ಕುಲದೇವತೆ ಎಂದು ಡೈನೋಸಾರ್‌ ಮೊಟ್ಟೆ ಪೂಜೆ ಮಾಡ್ತಿದ್ದ ಭಾರತದ ಈ ಕುಟುಂಬ!

By BK Ashwin  |  First Published Dec 21, 2023, 4:08 PM IST

ಮಧ್ಯ ಪ್ರದೇಶದ ಕುಟುಂಬವೊಂದು ಕುಲದೇವತೆಯನ್ನು ಪೂಜೆ ಮಾಡ್ತಿದ್ರು. ಆದರೆ, ಆ ಕುಲದೇವತೆ ಡೈನೋಸಾರ್‌ ಮೊಟ್ಟೆಗಳೆಂದು ತಿಳಿದುಬಂದಿದೆ.


ನವದೆಹಲಿ (ಡಿಸೆಂಬರ್ 21, 2023): ಇತಿಹಾಸದುದ್ದಕ್ಕೂ, ನಂಬಿಕೆ ಮನುಷ್ಯರಿಗೆ ಪ್ರಮುಖ ಪಾತ್ರ ವಹಿಸುತ್ತದೆ.  ಇದು ಸಂಸ್ಕೃತಿ ಮತ್ತು ನಂಬಿಕೆಗಳಾದ್ಯಂತ ಅಸಂಖ್ಯಾತ ರೂಪಗಳಲ್ಲಿ ಸ್ವತಃ ಪ್ರಕಟವಾಗುತ್ತದೆ. ಇದೇ ರೀತಿ, ಇತ್ತೀಚಿನ ಉದಾಹರಣೆ ಮಧ್ಯ ಪ್ರದೇಶ.

ಮಧ್ಯ ಪ್ರದೇಶದ ಕುಟುಂಬವೊಂದು ನಂಬಿಕೆ ಎಂದು ಕುಲದೇವತೆಯನ್ನು ಪೂಜೆ ಮಾಡ್ತಿದ್ರು. ಆದರೆ, ಆ ಕುಲದೇವತೆ ಡೈನೋಸಾರ್‌ ಮೊಟ್ಟೆಗಳೆಂದು ತಿಳಿದುಬಂದಿದೆ. ಮಧ್ಯಪ್ರದೇಶದ ಧರ್‌ನಲ್ಲಿ, ಮಂಡಲೋಯಿ ಕುಟುಂಬವು ತಲೆಮಾರುಗಳಿಂದ ಅಂಗೈ ಗಾತ್ರದ "ಕಲ್ಲಿನ ಚೆಂಡುಗಳನ್ನು" ಪೂಜಿಸುತ್ತಿದೆ.

Tap to resize

Latest Videos

ಇದನ್ನು ಓದಿ: ವೈರಲ್ ಆಯ್ತು ಲೂಯಿಸ್ ವಿಟಾನ್ ಇಯರ್‌ಫೋನ್, ಇದ್ರ ಬೆಲೆಗೆ 2 ಐಫೋನ್ ಖರೀದಿಸಬಹುದು!

ಪಡ್ಲ್ಯಾ ಗ್ರಾಮದ ನಿವಾಸಿ, 41 ವರ್ಷ ವಯಸ್ಸಿನ ವೆಸ್ತಾ ಮಂಡಲೋಯ್ ತನ್ನ ಪೂರ್ವಜರ ಹೆಜ್ಜೆಗಳನ್ನು ಅನುಸರಿಸುತ್ತಿದ್ದರು. ಹಾಗೂ, ಈ ಚೆಂಡುಗಳನ್ನು "ಕಾಕರ್ ಭೈರವ್" ಅಥವಾ ಭೂಮಿಯ ಒಡೆಯ ಎಂದು ಪೂಜಿಸುತ್ತಿದ್ದರು ಎಂದು ತಿಳಿದುಬಂದಿದೆ. ವೆಸ್ತಾ ಕುಟುಂಬವು ಕಲ್ಲಿನ ಚೆಂಡುಗಳು ತಮ್ಮ ಕೃಷಿ ಭೂಮಿ ಮತ್ತು ಜಾನುವಾರುಗಳನ್ನು ಸಮಸ್ಯೆ ಹಾಗೂ ದುರ್ದೈವದ ಸಂಗತಿಗಳಿಂದ ರಕ್ಷಿಸೋ  'ಕುಲದೇವತೆ' ಎಂದು ನಂಬಿದ್ದರು. ಇನ್ನು, ಮಂಡಲೋಯ್ ಕುಟುಂಬದವರಂತೆ, ಧರ್ ಮತ್ತು ಪಕ್ಕದ ಪ್ರದೇಶಗಳಲ್ಲಿ ಇತರರು ಸಹ ರಕ್ಷಣೆಗಾಗಿ ಕುಲದೇವತೆಯನ್ನು ಹೊಂದಿದ್ದು, ಪೂಜಿಸುತ್ತಿದ್ದರು.

