ನಾನು ಕೃಷಿ ಕಾನೂನುಗಳ (2020ರಲ್ಲಿ ಜಾರಿ ಆಗಿದ್ದ ಕಾನೂನು) ವಿರುದ್ಧ ಹೋರಾಡುತ್ತಿದ್ದಾಗ, ಅರುಣ್ ಜೇಟ್ಲಿ ಅವರನ್ನು ನನಗೆ ಬೆದರಿಕೆ ಹಾಕಲು ಕಳುಹಿಸಲಾಗಿತ್ತು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸ್ಫೋಟಕ ಆರೋಪ ಮಾಡಿದ್ದಾರೆ. ಆದರೆ ಇದು ಸುಳ್ಳು ಆರೋಪ. 2019ರಲ್ಲೇ ಜೇಟ್ಲಿ ನಿಧನರಾಗಿದ್ದರು. 2020ರಲ್ಲಿ ಅವರು ಹೇಗೆ ಬೆದರಿಸಲು ಸಾಧ್ಯ? ಎಂದು ಜೇಟ್ಲಿ ಪುತ್ರ ರೋಹನ್ ಜೇಟ್ಲಿ ಹಾಗೂ ಬಿಜೆಪಿ ವಕ್ತಾರ ಅಮಿತ್ ಮಾಳವೀಯ ಸ್ಪಷ್ಟನೆ ನೀಡಿದ್ದಾರೆ. ಶನಿವಾರ ಕಾಂಗ್ರೆಸ್‌ನ ವಾರ್ಷಿಕ ಕಾನೂನು ಸಮಾವೇಶವನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ನಾನು ಕೃಷಿ ಕಾನೂನುಗಳ ವಿರುದ್ಧ ಹೋರಾಡುತ್ತಿದ್ದಾಗ, ಅರುಣ್ ಜೇಟ್ಲಿ ಅವರನ್ನು ನನಗೆ ಬೆದರಿಕೆ ಹಾಕಲು ಕಳುಹಿಸಲಾಗಿತ್ತು ಎಂದು ನನಗೆ ನೆನಪಿದೆ. ಅವರು, ನೀವು ಸರ್ಕಾರವನ್ನು ವಿರೋಧಿಸುವುದನ್ನು ಮುಂದುವರಿಸಿದರೆ, ಕೃಷಿ ಕಾನೂನುಗಳ ವಿರುದ್ಧ ಹೋರಾಡಿದರೆ, ನಾವು ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ನನಗೆ ಹೇಳಿದರು. ನಾನು ಅವರನ್ನು ನೋಡಿ ನೀವು ಯಾರೊಂದಿಗೆ ಮಾತನಾಡುತ್ತಿದ್ದೀರಿ ಎಂದು ನಿಮಗೆ ಗೊತ್ತಿಲ್ಲ ಎನ್ನಿಸುತ್ತದೆ ಎಂದು ನಾನು ಭಾವಿಸುತ್ತೇನೆ. ನಾವು ಕಾಂಗ್ರೆಸ್ ಜನರು, ಮತ್ತು ನಾವು ಹೇಡಿಗಳಲ್ಲ. ನಾವು ಎಂದಿಗೂ ಬಾಗುವುದಿಲ್ಲ. ಬ್ರಿಟಿಷರೇ ನಮ್ಮನ್ನು ಬಗ್ಗಿಸಲು ಆಗಲಿಲ್ಲ ಎಂದು ಹೇಳಿ ಕಳಿಸಿದೆ ಎಂದರು.

06:46 PM (IST) Aug 03
ಉತ್ತರ ಪ್ರದೇಶದಲ್ಲಿ ಪತಿಯೋರ್ವ ತನ್ನ ಗರ್ಭಿಣಿ ಪತ್ನಿಯನ್ನೇ ಅಮಾನುಷವಾಗಿ ಕೊಲೆ ಮಾಡಿದ ಘಟನೆ ನಡೆದಿದೆ. ಹಾಗೆಯೇ ಮತ್ತೊಂದು ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬಂದ ಅತ್ಯಾ*ಚಾರ ಆರೋಪಿಯೋರ್ವ ಸಂತ್ರಸ್ತೆಯ ಎದೆಗೆ ಗುಂಡಿಕ್ಕಿದಂತಹ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.
