ಯೋಗ ದಿನ ಮನೆಯಲ್ಲೇ ಆಚರಿಸಿ: ಮೋದಿ

By Kannadaprabha NewsFirst Published Jun 19, 2020, 10:36 AM IST
Highlights

ಕೊರೋನಾ ವೈರಸ್‌ ಮಹಾಮಾರಿ ಈ ಬಾರಿಯ ಯೋಗ ದಿನಾಚರಣೆಗೂ ಅಡ್ಡಿಯಾಗಿದೆ. ಈ ಹಿನ್ನೆಲೆಯಲ್ಲಿ ಜೂ.21ರಂದು ವಿಶ್ವಯೋಗ ದಿನಾಚರಣೆಯನ್ನು ಮನೆಯಲ್ಲೇ ಆಚರಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಗುರುವಾರ ಕರೆ ನೀಡಿದ್ದಾರೆ.

ನವದೆಹಲಿ(ಜೂ.19): ಕೊರೋನಾ ವೈರಸ್‌ ಮಹಾಮಾರಿ ಈ ಬಾರಿಯ ಯೋಗ ದಿನಾಚರಣೆಗೂ ಅಡ್ಡಿಯಾಗಿದೆ. ಈ ಹಿನ್ನೆಲೆಯಲ್ಲಿ ಜೂ.21ರಂದು ವಿಶ್ವಯೋಗ ದಿನಾಚರಣೆಯನ್ನು ಮನೆಯಲ್ಲೇ ಆಚರಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಗುರುವಾರ ಕರೆ ನೀಡಿದ್ದಾರೆ.

6ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನೆಲೆಯಲ್ಲಿ ವಿಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿರುವ ಮೋದಿ, ಯೋಗದಿನವನ್ನು ಜನರೆಲ್ಲರೂ ಒಟ್ಟಿಗೆ ಸೇರಿ ಆಚರಿಸುತ್ತೇವೆ.

ಲಡಾಖ್ ಲಡಾಯಿ; ಚೀನಾ ಟೆಲಿ ಗೇರ್ ಬಳಕೆ ನಿಷೇಧಿಸಿದ BSNL! 

ಆದರೆ, ಈ ಬಾರಿ ಯೋಗವನ್ನು ಮನೆಯಲ್ಲಿ ಆಚರಿಸೋಣ, ನಿಮ್ಮ ಕುಟುಂಬ ಸದಸ್ಯರ ಜೊತೆ ಯೋಗ ದಿನವನ್ನು ಆಚರಿಸಿ ಎಂದು ಕರೆ ನೀಡಿದ್ದಾರೆ. ಕೊರೋನಾ ವೈರಸ್‌ ಚಲನಶೀಲನೆಯನ್ನು ಕಡಿಮೆ ಮಾಡಿರಬಹುದು ಎಂದರು.

ಚೀನಾದ 371 ವಸ್ತುಗಳ ಆಮದಿಗೆ ನಿರ್ಬಂಧ

ಆದರೆ, ನಮ್ಮ ಉತ್ಸಾಹವನ್ನು ಅಲ್ಲ. ಇಂದು ನಾವು ಸಾಮಾಜಿಕ ಅಂತರವನ್ನು ಪಾಲಿಸುತ್ತೇವೆ. ಆದರೆ, ಯೋಗ ಮನಸ್ಸು ಮತ್ತು ದೇಹದ ನಡುವಿನ ಅಂತರವನ್ನು ಕೊನೆಗೊಳಿಸುತ್ತದೆ ಎಂದು ಹೇಳಿದ್ದಾರೆ.

click me!