ಮುಂಬೈ ವಿಮಾನ ನಿಲ್ದಾಣದಲ್ಲಿ ಸೋಲಾರ್,ಪವನ ಶಕ್ತಿ ವಿದ್ಯುತ್, ದೇಶದಲ್ಲೇ ಮೊದಲ ಹೈಬ್ರಿಡ್ ಯೋಜನೆ!

By Suvarna NewsFirst Published Jun 15, 2022, 4:17 PM IST
Highlights
  • ಹೈಬ್ರಿಡ್ ವಿದ್ಯುತ್ ಯೋಜನೆ ಹೊಂದಿದ ದೇಶದ ಮೊದಲ ವಿಮಾನ ನಿಲ್ದಾಣ
  • ಸೋಲಾರ್ ಹಾಗೂ ವಿಂಡ್ ಶಕ್ತಿ ಮೂಲಕ ವಿದ್ಯುತ್ ಉತ್ಪಾದನೆ
  • ವಿಮಾನ ನಿಲ್ದಾಣದ ಮೇಲಿನ ರೂಫ್‌ನಲ್ಲಿ ಸೋಲಾರ್ ಅಳವಡಿಕೆ

ಮುಂಬೈ(ಜೂ.15): ಮುಂಬೈನ ಚತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಈಗಾಗಲೇ ಹಲವು ದಾಖಲೆ ಬರೆದಿದೆ. ಅತೀ ಹೆಚ್ಚು ವಿಮಾನ ಪ್ರಯಾಣ ಸೇರಿದಂತೆ ಹಿರಿಮೆಗೂ ಪಾತ್ರವಾಗಿದೆ. ಇದೀಗ ದೇಶದಲ್ಲೇ ಮೊದಲ ಹೈಬ್ರಿಡ್ ವಿದ್ಯುತ್ ಯೋಜನೆ ಅಳವಡಿಸಿದ ವಿಮಾನ ನಿಲ್ದಾಣ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ.

ವಿಮಾನ ನಿಲ್ದಾಣದಲ್ಲಿನ ವಿದ್ಯುತ್ ಬಳಕೆದೆ ಸೋಲಾರ್ ಹಾಗೂ ಪವನ ಶಕ್ತಿ ವಿದ್ಯುತ್ ಯೋಜನೆ ಜಾರಿಗೆ ತಂದಿದೆ. ಇದರಿಂದ ಸೌರಶಕ್ತಿ ಹಾಗೂ ಪವನ ಶಕ್ತಿ ಮೂಲಕ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಇಷ್ಟೇ ಅಲ್ಲ ಈ ಮೂಲಕ ವಿಮಾ ನಿಲ್ದಾಣದ ಬಹುತೇಕ ಬಳಕೆಗೆ ಇದೇ ವಿದ್ಯುತ್ ಶಕ್ತಿಯನ್ನು ಉಪಯೋಗಿಸಲಾಗುತ್ತಿದೆ. ಇದರಿಂದ ಅತೀ ಕಡಿಮೆ ವೆಚ್ಚದಲ್ಲಿ ವಿದ್ಯುತ್ ಪೂರೈಕೆಯಾಗಲಿದೆ. ನಿಲ್ದಾಣದ ನಿರ್ವಹಣಾ ವೆಚ್ಚ ಕಡಿಮೆಯಾಗಲಿದೆ.

Flight Miss ವಿಮಾನ ನಿಲ್ದಾಣದಲ್ಲಿ ಇದಕ್ಕಿದ್ದಂತೆ ಅಶ್ಲೀಲ ಚಿತ್ರ ಪ್ರದರ್ಶನ, ಹಲವರ ಫ್ಲೈಟ್ ಮಿಸ್!

ನವೀಕರಿಸಬಹುದಾದ, ಸ್ವಚ್ಚ, ಹಸಿರು ಹಾಗೂ ಪರಿಸರ ಸ್ನೇಹಿ ಯೋಜನೆ ಇದಾಗಿದ್ದು, ಭವಿಷ್ಯದಲ್ಲಿನ ಹಲವು ಸಮಸ್ಯೆಗಳಿಗೂ ಉತ್ತರವಾಗಿದೆ. ಸೋಲಾರ್ ಹಾಗೂ ವಿಂಡ್ ಪವರ್ ಪ್ಲಾಂಟ್ ಕಾರ್ಯನಿರ್ವಹಿಸಲು ತಂತ್ರಜ್ಞಾನವನ್ನು ಇಲ್ಲಿ ಬಳಕೆ ಮಾಡಲಾಗಿದೆ. ಇದರಿಂದ ಎರಡು ಶಕ್ತಿಗಳು ವಿದ್ಯುತ್ ಉತ್ಪಾದನೆ ಮಾಡಲಿದೆ. 

