
ನವದೆಹಲಿ (ಜನವರಿ 25, 2023): 2019 ರಲ್ಲಿ ಭಾರತ ಹಾಗೂ ಪಾಕಿಸ್ತಾನ ಪರಮಾಣು ಯುದ್ಧ ಮಾಡುವ ಅಂಚಿನಲ್ಲಿದ್ದರು. ಅಮೆರಿಕ ಮಧ್ಯಸ್ಥಿಕೆ ವಹಿಸಿ ಯುದ್ಧದ ಭೀತಿ ಉಲ್ಬಣಗೊಳ್ಳುವುದನ್ನು ತಡೆದಿದೆ ಎಂದು ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಹೇಳಿದ್ದಾರೆ. "ಫೆಬ್ರವರಿ 2019 ರಲ್ಲಿ ಭಾರತ-ಪಾಕಿಸ್ತಾನದ ಪೈಪೋಟಿಯು ಪರಮಾಣು ದಾಳಿಗೆ ಎಷ್ಟು ಹತ್ತಿರವಾಯಿತು ಎಂದು ಜಗತ್ತಿಗೆ ಸರಿಯಾಗಿ ತಿಳಿದಿದೆ ಎಂದು ನಾನು ಭಾವಿಸುವುದಿಲ್ಲ ಎಂದು ಭವಿಷ್ಯದ ಅಮೆರಿಕ ಅಧ್ಯಕ್ಷೀಯ ಸ್ಪರ್ಧಿಯಾಗಿರುವ ಮೈಕ್ ಪಾಂಪಿಯೊ ತಮ್ಮ "ನೆವರ್ ಗಿವ್ ಎನ್ ಇಂಚ್" ಎಂಬ ಪುಸ್ತಕದಲ್ಲಿ ಬರೆದಿದ್ದಾರೆ. ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಉನ್ನತ ರಾಜತಾಂತ್ರಿಕ ಮತ್ತು ಹಿಂದಿನ CIA ಮುಖ್ಯಸ್ಥರಾಗಿದ್ದ ಮೈಕ್ ಪಾಂಪಿಯೊ ಈ ಹೇಳಿಕೆ ನೀಡಿದ್ದಾರೆ.
ಫೆಬ್ರವರಿ 2019 ರಲ್ಲಿ ಕಾಶ್ಮೀರದಲ್ಲಿ (Kashmir) 41 ಸಿಆರ್‌ಪಿಎಫ್ ಜವಾನರನ್ನು (CRPF Jawans) ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಹತ್ಯೆ ಮಾಡಿತ್ತು. ಬಳಿಕ, ಪಾಕ್ ಮೂಲಕ ಭಯೋತ್ಪಾದಕ ಗುಂಪು ಇದಕ್ಕೆ ಕಾರಣವೆಂದ ಭಾರತವು ಪಾಕಿಸ್ತಾನದ ಪ್ರದೇಶದೊಳಗೆ ವೈಮಾನಿಕ ದಾಳಿ ನಡೆಸಿ ಹಲವರಲ್ಲಿ ಅಚ್ಚರಿ ಮೂಡಿಸಿತ್ತು. ಈ ವೈಮಾನಿಕ ಯುದ್ಧದ ಸಮಯದಲ್ಲಿ ಭಾರತವು F-16 ಅನ್ನು ಹೊಡೆದುರುಳಿಸಿತ್ತು. ಇನ್ನೊಂದೆಡೆ, ಭಾರತೀಯ ಯುದ್ಧ ವಿಮಾನವನ್ನು ಪಾಕಿಸ್ತಾನ ಹೊಡೆದುರುಳಿಸಿತ್ತು ಹಾಗೂ ಪೈಲಟ್ ಒಬ್ಬರನ್ನು ಸೆರೆಹಿಡಿಯಲಾಗಿತ್ತು ಎಂದು ಪಾಕ್ ಹೇಳಿಕೊಂಡಿತ್ತು.
ಇದನ್ನು ಓದಿ: ಚೀನಾದಿಂದ ಅಮೆರಿಕಾಗೆ ಅಪಾಯವಿರುವುದು ನಿಜ ಎಂದ ಕಾರ್ಯದರ್ಶಿ ಪೋಂಪೆ
ಈ ವೇಳೆ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ನಡುವಿನ ಶೃಂಗಸಭೆಗಾಗಿ ಹನೋಯಿಯಲ್ಲಿದ್ದ ಮೈಕ್ ಪಾಂಪಿಯೊ, ಭಾರತೀಯ ಹಿರಿಯ ಅಧಿಕಾರಿಯ ತುರ್ತು ಕರೆಯಿಂದ ಅಲರ್ಟ್ ಆದ ಬಗ್ಗೆ ಹೇಳಿದರು. ಹಾಗೂ, ಈ ವೇಳೆ ಪಾಕಿಸ್ತಾನದವರು ಭಾರತದ ವಿರುದ್ಧ ದಾಳಿ ಮಾಡಲು ತಮ್ಮ ಪರಮಾಣು ಶಸ್ತ್ರಾಸ್ತ್ರಗಳನ್ನು ಸಿದ್ಧಪಡಿಸಲು ಪ್ರಾರಂಭಿಸಿದ್ದಾರೆ ಎಂದು ಭಾರತೀಯ ಅಧಿಕಾರಿ ನಂಬಿದ್ದರು. ಹಾಗೆ, ಭಾರತವು ತನ್ನದೇ ಆದ ರೀತಿಯಲ್ಲಿ ಪ್ರತಿದಾಳಿಯನ್ನು ಆಲೋಚಿಸುತ್ತಿತ್ತು ಎಂದೂ ಅವರು ನನಗೆ ತಿಳಿಸಿದರು ಎಂದು ಮೈಕ್ ಪೊಂಪಿಯೊ ಬರೆದಿದ್ದಾರೆ. "ನಾನು ಅವರನ್ನು ಏನನ್ನೂ ಮಾಡದಂತೆ ಕೇಳಿದೆ ಮತ್ತು ಈ ವಿಚಾರ ತಿಳಿಗೊಳಿಸಲು ನಮಗೆ ಒಂದು ನಿಮಿಷ ನೀಡಿ" ಎಂದು ಮೈಕ್ ಪಾಂಪಿಯೊ ಹೇಳಿದರು.
