ಭಾರತದ ಅಂಜು ಪಾಕಿಸ್ತಾನಕ್ಕೆ ತೆರಳಿ ನಾಸ್ರುಲ್ಲಾ ಮದುವೆಯಾಗಿದ್ದಾಳೆ. ಮತಾಂತರವಾಗಿರುವ ಅಂಜು ಇದೀಗ ಫಾತಿಮಾ ಆಗಿ ಬದಲಾಗಿದ್ದಾರೆ. ಆದರೆ ಅಂಜು ಈ ನಡೆಯಿಂದ ಭಾರತದಲ್ಲಿರುವ ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.
ಜೈಪುರ(ಆ.03) ಸಾಮಾಜಿಕ ಮಾಧ್ಯಮ ಮೂಲಕ ಪರಿಚಯವಾಗಿ ರಾಜಸ್ಥಾನದಿಂದ ಪಾಕಿಸ್ತಾನಕ್ಕೆ ತೆರಳಿ ನಾಸ್ರುಲ್ಲಾ ಮದುವೆಯಾದ ಅಂಜುಗೆ ಉಡುಗೊರೆಗಳ ಮಹಾಪೂರವೇ ಹರಿದು ಬರುತ್ತಿದೆ. ಇಸ್ಲಾಂಗೆ ಮತಾಂತರಗೊಂಡು ಫಾತಿಮಾ ಆಗಿ ಬದಲಾಗಿರುವ ಅಂಜುವನ್ನು ಪಾಕಿಸ್ತಾನದ ಹಲವರು ದಿಟ್ಟ ಹೆಣ್ಣು ಎಂದು ಬಣ್ಣಿಸಿದೆ. ಇತ್ತ ಅಂಜು ಹಾಗೂ ನಾಸ್ರುಲ್ಲಾ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಆದರೆ ಅಂಜು ಮತಾಂತರ ಹಾಗೂ ಮದುವೆ ನಡೆಯಿಂದ ಭಾರತದಲ್ಲಿರುವ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಭಾರತದಲ್ಲಿ ಮಕ್ಕಳನ್ನು ತಬ್ಬಲಿ ಮಾಡಿ, ಗಂಡನ ತ್ಯಜಿಸಿ ಪಾಕಿಸ್ತಾನಕ್ಕೆ ತೆರಳಿದ ಅಂಜು ನಡೆ ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಈ ಆಕ್ರೋಶದಿಂದ ಅಂಜು ಸಹೋದರ ಕೆಲಸ ಕಳೆದುಕೊಂಡಿದ್ದಾನೆ. ಅಂಜು ತಾಯಿ ಕುಟುಂಬ ಗ್ರಾಮ ತೊರೆಯುಲು ನಿರ್ಧರಿಸಿದೆ. ಅಂಜು ಜೊತೆಗಿದ್ದ ಮಕ್ಕಳಿಗೆ ಅತ್ತ ತಾಯಿಯೂ ಇಲ್ಲ, ಇತ್ತ ಅಪ್ಪನೂ ದೂರವಾಗಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಫೇಸ್‌ಬುಕ್ ಮೂಲಕ ಪರಿಚಯವಾಗಿ ಬಳಿಕ ವೀಸಾ ಪಡೆದು ಪಾಸಿಸ್ತಾನಕ್ಕೆ ತೆರಳಿದ ರಾಜಸ್ಥಾನದ ಅಲ್ವಾರ ಜಿಲ್ಲೆಯ ಅಂಜು, ತಾನು ಮೂರು ದಿನದಲ್ಲಿ ಭಾರತಕ್ಕೆ ವಾಪಸ್ ಬರುವುದಾಗಿ ಹೇಳಿದ್ದ ಅಂಜು ಮದುವೆಯಾಗಿ ಸಂಸಾರ ನಡೆಸುತ್ತಿದ್ದಾರೆ. ಭಾರತದಲ್ಲಿ ಇಬ್ಬರು ಮಕ್ಕಳನ್ನು ಬಿಟ್ಟು ಪಾಕಿಸ್ತಾನಕ್ಕೆ ತೆರಳಿದ ಅಂಜು, ನಾಸ್ರುಲ್ಲಾ ಮದುವೆಯಾಗಿದ್ದಾಳೆ. ಆದರೆ ಅಂಜು ನಡೆಯಿಂದ ಅಂಜು ತಾಯಿ ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.
