ಚೀನಾ ದಾಳಿ ಪ್ಲಾನ್ ಮಾಡ್ತಿತ್ತು, ಸರ್ಕಾರ ಮಲಗಿತ್ತು: 50ನೇ ಬರ್ತ್‌ಡೇ ದಿನ ರಾಹುಲ್ ವಾಗ್ದಾಳಿ

Suvarna News   | Asianet News
Published : Jun 19, 2020, 12:23 PM ISTUpdated : Jun 19, 2020, 01:36 PM IST
ಚೀನಾ ದಾಳಿ ಪ್ಲಾನ್ ಮಾಡ್ತಿತ್ತು, ಸರ್ಕಾರ ಮಲಗಿತ್ತು: 50ನೇ ಬರ್ತ್‌ಡೇ ದಿನ ರಾಹುಲ್ ವಾಗ್ದಾಳಿ

ಸಾರಾಂಶ

ಚೀನಾ ಪೂರ್ವ ನಿಯೋಜಿತ ಯೋಜನೆಯಂತೆ ದಾಳಿ ಮಾಡಿದೆ. ಅದು ಮೊದಲೇ ಪ್ಲಾನ್ ಮಾಡಿಕೊಂಡಿತ್ತು. ಆದರೆ ಭಾರತ ಸರ್ಕಾರ ನಿದ್ದ ಮಾಡ್ತಿತ್ತು ಎಂದು ಸಂಸದ ರಾಹುಲ್ ಗಾಂಧಿ  ಆರೋಪಿಸಿದ್ದಾರೆ.

ನವದೆಹಲಿ(ಜೂ.19): ಚೀನಾ ಪೂರ್ವ ನಿಯೋಜಿತ ಯೋಜನೆಯಂತೆ ದಾಳಿ ಮಾಡಿದೆ. ಅದು ಮೊದಲೇ ಪ್ಲಾನ್ ಮಾಡಿಕೊಂಡಿತ್ತು. ಆದರೆ ಭಾರತ ಸರ್ಕಾರ ನಿದ್ದ ಮಾಡ್ತಿತ್ತು ಎಂದು ಸಂಸದ ರಾಹುಲ್ ಗಾಂಧಿ  ಆರೋಪಿಸಿದ್ದಾರೆ.

ಬರ್ತ್‌ಡೇ ದಿನ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ ಅವರು ಟ್ವೀಟ್ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಚೀನಾದವರು ಪೂರ್ವ ಯೋಜಿತ ಪ್ಲಾನ್‌ನಂತೆ ಅಟ್ಯಾಕ್ ಮಾಡಿದ್ದಾರೆ. ಆಗ ಕೇಂದ್ರ ಸರ್ಕಾರ ನಿದ್ದೆ ಮಾಡುತ್ತಿತ್ತು. ಜೊತೆಗೆ ಏನೂ ಸಮಸ್ಯೆ ಇಲ್ಲ ಎಂದು ವಾದ ಮಾಡುತ್ತಲೇ ಇತ್ತು. ಇದಕ್ಕೆ ನಮ್ಮ ಯೋಧರು ಬೆಲೆ ತೆರಬೇಕಾಯಿತು ಎಂದು ಟ್ವೀಟ್ ಮಾಡಿದ್ದಾರೆ.

Fact Check: ಲಡಾಖ್‌ನಲ್ಲಿ ಹುತಾತ್ಮರಾಗಿದ್ದು 57 ಜನ?

ಚೀನಾ ದಾಳಿಯ ನಂತರ ಸರಣಿ ಟ್ವೀಟ್‌ಗಳನ್ನು ಮಾಡಿದ ರಾಹುಲ್ ಗಾಂಧಿ, ಪ್ರಧಾನಿ ಯಾಕೆ ಮೌನಿಯಾಗಿದ್ದಾರೆ..? ಯಾಕೆ ಎಲ್ಲವನ್ನೂ ಮರೆ ಮಾಚುತ್ತಿದ್ದಾರೆ. ಏನಾಯಿತು ಎಂಬುದು ನಾವು ತಿಳಿಯಬೇಕು ಎಂದು ಟ್ವೀಟ್ ಮಾಡಿದ್ದರು.

ಚೀನಾದ 371 ವಸ್ತುಗಳ ಆಮದಿಗೆ ನಿರ್ಬಂಧ

ನಿನ್ನೆ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದ ರಾಹುಲ್ ಗಾಂಧಿ ಅವರು, ಚೀನಾದಲ್ಲಿ ಹುತಾತ್ಮರಾದ ಯೋಧರ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದರು. ಶಸ್ತ್ರಗಳಿಲ್ಲದೆ ನಮ್ಮ ಯೋಧರನ್ನು ಯಾರು ಗಡಿಗೆ ಕಳುಹಿಸಿದರು..? ಯಾಕೆ ಕಳುಹಿಸಿದರು..? ಇದಕ್ಕೆ ಯಾರು ಜವಾಬ್ದಾರಿ..? ಎಂದು ಪ್ರಶ್ನಿಸಿದ್ದಾರೆ.

ಕೆಪಿಸಿಸಿ ಕಿಸಾನ್ ಸಂಘದಿಂದ ರಾಹುಲ್ ಬರ್ತ್ ಡೇ ಆಚರಿಸಲಾಗಿದೆ. ಬರ್ತ್ ಡೇ ಅಂಗವಾಗಿ ರೈತರಿಗೆ ಉಚಿತ ಬಿತ್ತನೆ ಬೀಜ ವಿತರಣೆ ಮಾಡಲಾಗಿದ್ದು, ಕೆಪಿಸಿಸಿ ಕಿಸಾನ್ ಅಂಘದ ಅಧ್ಯಕ್ಷ ಸಚಿನ್ ಮಿಗಾ ಕಾರ್ಯಕ್ರಮ ಆಯೋಜಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬಿತ್ತನೆ ಬೀಜಗಳನ್ನ ವಿತರಿಸಿದ್ದಾರೆ.


"

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಿಪೇರಿಗೆ 5 ಗಂಟೆ ಬೇಕೆಂದ ರೈಲ್ವೆ ಅಧಿಕಾರಿಗಳು; ಸುತ್ತಿಗೆಯಿಂದ 10 ನಿಮಿಷದಲ್ಲಿ ಸರಿ ಮಾಡಿದ ಅಂಕಲ್
India Latest News Live: ರಿಪೇರಿಗೆ 5 ಗಂಟೆ ಬೇಕೆಂದ ರೈಲ್ವೆ ಅಧಿಕಾರಿಗಳು; ಸುತ್ತಿಗೆಯಿಂದ 10 ನಿಮಿಷದಲ್ಲಿ ಸರಿ ಮಾಡಿದ ಅಂಕಲ್