Published : Feb 16, 2026, 07:04 AM ISTUpdated : Feb 16, 2026, 11:45 PM IST

India Latest News Live: ಮೂರನೇ ಬಾರಿ ಲಕ್ಕಿ, ಮೂರನೇ ಮದುವೆಯಲ್ಲೂ IAS ಅಫೀಸರ್ ಕೈಹಿಡಿದ IAS ಅಧಿಕಾರಿ ಅವಿ ಪ್ರಸಾದ್

ಸಾರಾಂಶ

ಮ್ಯೂನಿಕ್‌: ಇಂಧನ ಖರೀದಿ ವಿಷಯದಲ್ಲಿ ನಮಗೆ ನಮ್ಮ ರಾಷ್ಟ್ರೀಯ ಹಿತಾಸಕ್ತಿಯೇ ಮುಖ್ಯ ಎಂಬ ಭಾರತದ ಸ್ಪಷ್ಟನೆಯ ಬೆನ್ನಲ್ಲೇ, ರಷ್ಯಾ ತೈಲ ಖರೀದಿ ಸ್ಥಗಿತದ ಬಗ್ಗೆ ಭಾರತ ನಮಗೆ ಭರವಸೆ ನೀಡಿದೆ ಎಂದು ಅಮೆರಿಕದ ವಿದೇಶಾಂಗ ಸಚಿವ ಮಾರ್ಕೋ ರುಬಿಯೋ ಹೇಳಿದ್ದಾರೆ. ಅಮೆರಿಕ- ಭಾರತ ನಡುವೆ ಟ್ರೇಡ್‌ ಡೀಲ್‌ ಬಳಿಕ ಅಮೆರಿಕ ಹಲವು ಸಲ ಭಾರತವು ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಲಿದೆ ಎಂದಿದ್ದರು. ಆದರೆ ಭಾರತ ಮಾತ್ರ ಪದೇ ಪದೇ ನಮಗೆ ನಮ್ಮ ರಾಷ್ಟ್ರೀಯ ಹಿತಾಸಕ್ತಿಯೇ ಮುಖ್ಯ ಎಂದು ಹೇಳುತ್ತಾ ಬಂದಿದೆಯಾದರೂ ಎಲ್ಲಿಯೂ ರಷ್ಯಾ ತೈಲ ಖರೀದಿ ಸ್ಥಗಿತದ ಬಗ್ಗೆ ಮಾತನಾಡಿಲ್ಲ. ಮತ್ತೊಂದೆಡೆ ರಷ್ಯಾ ಕೂಡಾ, ನಮಗೆ ಭಾರತದಿಂದ ತೈಲ ಖರೀದಿ ಸ್ಥಗಿತದ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ ಎಂದು ಹೇಳಿತ್ತು.

IAS Avi prasad Marriage

11:45 PM (IST) Feb 16

ಮೂರನೇ ಬಾರಿ ಲಕ್ಕಿ, ಮೂರನೇ ಮದುವೆಯಲ್ಲೂ IAS ಅಫೀಸರ್ ಕೈಹಿಡಿದ IAS ಅಧಿಕಾರಿ ಅವಿ ಪ್ರಸಾದ್

ಮೂರನೇ ಬಾರಿ ಲಕ್ಕಿ, ಮೂರನೇ ಮದುವೆಯಲ್ಲೂ IAS ಅಫೀಸರ್ ಕೈಹಿಡಿದ IAS ಅಧಿಕಾರಿ ಅವಿ ಪ್ರಸಾದ್, ಇದು ಅದೃಷ್ಟವೋ ಅಥವಾ ಹಣೆಯಲ್ಲಿ ಬರೆದಿತ್ತೋ ಗೊತ್ತಿಲ್ಲ. ಆದರೆ ಈ IAS ಅಧಿಕಾರಿ 3 ಬಾರಿ ಮದುವೆಯಾಗಿದ್ದು IAS ಮಹಿಳಾ ಅಧಿಕಾರಿಗಳನ್ನೇ.

 

Read Full Story

10:58 PM (IST) Feb 16

ಮಾಡೆಲ್ ಆದಿತಿ ಜೊತೆ ಇಶಾನ್ ಕಿಶನ್ ಮದುವೆ, ಮಾಹಿತಿ ಖಚಿತಪಡಿಸಿದ ಕ್ರಿಕೆಟಿಗನ ಅಜ್ಜ

ಮಾಡೆಲ್ ಆದಿತಿ ಜೊತೆ ಇಶಾನ್ ಕಿಶನ್ ಮದುವೆ, ಇಶಾನ್ ಕಿಶನ್‌ ಬಹುಕಾಲದ ಗರ್ಲ್‌ಫ್ರೆಂಡ್ ಮದುವೆಯಾಗುತ್ತಾರೆ. ಕಿಶನ್ ಪ್ರೀತಿಯನ್ನು ನಾವು ಒಪ್ಪಿಕೊಂಡಿದ್ದೇವೆ ಎಂದಿದ್ದಾರೆ. ಯಾರು ಈ ಸುಂದರಿ?

