕಿಸಲು ಗಾಂಧಿ ಕುಟುಂಬದ ಪ್ರಯತ್ನ: ಬಿಜೆಪಿ ಕಿಡಿ

By Mahmad Rafik  |  First Published Jun 11, 2024, 4:56 PM IST

ಎನ್‌ಟಿಎಯನ್ನು ಪ್ರಶ್ನೆ ಮಾಡಿರುವ ಯುವತಿ ಈ ಹಿಂದೆ ಕೋವಿಡ್ ಲಸಿಕೆ ಕಂಡು ಹಿಡಿದಿದ್ದೇನೆ ಎಂದು ಹೇಳಿಕೊಂಡಿದ್ದಳು. ಈ ಯುವತಿಯ ಒಎಂಆರ್ ಯಥಾಸ್ಥಿತಿಯಲ್ಲಿದ್ದು, ಆಕೆ ಗಳಿಸಿದ್ದು 715 ಅಲ್ಲ, 365 ಮಾತ್ರ. ಈ ಬಗ್ಗೆ ಎನ್‌ಟಿಎ ಸ್ಪಷ್ಟನೆ ನೀಡಿದೆ.


ನವದೆಹಲಿ: ಜೂನ್ 4ರಂದು ಪ್ರಕಟವಾಗಿರುವ ಫಲಿತಾಂಶದಲ್ಲಿ (NEET Results 2024) ಅಕ್ರಮ ನಡೆದಿದೆ ಎಂಬ ಆರೋಪಗಳು ಬಂದಿವೆ. ಈ ಸಂಬಂಧ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರಿಯಾಂಕಾ ಗಾಂಧಿ ವಾದ್ರಾ, ವಿದ್ಯಾರ್ಥಿನಿಯದ್ದು, ಎನ್ನಲಾದ ವಿಡಿಯೋ ಹಂಚಿಕೊಂಡಿದ್ದಾರೆ. ಇದೀಗ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಹಂಚಿಕೊಂಡಿರುವ ವಿಡಿಯೋ ನಕಲಿ ಅನ್ನೋದನ್ನು ಬಿಜೆಪಿ (BJP) ಸಾಬೀತು ಮಾಡಿದೆ. ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್, ವಿದ್ಯಾರ್ಥಿಗಳ ಜೀವನ ಮತ್ತು ವೃತ್ತಿಜೀವನವನ್ನು ಅಪಾಯಕ್ಕೆ ಸಿಲುಕಿಸಲು ವಂಚನೆಯ ಕುಟುಂಬವು ಮತ್ತೊಂದು ಮೋಸವನ್ನು ಉತ್ತೇಜಿಸಲು ಮುಂದಾಗಿದೆ ಎಂದು ಎಕ್ಸ್ ಖಾತೆಯಲ್ಲಿ ಆಕ್ರೋಶ ಹೊರ ಹಾಕಿದ್ದಾರೆ. ಯುವತಿಯ ಅಂಕಪಟ್ಟಿ ಮತ್ತು ಹಳೆ ಹೇಳಿಕೆಯ ವಿಡಿಯೋವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಎನ್‌ಟಿಎಯನ್ನು ಪ್ರಶ್ನೆ ಮಾಡಿರುವ ಯುವತಿ ಈ ಹಿಂದೆ ಕೋವಿಡ್ ಲಸಿಕೆ ಕಂಡು ಹಿಡಿದಿದ್ದೇನೆ ಎಂದು ಹೇಳಿಕೊಂಡಿದ್ದಳು. ಈ ಯುವತಿಯ ಒಎಂಆರ್ ಯಥಾಸ್ಥಿತಿಯಲ್ಲಿದ್ದು, ಆಕೆ ಗಳಿಸಿದ್ದು 715 ಅಲ್ಲ, 365 ಮಾತ್ರ. ಈ ಬಗ್ಗೆ ಎನ್‌ಟಿಎ ಸ್ಪಷ್ಟನೆ ನೀಡಿದೆ. ಚುನಾವಣೆ ಸಮಯದಲ್ಲಿಯೂ ಕಾಂಗ್ರೆಸ್ ಸುಳ್ಳುಗಳ ಮೇಲೆಯೇ ಅವಲಂಬಿತವಾಗಿತ್ತು. ಚುನಾವಣೆಯ ನಂತರವೂ ಸುಳ್ಳುಗಳನ್ನು ಬಳುಸುತ್ತಿದ್ದಾತೆ. ನಕಲಿ ಗಾಂಧಿಗಳದ್ದು, ಒಲವು ಸಹ ನಕಲಿ ಆಗಿದೆ ಎಂದು ಪ್ರಿಯಾಂಕಾ ವಾದ್ರಾ ವಿರುದ್ಧ ಶೆಹಜಾದ್ ವಾಗ್ದಾಳಿ ನಡೆಸಿದರು. 

Tap to resize

Latest Videos

ಬಿಜೆಪಿ ಅಧ್ಯಕ್ಷರ ರೇಸ್‌ನಲ್ಲಿ ತಾವ್ಡೆ, ಸ್ಮೃತಿ, ಬನ್ಸಲ್‌ ಸೇರಿ ಐವರು

ಪ್ರಿಯಾಂಕಾ ಗಾಂಧಿ ಹೇಳಿದ್ದೇನು? 

