ಕೇರಳದಲ್ಲಿ ಯೋಧನ ಮೇಲೆ ದಾಳಿ ಮಾಡಿ ಬೆನ್ನಲ್ಲಿ ಪಿಎಫ್‌ಐ ಎಂದು ಬರೆದ ಪಿಎಫ್‌ಐ ಉಗ್ರರು

Published : Sep 26, 2023, 08:22 AM ISTUpdated : Sep 26, 2023, 08:28 AM IST
ಕೇರಳದಲ್ಲಿ ಯೋಧನ ಮೇಲೆ ದಾಳಿ ಮಾಡಿ ಬೆನ್ನಲ್ಲಿ ಪಿಎಫ್‌ಐ ಎಂದು ಬರೆದ ಪಿಎಫ್‌ಐ ಉಗ್ರರು

ಸಾರಾಂಶ

ಕೇರಳದಲ್ಲಿ ಭಾರತೀಯ ಸೇನೆಯ ಯೋಧನ ಮೇಲೆ ದಾಳಿ ನಡೆಸಿದ ಪಿಎಫ್‌ಐ ಸಂಘಟನೆಯ ದುರುಳರು ಆತನ ಬೆನ್ನ ಮೇಲೆ ಪಿಎಫ್ಐ ಎಂದು ಬರೆದ ಅವಮಾನಕಾರಿ ಘಟನೆ ಕೇಳರದ ಕೊಲ್ಲಂನಲ್ಲಿ ನಡೆದಿದೆ.

ಕೊಲ್ಲಂ: ಕೇರಳದಲ್ಲಿ ಭಾರತೀಯ ಸೇನೆಯ ಯೋಧನ ಮೇಲೆ ದಾಳಿ ನಡೆಸಿದ ಪಿಎಫ್‌ಐ ಸಂಘಟನೆಯ ದುರುಳರು ಆತನ ಬೆನ್ನ ಮೇಲೆ ಪಿಎಫ್ಐ ಎಂದು ಬರೆದ ಅವಮಾನಕಾರಿ ಘಟನೆ ಕೇಳರದ ಕೊಲ್ಲಂನಲ್ಲಿ ನಡೆದಿದೆ.  ಭಾರತೀಯ ಸೇನೆಯ ಯೋಧನ ಮೇಲೆ ದಾಳಿ ನಡೆಸಿದ 5 ರಿಂದ 6 ಜನರಿದ್ದ ದಾಳಿಕೋರರು ಆತನನ್ನು ಕಟ್ಟಿ ಹಾಕಿ ಬೆನ್ನಿನ ಮೇಲೆ ಹಸಿರು ಬಣ್ಣದಿಂದ ಪಿಎಫ್‌ಐ ಎಂದು ಬರೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಉಗ್ರ ಚಟುವಟಿಕೆಯ ಹಿನ್ನೆಲೆಯಲ್ಲಿ ಭಾರತದಲ್ಲಿ ಪಿಎಫ್‌ಐ ಸಂಘಟನೆಯನ್ನು (Popular Front of India) ಬ್ಯಾನ್ ಮಾಡಲಾಗಿದೆ. ರಾಷ್ಟ್ರೀಯ ತನಿಖಾ ದಳ (National Investigation Agency) ಹಾಗೂ ಜಾರಿ ನಿರ್ದೇಶನಾಲಯ (Enforcement Directorate) ಈ ಸಂಘಟನೆಯ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿದೆ. ಹೀಗಿದ್ದೂ, ಈ ಸಂಘಟನೆಯೂ ತೆರೆಮರೆಯಲ್ಲಿ ಕಾರ್ಯಾಚರಿಸುತ್ತಿದೆ ಎಂಬುದು ಈ ಘಟನೆಯಿಂದ ಸಾಬೀತಾಗಿದೆ. 

ಪೊಲೀಸರ ಕಂಡರೆ ದಾಳಿ ಮಾಡುವಂತೆ ನಾಯಿಗಳಿಗೆ ಟ್ರೇನಿಂಗ್: ಕೇರಳ ಡ್ರಗ್ಸ್‌ ವ್ಯಾಪಾರಿಯ ಭಯಾನಕ ಕುತಂತ್ರ