 

Read Full Story

09:32 PM (IST) Feb 16

ಪ್ರತಿ ಬಿಯರ್ ಬಾಟಲಿ ಮುಚ್ಚಳದಲ್ಲಿದೆ 21 ರಿಡ್ಜ್, ಇದರ ಹಿಂದಿರುವ ಇಂಟ್ರೆಸ್ಟಿಂಗ್ ಕಹಾನಿ ಏನು?

ಪ್ರತಿ ಬಿಯರ್ ಬಾಟಲಿ ಮುಚ್ಚಳದಲ್ಲಿದೆ 21 ರಿಡ್ಜ್, ಬಿಯಲ್ ಬಾಟಲಿ ಮುಚ್ಚಳದಲ್ಲಿನ ಹಲ್ಲುಗಳ ಸಂಖ್ಯೆ ಹಿಂದೆ ರೋಚಕ ಕಹಾನಿ ಇದೆ. ಪ್ರತಿ ಬಿಯರ್ ಬಾಟಲಿ ಮುಚ್ಚಳದಲ್ಲಿನ ಹಲ್ಲುಗಳ ಸಂಖ್ಯೆ 21.

Read Full Story

07:34 PM (IST) Feb 16

ಮದುವೆ ಭರವಸೆಯಲ್ಲಿ ದೈಹಿಕ ಸಂಬಂಧ ಬಳಿಕ ಮೋಸ, ಈ ಅರ್ಜಿದಾರರಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ

ಮದುವೆ ಭರವಸೆಯಲ್ಲಿ ದೈಹಿಕ ಸಂಬಂಧ ಬಳಿಕ ಮೋಸ, ಈಗ ಮದುವೆಯಾಗುತ್ತಿಲ್ಲ, ಬೇರೆ ಮದುವೆಯಾಗಿದ್ದಾನೆ ಎಂದು ದೂರು ದಾಖಲಿಸುವ ಸಂತ್ರಸ್ತರಿಗೆ ಸುಪ್ರೀಂ ಕೋರ್ಟ್ ಮಹತ್ವದ ಎಚ್ಚರಿಕೆ ನೀಡಿದೆ.

 

Read Full Story

07:24 PM (IST) Feb 16

ಡಿವೋರ್ಸ್‌ ಕೇಸಲ್ಲಿ ಗಂಡನ ಬದಲು ಆತನ ಗೆಳತಿ ನೀಡಿದಳು ಹೆಂಡತಿಗೆ ದುಬಾರಿ 1.5 ಕೋಟಿ ಪರಿಹಾರ

ಭೋಪಾಲ್‌ನಲ್ಲಿ, ಇಬ್ಬರು ಮಕ್ಕಳ ತಾಯಿಯೊಬ್ಬರು ತನ್ನ ಗಂಡನ ಪ್ರೇಯಸಿಯಿಂದ 1.5 ಕೋಟಿ ಮೌಲ್ಯದ ಪರಿಹಾರ ಪಡೆದು ವಿಚ್ಛೇದನಕ್ಕೆ ಒಪ್ಪಿಕೊಂಡಿದ್ದಾರೆ. ನಿರಂತರ ಕೌಟುಂಬಿಕ ಕಲಹದ ನಂತರ, ಮಕ್ಕಳ ಭವಿಷ್ಯಕ್ಕಾಗಿ ಈ ನಿರ್ಧಾರಕ್ಕೆ ಬರಲಾಗಿದ್ದು, ಈ ವಿಚಿತ್ರ ಪ್ರಕರಣ 90ರ ದಶಕದ ಜುದಾಯಿ ಸಿನಿಮಾವನ್ನು ಹೋಲುತ್ತಿದೆ.

Read Full Story

05:51 PM (IST) Feb 16

ಚಿನ್ನ ಖರೀದಿ, ಮಾರಾಟ ಮಾಡುವ ಮುನ್ನ ಈ ಹೊಸ ತೆರಿಗೆ ನಿಯಮ ತಿಳಿದುಕೊಳ್ಳಿ

ಚಿನ್ನ ಖರೀದಿ, ಮಾರಾಟ ಮಾಡುವ ಮುನ್ನ ಈ ಹೊಸ ತೆರಿಗೆ ನಿಯಮ ತಿಳಿದುಕೊಳ್ಳಿ, ನೀವು ಚಿನ್ನದ ಆಭರಣ, ನಾಣ್ಯ ಅಥವಾ ಡಿಜಿಟಲ್ ಗೋಲ್ಡ್ ಖರೀದಿಸಿದರೆ ಶೇ. 3ರಷ್ಟು ಜಿಎಸ್‌ಟಿ ಕಟ್ಟಬೇಕು. ಇತರ ತೆರಿಗೆ ಕುರಿತು ಮಾಹಿತಿ ಇಲ್ಲಿದೆ.

 

Read Full Story

05:39 PM (IST) Feb 16

ಟಾಕ್ಸಿಕ್ vs ಧುರಂಧರ್ 2 - ಕರ್ನಾಟಕದಲ್ಲೇ ಯಶ್–ರಣ್‌ವೀರ್ ಬಾಕ್ಸಾಫೀಸ್ ಯುದ್ಧ ಶುರು!

