4 ವರ್ಷದಿಂದ ಅಮೆರಿಕದಲ್ಲಿ ನಾಪತ್ತೆಯಾದ ಭಾರತೀಯ ವಿದ್ಯಾರ್ಥಿನಿ: ಹುಡುಕಿಕೊಟ್ಟವ್ರಿಗೆ ಭಾರಿ ಬಹುಮಾನ ಘೋಷಿಸಿದ ಎಫ್‌ಬಿಐ

Published : Dec 21, 2023, 03:13 PM IST
4 ವರ್ಷದಿಂದ ಅಮೆರಿಕದಲ್ಲಿ ನಾಪತ್ತೆಯಾದ ಭಾರತೀಯ ವಿದ್ಯಾರ್ಥಿನಿ: ಹುಡುಕಿಕೊಟ್ಟವ್ರಿಗೆ ಭಾರಿ ಬಹುಮಾನ ಘೋಷಿಸಿದ ಎಫ್‌ಬಿಐ

ಸಾರಾಂಶ

ಭಾರತದ 29 ವರ್ಷದ ವಿದ್ಯಾರ್ಥಿನಿ ಮಯೂಷಿ ಭಗತ್, ಏಪ್ರಿಲ್ 29, 2019 ರಂದು ತನ್ನ ಜರ್ಸಿ ಸಿಟಿ ಅಪಾರ್ಟ್‌ಮೆಂಟ್‌ನಿಂದ ನಾಪತ್ತೆಯಾಗಿದ್ದಾಳೆ. ಈಕೆಯನ್ನು ಹುಡುಕಿಕೊಟ್ಟವರಿಗೆ ಅಥವಾ ಸುಳಿವು ನೀಡಿದವರಿಗೆ ಬಹುಮಾನ ನೀಡೋದಾಗಿ ಎಫ್‌ಬಿಐ ಘೋಷಿಸಿದೆ. 

ದೆಹಲಿ (ಡಿಸೆಂಬರ್ 21, 2023): ಭಾರತದ 29 ವರ್ಷದ ವಿದ್ಯಾರ್ಥಿನಿ ಮಯೂಷಿ ಭಗತ್ ಅಮೆರಿಕದಲ್ಲಿ ಕಳೆದ ನಾಲ್ಕೂವರೆ ವರ್ಷಗಳಿಂದ ಕಾಣೆಯಾಗಿದ್ದಾಳೆ. ಆಕೆಯನ್ನು ಪತ್ತೆ ಮಾಡಲು ಅಮೆರಿಕ ಪೊಲೀಸರು, ಎಫ್‌ಬಿಐಗೆ ಸಹ ಇನ್ನೂ ಸಾಧ್ಯವಾಗಿಲ್ಲ. ಈಗ, ಆಕೆಯ ಬಗ್ಗೆ ಸುಳಿವು ನೀಡಿದವರಿಗೆ ಅಥವಾ ಹುಡುಕಿಕೊಟ್ಟರೆ ಬಹುಮಾನ ನೀಡೋದಾಗಿ ಎಫ್‌ಬಿಐ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದೆ.

ಭಾರತದ 29 ವರ್ಷದ ವಿದ್ಯಾರ್ಥಿನಿ ಮಯೂಷಿ ಭಗತ್, ಏಪ್ರಿಲ್ 29, 2019 ರಂದು ತನ್ನ ಜರ್ಸಿ ಸಿಟಿ ಅಪಾರ್ಟ್‌ಮೆಂಟ್‌ನಿಂದ "ವರ್ಣರಂಜಿತ ಪೈಜಾಮ ಪ್ಯಾಂಟ್ ಮತ್ತು ಕಪ್ಪು ಟಿ-ಶರ್ಟ್" ಧರಿಸಿದ್ದವಳು ಅಂದಿನಿಂದ ನಾಪತ್ತೆಯಾಗಿದ್ದಾಳೆ. ಮೇ 1, 2019 ರಂದ್ಲೂ ಆಕೆ ಕಾಣೆಯಾಗಿದ್ದಾಳೆ ಎಂದು ವರದಿಯಾಗಿದೆ.

ಇದನ್ನು ಓದಿ: ಪನ್ನುನ್ ಕೊಲೆ ಯತ್ನ, ಅಮೆರಿಕ ಆರೋಪದ ಬಗ್ಗೆ ಮೊದಲ ಬಾರಿ ಮಾತನಾಡಿದ ಪ್ರಧಾನಿ ಮೋದಿ!

ಅಕೆ 4 ವರ್ಷಕ್ಕೂ ಹೆಚ್ಚು ಸಮಯದಿಂದ ಕಣ್ಮರೆಯಾಗಿರೋದ್ರಿಂದ ಎಫ್‌ಬಿಐ ನೆವಾರ್ಕ್ ಫೀಲ್ಡ್ ಆಫೀಸ್ ಮತ್ತು ಜರ್ಸಿ ಸಿಟಿ ಪೊಲೀಸ್ ಇಲಾಖೆಗಳು ಸಾರ್ವಜನಿಕರ ಸಹಾಯ ಪಡೆಯಲು ಮುಂದಾಗಿವೆ. ಮಯೂಷಿ ಭಗತ್‌ನ ಸ್ಥಳ ಅಥವಾ ಪತ್ತೆಯ ಸುಳಿವಿಗೆ ಕಾರಣವಾಗುವ ಯಾವುದೇ ಮಾಹಿತಿ ನೀಡಿದ್ರೆ, ಬರೋಬ್ಬರಿ 10,000 ಡಾಲರ್‌ ಬಹುಮಾನ ನೀಡೋದಾಗಿ ಹೇಳಿದೆ. ಈ ಮೂಲಕ ಆಕೆಯನ್ನು ಹುಡುಕುವ ಪ್ರಯತ್ನಗಳನ್ನು ತೀವ್ರಗೊಳಿಸಿದೆ.

