ವಾರದಲ್ಲಿ ವಾಯುಸೇನೆಯಲ್ಲಿ 2 ದುರಂತ: ಪ್ಯಾರಾಚೂಟ್ ತೆರೆದುಕೊಳ್ಳದೇ ಏರ್‌ಪೋರ್ಸ್ ಇನ್ಸ್ಟ್ರಕ್ಟರ್ ಸಾವು

ಭಾರತೀಯ ವಾಯುಸೇನೆಗೆ ನಾಲ್ಕೇ ದಿನದಲ್ಲಿ ಎರಡು ದೊಡ್ಡ ನಷ್ಟ ಸಂಭವಿಸಿದೆ. ಆಗ್ರಾದಲ್ಲಿ ಪ್ಯಾರಾಚೂಟ್‌ ಜಂಪ್‌ ವೇಳೆ ಗಂಭೀರ ಗಾಯಗೊಂಡಿದ್ದ ವಾಯುಸೇನೆಯ ಇನ್ಸ್ಟ್ರಕ್ಟರ್‌ ಒಬ್ಬರು  ಸಾವನ್ನಪ್ಪಿದ್ದಾರೆ.

Indian Air Force Loses Two warriors in week IAF Instructor Dies in Parachute Accident in Agra

ನವದೆಹಲಿ: ಭಾರತೀಯ ವಾಯುಸೇನೆಗೆ ನಾಲ್ಕೇ ದಿನದಲ್ಲಿ ಎರಡು ದೊಡ್ಡ ನಷ್ಟ ಸಂಭವಿಸಿದೆ. ಆಗ್ರಾದಲ್ಲಿ ಪ್ಯಾರಾಚೂಟ್‌ ಜಂಪ್‌ ವೇಳೆ ಗಂಭೀರ ಗಾಯಗೊಂಡಿದ್ದ ವಾಯುಸೇನೆಯ ಇನ್ಸ್ಟ್ರಕ್ಟರ್‌ ಒಬ್ಬರು  ಸಾವನ್ನಪ್ಪಿದ್ದಾರೆ. ಹೀಗಾಗಿ ನಾಲ್ಕೇ ದಿನದಲ್ಲಿ ಭಾರತೀಯ ವಾಯುಸೇನೆ ತನ್ನ ಇಬ್ಬರೂ ಯೋಧರನ್ನು ಕಳೆದುಕೊಂಡಿದೆ. ಇದಕ್ಕೂ ಮೊದಲು ಬುಧವಾರ ಗುಜರಾತ್‌ನ ಜಾಮ್‌ನಗರದಲ್ಲಿ ನಡೆದ ಜಗ್ವಾರ್ ವಿಮಾನದ ದುರಂತದಲ್ಲಿ ಪೈಲಟ್‌ ಆಗಿದ್ದ, ವಾಯುಪಡೆಯ ಫ್ಲೈಟ್ ಲೆಫ್ಟಿನೆಂಟ್ ಸಿದ್ಧಾರ್ಥ್ ಯಾದವ್ ಅವರು ಸಾವಿಗೀಡಾಗಿದ್ದರು. 