ಯಶ್ ನಟನೆಯ 'ಟಾಕ್ಸಿಕ್' ಮತ್ತು ರಣ್‌ವೀರ್ ಸಿಂಗ್ ಅಭಿನಯದ 'ಧುರಂಧರ್ 2' ಒಂದೇ ದಿನ ಬಿಡುಗಡೆಯಾಗುತ್ತಿದ್ದು, ಬಾಕ್ಸಾಫೀಸ್‌ನಲ್ಲಿ ದೊಡ್ಡ ಸ್ಪರ್ಧೆ ಏರ್ಪಟ್ಟಿದೆ. ವಿಶೇಷವಾಗಿ, 'ಧುರಂಧರ್ 2' ತಂಡವು ಕರ್ನಾಟಕದಲ್ಲೇ 'ಟಾಕ್ಸಿಕ್' ಚಿತ್ರಕ್ಕಿಂತ ಹೆಚ್ಚು ಸ್ಕ್ರೀನ್‌ಗಳನ್ನು ಪಡೆಯಲು ಯತ್ನಿಸುತ್ತಿದೆ.

Read Full Story

04:57 PM (IST) Feb 16

ಪಕ್ಷಕ್ಕೆ ರಾಜೀನಾಮೆ ನೀಡಿದ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಮಲ್ಲಿಕಾರ್ಜುನ ಖರ್ಗೆ ಪತ್ರ ಓದುವಷ್ಟರಲ್ಲಿ ಯೂ ಟರ್ನ್

ಪಕ್ಷಕ್ಕೆ ರಾಜೀನಾಮೆ ನೀಡಿದ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಸಾಕಾಯ್ತು ಸಹವಾಸ ಎಂದು ರಾಜೀನಾಮೆ ಪತ್ರವನ್ನು ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ರವಾನಿಸಿದ್ದಾರೆ. ಖರ್ಗೆ ರಾಜೀನಾಮೆ ಪತ್ರ ಓದಿ ಮುಗಿಸುವಷ್ಟರಲ್ಲೇ ನಾಯಕ ಯೂ ಟರ್ನ್ ಹೊಡೆದಿದ್ದಾರೆ.

 

Read Full Story

04:48 PM (IST) Feb 16

ಪ್ರೇಮಿಗಳಿಗೆ ವಿಶ್ವದಲ್ಲೇ ಅತ್ಯಂತ ಅಗ್ಗದ ನಗರವಿದು - ಭಾರತದಲ್ಲಿದೆ ಈ ಬಜೆಟ್ ಫ್ರೆಂಡ್ಲಿ ನಗರಿ

ಇತ್ತೀಚಿನ ದಿನಗಳಲ್ಲಿ ಎಲ್ಲವೂ ದುಬಾರಿ  ಪ್ರೀತಿ ಪ್ರೇಮ ದುಡ್ಡಿದ್ದವರಿಗೂ ಇಲ್ಲದವರಿಗೂ ಒಂದೇ ಹೀಗಿರುವಾಗ ನೀವು ನಿಮ್ಮ ಪ್ರೇಮಿಯನ್ನು ಕರೆದುಕೊಂಡು ಸುತ್ತಾಡಬೇಕು ಅನಿಸಿದ್ರೆ  ನಿಮ್ಮ ಜೇಬಿಗೂ ಆರಾಮ ನೀಡುವ ಜಾಗವೊಂದಿದೆ ನೋಡಿ..

Read Full Story

04:12 PM (IST) Feb 16

ಗರ್ಲ್‌ಫ್ರೆಂಡ್ ಜೊತೆ ಬೈಕ್‌ನಲ್ಲಿ ವ್ಹೀಲಿಂಗ್ ಸ್ಟಂಟ್, ಗೆಳತಿ ಖಾಸಗಿ ಅಂಗಕ್ಕೆ ಗಂಭೀರ ಗಾಯ

ಗರ್ಲ್‌ಫ್ರೆಂಡ್ ಜೊತೆ ಬೈಕ್‌ನಲ್ಲಿ ವ್ಹೀಲಿಂಗ್ ಸ್ಟಂಟ್, ಕೊಂಚ ಡಿಫ್ರೆಂಟ್ ಇರ್ಲಿ ಎಂದು ಗೆಳತಿ ಕೂರಿಸಿ ಸ್ಟಂಟ್ ಮಾಡಿದ್ದಾನೆ. ಆದರೆ ದುರಂತದಲ್ಲಿ ಗೆಳತಿ ಚಕ್ರದಡಿಗೆ ಸಿಲುಕಿ ಆಕೆಯ ಖಾಸಗಿ ಅಂಗ ಗಂಭೀರವಾಗಿ ಗಾಯಗೊಂಡಿದೆ.