ಪಾಕಿಸ್ತಾನಕ್ಕೆ ತೆರಳಿ ಮದುವೆ -ಮತಾಂತರದಲ್ಲಿ ISI ಷಡ್ಯಂತ್ರ, ಭಾರತದ ಅಂಜು ಪ್ರಕರಣ ತನಿಖೆಗೆ ಆದೇಶ!
ಅಂಜು ತಾಯಿ ಕುಟುಂಬವನ್ನು ಇದೀಗ ಅನುಮಾನದಿಂದ ನೋಡುತ್ತಿದ್ದಾರೆ. ಪಾಕಿಸ್ತಾನ ಜೊತೆಗೆ ಗೂಢಚರ್ಯೆ ಮಾಡುವಂತೆ ನೋಡುತ್ತಿದ್ದಾರೆ. ಹೀಗಾಗಿ ಕುಟುಂಬ ಗ್ರಾಮವನ್ನೇ ತೊರೆಯಲು ಮುಂದಾಗಿದೆ. ಇತ್ತ ಅಂಜು ಸಹೋದರ ಕೆಲಸ ಕಳೆದುಕೊಂಡಿದ್ದಾನೆ. ಅಂಜು ಮತಾಂತರಗೊಂಡಿರುವ ಕಾರಣ ಸಹೋದರನ ಕೆಲಸ ಕಳೆದುಕೊಂಡಿದ್ದಾನೆ. ಇತ್ತ ಅಂಜು ಭಾರತದ ಪತಿ ಅರವಿಂದ್ ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಂಜು ಜೊತೆಗಿನ ಸಂಬಂಧ ಹಳಸಲು ನಸ್ರುಲ್ಲಾ ಪ್ರೀತಿ ಕಾರಣ ಅನ್ನೋ ಮಾತುಗಳು ಕೇಳಿಬರುತ್ತಿದೆ.
ಅಂಜು ಪ್ರತಿ ದಿನ ಫೋನ್‌ನಲ್ಲೇ ಬ್ಯೂಸಿಯಾಗಿರುತ್ತಿದ್ದಳು. ಅನುಮಾನಗೊಂಡ ಪತಿ ಹಲವು ಬಾರಿ ವಿಚಾರಿಸಿದ್ದಾನೆ. ಈ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ. ಸಂಶಯ, ಅನುಮಾನ ಅನ್ನೋ ವಿಚಾರ ಮುಂದಿಟ್ಟು ಅಂಜು ಜಗಳ ತೆಗೆದಿದ್ದಾಳೆ. ಇದೇ ಕಾರಣಕ್ಕೆ ಮಾತು ಬಿಟ್ಟಿದ್ದಾರೆ. ತಾಯಿ ಜೊತೆ ಮಕ್ಕಳು ಬೆಳೆಯಲಿ ಎಂದು ಅರವಿಂದ್ ಕೂಡ ಸುಮ್ಮನಾಗಿ ತನ್ನ ಪಾಡಿಗೆ ತಾನಿದ್ದ. ಇದೀಗ ಈ ಮಕ್ಕಳನ್ನೇ ತಬ್ಬಲಿ ಮಾಡಿ ಅಂಜು ಪಾಕಿಸ್ತಾನದಲ್ಲಿ ನಲೆಸಿದ್ದಾಳೆ. ಕುಟುಂಬ ಸತತವಾಗಿ ಟೀಕೆ ಎದುರಿಸುತ್ತಿದೆ.
ಅಮ್ಮನಿಗೆ ಕಾಯುತ್ತಿದ್ದ ಮಕ್ಕಳು ತಬ್ಬಲಿ, ಇಸ್ಲಾಂಗೆ ಮತಾಂತರವಾಗಿ ಪಾಕ್‌ನ ನಾಸ್ರುಲ್ಲಾ ಮದ್ವೆಯಾದ ಅಂಜು!
ಅಂಜು ಲವ್ ಸ್ಟೋರಿಯಲ್ಲಿ ಹಲವು ತಿರುವುಗಳು ಕಾಣಿಸಿಕೊಳ್ಳುತ್ತಿದೆ. ಅಂಜು ಹೇಳಿಕೆಗೂ ನಡೆತೆಗೂ ವ್ಯತ್ಯಾಸಗಳಿವೆ. ಹೀಗಾಗಿ ಅಂಜು ವಿಚಾರದಲ್ಲಿ ವಿದೇಶಿ ಷಡ್ಯಂತ್ರ ನಡೆದಿರುವ ಸಾಧ್ಯತೆಯನ್ನು ಹಲವರು ವ್ಯಕ್ತಪಡಿಸಿದ್ದಾರೆ.