ಮುಂದಿನ ವಿಶೇಷ ಸಂಸತ್ ಅಧಿವೇಶದಲ್ಲಿ ದೇಶದ ಹೆಸರನ್ನು ಮರುನಾಮಕರಣ ಮಾಡಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ ಎನ್ನಲಾಗಿದೆ. ಇಂಡಿಯಾ ಎನ್ನುವ ಹೆಸರಿನ ಬದಲು ಭಾರತ ಎನ್ನುವ ಹೆಸರನ್ನು ಕೇಂದ್ರ ಸರ್ಕಾರ ಯೋಚಿಸಿದೆ.
ನವದೆಹಲಿ (ಸೆ. 5): ಮುಂದಿನ ಸಂಸತ್ ವಿಶೇಷ ಅಧಿವೇಶನದ ವೇಳೆ ದೇಶದ ಹೆಸರನ್ನು ಮರು ನಾಮಕರಣ ಮಾಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಲಿದೆ ಎಂದು ವರದಿಯಾಗಿದೆ. ರಿಪಬ್ಲಿಕ್ ಆಫ್ ಇಂಡಿಯಾ ಎನ್ನುವ ಹೆಸರಿನ ಬದಲು ರಿಪಬ್ಲಿಕ್ ಆಫ್ ಭಾರತ ಎನ್ನುವ ಹೆಸರನ್ನು ಇಡಲು ಸರ್ಕಾರ ತೀರ್ಮಾನ ಮಾಡಿದೆ. ಇಂಡಿಯಾವನ್ನು ಭಾರತ ಎಂದು ಮರುನಾಮಕರಣ ಮಾಡಲು ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಸರ್ಕಾರವು ಹೊಸ ನಿರ್ಣಯವನ್ನು ತರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.ಅದರೊಂದಿಗೆ ಮಂಗಳವಾರ ಬೆಳಗ್ಗೆ ಟ್ವೀಟ್ ಮಾಡಿದ್ದ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಜಿ20 ಶೃಂಗಸಭೆಯ ಹಿನ್ನಲೆಯಲ್ಲಿ ಸೆ. 9 ರಂದು ರಾತ್ರಿ ಭೋಜನಕೂಟಕ್ಕೆ ರಾಷ್ಟ್ರಪತಿ ಭವನದಿಂದ ಆಹ್ವಾನ ಬಂದಿದೆ. ಸಾಮಾನ್ಯವಾಗಿ ಆಹ್ವಾನ ಪತ್ರಿಕೆಯಲ್ಲಿ ಪ್ರೆಸಿಡೆಂಟ್ ಆಫ್ ಇಂಡಿಯಾ ಎಂದು ಉಲ್ಲೇಖವಿರುತ್ತಿತ್ತು. ಆದರೆ, ಈ ಬಾರಿಯ ಪತ್ರದಲ್ಲಿ ಪ್ರೆಸಿಡೆಂಟ್ ಆಫ್ ಭಾರತ್ ಎಂದು ಉಲ್ಲೇಖ ಮಾಡಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಇದೂ ಕೂಡ ಅಧಿಕೃತವಾಗಿ ಸರ್ಕಾರ ದೇಶದ ಹೆಸರನ್ನು ಇಂಡಿಯಾ ಎನ್ನುವುದರ ಬದಲು ಭಾರತ್ ಎಂದು ಮರುನಾಮಕರಣ ಮಾಡಲಿದೆ ಎನ್ನುವ ಸೂಚನೆ ನೀಡಿದೆ.
ದೇಶದ ಹೆಸರನ್ನು ಮರು ನಾಮಕರಣ ಮಾಡುವುದೇ ವಿಶೇಷ ಅಧಿವೇಶದ ಮೂಲ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಸಂಸತ್ತಿನಲ್ಲಿ ನಿರ್ಣಯವನ್ನು ಮಂಡಿಸಲು ಸಿದ್ಧತೆ ನಡೆಸಿದೆ. ಇದರ ಬೆನ್ನಲ್ಲಿಯೇ ಟ್ವೀಟ್ ಮಾಡಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮ, 'ಭಾರತ್ ಗಣರಾಜ್ಯ - ನಮ್ಮ ನಾಗರಿಕತೆಯು ಅಮೃತ ಕಾಲದ ಕಡೆಗೆ ಧೈರ್ಯದಿಂದ ಮುನ್ನಡೆಯುತ್ತಿರುವುದಕ್ಕೆ ಸಂತೋಷ ಮತ್ತು ಹೆಮ್ಮೆ ಆಗುತ್ತಿದೆ' ಎಂದು ಬರೆದುಕೊಂಡಿದ್ದಾರೆ.
