ಕರ್ನಾಟಕ ಸೇರಿ 5 ರಾಜ್ಯದಲ್ಲಿ ಕೋವಿಡ್ ಸ್ಫೋಟ, ಒಂದೇ ದಿನ 8,822 ಕೇಸ್ !

By Suvarna NewsFirst Published Jun 15, 2022, 5:01 PM IST
Highlights
  • ಒಂದೇ ದಿನ ಶೇಕಡಾ 33.8% ರಷ್ಟು ಏರಿಕೆ ಕಂಡ ಕೊರೋನಾ
  • ಕಳೆದ 24 ಗಂಟೆಯಲ್ಲಿ ದಾಖಲಾಯ್ತು 8,822 ಹೊಸ ಕೇಸ್
  • ಕರ್ನಾಟಕ ಸೇರಿ 5 ರಾಜ್ಯಗಳಲ್ಲಿ ಕೋವಿಡ್ ಸ್ಫೋಟ

ನವದೆಹಲಿ(ಜೂ.15): ಕೊರೋನಾ ಆತಂಕ ಹೆಚ್ಚಾಗುತ್ತಿದೆ. ಪ್ರಕರಣ ಸಂಖ್ಯೆ ದಿನದಿಂದ ದಿನಕ್ಕೆ ಏರಿಕಯತ್ತ ಸಾಗುತ್ತಿದೆ. ಮಾಸ್ಕ್, ಸಾಮಾಜಿಕ ಅಂತರ ಸೇರಿದಂತೆ ಒಂದೊಂದೆ ನಿಯಮಗಳು ಜಾರಿಯಾಗುತ್ತಿದೆ. ಸೋಮವಾರ ಇಳಿಕೆಯಾಗಿದ್ದ ಕೊರೋನಾ ಇದೀಗ ಶೇಕಡಾ 33.8 ರಷ್ಟು ಏರಿಕೆ ಕಂಡಿದೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ 8,882 ಕೋವಿಡ್ ಕೇಸ್ ದಾಖಲಾಗಿದೆ.

ಕೋವಿಡ್ ಪ್ರಕರಣ ಸಂಖ್ಯೆ ಏರಿಕೆಯಿಂದ ಇದೀಗ ಸಕ್ರೀಯ ಪ್ರಕರಣಗಳ ಸಂಖ್ಯೆ 50,548 ದಿಂದ 53,637ಕ್ಕೆ ಏರಿಕೆಯಾಗಿದೆ. ಇಷ್ಟೇ ಅಲ್ಲ ಕಳೆದ 24 ಗಂಟೆಯಲ್ಲಿ 15 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಇದೀಗ ಸಾವಿನ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಆಸ್ಪತ್ರೆ ದಾಖಲಾಗುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಕೋವಿಡ್‌ನಿಂದ ಮೃತರಾದವರ ಒಟ್ಟು ಸಂಖ್ಯೆ 5,24,792. 

ಭಾರತದಲ್ಲಿ ಕೋವಿಡ್ ಸ್ಫೋಟ, ಮತ್ತೊಂದು ರಾಜ್ಯದಲ್ಲಿ ಕಠಿಣ ಮಾರ್ಗಸೂಚಿ ಪ್ರಕಟ!

ಕರ್ನಾಟಕ ಸೇರಿದಂತೆ 5 ರಾಜ್ಯಗಳಲ್ಲಿ ಕೋವಿಡ್ ಪ್ರಕರಣ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಯಲ್ಲಿ 2,956 ಕೋವಿಡ್ ಪ್ರಕರಣಗಳು ದಾಖಲಾಗಿದೆ. ಕೇರಳದಲ್ಲಿ 1,989 ಪ್ರಕರಣ ದಾಖಲಾಗಿದ್ದರೆ, ದೆಹಲಿಯಲ್ಲಿ 1,118 ಪ್ರಕರಣ ದಾಖಲಾಗಿದೆ. ಇನ್ನು ಕರ್ನಾಟಕದಲ್ಲಿ 594 ಕೇಸ್ ಪತ್ತೆಯಾಗಿದೆ. ಹರ್ಯಾಣದಲ್ಲಿ 430 ಪ್ರಕರಣ ಪತ್ತೆಯಾಗಿದೆ.