 

Read Full Story

04:11 PM (IST) Feb 16

ಭಾರತ ಎದುರು ಪಾಕ್ ಸೋಲುತ್ತಿದ್ದಂತೆ ಸ್ಟೇಡಿಯಂನಿಂದ ಓಡಿ ಹೋದ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ! ವಿಡಿಯೋ ವೈರಲ್

ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ 61 ರನ್‌ಗಳ ಹೀನಾಯ ಸೋಲು ಕಂಡಿದೆ. ಭಾರತ ನೀಡಿದ 176 ರನ್‌ಗಳ ಗುರಿ ಬೆನ್ನಟ್ಟಲಾಗದೆ ಪಾಕ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಈ ಕಳಪೆ ಪ್ರದರ್ಶನದಿಂದಾಗಿ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಪಂದ್ಯದ ಮಧ್ಯದಲ್ಲೇ ಸ್ಟೇಡಿಯಂನಿಂದ ಹೊರನಡೆದರು.
Read Full Story

03:31 PM (IST) Feb 16

ಸೂರ್ಯಕುಮಾರ್ ಕೊಟ್ಟ ಒಂದೇ ವಾರ್ನಿಂಗ್, ಭಾರತ ಪಾಕಿಸ್ತಾನ ಪಂದ್ಯದಲ್ಲಿ ಇರಲೇ ಇಲ್ಲ ಸ್ಲೆಡ್ಜಿಂಗ್

ಸೂರ್ಯಕುಮಾರ್ ಕೊಟ್ಟ ಒಂದೇ ವಾರ್ನಿಂಗ್, ಇದರ ಪರಿಣಾಮ ಭಾರತ ಹಾಗೂ ಪಾಕಿಸ್ತಾನ ಪಂದ್ಯದ ರೋಚಕತೆ ಹೆಚ್ಚಿಸುವ ಸ್ಲೆಡ್ಜಿಂಗ್ ಇರಲೇ ಇಲ್ಲ. ಎಲ್ಲವು ಶಾಂತವಾಗಿತ್ತು. ಅಷ್ಟಕ್ಕೂ ಸೂರ್ಯಕುಮಾರ್ ವಾರ್ನಿಂಗ್ ಏನು?

 

Read Full Story

03:18 PM (IST) Feb 16

ಪ್ರಧಾನಿ ಕಂಡ್ರೆ ಉರಿಯುವ ತಾಪ್ಸಿ ಪನ್ನು ನೆಚ್ಚಿನ ರಾಜಕಾರಣಿ ಮೋದಿಯಂತೆ! ಯಾಕಿಷ್ಟು ಬದಲಾವಣೆ?

ಬಾಲಿವುಡ್ ನಟಿ ತಾಪ್ಸೀ ಪನ್ನು, ಟಾಕ್ ಶೋ ಒಂದರಲ್ಲಿ ತಮ್ಮ ನೆಚ್ಚಿನ ರಾಜಕೀಯ ನಾಯಕ ಯಾರೆಂಬ ಪ್ರಶ್ನೆಗೆ ಪ್ರಧಾನಿ ಮೋದಿಯವರನ್ನು ಆಯ್ಕೆ ಮಾಡಿದ್ದಾರೆ. ನಂತರ, "ನನಗೆ ಈ ದೇಶದಲ್ಲಿ ಇನ್ನೂ ಬದುಕಬೇಕು" ಎಂದು ಅವರು ನೀಡಿದ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.
Read Full Story

02:54 PM (IST) Feb 16

ಐಫೋನ್ 16 ಪ್ಲಸ್‌ಗೆ ಭರ್ಜರಿ ಡಿಸ್ಕೌಂಟ್, ಫ್ಲಾಟ್ 18010 ರೂ ರಿಯಾಯಿತಿ ಜೊತೆಗೆ ಬ್ಯಾಂಕ್ ಆಫರ್

ಐಫೋನ್ 16 ಪ್ಲಸ್‌ಗೆ ಭರ್ಜರಿ ಡಿಸ್ಕೌಂಟ್, ಬರೋಬ್ಬರಿ 18,010 ರೂಪಾಯಿ ಡಿಸ್ಕೌಂಟ್ ಹಾಗೂ ಬ್ಯಾಂಕ್ ಆಫರ್ ನೀಡಲಾಗುತ್ತಿದೆ. ಇದರೊಂದಿಗೆ ಐಫೋನ್ 16 ಪ್ಲಸ್ ಅತೀ ಕಡಿಮೆಬೆಲೆಗೆ, ಆ್ಯಂಡ್ರಾಯ್ಡ್ ಫೋನ್ ರೀತಿ ಖರೀದಿಸಲು ಸಾಧ್ಯವಾಗುತ್ತಿದೆ.