ನಂತರ, ಅಮೆರಿಕದ ರಾಜತಾಂತ್ರಿಕರು ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳಿಗೂ ಪರಮಾಣು ದಾಳಿಗೆ ತಯಾರಿ ನಡೆಸದಂತೆ ಮನವರಿಕೆ ಮಾಡಿದ್ದಾರೆ ಎಂದೂ ಮೈಕ್ ಪಾಂಪಿಯೊ ಹೇಳಿದ್ದಾರೆ. ಹಾಗೆ, ಭಯಾನಕ ಫಲಿತಾಂಶ ತಪ್ಪಿಸಲು ಆ ರಾತ್ರಿ ನಾವು ಮಾಡಿದ್ದನ್ನು ಬೇರೆ ಯಾವುದೇ ರಾಷ್ಟ್ರವು ಮಾಡಲಾರದು" ಎಂದೂ ಅವರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಗಡಿಯಲ್ಲಿ 60 ಸಾವಿರ ಸೈನಿಕರ ನಿಯೋಜಿಸಿದ ಚೀನಾ ನಡೆಯನ್ನು ಖಂಡಿಸಿದ ಅಮೆರಿಕ ಕಾರ್ಯದರ್ಶಿ!
ಕಾಶ್ಮೀರ ದಾಳಿಯನ್ನು ಪಾಕಿಸ್ತಾನವು ಬಹುಶ: ನಡೆಸಿತ್ತು ಎಂದು ಬರೆದಿರುವ ಮೈಕ್ ಪಾಂಪಿಯೊ, ನಾಗರಿಕ ಸರ್ಕಾರಗಳ ದೌರ್ಬಲ್ಯವನ್ನು ಸೂಚಿಸಿ ಪಾಕಿಸ್ತಾನದ ನಿಜವಾದ ನಾಯಕರಾಗಿದ್ದ ಆಗಿನ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಜ್ವಾ ಅವರೊಂದಿಗೆ ಮಾತನಾಡಿದ್ದೇನೆ ಎಂದೂ ಹೇಳಿದರು.
ಆ ಸಮಯದಲ್ಲಿ ಮೈಕ್ ಪಾಂಪಿಯೋ ಅವರು ಕಾಶ್ಮಿರದ ದಾಳಿಗೆ ಭಾರತ ಪ್ರತಿದಾಳಿ ನಡೆಸಿದ್ದನ್ನು ಸಾರ್ವಜನಿಕವಾಗಿ ಸಮರ್ಥಿಸಿಕೊಂಡಿದ್ದರು. ಇನ್ನು, ಅವರ ಪುಸ್ತಕದಲ್ಲಿ, ಮೈಕ್ ಪಾಂಪಿಯೊ ಅವರು ಭಾರತದ ಬಗ್ಗೆ ಹೆಚ್ಚು ಮಾತನಾಡಿದ್ದಾರೆ. ಅಲ್ಲದೆ, ಚೀನಾದ ಆಕ್ರಮಣವನ್ನು ಎದುರಿಸಲು ದಕ್ಷಿಣ ಏಷ್ಯಾದ ಪ್ರಜಾಪ್ರಭುತ್ವ ರಾಷ್ಟ್ರಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಅವರ ಬಯಕೆಯನ್ನು ರಹಸ್ಯವಾಗಿಟ್ಟಿಲ್ಲ.
ಇದನ್ನೂ ಓದಿ: ತೆರಿಗೆ ಯುದ್ಧದ ಛಾಯೆ: ಮೋದಿ ಭೇಟಿ ಮಾಡಲು ಪಾಂಪಿಯೊ ಆಯೇ!
ಇನ್ನೊಂದೆಡೆ ಭಾರತ, ಹಾಗೂ ಪಾಕಿಸ್ತಾನ ಎರಡೂ ರಾಷ್ಟ್ರಗಳು 1998 ರಲ್ಲಿ ಪರಮಾಣು ಬಾಂಬ್‌ಗಳನ್ನು ಪರೀಕ್ಷಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಅಮೆರಿಕದ ಅಂದಿನ ಅಧ್ಯಕ್ಷ ಬಿಲ್ ಕ್ಲಿಂಟನ್ ಕಾಶ್ಮೀರವು ವಿಶ್ವದ ಅತ್ಯಂತ ಅಪಾಯಕಾರಿ ಸ್ಥಳ ಎಂದು ಹೇಳಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