
ನವದೆಹಲಿ(ಜೂ.19): ಲಡಾಖ್ ಗಡಿಯಲ್ಲಿ ಭಾರತಯೀ ಸೇನೆ ಮೇಲಿನ ಚೀನಾ ದಾಳಿಗೆ ಖಂಡನೆ ವ್ಯಕ್ತವಾಗುತ್ತಿದೆ. ಇದರ ಜೊತೆಗೆ ಚೀನಾ ವಸ್ತುಗಳನ್ನು ನಿಷೇಧಿಸಲು ಕೇಂದ್ರ ಸರ್ಕಾರಕ್ಕೆ ಒತ್ತಡಗಳು ಕೇಳಿ ಬರುತ್ತಿದೆ. ಇದರ ಹಿನ್ನಲೆಯಲ್ಲಿ ಇದೀಗ ಕೇಂದ್ರ ಸರ್ಕಾರ ನೂತನ ಇ ಕಾಮರ್ಸ್ ಪಾಲಿಸಿಗೆ ಮುಂದಾಗಿದೆ. ಈ ಮೂಲಕ ಚೀನಾ ವಸ್ತುಗಳ ಅಬ್ಬರಕ್ಕೆ ಮೂಗುದಾರ ಹಾಕಲು ಕೇಂದ್ರ ಸರ್ಕಾರ ಪಾಲಿಸಿ ಜಾರಿಗೆ ತರುತ್ತಿದೆ.
ಗಲ್ವಾನ್ ಗಡಿಯಲ್ಲಿ ಉದ್ವಿಗ್ನ ಸ್ಥಿತಿ: ಯುದ್ಧ ವಿಮಾನ ಖರೀದಿಯಲ್ಲಿ ವಾಯುಸೇನೆ
ನೂತನ ಪಾಲಿಸಿ ಪ್ರಕಾರ ಭಾರತದಲ್ಲಿ ಮಾರಾಟವಾಗು ವಸ್ತುಗಳು ಭಾರತದಲ್ಲಿ ತಯಾರಾದ( ಮೇಡ್ ಇನ್ ಇಂಡಿಯಾ) ವಸ್ತುಗಳು ಅಥವಾ ವಿದೇಶದಲ್ಲಿ ತಯಾರಾದ ಉತ್ಪನ್ನಗಳನ್ನು ಸ್ಪಷ್ಟವಾಗಿ ನಮೂದಿಸಬೇಕು. ಪ್ರತಿ ಉತ್ಪನ್ನಗಳ ಮೇಲೆ ತಯಾರಾದ ದೇಶದ ಮಾಹಿತಿ ಇರಲೇಬೇಕು. ಈ ಮೂಲಕ ಗ್ರಾಹಕರಿಗೆ ಮೇಡ್ ಇನ್ ಇಂಡಿಯಾ ಉತ್ಪನ್ನಗಳು ಹಾಗೂ ವಿದೇಶಿ ಉತ್ಪನ್ನಗಳ ಮಾಹಿತಿ ಲಭ್ಯವಾಗಲಿದೆ. ಇದರಿಂದ ಗ್ರಾಹಕರು ಭಾರತದ ವಸ್ತುಗಳನ್ನು ಖರೀದಿಸಲು ಅನೂಕೂಲವಾಗಲಿದೆ.
ಚೀನಾದ 371 ವಸ್ತುಗಳ ಆಮದಿಗೆ ನಿರ್ಬಂಧ..
2019-2020 ಆರ್ಥಿಕ ವರ್ಷದಲ್ಲಿ ಭಾರತದಿಂದ ಬರೋಬ್ಬರಿ 47 ಬಿಲಿಯನ್ ಅಮೇರಿಕನ್ ಡಾಲರ್ ವ್ಯವಹಾರ ನಡೆಸಿದೆ. ಲಡಾಖ್ ಪ್ರಾಂತ್ಯದಲ್ಲಿ ನಡೆದ ದಾಳಿಯಿಂದ 20 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಹೀಗಾಗಿ ಚೀನಾ ಮೇಲಿನ ಆಕ್ರೋಶ ಹೆಚ್ಚಾಗಿದೆ. ಭಾರತದಲ್ಲಿ ಮಾರಾಟವಾಗುತ್ತಿರುವ ಹಲವು ಚೀನಾ ವಸ್ತುಗಳ ಮೇಲೆ ಮೇಡ್ ಇನ್ ಇಂಡಿಯಾ ಹಾಗೂ ಭಾರತದಲ್ಲಿನ ಕಚೇರಿ ವಿಳಾಸ ನೀಡಲಾಗಿದೆ.
ಕೆಲ ಬಿಡಿಭಾಗಗಳನ್ನು ಆಮದು ಮಾಡಿಕೊಂಡು ಇಲ್ಲಿ ಜೋಡಿಸಿ ಮೇಡ್ ಇನ್ ಇಂಡಿಯಾ ಎಂದು ಮಾರಾಟ ಮಾಡಲಾಗುತ್ತಿದೆ. ಇದೀಗ ನೂತನ ಪಾಲಿಸಿಯಿಂದ ಇದು ಸಾಧ್ಯವಿಲ್ಲ. ಪ್ರತಿಯೊಂದು ವಸ್ತು ಅಥವಾ ಉತ್ಪನ್ನಗಳ ಮೇಲೆ ಸ್ಪಷ್ಟವಾಗಿ ತಯಾರಾದ ದೇಶದ ವಿವರ ಹಾಕಲೇಬೇಕಾಗಿದೆ. ಈ ಪಾಲಿಸಿಯಿಂದ ಭಾರತ ಸ್ಥಳೀಯ ಉತ್ಪನ್ನಗಳ ಖರೀದಿಗೂ ಗ್ರಾಹಕರಿಗೆ ನೆರವಾಗಲಿದೆ. ವಿಳಾಸವೂ ನಮೂದಿಸಬೇಕಾದ ಕಾರಣ ಗ್ರಾಹಕರಿಗೆ ಭಾರತೀಯ ವಸ್ತುಗಳನ್ನು ಯಾವುದೇ ಗೊಂದಲವಿಲ್ಲದೆ ಖರೀದಿಸಬಹುದು.
ಶೀಘ್ರದಲ್ಲೇ ನೂತನ ಇ ಕಾಮರ್ಸ್ ಪಾಲಿಸಿ ಜಾರಿಯಾಗಲಿದೆ. ಈ ಕುರಿತು ನೀಲ ನಕ್ಷೆ ತಯಾರಾಗಿದ್ದು, ಅಂತಿಮ ರೂಪುರೇಶೆ ನೀಡಿ ಇ ಕಾಮರ್ಸ್ ಪಾಲಿಸಿ ಜಾರಿಯಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