Read Full Story

02:49 PM (IST) Feb 16

12 ವರ್ಷ ಚಿಕ್ಕವನಾದ ಸಹೋದ್ಯೋಗಿಯನ್ನು ಮದ್ವೆಯಾಗಲು ಆತನ ಹೆಂಡ್ತಿಗೆ 1.5 ಕೋಟಿ ಕೊಟ್ಟ ಮಹಿಳೆ

54 ವರ್ಷದ ಮಹಿಳಾ ಅಧಿಕಾರಿಯೊಬ್ಬರು ತಮಗಿಂತ 12 ವರ್ಷ ಚಿಕ್ಕವನಾದ ಸಹೋದ್ಯೋಗಿಯನ್ನು ಪ್ರೀತಿಸಿದ್ದಾರೆ. ಆತನನ್ನು ಮದುವೆಯಾಗುವ ಸಲುವಾಗಿ, ಆತನ ಪತ್ನಿಗೆ ವಿಚ್ಛೇದನ ನೀಡಲು ಸುಮಾರು 1.5 ಕೋಟಿ ರೂಪಾಯಿ ಪರಿಹಾರ ನೀಡಿ, ಕೊನೆಗೆ ತಮ್ಮ ಪ್ರೀತಿಯನ್ನು ಗೆಲ್ಲಿಸಿಕೊಂಡಿದ್ದಾರೆ.
Read Full Story

02:40 PM (IST) Feb 16

ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ಸಿಸೇರಿಯನ್ ಮಾಡಿದ 12ನೇ ಕ್ಲಾಸ್ ವಿದ್ಯಾರ್ಥಿ - ಮಹಿಳೆ ಸಾವು

ಪಿಯುಸಿ ವಿದ್ಯಾರ್ಥಿ ಮತ್ತೊಬ್ಬ ಬಿಎ ಪದವೀಧರ ಡಾಕ್ಟರ್ ಕೆಲಸ ಮಾಡುವುದಕ್ಕೆ ಹೋಗಿ ತಾಯಿಯೊಬ್ಬಳ ಅಮೂಲ್ಯ ಜೀವವನ್ನು ಬಲಿ ಪಡೆದಿದ್ದಾರೆ. ಉತ್ತರ ಪ್ರದೇಶದ ಲಕ್ನೋದ ಅಂಬೇಡ್ಕರ್ ನಗರದಲ್ಲಿ ಈ ಘಟನೆ ನಡೆದಿದ್ದು, ಈಗ ಪೊಲೀಸರು ಈ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

Read Full Story

02:39 PM (IST) Feb 16

ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಬೀದಿ ದೀಪ ಕಂಬ, ಎಸ್‌ಪಿ ಪ್ರಮುಖ ನಾಯಕ ಸ್ಥಳದಲ್ಲೇ ಸಾವು

ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಬೀದಿ ದೀಪ ಕಂಬ, ಕೆಲಸದ ನಿಮಿತ್ತ ಚಲಿಸುತ್ತಿದ್ದ ನಾಯಕನ ಕಾರಿನ ಮೇಲೆ ದೀಪದ ಕಂಬ ಬಿದ್ದ ಪರಿಣಾಮ ಲಾಲ್ ಬಹದ್ದೂರ್ ಯಾದವ್ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

 

Read Full Story

02:24 PM (IST) Feb 16

ಪಾಕಿಸ್ತಾನದ್ದು ಬರೀ ಒಣ ಪೌರುಷ, 1-8 ರಿಂದ ಘೋರ ಅವಮಾನ..! ಟಿ20 ವಿಶ್ವಕಪ್‌ನಲ್ಲಿ ಭಾರತಕ್ಕೆ ಪಾಕ್ ಹೇಗೆಲ್ಲಾ ಶರಣಾಗಿದೆ ಗೊತ್ತಾ?

ಟಿ20 ವಿಶ್ವಕಪ್ ಇತಿಹಾಸದಲ್ಲಿ ಬದ್ಧವೈರಿ ಪಾಕಿಸ್ತಾನದ ವಿರುದ್ಧ ಭಾರತವು ತನ್ನ ಪಾರಮ್ಯವನ್ನು ಮುಂದುವರಿಸಿದೆ. 2007 ರಿಂದ 2024ರ ವರೆಗಿನ ಪಂದ್ಯಗಳಲ್ಲಿ 8-1 ಅಂತರದ ಗೆಲುವಿನ ದಾಖಲೆ ನಿರ್ಮಿಸಿದ್ದು, ಈ ಲೇಖನವು ಪ್ರತಿ ವಿಶ್ವಕಪ್‌ನಲ್ಲಿನ ರೋಚಕ ಗೆಲುವುಗಳ ವಿವರಗಳನ್ನು ನೀಡುತ್ತದೆ.
Read Full Story

02:23 PM (IST) Feb 16

Pakistani Cricketers - ಬ್ರೈನ್ ಆಂಡ್ ಬ್ಯೂಟಿ ಇರೋ ಪಾಕಿಸ್ತಾನಿ ಕ್ರಿಕೆಟಿಗರ ಮಡದಿಯರು

ಪಾಕಿಸ್ತಾನಿ ಕ್ರಿಕೆಟಿಗರ ಪತ್ನಿಯರು ಕೇವಲ ಗೃಹಿಣಿಯರಲ್ಲ. ಇವರಲ್ಲಿ ನಟಿಯರು, ಇಂಜಿನಿಯರ್‌ಗಳು, ವಕೀಲರೂ ಇದ್ದಾರೆ. ಕ್ರಿಕೆಟ್, ಮನರಂಜನೆ, ಬ್ಯುಸಿನೆಸ್ ಮತ್ತು ಕುಟುಂಬ ಸಂಪ್ರದಾಯಗಳು ಹೇಗೆ ಬೆರೆತಿವೆ ಎಂಬುದಕ್ಕೆ ಈ ಜೋಡಿಗಳ ಕಥೆಗಳೇ ಸಾಕ್ಷಿ.
Read Full Story