05:03 PM (IST) Aug 03
ಪತ್ನಿಗೆ ಅನೈತಿಕ ಸಂಬಂಧವಿದೆ ಎಂದು ನೊಂದ ಪತಿಯೊಬ್ಬ ತನ್ನ ಇಬ್ಬರು ಪುಟ್ಟ ಮಕ್ಕಳಿಗೆ ವಿಷವಿಕ್ಕಿ ಕೊಂದು ಬಳಿಕ ಡೆತ್‌ನೋಟ್ ಬರೆದಿಟ್ಟು ತಾನು ಸಾವಿಗೆ ಶರಣಾಗಿದ್ದಾನೆ. ಗುಜರಾತ್‌ನ ಸೂರತ್ ನಗರದ ದಿಂಡೋಲಿಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.
02:56 PM (IST) Aug 03
01:24 PM (IST) Aug 03
ಕಾನ್ಪುರದಲ್ಲಿ ಕುಡಿದ ಮತ್ತಿನಲ್ಲಿ ಹಾವಾಡಿಗನೊಬ್ಬ ಮಹಿಳಾ ಪೊಲೀಸ್ ಮೇಲೆ ಹಾವು ಎಸೆದ ಘಟನೆ ನಡೆದಿದೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
01:12 PM (IST) Aug 03
10:33 AM (IST) Aug 03
ಗಾಜಿಯಾಬಾದ್‌ನಲ್ಲಿ ಚರಂಡಿ ಮುಚ್ಚಳವನ್ನು ಕಳ್ಳರು ಕದ್ದಿದ್ದಾರೆ ಮತ್ತೊಂದೆಡೆ ಹತ್ರಾಸ್‌ನಲ್ಲಿ ಪೆಟ್ರೋಲ್ ತುಂಬಿಸಿಕೊಂಡು ಹಣ ಕೊಡದೆ ಪರಾರಿಯಾದ ಚಾಲಕ ಪೆಟ್ರೋಲ್ ಪೈಪನ್ನೇ ಕಿತ್ತುಕೊಂಡು ಹೋಗಿರುವ ಘಟನೆಗಳು ನಡೆದಿವೆ. ಈ ಎರಡು ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ.
10:22 AM (IST) Aug 03
ಬಲೂಚಿಸ್ತಾನದ ತೈಲ ಸಂಪನ್ಮೂಲಗಳ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಪಾಕಿಸ್ತಾನ ತಪ್ಪು ಮಾಹಿತಿ ನೀಡಿದೆ ಎಂದು ಬಲೂಚ್ ನಾಯಕ ಮೀರ್ ಯಾರ್ ಬಲೂಚ್ ಆರೋಪಿಸಿದ್ದಾರೆ. ಬಲೂಚಿಸ್ತಾನದ ನೆಲ ಮಾರಾಟಕ್ಕಿಲ್ಲ, ಸಂಪನ್ಮೂಲಗಳ ಶೋಷಣೆಗೆ ಅವಕಾಶವಿಲ್ಲ ಎಂದು ಎಚ್ಚರಿಸಿದ್ದಾರೆ.
09:01 AM (IST) Aug 03
ಹೆಲ್ಮೆಟ್ ಇಲ್ಲದವರಿಗೆ ಪೆಟ್ರೋಲ್ ನೀಡದ ನಿಯಮ ಜಾರಿಯಲ್ಲಿದ್ದರೂ, ಜನರು ಹೆಲ್ಮೆಟ್ ಬಾಡಿಗೆ ಪಡೆದು ಪೆಟ್ರೋಲ್ ತುಂಬಿಸಿಕೊಳ್ಳುತ್ತಿದ್ದಾರೆ. ಈ ಹೊಸ ಉದ್ಯಮ ಇಂದೋರ್‌ನಲ್ಲಿ ಬೆಳಕಿಗೆ ಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.
08:16 AM (IST) Aug 03
ರಷ್ಯಾದಿಂದ ಅಗ್ಗದ ತೈಲ ಖರೀದಿಸುತ್ತಿರುವ ಭಾರತದ ವಿರುದ್ಧ ಅಮೆರಿಕ ಆಕ್ಷೇಪ ವ್ಯಕ್ತಪಡಿಸಿದೆ. ಭಾರತ ತನ್ನ ಇಂಧನ ಅಗತ್ಯಗಳನ್ನು ಪೂರೈಸಲು ರಷ್ಯಾದ ಮೇಲೆ ಅವಲಂಬಿತವಾಗಿದೆ ಮತ್ತು ಬಾಹ್ಯ ಒತ್ತಡಗಳಿಗೆ ಮಣಿಯುವುದಿಲ್ಲ ಎಂದು ಹೇಳಿದೆ. ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿದರೆ ಏನಾಗುತ್ತೆ?