
ಚೆನ್ನೈ (ಸೆಪ್ಟೆಂಬರ್ 5, 2023): ತಮಿಳುನಾಡು ಸಿಎಂ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಬಗ್ಗೆ ನೀಡಿದ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಈಗ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ವ್ಯಂಗ್ಯವಾಡಿದ್ದಾರೆ.
ರಾಹುಲ್ ಗಾಂಧಿ ಮೋದಿ ಸಮುದಾಯದ ಬಗ್ಗೆ ಮಾತನಾಡಿದಂತೆ ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ ಮಾತನಾಡಿದ್ದಾರೆ. ಈ ಹಿನ್ನೆಲೆ ರಾಹುಲ್ ಗಾಂಧಿ ಉತ್ತರ ಭಾರತದ ಪಪ್ಪು ಆದ್ರೆ, ದಕ್ಷಿಣ ಭಾರತದ ಪಪ್ಪು ಉದಯನಿಧಿ ಸ್ಟಾಲಿನ್ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಟೀಕಿಸಿದ್ದಾರೆ.
ಇದನ್ನು ಓದಿ: ನಾನು ಮತ್ತೆ ಮತ್ತೆ ಅದನ್ನೇ ಹೇಳುವೆ; ಸನಾತನ ಧರ್ಮ ನಿರ್ಮೂಲನೆ ಆಗಬೇಕೆಂಬ ಹೇಳಿಕೆ ಬದಲಿಲ್ಲ: ಉದಯನಿಧಿ ಸಮರ್ಥನೆ
ಸನಾತನ ಕುರಿತು ಸಚಿವ ಉದಯನಿಧಿ ಸ್ಟಾಲಿನ್ ಭಾಷಣ ಭಾರತದಲ್ಲಿ ಸಂಚಲನ ಮೂಡಿಸಿದೆ. ಅಮಿತ್ ಶಾ, ನಡ್ಡಾ ಸೇರಿದಂತೆ ಬಿಜೆಪಿಯ ಕೇಂದ್ರ ನಾಯಕರು ಮತ್ತು ಕೇಂದ್ರ ಸಚಿವರು ಪ್ರತಿಕ್ರಿಯಿಸುತ್ತಿದ್ದಾರೆ.
ಈ ಸಂಬಂಧ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ, ರಾಹುಲ್ ಗಾಂಧಿ ಮೋದಿ ಸಮುದಾಯದ ಬಗ್ಗೆ ಮಾತನಾಡಿದಂತೆ ಸನಾತನ ಬಗ್ಗೆ ಉದಯನಿಧಿ ಸ್ಟಾಲಿನ್ ಮಾತನಾಡಿದ್ದಾರೆ. ಈ ಹಿನ್ನೆಲೆ ಉತ್ತರ ಭಾರತದ ಪಪ್ಪು ರಾಹುಲ್ ಗಾಂಧಿ ಆದ್ರೆ, ದಕ್ಷಿಣ ಭಾರತದ ಪಪ್ಪು ಉದಯನಿಧಿ ಎಂದಿದ್ದಾರೆ.
ಇದನ್ನೂ ಓದಿ: ಸನಾತನ ಧರ್ಮ ಡೆಂಘೀ, ಮಲೇರಿಯಾ ಇದ್ದಂತೆ ನಿರ್ಮೂಲನೆ ಮಾಡಿ: ಸ್ಟಾಲಿನ್ ಪುತ್ರ
ಅವರು ಹೀಗೆಯೇ ಮಾತನಾಡುತ್ತಾ ಹೋದರೆ ‘I.N.D.I.A’ ಮೈತ್ರಿಕೂಟದ ಮತಬ್ಯಾಂಕ್ ಕುಸಿಯುತ್ತಲೇ ಹೋಗುತ್ತದೆ. ಈಗ ‘I.N.D.I.A’ ಮೈತ್ರಿಕೂಟದ ಮತಗಳ ಪ್ರಮಾಣ ಶೇಕಡಾ ಐದಕ್ಕೆ ಇಳಿದಿದೆ. ಉದಯನಿಧಿ ಹೀಗೆಯೇ ಮುಂದುವರಿದರೆ, ‘I.N.D.I.A’ ಮೈತ್ರಿಕೂಟದ ಮತಗಳು ಶೇಕಡಾ 20 ರಷ್ಟು ಕಡಿಮೆಯಾಗುತ್ತವೆ. ಒಂದು ವಿಚಾರದ ಬಗ್ಗೆ ಮಾತನಾಡಿದ ನಂತರ, ಆಕ್ಷೇಪಣೆ ಬಂದಾಗ ಅದನ್ನು ವಿವರಿಸುವುದನ್ನು ಮುಂದುವರಿಸುತ್ತಾರೆ. ಕಾಂಗ್ರೆಸ್ ಪಕ್ಷವೇ ಉದಯನಿಧಿ ಭಾಷಣವನ್ನು ವಿರೋಧಿಸುತ್ತಿದೆ ಎಂದೂ ತಮಿಳುನಾಡಲ್ಲಿ ಅಣ್ಣಾಮಲೈ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಸನ್ನಡತೆ ಅಡಿ ಸ್ಫೋಟ ರೂವಾರಿ ಉಗ್ರನ ಬಿಡುಗಡೆಗೆ ಸರ್ಕಾರ ಸಿದ್ಧತೆ!
ಇದನ್ನು ಓದಿ: Love Marriage: ಇಶಿಕಾ ಆದ ಇಕ್ರಾ; ಮದುವೆಗಾಗಿ ಸನಾತನ ಧರ್ಮಕ್ಕೆ ಸೇರಿದ ಮುಸ್ಲಿಂ ಯುವತಿ..!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