02:13 PM (IST) Feb 16

ಹಾಸ್ಟೆಲ್‌ ಟಾಯ್ಲೆಟ್‌ನಲ್ಲಿ ಬಿಹಾರ ಮೂಲದ MBBS ವಿದ್ಯಾರ್ಥಿ ಶವವಾಗಿ ಪತ್ತೆ - ತನಿಖೆ ಆರಂಭ

ಖಾಸಗಿ ಮೆಡಿಕಲ್ ಕಾಲೇಜೊಂದರ ಹಾಸ್ಟೆಲ್ ಟಾಯ್ಲೆಟ್‌ನಲ್ಲಿ ಬಿಹಾರ ಮೂಲದ ಎಂಬಿಬಿಎಸ್ ವಿದ್ಯಾರ್ಥಿಯೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪೊಲೀಸರು ಇದು ಆತ್ಮ*ಹತ್ಯೆ ಎಂದು ಶಂಕಿಸಿದ್ದಾರೆ, ಆದರೆ ಮರಣೋತ್ತರ ಪರೀಕ್ಷೆಯ ನಂತರವೇ ನಿಖರ ಕಾರಣ ತಿಳಿಯಲಿದೆ. 

Read Full Story

01:37 PM (IST) Feb 16

ಟಿ20 ವಿಶ್ವಕಪ್ ತಂಡದ ಪ್ಲಾನ್‌ನಲ್ಲೇ ಇರದ ಇಶಾನ್ ಕಿಶನ್ ಟೀಂ ಇಂಡಿಯಾಗೆ ಸೆಲೆಕ್ಟ್ ಆಗಿದ್ದು ಹೇಗೆ? ಇದಕ್ಕೆ ಯಾರು ಕಾರಣ ಗೊತ್ತಾ?

ಬೆಂಗಳೂರು: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ, ಪಾಕಿಸ್ತಾನ ಎದುರು ಗೆದ್ದು ಬೀಗಿದೆ. ಈ ಗೆಲುವಿನ ರೂವಾರಿ ಇಶಾನ್ ಕಿಶನ್. ಎರಡೂವರೆ ವರ್ಷದಿಂದ ತಂಡದಿಂದ ಹೊರಗುಳಿದಿದ್ದ ಇಶಾನ್ ಕಿಶನ್, ಡೈರೆಕ್ಟ್ ಟಿ20 ವಿಶ್ವಕಪ್ ಆಗಿದ್ದು ಹೇಗೆ? ಇದಕ್ಕೆ ಯಾರು ಕಾರಣ ಗೊತ್ತಾ?

 

Read Full Story

12:35 PM (IST) Feb 16

ಮನೆ ಟೆರೇಸ್ ಮೇಲೆ ಬಾಂಬ್ ತಯಾರಿಸುತ್ತಿದ್ದಾಗ ಸ್ಫೋಟ - ಅಮ್ಮ ಮಗ ಸಾವು

ಭುವನೇಶ್ವರದಲ್ಲಿ ಮನೆಯ ಮೇಲ್ಛಾವಣಿಯ ಮೇಲೆ ಬಾಂಬ್ ತಯಾರಿಸುತ್ತಿದ್ದಾಗ ಸಂಭವಿಸಿದ ಸ್ಫೋಟದಲ್ಲಿ ರೌಡಿ ಶೀಟರ್ ಮಗ ಮತ್ತು ಆತನ ತಾಯಿ ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಸ್ಫೋಟದ ವೀಡಿಯೋ ವೈರಲ್ ಆಗಿದೆ. NIA ಸೇರಿದಂತೆ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

Read Full Story

12:05 PM (IST) Feb 16

ಪಾಕ್ ಎದುರು ಗೆದ್ದರೂ ಕುಲ್ದೀಪ್ ಯಾದವ್ ಮೇಲೆ ಸೂರ್ಯಕುಮಾರ್-ಪಾಂಡ್ಯ ರೇಗಿದ್ದೇಕೆ? ವಿಡಿಯೋ ನೋಡಿ

2026ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಗೆದ್ದರೂ, ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಸ್ಪಿನ್ನರ್ ಕುಲ್ದೀಪ್ ಯಾದವ್ ಮೇಲೆ ತೀವ್ರ ಕೋಪಗೊಂಡಿದ್ದರು. ಪಂದ್ಯದ ನಿರ್ಣಾಯಕ ಹಂತದಲ್ಲಿ ಕುಲ್ದೀಪ್ ಸುಲಭದ ಕ್ಯಾಚ್ ಕೈಚೆಲ್ಲಿದ್ದೇ ಸೂರ್ಯನ ಕೋಪಕ್ಕೆ ಕಾರಣವಾಗಿತ್ತು, ಈ ವಿಡಿಯೋ ವೈರಲ್ ಆಗಿದೆ.

