ಕೊರೋನಾ ಸೋಂಕಿತ ದೆಹಲಿ ಆರೋಗ್ಯ ಸಚಿವರ ಸ್ಥಿತಿ ಗಂಭೀರ; ಪ್ಲಾಸ್ಮಾ ಥೆರಪಿಗೆ ಮ್ಯಾಕ್ಸ್ ಆಸ್ಪತ್ರೆಗೆ ಶಿಫ್ಟ್!

By Suvarna NewsFirst Published Jun 19, 2020, 6:20 PM IST
Highlights

ಕೊರೋನಾ ಸೋಂಕಿನಿಂದ ರಾಜೀವ್ ಗಾಂಧಿ ಆಸ್ಪತ್ರೆ ದಾಖಲಾಗಿದ್ದ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಇದೀಗ ರಾಜೀವ್ ಗಾಂಧಿ ಆಸ್ಪತ್ರೆಯಿಂದ ಮ್ಯಾಕ್ಸ್ ಆಸ್ಪತ್ರೆಯ ಐಸಿಯುಗೆ ಶಿಫ್ಟ್ ಮಾಡಲಾಗಿದ್ದು, ಪ್ಲಾಸ್ಮಾ ಥೆರಪಿಗೆ ವೈದ್ಯ ತಂಡ ಮುಂದಾಗಿದೆ.

ದೆಹಲಿ(ಜೂ.19): ದೇಶದಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ನಗರಗಳ ಪರಿಸ್ಥಿತಿ ಗಂಭೀರವಾಗುತ್ತಿದೆ. ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿದೆ. ಇದೀಗ ದೆಹಲಿ ಪರಿಸ್ಥಿತಿ ಕೈಮಿರುವ ಹಂತಕ್ಕೆ ತಲುಪಿದೆ. ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಕೊರೋನಾ ಸೋಂಕಿನಿಂದ ಆಸ್ಪತ್ರೆ ದಾಖಲಾಗಿದ್ದಾರೆ. ಆದರೆ ಚೇತರಿಸಿಕೊಳ್ಳದ  ಕಾರಣ ಇದೀಗ ಅವರನ್ನು ರಾಜೀವ್ ಗಾಂಧಿ ಆಸ್ಪತ್ರೆಯಿಂದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಶ್ರೀರಾಮುಲು ನಿವಾಸ ಸೀಲ್‌ ಡೌನ್: ಸರ್ಕಾರಿ ಮನೆಯಿಂದ ಕಾಲ್ಕಿತ್ತ ಆರೋಗ್ಯ ಸಚಿವ

ಸತ್ಯೇಂದ್ರ ಜೈನ್ ಆರೋಗ್ಯ ಮತ್ತಷ್ಟು ಬಿಗಡಾಯಿಸಿದೆ.  ಶ್ವಾಸಕೋಶದಲ್ಲಿ ಸೋಂಕು ಉಲ್ಪಣಿಸಿದ ಕಾರಣ ಸಚಿವರನ್ನು ಮ್ಯಾಕ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.  ಐಸಿಯುಗೆ ಸ್ಥಳಾಂತರ ಮಾಡಲಾಗಿದ್ದು, ಇದೀಗ ವೈದ್ಯ ತಂಡ ಪ್ಲಾಸ್ಮಾ ಥೆರಪಿಗೆ ಮುಂದಾಗಿದೆ. 55 ವರ್ಷದ ಸತ್ಯೇಂದ್ರ ಜೈನ್ ನ್ಯುಮೋನಿಯಾ ಕಾಯಿಲೆಯಿಂದಲೂ ಬಳಲುತ್ತಿದ್ದಾರೆ. 

ಸಿಎಂ ಮನೆ ಬಾಗಿಲಿಗೂ ಬಂತು ಕೊರೋನಾ... ಶುರುವಾಗಿದೆ ಟೆನ್ಷನ್..ಟೆನ್ಷನ್..!.

ವೆಂಟಿಲೇಟರ್ ಮೂಲಕ ಉಸಿರಾಡುತ್ತಿರುವ ಸತ್ಯೇಂದ್ರ ಜೈನ್‌, ಆರೋಗ್ಯ ಸ್ಥಿತಿ ಹದಗೆಡುತ್ತಿರುವ ಕಾರಣ ವಿಶೇಷ ವೈದ್ಯ ತಂಡ ನಿಗಾ ವಹಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ದೆಹಲಿ ರಾಜ್ಯಪಾಲ ಅನಿಲ್ ಬೈಜಲ್, ದೆಹಲಿ ಆರೋಗ್ಯ ಸಚಿವರು ಶೀಘ್ರದಲ್ಲೇ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ.

ಕೊರೋನಾ ವೈರಸ್ ಸೋಂಕಿನಿಂದ ಜೂನ್ 17 ರಿಂದ ರಾಜೀವ್ ಆಸ್ಪತ್ರೆಗೆ ದಾಖಲಾಗಿದ್ದರು. 
 

click me!