ಘಟನೆಗೆ ಸಂಬಂಧಿಸಿದಂತೆ ಯೋಧ ಶೈನ್‌ ಕುಮಾರ್ (Shine Kumar) ಅವರು ಪೊಲೀಸರಿಗೆ ದೂರು ನೀಡಿದ್ದು, ಈ ದೂರಿನಲ್ಲಿರುವಂತೆ ಕೊಲ್ಲಂನ ಕಡಕ್ಕಲ್‌ ಬಳಿ ತನ್ನ ಮನೆಯ ಸಮೀಪದಲ್ಲಿರುವ ರಬ್ಬರ್ ತೋಟದಲ್ಲಿ ಭಾನುವಾರ ರಾತ್ರಿ ಆರು ಜನರಿದ್ದ ಗುಂಪು ತನ್ನ ಮೇಲೆ ದಾಳಿ ನಡೆಸಿದೆ. ದಾಳಿಯ ನಂತರ ನನ್ನ ಕೈಗಳನ್ನು ಟೇಪ್‌ನಿಂದ ಸುತ್ತಿ ಬೆನ್ನಿನ ಮೇಲೆ ಪಿಎಫ್‌ಐ (PFI) ಎಂದು ಹಸಿರು ಬಣ್ಣದ ಪೈಂಟ್‌ನಲ್ಲಿ ಬರೆದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಈಗ ಕಡಕ್ಕಲ್ (Kadakkal) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. 

ಶೈನ್‌ ಕುಮಾರ್ ರಾಜಸ್ತಾನದಲ್ಲಿ ಸೇವೆಯಲ್ಲಿದ್ದರು. ಸೇನೆಯ ಇಲೆಕ್ಟ್ರಾನಿಕ್‌ ಹಾಗೂ ಮೆಕಾನಿಕಲ್ ಕೆಡರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ರಜೆಯಲ್ಲಿ ಕೇರಳದ ಕೊಲ್ಲಂನ ಕಡಕ್ಕಲ್‌ ಬಳಿ ಇರುವ ತಮ್ಮ ಊರಿಗೆ ಬಂದಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರೊಂದಿಗೆ ಭಾರತೀಯ ಸೇನೆ ಸಂಪರ್ಕದಲ್ಲಿದ್ದು ಹೆಚ್ಚಿನ ವಿಚಾರಣೆ ನಡೆಯುತ್ತಿದೆ. 

ಕೇರಳದಲ್ಲಿ ಪಿಎಫ್‌ಐಗೆ ಇಡಿ ಶಾಕ್‌: ರಾಜ್ಯದ 16 ಕಡೆ ದಾಳಿ

ಕೊಚ್ಚಿ: ನಿಷೇಧಿತ ಪಿಎಫ್‌ಐ (ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ) ಸಂಘಟನೆ ಮೇಲಿನ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಲಾಯ (ಇಡಿ) ಕೇರಳದ 16 ಕಡೆ ಸೋಮವಾರ ದಾಳಿ ನಡೆಸಿದೆ. ವಯನಾಡ್‌, ಕಲ್ಲಿಕೋಟೆ, ಕೊಚ್ಚಿ, ಎರ್ನಾಕುಲಂ, ತ್ರಿಶೂರ್‌ ಮತ್ತು ಮಲಪ್ಪುರಂ ಸೇರಿದಂತೆ ಸಂಘಟನೆಯ ಮಾಜಿ ನಾಯಕರಿಗೆ ಸಂಬಂಧಿಸಿದ ಮನೆ ಮತ್ತು ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಸಂಘಟನೆಯ ಹಣದ ಮೂಲವನ್ನು ತಿಳಿಯಲು ಈ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಪೂಜೆ ನಂತರ ಭಾರತೀಯ ವಾಯುಪಡೆಗೆ ಸೇರ್ಪಡೆಯಾದ ಸಿ 295 ವಿಮಾನ

ಇನ್ನು ವಯನಾಡ್‌ ಮತ್ತು ತ್ರಿಶೂರುಗಳಲ್ಲಿ ಸಂಘಟನೆಯ ಮಾಜಿ ಮುಖಂಡರಾದ ಅಬ್ದುಲ್‌ ಸಮದ್‌ ಹಾಗೂ ಲತೀಫ್‌ ಮನೆಗೂ ಇಡಿ ದಾಳಿ ನಡೆಸಲಾಗಿದೆ. ಸದ್ಯ ಶೋಧ ಕಾರ್ಯಾಚರಣೆಯಲ್ಲಿ ಸಿಕ್ಕ ಸಾಕ್ಷ್ಯಗಳು ಅಥವಾ ಇ.ಡಿ. ವಶಕ್ಕೆ ಪಡೆದ ವಸ್ತುಗಳ ಕುರಿತು ಯಾವುದೇ ಮಾಹಿತಿ ಇಲ್ಲ. ಕಾನೂನು ಬಾಹಿರ ಚಟುವಟಿಕೆಗಳ ಆರೋಪದ ಮೇಲೆ ಕಳೆದ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರವು ಪಿಎಫ್‌ಐ ಸಂಘಟನೆಯನ್ನು 5 ವರ್ಷಗಳ ಕಾಲ ನಿಷೇಧಿಸಿತ್ತು.

ಸುಪ್ರೀಂನಲ್ಲಿ ಮೂಕ ವಕೀಲೆ ವಾದ ಮಂಡನೆ: ಇತಿಹಾಸದಲ್ಲೇ ಇಂತಹ ವಾದ ಇದೇ ಮೊದಲು 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್
ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