Read Full Story

11:44 AM (IST) Feb 16

ಕ್ರಿಕೆಟಿಗ ವರುಣ್ ಚಕ್ರವರ್ತಿಯ 45 ಕೋಟಿ ಮನೆ, ಐಷಾರಾಮಿ ಕಾರುಗಳ ಕಲೆಕ್ಷನ್ ಹೇಗಿದೆ ನೋಡಿ

ಆರ್ಕಿಟೆಕ್ಟ್‌ನಿಂದ ಕ್ರಿಕೆಟಿಗನಾಗಿ ಬದಲಾದ ವರುಣ್ ಚಕ್ರವರ್ತಿ, ಮೈದಾನದ ಒಳಗೆ ಮತ್ತು ಹೊರಗೆ ಯಶಸ್ಸು ಕಂಡಿದ್ದಾರೆ. ಈ ಮಿಸ್ಟರಿ ಸ್ಪಿನ್ನರ್‌ನ ನಿವ್ವಳ ಮೌಲ್ಯ, ಮನೆ, ಕಾರ್ ಕಲೆಕ್ಷನ್ ಮತ್ತು ಜೀವನಶೈಲಿಯ ಕುರಿತು ಈ ಫೋಟೋ ಗ್ಯಾಲರಿಯಲ್ಲಿ ತಿಳಿಯಿರಿ.
Read Full Story

11:37 AM (IST) Feb 16

ನಿಮ್ಮ ಅಳಿಯನನ್ನೂ ಈಗಲೇ ಬುಕ್ ಮಾಡಿ - ಸೀಮಿತ ಆಫರ್ - ಓದದ ಮಗನಿಂದ ಬೇಸತ್ತ ತಾಯಿ ಮಾಡಿದ್ದೇನು?

ಸ್ಮಾರ್ಟ್‌ಫೋನ್‌ನಲ್ಲಿ ಸದಾ ಬ್ಯುಸಿಯಾಗಿ ಓದದ  ಪುಟ್ಟ ಮಗನಿಂದ ಬೇಸತ್ತ ತಾಯಿಯೊಬ್ಬರು, ತಮ್ಮ ಮಗನಿಗೆ ಓದದ ಹುಡುಗಿಯೊಂದಿಗೆ ಮದುವೆ ಮಾಡಿಸುವುದಾಗಿ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ತಮಾಷೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

Read Full Story

11:10 AM (IST) Feb 16

ಭಾರತ ಎದುರು ಹೀನಾಯ ಸೋಲಿನಿಂದ ಕೆರಳಿದ ಪಾಕ್ ಫ್ಯಾನ್ಸ್, ಟಿವಿ ಪುಡಿ ಪುಡಿ! ವಿಡಿಯೋ ವೈರಲ್

ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಹೀನಾಯ ಸೋಲು ಕಂಡಿದೆ. ಈ ಸೋಲಿನಿಂದ ಕೆರಳಿದ ಪಾಕ್ ಅಭಿಮಾನಿಗಳು ಟಿವಿ ಸೆಟ್‌ಗಳನ್ನು ಒಡೆದುಹಾಕಿ ಆಕ್ರೋಶ ವ್ಯಕ್ತಪಡಿಸಿದ್ದು, ಭಾರತ ಈ ಗೆಲುವಿನೊಂದಿಗೆ ಸೂಪರ್-8 ಹಂತಕ್ಕೆ ಲಗ್ಗೆಯಿಟ್ಟಿದೆ.
Read Full Story

10:29 AM (IST) Feb 16

ಯುವಿಯಿಂದ ಪಾಂಟಿಂಗ್‌ವರೆಗೆ ಮದ್ಯದ ಬ್ಯುಸಿನೆಸ್ ನಡೆಸೋ ಟಾಪ್ 5 ದಿಗ್ಗಜ ಕ್ರಿಕೆಟಿಗರಿವರು! ಯುವಿ ಬ್ರ್ಯಾಂಡ್ ಯಾವುದು ಗೊತ್ತಾ?

ಟೀಂ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಸಿಂಗ್ ಇತ್ತೀಚೆಗೆ 'ಫಿನೋ ಟೆಕ್ವಿಲಾ' ಎಂಬ ದುಬಾರಿ ಮದ್ಯದ ಬ್ರ್ಯಾಂಡ್ ಲಾಂಚ್ ಮಾಡಿದ್ದಾರೆ. ಆದರೆ, ಮದ್ಯದ ಬ್ಯುಸಿನೆಸ್ ಮಾಡುತ್ತಿರುವ ಮೊದಲ ಕ್ರಿಕೆಟಿಗ ಯುವಿ ಅಲ್ಲ. ಅವರಿಗಿಂತ ಮುಂಚೆಯೇ ಹಲವು ಕ್ರಿಕೆಟಿಗರು ಈ ವ್ಯವಹಾರದಲ್ಲಿದ್ದಾರೆ.

