Bengaluru City Police: ಸೈಬರ್‌ ವಂಚಕನಿಂದ 3 ಲಕ್ಷಕ್ಕೆ ಕೈಯೊಡ್ಡಿ, ಕೇರಳ ಪೊಲೀಸರಿಗೆ ಸಿಕ್ಕಿಬಿದ್ದರು

Published : Aug 03, 2023, 02:56 PM IST
Bengaluru City Police: ಸೈಬರ್‌ ವಂಚಕನಿಂದ 3 ಲಕ್ಷಕ್ಕೆ ಕೈಯೊಡ್ಡಿ, ಕೇರಳ ಪೊಲೀಸರಿಗೆ ಸಿಕ್ಕಿಬಿದ್ದರು

ಸಾರಾಂಶ

ರಾಜ್ಯದ ಉದ್ಯಮಿಯೊಬ್ಬ 26 ಲಕ್ಷ ರೂ. ಆನ್‌ಲೈನ್‌ ವಂಚಕರ ಪಾಲಾಗಿದೆ ಎಂದು ದೂರು ನೀಡಿದರೆ, ಅಪರಾಧಿ ಬಂಧಿಸಲು ತೆರಳಿ ಲಂಚಕ್ಕೆ ಕೈಯೊಡ್ಡಿದ ಪೊಲೀಸರು ಕೇರಳ ಪೊಲೀಸರಿಂದ ಅರೆಸ್ಟ್‌ ಆಗಿದ್ದಾರೆ.

ಬೆಂಗಳೂರು (ಆ.03): ಬೆಂಗಳೂರಿನ ಸಾಫ್ಟ್‌ವೇರ್‌ ಉದ್ಯಮಿಗೆ 26 ಲಕ್ಷ ರೂ. ವಂಚನೆ ಮಾಡಿದ್ದ ಸೈಬರ್‌ ಕ್ರೈಮ್‌ ಅಪರಾಧಿಯನ್ನು ಬಂಧಿಸಲು ತೆರಳಿದ್ದ ಬೆಂಗಳೂರು ಪೊಲೀಸರು, ಕಳ್ಳನ ಬಳಿಯೇ 3 ಲಕ್ಷ ಹಣಕ್ಕೆ ಬೇಡಿಕೆಯೊಡ್ಡಿ ಕೇರಳ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಈಗ ಕೇರಳ ಪೊಲೀಸ್‌ ಠಾಣೆಯಲ್ಲಿ ಮುದ್ದೆ ಮುರಿಯುತ್ತಿದ್ದಾರೆ.

ಜನಸಾಮಾನ್ಯರಿಗೆ ಅನ್ಯಾವಾದರೆ ನ್ಯಾಯ ಕೊಡಿಸಿ ಎಂದು ಪೊಲೀಸ್‌ ಠಾಣೆಗೆ ಹೋಗುತ್ತಾರೆ. ಆದರೆ, ಜನರು ಏನಾದರೂ ನಷ್ಟ ಅನುಭವಿಸಿ ಸಾಯಲಿ, ನಾವು ಲಂಚದ ಹಣ ತಿಂದು ತೇಗೋಣ ಎಂದು ದೂರು ಕೊಟ್ಟ ಅಮಾಯಕರಿಗೆ ವಂಚನೆ ಮಾಡಲು ಪೊಲೀಸರೇ ಕಳ್ಳರೊಂದಿಗೆ ಶಾಮೀಲಾಗಿರುವ ನೂರಾರು ಘಟನೆಗಳು ನಡೆದಿವೆ. ಹೀಗೆಯೇ, ಕರ್ನಾಟಕದಲ್ಲಿ 26 ಲಕ್ಷ ರೂ. ಹಣವನ್ನು ಕಳೆದುಕೊಂದ ಉದ್ಯಮಿಯ ದೂರು ಆಧರಿಸಿ, ತನಿಖೆ ವೇಳೆ ಅಪರಾಧಿ ಕೇರಳದಲ್ಲಿರುವುದನ್ನು ಪತ್ತೆಹಚ್ಚಿ ಬಂಧನಕ್ಕೆ ತೆರಳಿದ್ದು ಬೆಂಗಳೂರು ಪೊಲೀಸರು ಕಳ್ಳನೊಂದಿಗೆ ಶಾಮೀಲಾಗಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. 3 ಲಕ್ಷ ರೂ. ಕೊಟ್ಟರೆ ನಿಮ್ಮನ್ನು ಬಿಟ್ಟುಬಿಡುವುದಾಗಿ ಹೇಳಿ ಹಣ ಪಡೆಯುವಾಗ, ಅಲ್ಲಿನ ಕಳ್ಳ ಕೇರಳದ ಪೊಲೀಸರಿಗೆ ದೂರು ನೀಡಿದ್ದಾನೆ. ಲಂಚ ಪಡೆಯುತ್ತಿದ್ದ ಬೆಂಗಳೂರು ಪೊಲೀಸರನ್ನು ಕೇರಳದ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು- ಹೊಸೂರು ಮೆಟ್ರೋ ಮಾರ್ಗಕ್ಕೆ ಕನ್ನಡಿಗರ ವಿರೋಧ: ತಮಿಳರ ಸಂಖ್ಯೆ ಜಾಸ್ತಿಯಾಗ್ತಿದೆ ಎಂದು ಕರವೇ ಆಕ್ರೋಶ