ಆದರೆ, ಸಂಶೋಧಕರ ತಂಡಕ್ಕೆ ಈ ಚೆಂಡುಗಳ ಬಗ್ಗೆ ಅನುಮಾನ ಬಂದಿದ್ದು, ಇದು ಬೇರೆ ಏನೋ ಎಂದಿದ್ದಾರೆ. ಲಖನೌನ ಸಾಹ್ನಿ ಇನ್‌ಸ್ಟಿಟ್ಯೂಟ್ ಆಫ್ ಪ್ಯಾಲಿಯೋಸೈನ್ಸ್‌ನ ತಜ್ಞರು ಕ್ಷೇತ್ರ ಭೇಟಿಯ ಸಮಯದಲ್ಲಿ ಈ ಕಲ್ಲಿನ ಬಾಲ್ ಕುಲದೇವತೆಗಳನ್ನು ಡೈನೋಸಾರ್‌ ಮೊಟ್ಟೆಗಳು ಎಂದು ಪತ್ತೆಹಚ್ಚಿದ್ದಾರೆ.

 

8 ವರ್ಷದ ಬಳಿಕ ಐಪಿಎಲ್‌ಗೆ ಸ್ಟಾರ್ಕ್‌ನ ಕರೆತಂದು ಬಡವಾಯಿತು ಕೆಕೆಆರ್, ಹರಿದಾಡುತ್ತಿದೆ ಮೀಮ್ಸ್!

ಈ ಬಗ್ಗೆ ಮತ್ತಷ್ಟು ವಿಶ್ಲೆಷಣೆ ಮಾಡಿದ ಬಳಿಕ ಈ ಚೆಂಡುಗಳು ಡೈನೋಸಾರ್‌ಗಳ Titanosaurs ಜಾತಿಯ ಮೊಟ್ಟೆಗಳ ಪಳೆಯುಳಿಕೆ ಎಂಬ ತೀರ್ಮಾನಕ್ಕೆ ಬರಲಾಗಿದೆ. 

ಟೈಟಾನೋಸಾರ್ಸ್‌
ಹೆಸರಿಸಲಾದ ಮತ್ತು ಸರಿಯಾಗಿ ವಿವರಿಸಿದ ಮೊದಲ ಭಾರತೀಯ ಡೈನೋಸಾರ್ ಇದು. ಈ ಜಾತಿಯನ್ನು 1877 ರಲ್ಲಿ ಮೊದಲ ಬಾರಿಗೆ ದಾಖಲಿಸಲಾಯಿತು ಮತ್ತು ಅದರ ಹೆಸರು 'titanic lizard' ಎಂದರ್ಥ. ಟೈಟಾನೋಸಾರ್ಸ್‌ ಈ ಗ್ರಹದಲ್ಲಿ ಸಂಚರಿಸಿದ ಅತಿದೊಡ್ಡ ಡೈನೋಸಾರ್‌ಗಳಲ್ಲಿ ಒಂದಾಗಿದೆ. ಅಂದಾಜಿನ ಪ್ರಕಾರ, ಕ್ರಿಟೇಶಿಯಸ್ ಅವಧಿಯಲ್ಲಿ, ಸುಮಾರು 70 ಮಿಲಿಯನ್ ವರ್ಷಗಳ ಹಿಂದೆ ಈ ಪ್ರಭೇದಗಳು ಈ ಪ್ರದೇಶದಲ್ಲಿ ಸಂಚರಿಸಿದ್ದವು.

ಈ ವರ್ಷದ ಆರಂಭದಲ್ಲಿ, ನರ್ಮದಾ ಕಣಿವೆಯಲ್ಲಿ ಸಂಚರಿಸುತ್ತಿದ್ದ titanic lizardನ  250 ಕ್ಕೂ ಹೆಚ್ಚು ಮೊಟ್ಟೆಗಳು ಮಧ್ಯ ಪ್ರದೇಶ ಧರ್‌ ಜಿಲ್ಲೆಯಲ್ಲಿ ಪತ್ತೆಯಾಗಿದ್ದವು. ಜನವರಿಯಲ್ಲಿ, ದೆಹಲಿ ವಿಶ್ವವಿದ್ಯಾನಿಲಯ (DU) ಮತ್ತು ಭೋಪಾಲ್‌ನ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (IISER) ಯ ಸಂಶೋಧಕರ ತಂಡವು ನಡೆಸಿದ ಅಧ್ಯಯನವನ್ನು ಪೀರ್-ರಿವ್ಯೂಡ್ ವೈಜ್ಞಾನಿಕ ಜರ್ನಲ್ PLOS One ನಲ್ಲಿ ಪ್ರಕಟಿಸಲಾಗಿದೆ. ಅವರು ಟೈಟಾನೋಸಾರ್‌ಗಳಿಗೆ ಸೇರಿದ 256 ಪಳೆಯುಳಿಕೆ ಮೊಟ್ಟೆಗಳನ್ನು ಹೊಂದಿರುವ 92 ಗೂಡುಕಟ್ಟುವ ತಾಣಗಳನ್ನು ಬಹಿರಂಗಪಡಿಸಲಾಗಿತ್ತು.

click me!