ಈ 5 ರಾಜ್ಯಗಳಲ್ಲಿ ದೇಶದ ಶೇಕಡಾ 80.33% ರಷ್ಟು ಕೋರನಾ ಪ್ರಕರಣ ವರದಿಯಾಗಿದೆ. ಮಹಾರಾಷ್ಟ್ರ ಒಂದರಲ್ಲಿ 33.51% ರಷ್ಟು ಕೇಸ್ ದಾಖಲಾಗಿದೆ. ಕಳೆದ 24 ಗಂಟೆಯಲ್ಲಿ 5,718 ಮಂದಿ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ಪ್ರತಿ ದಿನ ಕೋವಿಡ್‌ನಿಂದ ಗುಣಮುಖರಾಗುವವರ ಸಂಖ್ಯೆ ಶೇಕಡಾ 98.66%ಕ್ಕೆ ಏರಿಕೆಯಾಗಿದೆ. ಇದು ಸಮಾಧಾನಕರವಾಗಿದೆ.

ಕೋವಿಡ್‌ನಿಂದ ಆಸ್ಪತ್ರೆ ದಾಖಲಾಗುವ ಸಂಖ್ಯೆ ಏರಿಕೆ ಬೆನ್ನಲ್ಲೇ ಕೇಂದ್ರದಿಂದ ಮಹತ್ವದ ಸೂಚನೆ!

ಮತ್ತೆರಡು ಓಮಿಕ್ರಾನ್ ರೂಪಾಂತರಿ ವೈರಸ್ ಪತ್ತೆ
ರಾಷ್ಟ್ರರಾಜಧಾನಿ ದೆಹಲಿ ಮತ್ತು ಮುಂಬೈನಲ್ಲಿ ದೈನಂದಿನ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದ್ದು, ಮಂಗಳವಾರ ದೆಹಲಿಯಲ್ಲಿ 1,118 ಪ್ರಕರಣಗಳು ದಾಖಲಾಗಿವೆ. ಸೋಮವಾರಕ್ಕೆ ಹೋಲಿಸಿದರೆ 504 ಪ್ರಕರಣಗಳು ಹೆಚ್ಚಾಗಿವೆ. ಇದೇ ಅವಧಿಯಲ್ಲಿ ಇಬ್ಬರು ಸೋಂಕಿತರು ಸಾವಿಗೀಡಾಗಿದ್ದಾರೆ. ಇನ್ನೂ ಮಹಾರಾಷ್ಟ್ರದಲ್ಲಿ 2,956 ಪ್ರಕರಣಗಳು ದಾಖಲಾಗಿದ್ದು, ನಾಲ್ವರು ಸಾವಿಗೀಡಾಗಿದ್ದಾರೆ. ಸೋಮವಾರಕ್ಕಿಂತ 1,071 ಪ್ರಕರಣಗಳು ಹೆಚ್ಚಾಗಿವೆ. ಇನ್ನು ದೆಹಲಿಯಲ್ಲಿ ಪಾಸಿಟಿವಿಟಿ ದರ ಶೇ.6.5ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 18 ಸಾವಿರಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದ ಥಾಣೆಯಲ್ಲಿ ಮತ್ತಿಬ್ಬರು ಸೋಂಕಿತರಲ್ಲಿ ಒಮಿಕ್ರೋನ್‌ನ ರೂಪಾಂತರಿಯಾದ ಬಿಎ.5 ಸೋಂಕು ಕಾಣಿಸಿಕೊಂಡಿದೆ.

 ಮಂಗಳವಾರ(ಜೂ.14) ಮುಂಜಾನೆ 8 ಗಂಟೆಗೆ ದೇಶದಲ್ಲಿ 6,594 ಪ್ರಕರಣಗಳು ದಾಖಲಾಗಿತ್ತು. 6 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ತನ್ಮೂಲಕ ಒಟ್ಟು ಪ್ರಕರಣಗಳು 4.32 ಕೋಟಿಗೆ, ಒಟ್ಟು ಸಾವು 5.24 ಲಕ್ಷಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 2,553 ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು, ಸಕ್ರಿಯ ಸೋಂಕಿನ ಸಂಖ್ಯೆ 50,548ಕ್ಕೆ ಏರಿಕೆಯಾಗಿದೆ. ಇನ್ನು ದೈನಂದಿನ ಪಾಸಿಟಿವಿಟಿ ದರ ಶೇ.2.05 ಮತ್ತು ವಾರದ ಪಾಸಿಟಿವಿಟಿ ದರ ಶೇ.2.32ರಷ್ಟಿದೆ. ದೇಶದಲ್ಲಿ ಈವರೆಗೆ 195.35 ಕೋಟಿ ಡೋಸ್‌ ಲಸಿಕೆ ವಿತರಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

click me!