ಭಕ್ತರಿಗೆ ಶಾಕ್ ನೀಡಿದ ತಿರುಪತಿ ತಿಮ್ಮಪ್ಪ/ ದೇವರ ದರ್ಶನ ಪ್ರವೇಶ ಶುಲ್ಕ ಡಬಲ್/ ಆನ್ ಲೈನ್ ಟಿಕೆಟ್ ಬುಕ್ ಮಾಡುವವರು ಡಬಲ್ ಹಣ ನೀಡಬೇಕು
ತಿರುಪತಿ(ಜೂ. 19) ತಿರುಪತಿ ತಿರುಮಲ ದೇವಾಲಯ ಭಕ್ತರಿಗೆ ಒಂದು ಶಾಕ್ ನೀಡಿದೆ. ಆನ್ ಲೈನ್ ಮೂಲಕ ದರ್ಶನಕ್ಕೆ ಟಿಕೆಟ್ ಬುಕ್ ಮಾಡುತ್ತಿದ್ದವರು ಇನ್ನು ಮುಂದೆ ಡಬಲ್ ಹಣ ನೀಡಬೇಕಾಗುತ್ತದೆ.
ವಿಶೇಷ್ ದರ್ಶನಕ್ಕೆ 300 ರೂ. ಇದ್ದ ಶುಲ್ಕ ಡಬಲ್ ಆಗಿದೆ. ಜೂನ್ 19 ರಿಂದ ಜೂನ್ 30ರ ವರೆಗೆ ಈ ಶುಲ್ಕ ನಿಗದಿ ಮಾಡಲಾಗಿದೆ.
undefined
ಸದ್ಯ 6,750 ಭಕ್ತಾದಿಗಳಿಗೆ ಪ್ರತಿದಿನ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. 3,000 ಟಿಕೆಟ್ ಗಳನ್ನು ಆನ್ ಲೈನ್ ಮೂಲಕ ನೀಡಲಾಗುತ್ತಿದೆ. ಉಳಿದ 3,750 ಟಿಕೆಟ್ ಗಳನ್ನು ಟಿಟಿಡಿ ತನ್ನ ಕೌಂಟರ್ ಗಳಲ್ಲಿ ನೀಡುತ್ತಿದೆ.
ಇವನು ಬೆಂಗಳೂರಿನ ತಿರುಪತಿ ತಿಮ್ಮಪ್ಪ
ಆನ್ ಲೈನ್ ಮೂಲಕ 6,000 ಟಿಕೆಟ್ ನೀಡುವ ಯೋಚನೆಯನ್ನು ದೇವಾಲಯ ಮಾಡಿದ್ದು ಈಗಾಗಲೇ ಹೆಚ್ಚುವರಿಯಾಗಿ 250 ಟಿಕೆಟ್ ನೀಡಲಾಗುತ್ತಿದೆ. ದೇವಾಲಯಗಳ ದರ್ಶನಕ್ಕೆ ಸರ್ಕಾರ ಜೂನ್ 8 ರಿಂದ ಅವಕಾಶ ಮಾಡಿಕೊಟ್ಟಿತ್ತು.
ಕೊರೋನಾ ಲಾಕ್ ಡೌನ್ ಕಾರಣಕ್ಕೆ ದೇಶದ ಎಲ್ಲ ದೇವಾಲಯಗಳನ್ನು ಬಂದ್ ಮಾಡಲಾಗಿತ್ತು. ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ದೇವರ ದರ್ಶನ ಮಾಡಬೇಕು. ಆಯಾ ದೇವಾಲಯಗಳು ಮಾರ್ಗಸೂಚಿ ಪಾಲಿಸಬೇಕು ಎಂದು ತಿಳಿಸಿಲಾಗಿತ್ತು.