ವೈಟ್‌ ಫೀಲ್ಡ್‌ ಪೊಲೀಸ್‌ ಠಾಣೆ ಪೊಲೀಸರು ಕೇರಳದ ಪೊಲೀಸರ ವಶ: ಬೆಂಗಳೂರು ಪೊಲೀಸರು ಕೇರಳದಲ್ಲಿ ಲಾಕ್ ಆಗಿರುವ ಘಟನೆ ಕರ್ನಾಟಕ ಪೊಲೀಸ್‌ ಇಲಾಖೆಯೇ ತಲೆ ತಗ್ಗಿಸುವ ಘಟನೆಯಾಗಿದೆ. ಹಣಕ್ಕೆ ಡಿಮ್ಯಾಂಡ್ ಮಾಡಿದ ಆರೋಪದಡಿ ಕೇರಳಕ್ಕೆ ತೆರಳಿದ್ದ ಬೆಂಗಳೂರಿನ ಸೈಬರ್ ಕ್ರೈಮ್‌ ವಿಭಾಗದ ಮೂರು ಪೊಲೀಸ್‌ ಅಧಿಕಾರಿಗಳನ್ನು ಬಂಧಿಸಲಾಗಿದೆ. ವೈಟ್ ಫೀಲ್ಡ್ ಸೈಬರ್ ಕ್ರೈಂ ಪೊಲೀಸರು ತೆರಳಿದ್ದರು. 

ಹಣ ವರ್ಗಾವಣೆ ಸುಳಿವು ಹಿಡಿದು ಕೇರಳಕ್ಕೆ ಹೊರಟ ಪೊಲೀಸರು:  ಉದ್ಯೋಗ ಕೊಡಿಸುವುದಾಗಿ ಸಾಫ್ಟ್ ವೇರ್ ಇಂಜಿನಿಯರ್‌ಗೆ ಮೋಸವಾಗಿತ್ತು. ಈ ಕುರಿತು ಚಂದಕ್ ಶ್ರೀಕಾಂತ್ ಎಂಬುವವರು ವೈಟ್‌ಫೀಲ್ಡ್‌ ಪೊಲೀಸ್‌ ಠಾಣೆಗೆ ತೆರಳಿ, ತನಗೆ ಆನ್ ಲೈನ್ ಮೂಲಕ 26 ಲಕ್ಷ ಹಣ ವಂಚನೆಯಾಗಿದೆ ಎಂದು ದೂರು ಕೊಟ್ಟಿದ್ದರು.ಈ ಪ್ರಕರಣ ತನಿಖೆ ನಡೆಸುತ್ತಿದ್ದ ವೈಟ್ ಫೀಲ್ಡ್ ಸಿಇಎನ್ ಪೊಲೀಸರಿಗೆ ಮೊದಲಿಗೆ ಮಡಿಕೇರಿಯ ಐಸಾಕ್ ಬಗ್ಗೆ ಸುಳಿವು ಸಿಕ್ಕಿತ್ತು. ಅಲ್ಲಿ ಹೋಗಿ ಪರಿಶೀಲನೆ ನಡೆಸಿದಾಗ ಆರೋಪಿ ಬ್ಯಾಂಕ್‌ ಖಾತೆಯಲ್ಲಿ 2 ಕೋಟಿ ರೂ. ಹಣ ವರ್ಗಾವಣೆ ಆಗಿರೋದು ಪತ್ತೆಯಾಗಿತ್ತು.