NEET ಅಂತಹ ಪರೀಕ್ಷಾ ತಯಾರಿಗಾಗಿ ಜೀವನದ ಅತ್ಯಮೂಲ್ಯ ಕ್ಷಣಗಳನ್ನು ಕಳೆದಿರುತ್ತಾರೆ. ಪರೀಕ್ಷೆಗಾಗಿ ಮಕ್ಕಳು ಹಾರ್ಡ್‌ವರ್ಕ್‌ ಮಾಡಿರುತ್ತಾರೆ. ಮಕ್ಕಳ ಜೊತೆ ಇಡೀ ಕುಟುಂಬದ ಪರಿಶ್ರಮ ಸಹ ಇದರಲ್ಲಿರುತ್ತದೆ. ಆದರೆ ವರ್ಷದಿಂದ ವರ್ಷಕ್ಕೆ ಪ್ರಶ್ನೆಪತ್ರಿಕೆಗಳು ಲೀಕ್ ಮತ್ತು ಫಲಿತಾಂಶಕ್ಕೆ ಸಂಬಂಧಿಸಿದಂತೆ ಅಕ್ರಮಗಳು ನಡೆಯುತ್ತಿವೆ. ಇದಕ್ಕೆ ಪರೀಕ್ಷಾ ಏಜೆನ್ಸಿಗಳು ಹೊಣೆ ಅಲ್ಲವೇ ಎಂದು ಪ್ರಿಯಾಂಕಾ ಗಾಂಧಿ ಪ್ರಶ್ನೆ ಮಾಡಿದ್ದಾರೆ. 

ಸರಕಾರ ತನ್ನ ನಿರ್ಲಕ್ಷ್ಯ ಧೋರಣೆ ಬಿಟ್ಟು ಪರೀಕ್ಷಾ ವ್ಯವಸ್ಥೆಯನ್ನು ಗಂಭೀರವಾಗಿ ಪರಿಗಣಬೇಕು ಅಲ್ಲವಾ? ನಾವು ಯುವ ಸಮುದಾಯದ ಕನಸುಗಳು ಈ ರೀತಿ ಹಾಳಾಗೋದನ್ನು ನಮ್ಮಿಂದ ನೋಡಲು ಆಗುತ್ತಿಲ್ಲ. ಈ ವ್ಯವಸ್ಥೆಯಿಂದ ವಿದ್ಯಾರ್ಥಿಗಳಿಗೆ ಆಗುತ್ತಿರೋ ಅನ್ಯಾಯ ನಿಲ್ಲಿಸಬೇಕಿದೆ. ಈ ಅಕ್ರಮಗಳನ್ನು ಸರಿಪಡಿಸಲು ಸರಕಾರ ಗಂಭೀರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪ್ರಿಯಾಂಕಾ ಗಾಂಧಿ ಆಗ್ರಹಿಸಿದ್ದರು.

ಮಿತ್ರಪಕ್ಷಗಳ ಮರ್ಜಿಯೊಂದಿಗೆ 3ನೇ ಬಾರಿ ಪ್ರಧಾನಿಯಾದ ಮೋದಿ ಎಂದು ವಿದೇಶಿ ಮಾಧ್ಯಮಗಳ ವರದಿ

ವೈರಲ್ ವಿಡಿಯೋದಲ್ಲಿ ಏನಿದೆ? 

ಪ್ರಿಯಾಂಕಾ ಗಾಂಧಿ ಹಂಚಿಕೊಂಡಿರುವ ವಿಡಿಯೋದಲ್ಲಿ ಯುವತಿ, ಮೊದಲು ನನ್ನ ನೀಟ್ ರಿಸಲ್ಟ್ ತೋರಿಸಲಿಲ್ಲ. ಆನಂತರ ರಿಸಲ್ಟ್ ಡಿಸ್‌ಕ್ಲೋಸ್ ಮಾಡಲು ಆಗಲ್ಲ ಎಂದು ಮೇಲ್ ಬಂತು. ನಾವು ಎನ್‌ಟಿಎ ವಾಪಸ್ ಮೇಲ್ ಮಾಡಿದಾಗ, ನಿಮ್ಮ ಓಎಂಆರ್ ಶೀಟ್ ಹರಿದಿದೆ ಎಂದು ಹೇಳಿತು. ನಂತರ ಹರಿದಿರುವ ಓಎಂಆರ್ ಶೀಟ್ ಫೋಟೋ ಕಳುಹಿಸಿದರು ಎಂದು ಯುವತಿ ಹೇಳಿದ್ದಾಳೆ. ಆದರೆ ಓಎಂಆರ್ ಶೀಟ್ ಉದ್ದೇಶಪೂರ್ವಕವಾಗಿ ಹರಿಯಲಾಗಿದೆ ಎಂದು ಯುವತಿ ಆರೋಪಿಸಿದ್ದಾಳೆ. ಶೀಟ್‌ನಲ್ಲಿ ನಾನು ಟಿಕ್ ಮಾಡಿರೋದು ಸ್ಪಷ್ಟವಾಗಿ ಕಾಣಿಸುತ್ತಿದೆ. ನನಗೆ 715 ಅಂಕ ಬಂದಿದೆ. ಈ ಸಂಬಂಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದೇವೆ ಎಂದು ಯುವತಿ ಹೇಳಿಕೊಂಡಿದ್ದಾಳೆ.

Only a family of frauds can promote another fraud to put lives and careers of students in jeopardy.. The girl in question in the past said she had invented Covid vaccine..

Now NTA has clarified that said girl’s OMR is intact and she scored only 365, not 715.

Congress relied on… https://t.co/mCCgQYZsTk pic.twitter.com/pXWZCsXsyA

— Shehzad Jai Hind (Modi Ka Parivar) (@Shehzad_Ind)
click me!