ಉದಯನಿಧಿ ಸ್ಟ್ಯಾಲಿನ್‌ ಟೀಕೆಯನ್ನು ಹಿಟ್ಲರ್‌ ಮಾತಿಗೆ ಹೋಲಿಸಿದ ಬಿಜೆಪಿ!

Published : Sep 05, 2023, 11:06 AM IST
ಉದಯನಿಧಿ ಸ್ಟ್ಯಾಲಿನ್‌ ಟೀಕೆಯನ್ನು ಹಿಟ್ಲರ್‌ ಮಾತಿಗೆ ಹೋಲಿಸಿದ ಬಿಜೆಪಿ!

ಸಾರಾಂಶ

ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿಕೆ ನೀಡುವ ಮೂಲಕ ದೇಶದ ಶೇ. 80ರಷ್ಟು ಹಿಂದುಗಳ ನರಮೇಧ ಮಾಡುವಂಥ ಅರ್ಥದಲ್ಲಿ ಮಾತನಾಡಿದ್ದ ತಮಿಳುನಾಡು ಸಚಿವ ಹಾಗೂ ಸಿಎಂ ಎಂಕೆ ಸ್ಟ್ಯಾಲಿನ್‌ ಪುತ್ರ ಉದಯನಿಧಿ ಸ್ಟ್ಯಾಲಿನ್‌ ಮಾತನ್ನು ಬಿಜೆಪಿ, ಅಡಾಲ್ಫ್‌ ಹಿಟ್ಲರ್‌ ಮಾತಿಗೆ ಹೋಲಿಸಿದೆ.

ನವದೆಹಲಿ (ಸೆ.5): ಸನಾತನ ಧರ್ಮ ಎನ್ನುವುದು ಡೆಂಘೆ, ಮಲೇರಿಯಾ ಇದ್ದಂತೆ. ಅದನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳುವ ಮೂಲಕ ದೇಶದ ಶೇ 80ರಷ್ಟು ಹಿಂದುಗಳ ನರಮೇಧ ಮಾಡಬೇಕು ಎನ್ನುವ ಅರ್ಥದಲ್ಲಿ ಹೇಳಿಕೆ ನೀಡಿದ್ದ ತಮಿಳುನಾಡು ಕ್ರೀಡಾ ಸಚಿವ ಹಾಗೂ ಮುಖ್ಯಮಂತ್ರಿ ಎಂಕೆ ಸ್ಟ್ಯಾಲಿನ್‌ ಪುತ್ರ ಉದಯನಿಧಿ ಸ್ಟ್ಯಾಲಿನ್‌ ಅವರ ಮಾತನ್ನು ಬಿಜೆಪಿ ಅಡಾಲ್ಫ್‌ ಹಿಟ್ಲರ್‌ ಆಡಿದಂಥ ಮಾತಿಗೆ ಹೋಲಿಸಿದೆ.  ಇದಕ್ಕೂ ಮುನ್ನ ಕರ್ನಾಟಕದ ಮಾಜಿ ಸಿಎಂ ಬಸವರಾಜ್‌ ಬೊಮ್ಮಾಯಿ ಕೂಡ ಆತನನ್ನು ಉದಯನಿಧಿ ಸ್ಟ್ಯಾಲಿನ್‌ ಎನ್ನುವ ಬದಲು ಉದಯನಿಧಿ ಹಿಟ್ಲರ್‌ ಎಂದು ಹೇಳಬೇಕು ಎಂದಿದ್ದರು. ಈ ನಡುವೆ ಉದಯನಿಧಿ ಸ್ಟ್ಯಾಲಿನ್‌ ಮಾಡಿರುವ ಮಾತಿಗೆ ರಾಷ್ಟ್ರಾದ್ಯತ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ದ್ವೇಷ ಭಾಷಣದ ಕುರಿತಾಗಿ ಸ್ಟ್ಯಾಲಿನ್‌ ವಿರುದ್ಧ ದೂರು ಕೂಡ ದಾಖಲಾಗಿದೆ. ಚೆನ್ನೈ ಪೊಲೀಸರು ಕ್ರಮ ಕೈಗೊಳ್ಳದೆ ಇದ್ದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡುವುದಾಗಿ ವಕೀಲರು ಕೂಡ ಎಚ್ಚರಿಸಿದ್ದಾರೆ. ಇನ್ನೊಂದೆಡೆ ಸ್ಟ್ಯಾಲಿನ್‌ಗೆ ಜೀವ ಬೆದರಿಕೆ ಕೂಡ ಬಂದಿರುವ ಹಿನ್ನಲೆಯಲ್ಲಿ ಅವರ ಚೆನ್ನೈ ನಿವಾಸಕ್ಕೆ ತಮಿಳುನಾಡು ಸರ್ಕಾರ ಹೆಚ್ಚಿನ ಭದ್ರತೆಯನ್ನೂ ನೀಡಿದೆ. ಇಷ್ಟೆಲ್ಲಾ ಆದರೂ ಸ್ಟ್ಯಾಲಿನ್‌ ಮಾತ್ರ ತಾವು ಆಡಿರುವ ಮಾತಿಗೆ ಕ್ಷಮೆ ಕೇಳೋದೇ ಇಲ್ಲ ಎಂದು ಹೇಳಿದ್ದಾರೆ.

