
ನವದೆಹಲಿ(ಆ.03) ಪ್ರವಾಸಿ ತಾಣ, ಸರ್ಕಾರಿ ಜಾಗ ಸೇರಿದಂತೆ ಹಲವೆಡೆ ತಲೆ ಎತ್ತುವ ಅಕ್ರಮ ಕಟ್ಟಡಗಳ ಮಾಫಿಯಾ ಅತೀ ದೊಡ್ಡ ಜಾಲಹೊಂದಿದೆ. ಇದಕ್ಕೆ ಕೆಲ ಅಧಿಕಾರಿಗಳು, ಸರ್ಕಾರಗಳು ನೆರವು ನೀಡಿದ ಉದಾಹರಣೆಗಳಿವೆ. ಇದೀಗ ತಾಜ್‌ಮಹಲ್ ಸುತ್ತಮುತ್ತ ಬರೋಬ್ಬರಿ 2,000 ಅಕ್ರಮ ಕಟ್ಟಡಗಳು ತಲೆ ಎತ್ತಿವೆ. ಸುಪ್ರೀಂ ಕೋರ್ಟ್ ಆದೇಶವನ್ನು ಲೆಕ್ಕಿಸದೆ ಕಳೆದ 7 ವರ್ಷದಲ್ಲಿ ಈ ಅಕ್ರಮ ಕಟ್ಟಡಗಳ ನಿರ್ಮಾಣವಾಗಿದೆ. ಈ ಅಕ್ರಮ ಕಟ್ಟಡಗಳ ತೆರವಿಗೆ ಭಾರತೀಯ ಪುರಾತತ್ವ ಇಲಾಖೆ ಆದೇಶ ನೀಡಿದರೂ ಸರ್ಕಾರ ಸ್ಪಂದಿಸಿಲ್ಲ.
ಕೇಂದ್ರ ಪುರಾತತ್ವ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ತಾಜ್‌ಮಹಲ್ ಸುತ್ತಮುತ್ತ 2,000 ಅಕ್ರಮ ಕಟ್ಟಡ ಪತ್ತೆಯಾಗಿದೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ತಾಜ್‌ಮಹಲ್ ಸುತ್ತ ಮುತ್ತ ಕನಿಷ್ಠ 500 ಮೀಟರ್ ಅಂತರದಲ್ಲಿ ಯಾವುದೇ ಕಟ್ಟಡ ನಿರ್ಮಾಣ, ಮಣ್ಣು ಅಗೆತ, ಕಾಮಾಗಾರಿಗಳು ನಡೆಸುವಂತಿಲ್ಲ. ಆದರೆ ತಾಜ್‌ಮಹಲ್ ಸುತ್ತಮುತ್ತ ವಾಣಿಜ್ಯ ಉದ್ದೇಶಕ್ಕಾಗಿ ಕಟ್ಟಡಗಳು ನಿರ್ಮಾಣವಾಗಿರುವುದನ್ನು ಭಾರತೀಯ ಪುರಾತತ್ವ ಇಲಾಖೆ ಪತ್ತೆ ಮಾಡಿದೆ.
ತಾಜ್ ಮಹಲ್ ಮ್ಯಾಜಿಕಲ್ ಸೌಂದರ್ಯ ಕಣ್ತುಂಬಿಕೊಳ್ಳಲು ಮೆಹತಾಬ್ ಬಾಗ್‌ಗೆ ಭೇಟಿ ನೀಡಿ
ಈಗಾಗಲೇ 500 ಅಕ್ರಮ ಕಟ್ಟಡಗಳ ತೆರವಿಗೆ ಭಾರತೀಯ ಪುರಾತತ್ವ ಇಲಾಖೆ ಆದೇಶ ನೀಡಿದೆ. ಇನ್ನುಳಿದ 1,500ಕ್ಕೂ ಹೆಚ್ಚು ಕಟ್ಟಡಗಳ ತೆರವಿಗೆ ಆಗ್ರಾ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೂಚನೆ ನೀಡಲಾಗಿದೆ. ಆದರೆ ತೆರವು ಕಾರ್ಯ ಮಾತ್ರ ಸಾಗುತ್ತಿಲ್ಲ.