ವಿಶ್ವಕಪ್ ಟೂರ್ನಿಗೆ ಭಾರತ ತಂಡ ಸೆಲೆಕ್ಟ್ ಮಾಡಿದ ಗೌತಮ್ ಗಂಭೀರ್..! ಇಬ್ಬರು ಸ್ಟಾರ್ ಆಟಗಾರರಿಗಿಲ್ಲ ಸ್ಥಾನ
ನಮ್ಮ ಸಂವಿಧಾನವನ್ನು ರಚಿಸಿದವರಿಗೆ ಗೌರವಯುತವಾಗಿ, ಅವರು ಸಂವಿಧಾನದಲ್ಲಿ 'ಭಾರತ' ಮತ್ತು 'ಇಂಡಿಯಾ' ಪದಗಳನ್ನು ಇಟ್ಟುಕೊಂಡು ತಪ್ಪು ಮಾಡಿದ್ದಾರೆ ಎಂದು ನಾನು ಹೇಳಲು ಬಯಸುತ್ತೇನೆ ಎಂದು ಬಿಜೆಪಿ ಸಂಸದ ಹರನಾಥ್ ಸಿಂಗ್ ಯಾದವ್ ಹೇಳಿದ್ದಾರೆ.
'ಇದು ಟೀಮ್ ಇಂಡಿಯಾ ಅಲ್ಲ..' ವಿಶ್ವಕಪ್ ತಂಡದ ಕುರಿತಾಗಿ ವೀರೇಂದ್ರ ಸೆಹ್ವಾಗ್ ಅಚ್ಚರಿಯ ರಿಯಾಕ್ಷನ್!
ಅಧಿಕೃತ ಜಿ 20 ಶೃಂಗಸಭೆಯ ಆಹ್ವಾನಗಳಲ್ಲಿ 'ಪ್ರೆಸಿಡೆಂಟ್ ಆಫ್ ಇಂಡಿಯಾ' ಎಂಬ ಉಲ್ಲೇಖವನ್ನು 'ಪ್ರೆಸಿಡೆಂಟ್ ಆಫ್ ಭಾರತ್' ಎಂದು ಬದಲಾಯಿಸಲು ಬಿಜೆಪಿಯ ತೀರ್ಮಾನ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ. ಮತ್ತು ಸಾರ್ವಜನಿಕ ಚರ್ಚೆಯನ್ನು ಹುಟ್ಟುಹಾಕಿದೆ. ಬಿಜೆಪಿ ಹೇಗೆ 'ಇಂಡಿಯಾ'ವನ್ನು ಹೊಡೆದು ಹಾಕುತ್ತದೆ? ದೇಶವು ರಾಜಕೀಯ ಪಕ್ಷಕ್ಕೆ ಸೇರಿಲ್ಲ; ಇದು 135 ಕೋಟಿ ಭಾರತೀಯರಿಗೆ ಸೇರಿದ್ದು. ನಮ್ಮ ರಾಷ್ಟ್ರೀಯ ಅಸ್ಮಿತೆ ಬಿಜೆಪಿಯ ವೈಯಕ್ತಿಕ ಆಸ್ತಿಯಲ್ಲ, ಅದು ಮನಸೋಇಚ್ಛೆ ಮತ್ತು ಕಲ್ಪನೆಗಳ ಮೇಲೆ ಮಾರ್ಪಡಿಸುವಂತಿಲ್ಲ ಎಂದು ಆಪ್ ಸಂಸದ ರಾಘವ್ ಚಡ್ಡಾ ಟ್ವೀಟ್ ಮಾಡಿದ್ದಾರೆ.