 

Read Full Story

10:12 AM (IST) Feb 16

ಎರಡು ದಿನಗಳ ಬಳಿಕ ಮತ್ತೆ ಖುಷಿಯಾಗುವಷ್ಟು ಕುಸಿತಗೊಂಡ ಚಿನ್ನ - ಹಗುರವಾದ ಬಂಗಾರ, ಖರೀದಿಗೆ ಮತ್ಯಾಕೆ ತಡ?

ಎರಡು ದಿನಗಳ ಬಳಿಕ ಚಿನ್ನದ ದರದಲ್ಲಿ ಗಮನಾರ್ಹ ಇಳಿಕೆಯಾಗಿದೆ. 24 ಕ್ಯಾರಟ್ ಚಿನ್ನದ ಬೆಲೆ 100 ಗ್ರಾಂಗೆ ₹13,100 ರಷ್ಟು ಕುಸಿದಿದ್ದು, ಬೆಳ್ಳಿ ದರವೂ ಕೆಳಮುಖವಾಗಿದೆ. ಚಿನ್ನ ಖರೀದಿಗೆ ಯೋಜಿಸುತ್ತಿರುವವರಿಗೆ ಇದು ಉತ್ತಮ ಅವಕಾಶವಾಗಿದೆ.
Read Full Story

09:15 AM (IST) Feb 16

ಭಾರತ ವಿರುದ್ಧ ಸೋತರೂ ಪಾಕ್ ಅಪರೂಪದ ದಾಖಲೆ! ಸಯೀಮ್‌ಗೆ ಹ್ಯಾಟ್ರಿಕ್ ಜಸ್ಟ್ ಮಿಸ್!

ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಮ್ಯಾಚ್‌ನಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದೆ. ಇನ್ನು ಪಂದ್ಯದಲ್ಲಿ ಹೀನಾಯ ಸೋಲು ಕಂಡರೂ ಪಾಕಿಸ್ತಾನ ಬೌಲಿಂಗ್ ವಿಚಾರದಲ್ಲಿ ಹೊಸ ದಾಖಲೆ ಬರೆದಿದೆ. ಏನದು ನೋಡೋಣ ಬನ್ನಿ.

Read Full Story

08:09 AM (IST) Feb 16

ಪುರಸಭೆ ಚುನಾವಣೆಯಲ್ಲಿ ಸೋಲು - ಕೊಟ್ಟ ಕುಕ್ಕರ್, ಹಣ ವಾಪಸ್ ಕೇಳಿದ ಕಾಂಗ್ರೆಸ್ ಅಭ್ಯರ್ಥಿ!

ಅಶ್ವರಾವ್‌ಪೇಟೆ ಪುರಸಭೆ ಚುನಾವಣೆಯಲ್ಲಿ ಸೋತ ಕಾಂಗ್ರೆಸ್ ಅಭ್ಯರ್ಥಿ ಹರಿಬಾಬು, ತಾವು ಮತದಾರರಿಗೆ ಹಂಚಿದ್ದ ನಗದು ಮತ್ತು ಕುಕ್ಕರ್‌ಗಳನ್ನು ವಾಪಸ್ ಕೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಮತದಾರರು ರಸ್ತೆಯಲ್ಲಿ ಕುಕ್ಕರ್‌ಗಳನ್ನಿಟ್ಟು ಪ್ರತಿಭಟನೆ ನಡೆಸಿದ್ದಾರೆ.

Read Full Story

08:05 AM (IST) Feb 16

ರಣಜಿ ಟ್ರೋಫಿ ಸೆಮಿಫೈನಲ್ - ಉತ್ತರಖಂಡ ಎದುರು ಕರ್ನಾಟಕ ಬೃಹತ್ ಮೊತ್ತ; ಮೊದಲ ದಿನವೇ ಶತಕ ಚಚ್ಚಿದ ರಾಹುಲ್, ಪಡಿಕ್ಕಲ್

ರಣಜಿ ಟ್ರೋಫಿ ಸೆಮಿಫೈನಲ್‌ನಲ್ಲಿ ಉತ್ತರಾಖಂಡ ವಿರುದ್ಧ ಕರ್ನಾಟಕ ಮೊದಲ ದಿನವೇ ಬೃಹತ್ ಮೊತ್ತ ಕಲೆಹಾಕಿದೆ. ಕೆ.ಎಲ್. ರಾಹುಲ್ (141) ಮತ್ತು ನಾಯಕ ದೇವದತ್ ಪಡಿಕ್ಕಲ್ (148*) ಅವರ ಭರ್ಜರಿ ಶತಕಗಳ ನೆರವಿನಿಂದ, ದಿನದಾಟದ ಅಂತ್ಯಕ್ಕೆ ತಂಡ 2 ವಿಕೆಟ್‌ಗೆ 355 ರನ್ ಗಳಿಸಿದೆ.
Read Full Story

More Trending News