ತಾಜ್‌ಮಹಲ್ ಸ್ಮಾರದ 500 ಮೀಟರ್ ಒಳಗಡೆ 249 ಅಕ್ರಮ ಕಟ್ಟಡಗಳು ನಿರ್ಮಾಣವಾಗಿದೆ. ತಾಜ್‌ಮಹಲ್ ಪಕ್ಕದಲ್ಲಿರುವ ಮನೆಗಳು ಇದೀಗ ಉದ್ಯಮಗಳಾಗಿ ಬದಲಾಗಿದೆ. ಹಲವು ಮನೆಗಳನ್ನು ಒಡೆದು ಬೃಹತ್ ಕಟ್ಟಡ ನಿರ್ಮಾಣ ಮಾಡಲಾಗಿದೆ. ವಾಣಿಜ್ಯ ಉದ್ದೇಶಕ್ಕಾಗಿ ಬಳಕೆ ಮಾಡಲಾಗುತ್ತಿದೆ. ತಾಜ್‌ಮಹಲ್ ಪ್ರಮುಖ ಪ್ರವಾಸಿ ತಾಣವಾಗಿರುವ ಕಾರಣ ಪ್ರವಾಸಿಗಳಿಗೆ ಹೋಂ ಸ್ಟೇ, ಲಾಡ್ಜ್ ಸೇರಿದಂತೆ ಇತರ ವಾಣಿಜ್ಯ ಉದ್ದೇಶದ ಕಟ್ಟಗಳೇ ಹೆಚ್ಚಿದೆ.
ಹಲವರು ತಮ್ಮ ಮನೆಗಳನ್ನು ಉದ್ಯಮಿಗಳಿಗೆ ಬಾಡಿಗೆ ನೀಡಿದ್ದಾರೆ. ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸಿ ವ್ಯಾಪಾರ ಮಾಡುತ್ತಿದ್ದಾರೆ. ಸ್ಮಾರಕವನ್ನು ಉಳಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್, ತಾಜ್‌ಮಹಲ್ ಸುತ್ತಮುತ್ತ ಯಾವುದೇ ಕಟ್ಟಡಗಳ ನಿರ್ಮಾಣ ಮಾಡುವಂತಿಲ್ಲ ಎಂದು ಆದೇಶ ನೀಡಿದೆ. ಆದರೆ ಈ ಆದೇಶಗಳನ್ನು ಗಾಳಿಗೆ ತೂರಲಾಗಿದೆ.
ಷಹಜಹಾನ್-ಮಮ್ತಾಜ್ ಪ್ರೀತಿ ಬಗ್ಗೆ ತನಿಖೆ ಮಾಡಿ, ತಾಜ್ ಮಹಲ್ ಧ್ವಂಸ ಮಾಡಿ: ಅಸ್ಸಾಂ ಬಿಜೆಪಿ ಶಾಸಕ!
ಅಕ್ರಮ ಕಟ್ಟಡ ನಿರ್ಮಾಣ ಕುರಿತು ಪ್ರತಿಕ್ರಿಯೆ ನೀಡಿರುವ ನವನೀತ್ ಸಿಂಗ್ ಚಹಾಲ್, ಈಗಾಗಲೇ ಸಮಿತಿ ರಚಿಸಲಾಗಿದೆ. ಅಕ್ರಮ ಕಟ್ಟಡಗಳ ಪೈಕಿ 25 ಕಟ್ಟಡಗಳನ್ನು ತೆರವು ಮಾಡಲಾಗಿದೆ. 44 ಕಟ್ಟಡಗಳನ್ನು ವಶಕ್ಕೆ ಪಡೆಯಲಾಗಿದೆ. ತೆರವು ಕಾರ್ಯ ಮುಂದುವರಿಯಲಿದೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