
ಭೋಪಾಲ್: ವೇಗವಾಗಿ ಬರುತ್ತಿದ್ದ ಕಾರನ್ನು ಗಮನಿಸದೇ ಯುವತಿಯೊಬ್ಬಳು ರಸ್ತೆ ದಾಟಲು ಹೋಗಿದ್ದು, ಈ ವೇಳೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮೇಲೆ ಹಾರಿ ಕೆಳಗೆ ಬಿದ್ದಿದ್ದಾಳೆ. ಆದರೂ ಆಕೆ ಪವಾಡಸದೃಶವಾಗಿ ಸಾವಿನ ದವಡೆಯಿಂದ ಪಾರಾಗಿದ್ದಾಳೆ. ಆದರೆ ಆಕೆ ರಸ್ತೆಯಿಂದ ಮೇಲೆಳುತ್ತಿದ್ದಂತೆ ಕಾರು ಚಾಲಕ ಮಾತ್ರ ಒಮ್ಮೆ ಕಾರು ನಿಲ್ಲಿಸಿದಂತೆ ಮಾಡಿ ಆ ಸ್ಥಳದಿಂದ ಬುರ್ರನೇ ಎಸ್ಕೇಪ್ ಆಗಿದ್ದು, ಈ ವೇಳೆ ಅಲ್ಲಿದ್ದವರೆಲ್ಲಾ ಕಾರನ್ನು ತಡೆಯುವ ಪ್ರಯತ್ನ ಮಾಡಿದರು ಕಾರು ಚಾಲಕ ಕಾರಿನೊಂದಿಗೆ ಎಸ್ಕೇಪ್ ಆಗಿದ್ದಾನೆ. ಆದರೆ ಅಪಘಾತದ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಧ್ಯಪ್ರದೇಶದ ಒಬೆದುಲ್ಲಾಗಂಜ್ ಬಳಿ ಇರುವ ಅರ್ಜುನ್ ನಗರ್ ಬ್ರಿಡ್ಜ್ ಬಳಿ ಈ ಗಟನೆ ನಡೆದಿದೆ. ಸರ್ವೀಸ್ ರೋಡ್‌ನಲ್ಲಿ ಈ ಘಟನೆ ನಡೆದಿದ್ದು, ಕಾರು ಗುದ್ದಿದ್ದ ರಭಸಕ್ಕೆ ಹುಡುಗಿ 10 ಅಡಿಯಷ್ಟು ದೂರ ಹಾರಿ ಕೆಳಗೆ ಬಿದ್ದಿದ್ದಾಳೆ. ಈ ವೇಳೆ ಆಕೆಯನ್ನು ರಸ್ತೆಯಿಂದ ಎಬ್ಬಿಸಿದ ಸ್ಥಳೀಯರು ಕಾರನ್ನು ನಿಲ್ಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಮಾನವೀಯತೆ ಮರೆತ ಚಾಲಕ ಕಾರನ್ನು ಒಮ್ಮೆ ನಿಲ್ಲಿಸಿದಂತೆ ಮಾಡಿ ರಿವರ್ಸ್ ತೆಗೆದುಕೊಂಡು ಎಸ್ಕೇಪ್ ಆಗಿದ್ದಾನೆ. ಅಪಘಾತದಲ್ಲಿ ಗಾಯಗೊಂಡ ಯುವತಿಯನ್ನು ಆಸ್ಪತ್ರೆಗೆ ದಾಖಲಿಸುವ ಬದಲು ಕಾರು ಚಾಲಕ ಕಾರಿನೊಂದಿಗೆ ಜೂಟ್ ಹೇಳಿದ್ದಾನೆ.
ಒಂಟೆಗೆ ಕಾರು ಡಿಕ್ಕಿ: ಅಪಘಾತದ ರಭಸಕ್ಕೆ ಕಾರಿನೊಳಗೆ ಸಿಲುಕಿ ನೋವು ತಡೆಯಲಾಗದೇ ಒಂಟೆಯ ಅರಚಾಟ
ಕೂಡಲೇ ಹುಡುಗಿಯ ಕುಟುಂಬದವರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಆಕೆ ಚಿಕಿತ್ಸೆ ಪಡೆಯುತ್ತಿದ್ದಾಳೆ. ಕಾರು ವೇಗವಾಗಿ ಬಂದು ಡಿಕ್ಕಿ ಹೊಡೆದರು ಯುವತಿಗೆ ಅಂತಹ ದೊಡ್ಡ ಗಂಭೀರ ಗಾಯವೇನು ಆಗದೇ ಪವಾಡಸದೃಶವಾಗಿ ಪಾರಾಗಿದ್ದಾಳೆ. ಈ ಎಲ್ಲಾ ದೃಶ್ಯಾವಳಿಗಳು ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ನಾಪತ್ತೆಯಾಗಿರುವ ಕಾರು ಚಾಲಕನಿಗಾಗಿ ಬಲೆ ಬೀಸಿದ್ದಾರೆ.
ಸಿಗ್ನಲ್ ಹಾರಲು ಹೋಗಿ ಅವಾಂತರ: ಕಾರಿಗೆ ಡಿಕ್ಕಿ ಹೊಡೆದ 4 ಪಲ್ಟಿ ಹೊಡೆದ ಕಾರು: ಸಿಸಿಟಿವಿ ದೃಶ್ಯ ವೈರಲ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