ಭಾರತದಲ್ಲಿ 12,847 ಕೋವಿಡ್ ಕೇಸ್ ಪತ್ತೆ, ಲಾಕ್‌ಡೌನ್ ಆತಂಕ ಇಲ್ಲ!

By Suvarna NewsFirst Published Jun 17, 2022, 4:02 PM IST
Highlights
  • ದೇಶದಲ್ಲಿ ಪ್ರತಿದಿನ 12 ಸಾವಿರ ಕೇಸ್ ಪತ್ತೆ
  • ಆತಂಕ ಹೆಚ್ಚಿಸಿದ ಕೊರೋನಾ ಹೆಚ್ಚಳ 
  • 14 ಸಾವು, ಕೇಂದ್ರ ಸರ್ಕಾರದ ಮಹತ್ವದ ಸೂಚನೆ

ನವದೆಹಲಿ(ಜೂ.17): ದೇಶದಲ್ಲಿ ಕೋವಿಡ್ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿದೆ. ಜೂನ್ ತಿಂಗಳಿಂದ ಕೋವಿಡ್ ಪ್ರಕರಣದಲ್ಲಿ ಗಣನೀಯ ಏರಿಕೆ ಕಂಡುಬಂದಿತ್ತು. ಇದೀಗ ಪ್ರತಿ ದಿನ ಪ್ರಕರಣ 12 ಸಾವಿರಕ್ಕೆ ಏರಿಕೆಯಾಗಿದೆ. ಶುಕ್ರವಾರ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಕೋವಿಡ್ ವರದಿ ಪ್ರಕಾರ ಕಳೆದ 24 ಗಂಟೆಯಲ್ಲಿ 12,847 ಕೋವಿಡ್ ಪ್ರಕರಣ ಪತ್ತೆಯಾಗಿದೆ.

ಗುರುವಾರ 12,213 ಪ್ರಕರಣ ಪತ್ತೆಯಾಗಿತ್ತು. ಇಂದು ಸರಿಸುಮಾರು 600 ಕೇಸ್ ಹೆಚ್ಚಳವಾಗಿದೆ. 14 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಇದರೊಂದಿಗೆ ಕೋವಿಡ್‌ಗೆ ಬಲಿಯಾದವರ ಸಂಖ್ಯೆ  5,24,817ಕ್ಕೆ ಏರಿಕೆಯಾಗಿದೆ. ಸಾವಿನ ಪ್ರಮಾಣ ಸದ್ಯ ಶೇಕಡಾ 1.21. ಸಕ್ರೀಯ ಪ್ರಕರಣಗಳ ಸಂಖ್ಯೆ ಶೇಕಡಾ  0.15ರಷ್ಟು ಹೆಚ್ಚಳವಾಗಿದೆ. 

Latest Videos

10ಕ್ಕಿಂತ ಹೆಚ್ಚು ಮಕ್ಕಳಿಗೆ ಕೋವಿಡ್‌ ಬಂದರೆ ಶಾಲೆಗೆ ರಜೆ!

ದೈನಂದಿನ ಕೋವಿಡ್ ಪಾಸಿಟಿವಿಟಿ ರೇಟ್ ಶೇಕಡಾ 2.47 ಕ್ಕೆ ಏರಿಕೆಯಾಗಿದೆ. ವಾರದ ಪಾಸಿಟಿವಿಟಿ ರೇಟ್ ಶೇಕಡಾ 2.41 ಕ್ಕೆ ಏರಿಕೆಯಾಗಿದೆ. ಸೋಂಕಿತರ ಗುಣಮುಖರ ಸಂಖ್ಯೆಯಲ್ಲಿ ಏರಿಕೆಯಾಗಿರುವುದು ಸಮಾಧಾನಕರವಾಗಿದೆ. ಸದ್ಯ ಕೋವಿಡ್ ರಿಕವರಿ ರೇಟ್ ಶೇಕಡಾ 98.64.  ದೇಶದಲ್ಲಿ ಇದುವರಗೆ 195.84 ಕೋಟಿ ಡೋಸ್ ನೀಡಲಾಗಿದೆ.

2020ರ ಆಗಸ್ಟ್ ತಿಂಗಳಲ್ಲಿ ಭಾರತದಲ್ಲಿ ಕೋವಿಡ್ ಪ್ರಕರಣ ಸಂಖ್ಯೆ 20 ಲಕ್ಷಕ್ಕೆ ಏರಿಕೆಯಾಗಿತ್ತು. ಇನ್ನು 2022ರ ಜನವರಿ ತಿಂಗಳ ವೇಳೆ ಈ ಪ್ರಕರಗಳ ಸಂಖ್ಯೆ 4 ಕೋಟಿ ದಾಟಿತ್ತು.

ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ.ಗುರುವಾರ 791 ಜನರಲ್ಲಿ ಸೋಂಕು ಕಾಣಿಸಿಕೊಂಡಿವೆ. ಪಾಸಿಟಿವಿಟಿ ದರ ಶೇ.3.26ಕ್ಕೆ ಏರಿದೆ. ಸೋಂಕಿನಿಂದ ಮೃತಪಟ್ಟವರದಿಯಾಗಿಲ್ಲ.ನಗರದಲ್ಲಿ ಸದ್ಯ4,199 ಸಕ್ರಿಯ ಸೋಂಕು ಪ್ರಕರಣಗಳಿದ್ದು, ಈ ಪೈಕಿ 31 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಐವರು ಐಸಿಯು ಮತ್ತು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದೆಲ್ಲರೂ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

37,572 ಮಂದಿ ಕೋವಿಡ್‌ ವಿರುದ್ಧ ಲಸಿಕೆ ಪಡೆದುಕೊಂಡಿದ್ದಾರೆ. 8,860 ಮಂದಿ ಮೊದಲ ಡೋಸ್‌, 22,250 ಮಂದಿ ಎರಡನೇ ಡೋಸ್‌ ಮತ್ತು 6,460 ಮಂದಿ ಮೂರನೇ ಡೋಸ್‌ ಲಸಿಕೆ ಪಡೆದಿದ್ದಾರೆ.

Covid Origin:ಚೀನಾ ಪ್ರಯೋಗಾಲಯದಿಂದ ಕೊರೋನಾ ವೈರಸ್ ಸೋರಿಕೆ ವಾದ ತಳ್ಳಿ ಹಾಕಲ್ಲ: ಡಬ್ಲ್ಯು ಎಚ್ ಒ

ಉಡುಪಿ: 5 ಕೋವಿಡ್‌ ಪ್ರಕರಣ
ಜಿಲ್ಲೆಯಲ್ಲಿ ಗುರುವಾರ 278 ಮಂದಿಯನ್ನು ಪರೀಕ್ಷೆಗೊಳಪಡಿಸಿದ್ದು, ಅವರಲ್ಲಿ 5 ಮಂದಿಗೆ ಸೋಂಕು ಪತ್ತೆಯಾಗಿದೆ. ಇದರಿಂದ ಪ್ರಸ್ತುತ ಜಿಲ್ಲೆಯಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 10ಕ್ಕೇರಿದೆ. ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 539 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ.
5 ವಾರದ ಬಳಿಕ ಜಾಗತಿಕ ಮರಣ ದರ ಶೇ.4ರಷ್ಟುಏರಿಕೆ

ಕಳೆದ ವಾರ 8700 ಮಂದಿ ಸೋಂಕಿತರ ಸಾವು: ಡಬ್ಲ್ಯುಎಚ್‌ಒ
5 ವಾರಗಳ ಬಳಿಕ ಜಾಗತಿಕವಾಗಿ ಕೋವಿಡ್‌ ಸೋಂಕಿತರ ಸಾವಿನ ಪ್ರಮಾಣದಲ್ಲಿ ಶೇ.4ರಷ್ಟುಏರಿಕೆ ದಾಖಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.ಕೋವಿಡ್‌ನ ಸಾಪ್ತಾಹಿಕ ಮೌಲ್ಯಮಾಪನ ವರದಿಯನ್ನು ಡಬ್ಲ್ಯುಎಚ್‌ಒ ಮಂಗಳವಾರ ಬಿಡುಗಡೆ ಮಾಡಿದ್ದು, ಕಳೆದ 1 ವಾರದಲ್ಲೇ ಜಾಗತಿಕವಾಗಿ 8700 ಮಂದಿ ಕೋವಿಡ್‌ನಿಂದಾಗಿ ಮೃತಪಟ್ಟಿದ್ದಾರೆ ಎಂದು ತಿಳಿಸಿದೆ. ಕೋವಿಡ್‌ ಮರಣ ದರವು ಅಮೆರಿಕದಲ್ಲಿ ಕಳೆದ ಒಂದೇ ವಾರದಲ್ಲಿ ಶೇ. 21ರಷ್ಟುಏರಿಕೆಯಾದರೆ, ಪಾಶ್ಚಿಮಾತ್ಯ ಫೆಸಿಫಿಕ್‌ ರಾಷ್ಟ್ರಗಳಲ್ಲಿ ಶೇ. 17ರಷ್ಟುಏರಿಕೆಯಾಗಿದೆ. ಅದೇ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಶೇ. 58ರಷ್ಟುಹಾಗೂ ಆಗ್ನೇಯ ಏಷ್ಯಾದಲ್ಲಿ ಶೇ.33 ರಷ್ಟುಮರಣ ದರ ಏರಿಕೆಯಾಗಿದೆ ಎಂದು ವರದಿ ಬಹಿರಂಗ ಪಡಿಸಿದೆ

click me!