ನವದೆಹಲಿ: ಭಾರತದ ಉತ್ಪನ್ನಗಳಿಗೆ ಮೊದಲು ಶೇ.25ರಷ್ಟು ತೆರಿಗೆ ಹಾಕಿ ಬಳಿಕ ಮತ್ತೆ ಶೇ.25ರಷ್ಟು ದಂಡದ ಮೂಲಕ ಡಬಲ್ ಶಾಕ್ ನೀಡಿದ್ದ ಅಮೆರಿಕಕ್ಕೆ ಇದೀಗ ಭಾರತವೂ ಡಬಲ್ ತಿರುಗೇಟು ನೀಡಲು ಮುಂದಾಗಿದೆ. ಒಂದೆಡೆ ಅಮೆರಿಕದ ಎಚ್ಚರಿಕೆ ಹೊರತಾಗಿಯೂ ರಷ್ಯಾ ದಿಂದ ತೈಲ ಖರೀದಿ ಹೆಚ್ಚಳಕ್ಕೆ ಮುಂದಾಗಿದ್ದರೆ, ಮತ್ತೊಂದೆಡೆ ಅಮೆರಿಕದ ಬದಲಾಗಿ ಇತರೆ 40ಕ್ಕೂ ಹೆಚ್ಚು ದೇಶಗಳನ್ನು ತನ್ನ ರಫ್ತಿನ ವ್ಯಾಪ್ತಿಗೆ ಸೇರಿಸಿ ಕೊಳ್ಳಲುಸರ್ಕಾರ ದೃಢಹೆಜ್ಜೆ ಇಟ್ಟಿದೆ ಎನ್ನಲಾಗಿದೆ. ಅಮೆರಿಕದ ಶೇ.50ರಷ್ಟು ಭಾರೀ ತೆರಿಗೆಯಿಂದ ದೊಡ್ಡ ಮಟ್ಟದ ಸಂಕಷ್ಟ ಎದುರಿಸಲಿರುವ ದೇಶದ ಜವಳಿ ಉದ್ಯಮಕ್ಕೆ ಹೊಸ ಮಾರುಕಟ್ಟೆ ಕಲ್ಪಿಸಲು ಭಾರತ ಹೆಜ್ಜೆ ಇಟ್ಟಿದೆ.

11:09 PM (IST) Aug 29
11:09 PM (IST) Aug 29
ಲಾಸ್ ಏಂಜಲೀಸ್‌ನಲ್ಲಿ ನಡುರಸ್ತೆಯಲ್ಲಿ ತಲವಾರ್ ಝಳಪಿಸುತ್ತಿದ್ದ ಸಿಖ್ ವ್ಯಕ್ತಿಯನ್ನು ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಈ ಘಟನೆ ಪೊಲೀಸರ ಬಾಡಿಕ್ಯಾಮ್‌ನಲ್ಲಿ ಸೆರೆಯಾಗಿದ್ದು ಮೃತ ವ್ಯಕ್ತಿಯನ್ನು ಗುರುಪ್ರೀತ್ ಸಿಂಗ್ ಎಂದು ಗುರುತಿಸಲಾಗಿದೆ.
10:39 PM (IST) Aug 29
09:46 PM (IST) Aug 29
08:52 PM (IST) Aug 29
07:08 PM (IST) Aug 29
05:51 PM (IST) Aug 29
ರಿಲಯನ್ಸ್ 48ನೇ ವಾರ್ಷಿಕ ಮಹಾಸಭೆಯು ಜಾಮ್‌ನಗರದಲ್ಲಿರುವ ಧೀರೂಭಾಯಿ ಅಂಬಾನಿ ಗಿಗಾ ಎನರ್ಜಿ ಸಂಕೀರ್ಣವನ್ನು ತೋರಿಸಿದೆ. ಇದು ಟೆಸ್ಲಾದ ಗಿಗಾಫ್ಯಾಕ್ಟರಿಗಿಂತ ನಾಲ್ಕು ಪಟ್ಟು ದೊಡ್ಡದಾಗಿದ್ದು, ಭಾರತದ ಶುದ್ಧ ಇಂಧನ ಮಹತ್ವಾಕಾಂಕ್ಷೆಗಳನ್ನು ಪೂರ್ಣಗೊಳಿಸಲಿದೆ.
03:33 PM (IST) Aug 29
01:08 PM (IST) Aug 29
ಈ ವರ್ಷದ ಕೊನೆಯ ಪೂರ್ಣ ಚಂದ್ರ ಗ್ರಹಣ ಸೆಪ್ಟೆಂಬರ್ 7 ಮತ್ತು 8 ರ ರಾತ್ರಿ ಸಂಭವಿಸುತ್ತದೆ. ಇದು ವರ್ಷದ ಎರಡನೇ ಮತ್ತು ಅಂತಿಮ ಪೂರ್ಣ ಚಂದ್ರ ಗ್ರಹಣವಾಗಿದ್ದು ಇದರ ವಿಶೇಷತೆಯನ್ನು ಇಲ್ಲಿ ನೀಡಲಾಗಿದೆ.
01:05 PM (IST) Aug 29
11:57 AM (IST) Aug 29
ಪ್ರಧಾನಿ ಮೋದಿಯವರ ಜಪಾನ್ ಭೇಟಿಯ ಹಿನ್ನೆಲೆಯಲ್ಲಿ ಜಪಾನ್ ತನ್ನ ಅಮೆರಿಕಾ ಭೇಟಿ ರದ್ದುಗೊಳಿಸಿದೆ. ಅಮೆರಿಕದಲ್ಲಿ 550 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಉದ್ದೇಶಿಸಿದ್ದ ಜಪಾನ್, ಟ್ರಂಪ್ ಹೇಳಿಕೆಯಿಂದಾಗಿ ಗೊಂದಲಕ್ಕೊಳಗಾಗಿದ್ದು, ಈಗ ಭಾರತದ ಪ್ರಧಾನಿ ಭೇಟಿಗೂ ಕೆಲ ಕ್ಷಣ ಮೊದಲು ಈ ಅಮೆರಿಕಾ ಭೇಟಿ ನಿಲ್ಲಿಸಿದೆ
11:11 AM (IST) Aug 29
ದರ್ಭಾಂಗದಲ್ಲಿ ಪ್ರಧಾನಿ ಮೋದಿ ಮತ್ತು ಅವರ ತಾಯಿಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ರಿಜ್ವಿ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಈ ಘಟನೆ ಕಾಂಗ್ರೆಸ್-ಆರ್‌ಜೆಡಿ ರ್ಯಾಲಿಯಲ್ಲಿ ನಡೆದಿದ್ದು, ರಾಜಕೀಯ ವಿವಾದಕ್ಕೆ ಕಾರಣವಾಗಿದೆ.
08:35 AM (IST) Aug 29
ಭಾರತದ ಮೇಲೆ ಅಮೆರಿಕ ವಿಧಿಸಿರುವ ತೆರಿಗೆ ಯುದ್ಧದ ಬಗ್ಗೆ ಆರ್ಥಿಕ ತಜ್ಞ ರಿಚರ್ಡ್ ವೂಲ್ಫ್ ಕಳವಳ ವ್ಯಕ್ತಪಡಿಸಿದ್ದಾರೆ. ಈ ನಡೆ ಅಮೆರಿಕದ ಕಾಲಿಗೆ ಅದೇ ಗುಂಡು ಹೊಡೆದುಕೊಂಡಂತೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.