ಭೋಪಾಲ್: ಭಾರೀ ನಷ್ಟದ ಕಾರಣ 2005ರಲ್ಲಿ ಸ್ಥಗಿತಗೊಂಡಿದ್ದ ಮಧ್ಯಪ್ರದೇಶದ ಸರ್ಕಾರಿ ಸಾರಿಗೆ ಸಂಸ್ಥೆ (ಎಂಪಿಎಸ್ಸಾರ್ಟಿಸಿ) ಸೇವೆಯನ್ನು ಇದೀಗ 21 ವರ್ಷಗಳ ಬಳಿಕ ಪುನಾರಂಭಿಸಲಾಗಿದೆ. ಈ ನಿಮಿತ್ತ ಮೊದಲ ಹಂತದಲ್ಲಿ 7 ನಗರಗಳಲ್ಲಿ ಸಂಚರಿಸಲಿರುವ 351 ಬಸ್‌ಗಳಿಗೆ ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಜತೆ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಶುಕ್ರವಾರ ಚಾಲನೆ ನೀಡಿದರು.
‘ಮುಖ್ಯಮಂತ್ರಿ ಸುಗಮ ಪರಿವಹನ ಸೇವೆ ಮತ್ತು ಪಿಎಂ-ಇಬಸ್ ಸೇವೆ’ಯನ್ನು ಉದ್ಘಾಟಿಸಿ ಮಾತನಾಡಿದ ಯಾದವ್, ‘ಮೊದಲ ವರ್ಷದಲ್ಲಿ ರಾಜ್ಯಾದ್ಯಂತ 1,500 ಬಸ್‌ಗಳ ಸೇವೆ ಆರಂಭಿಸುವುದು. ಕ್ರಮೇಣ ಅದನ್ನು ಗ್ರಾಮಗಳಿಗೂ ವಿಸ್ತರಿಸಲಾಗುವುದು. ಶೇ.75ರಷ್ಟು ಗ್ರಾಮಗಳಿಗೆ ಬಸ್ ಸಂಪರ್ಕ ಒದಗಿಸುವ ಗುರಿಯಿದೆ’ ಎಂದರು. ಜತೆಗೆ, ಇದರಿಂದ ಉದ್ಯೋಗ ಸೃಷ್ಟಿಯೂ ಆಗಿದೆ ಎಂದು ಅವರು ಹೇಳಿದರು.
2005ರಲ್ಲೇ ಮುಚ್ಚಿತ್ತು:
ಮಧ್ಯಪ್ರದೇಶ ರಸ್ತೆ ಸಾರಿಗೆ ನಿಗಮವು ನೂರಾರು ಕೋಟಿ ನಷ್ಟ ಅನುಭವಿಸಿದ ಹಿನ್ನೆಲೆಯಲ್ಲಿ, 1995ರಲ್ಲೇ ಅದರ ಮುಚ್ಚುವ ಪ್ರಕ್ರಿಯೆ ಆರಂಭಿಸಲಾಗಿತ್ತು. ಕೊನೆಗೆ 2005ರಲ್ಲಿ ಅದನ್ನು ಮುಚ್ಚಲಾಗಿತ್ತು. ಆ ಬಳಿಕ ಜನ ಖಾಸಗಿ ಬಸ್‌ಗಳನ್ನೇ ಅವಲಂಬಿಸಬೇಕಾಗಿತ್ತು. ಆದರೆ ಈಗ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಮತ್ತೆ ಸರ್ಕಾರಿ ಬಸ್ ಸೇವೆಯನ್ನು ಆರಂಭಿಸಲಾಗಿದೆ.
11:23 AM (IST) Sep 26
11:19 AM (IST) Sep 26
10:56 AM (IST) Sep 26
ವಾರಕ್ಕೆ 5 ದಿನದ ಕೆಲಸಕ್ಕೆ ಆಗ್ರಹಿಸಿ ಸೆ.28ರಿಂದ 30ರವರೆಗೆ ಬ್ಯಾಂಕ್ ನೌಕರರು ಮುಷ್ಕರ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ತೊಂದರೆಯಾಗದಿರಲು ಎಸ್‌ಬಿಐ ಸೇರಿದಂತೆ ಹಲವು ಬ್ಯಾಂಕುಗಳು ಎಟಿಎಂ ಶುಲ್ಕವನ್ನು ಮನ್ನಾ ಮಾಡಿವೆ
10:49 AM (IST) Sep 26
ಅಪಾರ ಭಕ್ತರನ್ನು ಹೊಂದಿರುವ ಗುರು ಪ್ರೇಮಾನಂದ ಮಹಾರಾಜರ ಶಿಷ್ಯ ಮೃತಪಟ್ಟ ಘಟನೆ ನಡೆದಿದೆ. ಪ್ರೇಮಾನಂದ ಗುರೂಜಿ ವೃಂದಾವನ ಆಶ್ರಮದಲ್ಲಿ ಘಟನೆ ನಡೆದಿದೆ. ಶಿಷ್ಯನ ಅಗಲಿಕೆಗೆ ಕಾರಣವೇನು?
10:05 AM (IST) Sep 26
ವಿಶ್ವಸಂಸ್ಥೆ ಜನರಲ್ ಅಸೆಂಬ್ಲೆಯಲ್ಲಿ ಪಾಕಿಸ್ತಾನ ಪತ್ರಕರ್ತ ಉಗ್ರವಾದ ಕುರಿತು ಪ್ರಶ್ನೆ ಕೇಳಿ ಭಾರತವನ್ನು ಇರಿಸು ಮುರಿಸಲು ಮಾಡಲು ಸಜ್ಜಾಗಿದ್ದಾರೆ. ಆದರೆ ಜೈಶಂಕರ್ ಒಂದೇ ವಾಕ್ಯದ ಮರು ಪ್ರಶ್ನೆಗೆ ಪಾಕಿಸ್ತಾನ ಮುಖವಾಡ ಕಳಚಿ ಬಿದ್ದಿದೆ.
10:02 AM (IST) Sep 26
09:31 AM (IST) Sep 26
09:20 AM (IST) Sep 26