ಕಳೆದ ಜುಲೈನಲ್ಲಿ, FBI ತನ್ನ "ಕಾಣೆಯಾದ ವ್ಯಕ್ತಿಗಳು" ಪಟ್ಟಿಗೆ ಮಾಯುಷಿ ಭಗತ್ ಅನ್ನು ಸೇರಿಸಿದ್ದು, ಆಕೆಗೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಳ್ಳಲು ಸಾರ್ವಜನಿಕರಿಗೆ ಮನವಿ ಮಾಡಿತ್ತು. ಜುಲೈ 1994 ರಲ್ಲಿ ಭಾರತದಲ್ಲಿ ಜನಿಸಿದ ಮಯೂಷಿ ಭಗತ್ ವಿದ್ಯಾರ್ಥಿ ವೀಸಾದಡಿ ನ್ಯೂಯಾರ್ಕ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಓದುತ್ತಿದ್ದರು.

ಸೂರತ್‌ ಬೃಹತ್‌ ಕಟ್ಟಡ ಭಾರತದ ಆರ್ಥಿಕ ಶಕ್ತಿಯ ಚಿಹ್ನೆ; ನಮ್ಮ 3ನೇ ಅವಧೀಲಿ ಭಾರತ ವಿಶ್ವದ ನಂ. 3 ಆರ್ಥಿಕತೆ: ಮೋದಿ

ಇಂಗ್ಲಿಷ್, ಹಿಂದಿ ಮತ್ತು ಉರ್ದು ಭಾಷೆಗಳನ್ನ ನಿರರ್ಗಳವಾಗಿ ಮಾತನಾಡುವ ಮಯೂಷಿ ಭಗತ್‌ಗೆ ನ್ಯೂಜೆರ್ಸಿಯ ಸೌತ್ ಪ್ಲೇನ್‌ಫೀಲ್ಡ್‌ನಲ್ಲಿ ಸ್ನೇಹಿತರಿದ್ದಾರೆ. ಕಪ್ಪು ಕೂದಲು ಮತ್ತು ಕಂದು ಕಣ್ಣುಗಳೊಂದಿಗೆ 5'10" ಎತ್ತರ ಇರುವ ಈಕೆ F1 ವಿದ್ಯಾರ್ಥಿ ವೀಸಾದಲ್ಲಿ 2016 ರಲ್ಲಿ ಯುನೈಟೆಡ್ ಸ್ಟೇಟ್ಸ್‌ಗೆ ಬಂದಿದ್ದರು. ಇವರು  'ಮಿಸ್ಸಿಂಗ್ ಪರ್ಸನ್' ಪೋಸ್ಟರ್ FBI ಯ "ಮೋಸ್ಟ್ ವಾಂಟೆಡ್" ಪುಟದಲ್ಲಿ "ಅಪಹರಣಗಳು/ಕಾಣೆಯಾದ ವ್ಯಕ್ತಿಗಳು" ಅಡಿಯಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಎಫ್‌ಬಿಯ ಹೇಳಿಕೆ ನೀಡಿದೆ. 

ಮಯೂಷಿ ಭಗತ್ ಇರುವಿಕೆ ಅಥವಾ ಕಣ್ಮರೆಯಾಗಿರುವ ಬಗ್ಗೆ ಯಾರಾದರೂ ಮಾಹಿತಿ ಹೊಂದಿದ್ದರೆ, ಎಫ್‌ಬಿಐ ನೆವಾರ್ಕ್ ಅಥವಾ ಜೆರ್ಸಿ ಸಿಟಿ ಪೊಲೀಸ್ ಇಲಾಖೆಗೆ ಕರೆ ಮಾಡಬೇಕು ಎಂದೂ ಎಫ್‌ಬಿಐ ಮಾಹಿತಿ ನೀಡಿದೆ. ಆಕೆ ಇರುವ ಸ್ಥಳ ಅಥವಾ ಪತ್ತೆಗೆ ಕಾರಣವಾಗುವ ಮಾಹಿತಿಗಾಗಿ ಸಾರ್ವಜನಿಕರು 10,000 ಡಾಲರ್‌ವರೆಗೆ ಬಹುಮಾನ ಪಡೆಯಬಹುದು ಎಂದೂ ಕಳೆದ ವಾರ ಹೊರಡಿಸಿದ ಹೇಳಿಕೆಯಲ್ಲಿ ಎಫ್‌ಬಿಐ ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana
ಮನೆಯಲ್ಲಿ ಒಂದು ರೂಪಾಯಿ ಇಲ್ಲ ಆದ್ರೂ ಸಿಸಿಟಿವಿ ಯಾಕೆ ಹಾಕಿದ್ರಿ: ಸಿಕ್ಕಿದ್ದನ್ನು ದೋಚಿ ಪತ್ರ ಬರೆದಿಟ್ಟು ಹೋದ ಕಳ್ಳ