ಮುಂಬೈನ ವಿಮಾನ ನಿಲ್ದಾಣದಲ್ಲಿ ಪವನ ಶಕ್ತಿ ಪ್ಲಾಂಟ್ ಅಳವಡಿಸಲಾಗಿದೆ. ಇನ್ನು ನಿಲ್ದಾಣದ ರೂಫ್‌ಗಳಲ್ಲಿ ಸೋಲಾರ್ ಅಳವಡಿಕೆ ಮಾಡಲಾಗಿದೆ. ವಿಂಡ್‌ಸ್ಟ್ರೀಮ್ ಎನರ್ಜಿ ಟೆಕ್ನಾಲಜಿ ಇಂಡಿಯಾ ಪ್ರವೈಟ್ ಲಿಮಿಟೆಡ್ ಸಹಯೋಗದಲ್ಲಿ ಈ ಹೈಬ್ರಿಡ್ ವಿದ್ಯುತ್ ಯೋಜನೆ ಅಳವಡಿಸಲಾಗಿದೆ.

ಇದು ನಿರ್ವಹಣಾ ವೆಚ್ಚವೂ ಕಡಿಮೆಯಾಗಿದೆ. ಇದರಿಂದ ಸುಲಭವಾಗಿ ಹಾಗೂ ಅತೀ ಕಡಿಮೆ ವೆಚ್ಚದಲ್ಲಿ ನಿಲ್ದಾಣದ ಅವಶ್ಯಕತೆಗಳಿಗೆ ವಿದ್ಯುತ್ ಪೂರೈಕೆಯಾಗಲಿದೆ. ಈ ಹೈಬ್ರಿಡ್ ವಿದ್ಯುತ್ ಯೋಜನೆ ಅಳವಡಿಸಿ ದೇಶದ ಮೊದಲ ವಿಮಾನ ನಿಲ್ದಾಣ ಅನ್ನೋ ಹೆಗ್ಗಳಿಕೆಗೆ ಮುಂಬೈ ವಿಮಾನ ನಿಲ್ದಾಣ ಪಾತ್ರವಾಗಿದೆ.

ಕರ್ನಾಟಕದಲ್ಲೂ ಇದೇ ರೀತಿ ನವೀಕರಿಸಬಹುದಾದ ಇಂಧನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ವಿಮಾನ ನಿಲ್ದಾಣ, ಬಸ್ ನಿಲ್ದಾಣ, ಸರ್ಕಾರಿ ಕಚೇರಿಗಳಲ್ಲಿ ಸೋಲಾರ್ ಪವರ್ ಬಳಕೆಗೆ ಅವಕಾಶ ಕಲ್ಪಿಸಲು ಯೋಜನೆ ರೂಪಿಸಲಾಗಿದೆ. ಇತ್ತೀಚೆಗೆ ನವೀಕರಿಸಬಹುದಾದ ಇಂಧನ ನೀತಿಗೆ ಸಚಿವ ಸಂಪುಟ ಸಮ್ಮತಿ ನೀಡಿದೆ.

ನಡು ಆಗಸದಲ್ಲಿ ಅಸ್ವಸ್ಥಗೊಂಡ ಪೈಲಟ್‌: ವಿಮಾನ ಕೆಳಗಿಳಿಸಿದ ಸಾಮಾನ್ಯ ಪ್ರಯಾಣಿಕ

ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಹೂಡಿಕೆಗೆ ಉತ್ತೇಜನ, ಉದ್ಯೋಗ ಅವಕಾಶ, ಹಸಿರು ಇಂಧನ ಉತ್ಪಾದನೆ ಸೇರಿದಂತೆ ಇತರೆ ಉದ್ದೇಶಗಳನ್ನೊಂಡ ಕರ್ನಾಟಕ ನವೀಕರಿಸಬಹುದಾದ ಇಂಧನ ನೀತಿ-2022-27’ಕ್ಕೆ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿ ಮಹತ್ವದ ತೀರ್ಮಾನ ಕೈಗೊಂಡಿದೆ.

ಬುಧವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನ ಬೇಡಿಕೆಯನ್ನು ಪೂರೈಸಲು ಲಭ್ಯ ಇರುವ ಸಂಪನ್ಮೂಲ ಬಳಕೆ ಮಾಡುವುದು. ವಿದ್ಯುತ್‌ ವಾಹನಗಳ ಬಳಕೆ ಮತ್ತು ಚಾರ್ಜಿಂಗ್‌ ವ್ಯವಸ್ಥೆಗೆ ಪ್ರೋತ್ಸಾಹ ನೀಡುವುದು ನೀತಿಯಲ್ಲಿರುವ ಅಂಶವಾಗಿದೆ ಎಂದು ಹೇಳಲಾಗಿದೆ. ನವೀಕರಿಸಬಹುದಾದ ಇಂಧನ ನೀತಿಯಿಂದ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅವಲಂಬನೆ ಪ್ರಮಾಣ ತಗ್ಗಿಸುವುದು ನೀತಿಯ ಪ್ರಮುಖ ಅಂಶವಾಗಿದೆ. ಪವನ-ಸೌರ ಹೈಬ್ರಿಡ್‌ ಯೋಜನೆಗೆ ಒತ್ತು. ಜೈವಿಕ ಮತ್ತು ತ್ಯಾಜ್ಯದಿಂದ ಇಂಧನ ಉತ್ಪಾದನೆಗೆ ಆದ್ಯತೆ ನೀಡುವುದು ನೀತಿಯಲ್ಲಿದೆ.

click me!