ಹಣಕ್ಕೆ ಬೇಡಿಕೆ ಇಟ್ಟವರ ವಿರುದ್ಧ ದೂರು ನೀಡಿದ ಆರೋಪಿ: ಇದರ ಜಾಡನ್ನು ಹಿಡಿದು ಕೇರಳಕ್ಕೆ ಹೊರಟಿದ್ದ ವೈಟ್ ಫೀಲ್ಡ್ ಸಿಇಎನ್ ಇನ್ಸ್ ಪೆಕ್ಟರ್ ಶಿವಪ್ರಕಾಶ್ ಅವರ ತಂಡವು ನೌಶಾದ್ ಎಂಬುವನಿಂದ ಆನ್ ಲೈನ್ ಫ್ರಾಡ್ ಆಗಿದೆ ಎಂಬುದು ಸುಳಿವು ಸಿಕ್ಕಿತ್ತು. ಆರೋಪಿಯನ್ನು ಬಂಧಿಸಲು ಕೇರಳದ ಕೊಚ್ಚಿ ನಗರದ ಕಲ್ಲಂಚೇರಿಗೆ ತೆರಳಿದ್ದ ವೈಟ್ ಫೀಲ್ಡ್ ಸಿಇಎನ್ ಪೊಲೀಸರು, ಆರೋಪಿಯಿಂದಲೇ 3 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾರೆ. ಈ ವೇಳೆ ಆರೋಪಿ ನೌಶಾದ್‌ ಕಲ್ಲಂಚೇರಿ ಪೊಲೀಸರಿಗೆ ದೂರು ನೀಡಿದ್ದಾನೆ.

ಕಾಂಗ್ರೆಸ್‌ ವರ್ಗಾವಣೆ ದಂಧೆಗೆ ಸಾಕ್ಷಿಯಾಯ್ತಾ 19 ಪೊಲೀಸ್‌ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ತಡೆ ಆದೇಶ..!

ಇನ್ನು ಬೆಂಗಳೂರಿನಿಂದ ಹೋಗಿದ್ದ ಪೊಲೀಸರ ತಂಡವು ಹಣ ಪಡೆಯುತ್ತಿದೆ ಎನ್ನುವಾಗ ಕೇರಳ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಗ, ಬೆಂಗಳೂರು ಪೊಲೀಸರು ಸೈಬರ್‌ ಕ್ರೈಂ ಪ್ರಕರಣದಲ್ಲಿ ತನಿಖೆಗೆ ಬಂದಿರುವುದಾಗಿ ತಿಳಿಸಿದರೂ, ಯಾವುದೇ ಮಾತನ್ನು ಕೇಳದೇ ಇನ್ಸ್ ಪೆಕ್ಟರ್ ಶಿವಪ್ರಕಾಶ್ ಸೇರಿದಂತೆ ಮೂವರು ಬೆಂಗಳೂರು ಪೊಲೀಸರನ್ನು ಕಲ್ಲಂಚೇರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಕಲ್ಲಂಚೇರಿ ಪೊಲೀಸರು ಬುಧವಾರವೇ ಎಫ್ ಐ ಆರ್ ದಾಖಲು ಮಾಡಿದ್ದಾರೆ. ಸದ್ಯಕ್ಕೆ ಇನ್ಸ್ ಪೆಕ್ಟರ್ ಶಿವಪ್ರಕಾಶ್ ಹಾಗು ಇಬ್ಬರು ಸಿಬ್ಬಂದಿ ಕಲ್ಲಂಚೇರಿ ಪೊಲೀಸರು ವಶದಲ್ಲಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿದ್ದೇಶ್ವರ್‌ ಎಕ್ಸ್‌ಪ್ರೆಸ್‌ನಲ್ಲಿ ನಿದ್ದೆಗೆ ಜಾರಿದ ಚಿನ್ನದ ವ್ಯಾಪಾರಿಗೆ ಆಘಾತ: 5.53 ಕೋಟಿ ಮೊತ್ತದ ಚಿನ್ನ ಮಾಯ
ಭೂರೂಪ ಬದಲಾಯಿಸಿದ ಪ್ರವಾಹ.. ವಿಶ್ವದ ಅತಿದೊಡ್ಡ ನದಿ ಮಜುಲಿ ದ್ವೀಪ ಬಗ್ಗೆ ನಿಮಗೆ ಗೊತ್ತೇ?