ಈಗ ಆಗ್ರಾದಲ್ಲಿ ನಡೆದ ದುರಂತದಲ್ಲಿ ಸಾವನ್ನಪ್ಪಿದ ವಾಯುಸೇನೆಯ ಇನ್ಸ್ಟ್ರಕ್ಟರ್‌, ಆಕಾಶ್ ಗಂಗಾ ಸ್ಕೈಡೈವಿಂಗ್ ತಂಡದ ಪ್ಯಾರಾ ಜಂಪ್ ಬೋಧಕರಾಗಿದ್ದರು. ಆಗ್ರಾದಲ್ಲಿ ನಡೆದ ಡೆಮೊ ಡ್ರಾಪ್‌ ವೇಳೆ ಅವರು ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ. ಡೆಮೊ ಡ್ರಾಪ್‌ ಎಂಬುದು ತರಬೇತಿ ವ್ಯಾಯಾಮಕ್ಕೆ  ಬಳಸುವ ತಾಂತ್ರಿಕ ಪದವಾಗಿದೆ. 41 ವರ್ಷದ ವಾರಂಟ್ ಆಫೀಸರ್ ರಾಮ್‌ಕುಮಾರ್ ತಿವಾರಿ ಈ ದುರಂತದಲ್ಲಿ ಸಾವನ್ನಪ್ಪಿದವರು. ವಿಮಾನದಿಂದ ಹಾರುವ ವೇಳೆ ಪ್ಯಾರಾಚೂಟ್ ತೆರೆದುಕೊಳ್ಳದೇ ತಾಂತ್ರಿಕ ದೋಷ ಉಂಟಾಗಿದ್ದರಿಂದ ಅವರು ಸೀದಾ ನೆಲಕ್ಕೆ ಬಿದ್ದಿದ್ದರಿಂದ ಈ ಸಾವು ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ.  ತರಬೇತಿ ವೇಳೆ ಈ ದುರಂತ ನಡೆದಿದೆ. ಆಗ್ರಾ ಏರ್‌ಬೇಸ್‌ನಲ್ಲಿ ನಿನ್ನೆ ಬೆಳಗ್ಗೆ 9.30ಕ್ಕೆ ಈ ದುರಂತ ಸಂಭವಿಸಿದೆ. ತಿವಾರಿ ಅವರು ಯೋಧರಿಗೆ ಪ್ಯಾರಾ ಟ್ರೂಪಿಂಗ್ ತರಬೇತಿ ನೀಡುತ್ತಿದ್ದರು. ಆದರೆ ಪ್ಯಾರಾಚೂಟ್ ತೆರೆದುಕೊಳ್ಳದೇ ಅವರು ನೆಲಕ್ಕೆ ಬಿದ್ದಿದ್ದಾರೆ. ಕೂಡಲೇ ಜೊತೆಗಿದ್ದ ಅಧಿಕಾರಿಗಳು ಹಾಗೂ ಟ್ರೈನಿಗಳು ಅವರನ್ನು ಸೇನಾ ಆಸ್ಪತ್ರೆಗೆ ದಾಖಲಿಸಿದರಾದರೂ ಅವರು ಬದುಕುಳಿಯಲಿಲ್ಲ.

Latest Videos

ಆಗ್ರಾದಲ್ಲಿ ಡೆಮೊ ಡ್ರಾಪ್ ಸಮಯದಲ್ಲಿ ಗಾಯಗೊಂಡು ಐಎಎಫ್‌ನ ಆಕಾಶ್ ಗಂಗಾ ಸ್ಕೈಡೈವಿಂಗ್ ತಂಡದ ಪ್ಯಾರಾ ಜಂಪ್ ಬೋಧಕರೊಬ್ಬರು ಇಂದು ನಿಧನರಾದರು. ಐಎಎಫ್ ಅವರ ಈ ನಷ್ಟಕ್ಕೆ ತೀವ್ರ ಸಂತಾಪ ಸೂಚಿಸಿದೆ ಮತ್ತು ಈ ದುಃಖದ ಸಮಯದಲ್ಲಿ ಅವರ ಕುಟುಂಬದೊಂದಿಗೆ ದೃಢವಾಗಿ ನಿಲ್ಲುವ ಮೂಲಕ ಅವರ ಕುಟುಂಬಕ್ಕೆ ಹೃತ್ಪೂರ್ವಕ ಸಂತಾಪ ಸೂಚಿಸಿದೆ ಎಂದು ಭಾರತೀಯ ವಾಯುಪಡೆ ಟ್ವೀಟ್ ಮಾಡಿದೆ. 

ಕೌಟುಂಬಿಕ ಕಲಹ: ಅತ್ತೆಯ ಕೂದಲು ಹಿಡಿದು ಎಳೆದಾಡಿ ಹಲ್ಲೆ ಮಾಡಿದ ಸೊಸೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ


ಇದಕ್ಕೂ ಮೊದಲು ಬುಧವಾರ ನಡೆದ ಜಗ್ವಾರ್‌ ದುರಂತದಲ್ಲಿ ಮಡಿದ ಫ್ಲೈಟ್ ಲೆಫ್ಟಿನೆಂಟ್ ಸಿದ್ಧಾರ್ಥ್ ಯಾದವ್ ಅವರು ಹರ್ಯಾಣದ ರೇವಾರಿಯವರಾಗಿದ್ದು, ಅವರು ಚಲಾಯಿಸುತ್ತಿದ್ದ ಎರಡು ಸೀಟುಗಳ ಜಾಗ್ವಾರ್‌ ಜೆಟ್ ವಿಮಾನ್ ಜಾಮ್‌ನಗರದಲ್ಲಿ ಅಪಘಾತಕ್ಕೀಡಾದ ನಂತರ ಸಾವನ್ನಪ್ಪಿದ್ದರು. 28ರ ಹರೆಯದ ಸಿದ್ಧಾರ್ಥ್ ಅವರು ಎರಡು ವರ್ಷಗಳ ಹಿಂದಷ್ಟೇ ಫ್ಲೈಟ್ ಲೆಫ್ಟಿನೆಂಟ್ ಆಗಿ ಪದೋನ್ನತಿ ಹೊಂದಿದ್ದರು. 10 ದಿನಗಳ ಹಿಂದಷ್ಟೇ ಅವರಿಗೆ ವಿವಾಹ ನಿಶ್ಚಿತಾರ್ಥವಾಗಿದ್ದು, ನವೆಂಬರ್‌ನಲ್ಲಿ ಮದುವೆ ನಡೆಯಬೇಕಿತ್ತು. ಅಷ್ಟರಲ್ಲಿ ದುರಂತ ಸಂಭವಿಸಿ ಬಾರದ ಲೋಕಕ್ಕೆ ಹೋಗಿದ್ದಾರೆ. 

ಸಿದ್ದಾರ್ಥ್‌ ಯಾದವ್ ಅವರ ಅಂತ್ಯಸಂಸ್ಕಾರವೂ ಅವರ ಪೂರ್ವಜರ ಊರಾದ ಹರ್ಯಾಣದ ರೇವಾರಿ ಜಿಲ್ಲೆಯ ಮಜ್ರಾ ಭಾಲ್ಕಿ ಗ್ರಾಮದಲ್ಲಿ  ಸಕಲ ಮಿಲಿಟರಿ ಗೌರವಗಳೊಂದಿಗೆ ನಡೆಯಿತು. ಸಿದ್ಧಾರ್ಥ್‌ ಮದುವೆಯಾಗಬೇಕಿದ್ದ ಹುಡುಗಿ ಸೋನಿಯಾ ಯಾದವ್ ಕೂಡ ಈ ಸಂದರ್ಭದಲ್ಲಿ ಭಾರವಾದ ಹೃದಯದಿಂದ ಭಾಗಿಯಾಗಿದ್ದರು. ನಾವು ಪದಗಳಲ್ಲಿ ವರ್ಣಿಸಲಾಗದ ಬಾಂಧವ್ಯವನ್ನು ಹಂಚಿಕೊಂಡಿದ್ದೇವೆ. ನಾವು ನಿಶ್ಚಿತಾರ್ಥ ಮಾಡಿಕೊಂಡ ದಿನವೇ ಅವರು ಮತ್ತೆ ಕರ್ತವ್ಯಕ್ಕೆ ಮರಳಿದ್ದರು. ಅದು ಅವರ ದೇಶಕ್ಕೆ ಇದ್ದ ಬದ್ಧತೆ. ನಾನು ಅವರನ್ನು ಯಾವಾಗಲೂ ನನ್ನ ಹೃದಯದಲ್ಲಿ ಹೊತ್ತುಕೊಳ್ಳುತ್ತೇನೆ ಮತ್ತು ನಾನು ಯಾವಾಗಲೂ ಅವರ ಬಗ್ಗೆ ಹೆಮ್ಮೆಪಡುತ್ತೇನೆ ಎಂದು ಸೋನಿಯಾ ಅವರು ಭಾವುಕರಾಗಿದ್ದಾರೆ. 

ನಿಶ್ಚಿತಾರ್ಥ ಆಗಿ 10 ದಿನಕ್ಕೆ ಸಾವು; ʼಬೇಬಿ, ನೀ ಕರ್ಕೊಂಡು ಹೋಗೋಕೆ ಬರ್ಲಿಲ್ಲʼ ಎಂದು ಗೋಳಿಟ್ಟ ಹುಡುಗಿ!

vuukle one pixel image
click me!