'ಹಿಟ್ಲರ್ ಯಹೂದಿಗಳನ್ನು ಹೇಗೆ ನಿರೂಪಿಸಿದನು ಮತ್ತು ಉದಯನಿಧಿ ಸ್ಟಾಲಿನ್ ಸನಾತನ ಧರ್ಮವನ್ನು ಹೇಗೆ ವಿವರಿಸಿದನು ಎಂಬುದರ ನಡುವೆ ವಿಲಕ್ಷಣವಾದ ಹೋಲಿಕೆಯಿದೆ. ಹಿಟ್ಲರ್‌ನಂತೆ, ಸ್ಟಾಲಿನ್ ಜೂನಿಯರ್ ಕೂಡ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕೆಂದು ಒತ್ತಾಯಿಸಿದ್ದಾನೆ. ನಾಜಿ ದ್ವೇಷವು ಹತ್ಯಾಕಾಂಡದಲ್ಲಿ ಹೇಗೆ ಪರಾಕಾಷ್ಠೆಯಾಯಿತು, ಸರಿಸುಮಾರು 6 ಮಿಲಿಯನ್ ಯುರೋಪಿಯನ್ ಯಹೂದಿಗಳು ಮತ್ತು ಕನಿಷ್ಠ 5 ಮಿಲಿಯನ್ ಸೋವಿಯತ್ ಯುದ್ಧ ಕೈದಿಗಳು ಮತ್ತು ಇತರ ಸಂತ್ರಸ್ಥರನ್ನು ಆ ಸಮಯದಲ್ಲಿ ಕೊಲ್ಲಲಾಯಿತು.

ಉದಯ್ ಸ್ಟಾಲಿನ್ ಅವರ ಕಾಮೆಂಟ್ ದ್ವೇಷದ ಮಾತು ಮತ್ತು ಸನಾತನ ಧರ್ಮವನ್ನು ಅನುಸರಿಸುವ 80% ಭಾರತದ ಜನಸಂಖ್ಯೆಯ ನರಮೇಧದ ಕರೆಯಾಗಿದೆ. ಸ್ಟಾಲಿನ್ ಅವರ ಮಾತಿಗೆ ಕಾಂಗ್ರೆಸ್ ಮತ್ತು ಇಂಡಿ ಮೈತ್ರಿಕೂಟದ ಬೆಂಬಲವು ಇದೆ ಎನ್ನುವುದು ಇದರಲ್ಲಿ ಕಾಣುತ್ತದೆ' ಎಂದು ಬಿಜೆಪಿ ಇಂಡಿಯಾ ಟ್ವೀಟ್‌ ಮಾಡಿದೆ.

ಹಿಟ್ಲರ್‌ ತನ್ನ ಎಲ್ಲಾ ಭಾಷಣದಲ್ಲಿ ಯಹೂದಿಗಳನ್ನು ಸಂಪೂರ್ಣವಾಗಿ ನಿರ್ನಾಮ ಮಾಡುವುದೇ ತನ್ನ ಗುರಿ ಎಂದು ಹೇಳಿಕೊಳ್ಳುತ್ತಿದ್ದ. ಅದೇ ರೀತಿಯಲ್ಲಿ ಉದಯನಿಧಿ ಸ್ಟ್ಯಾಲಿನ್‌ ಕೂಡ ಸನಾತನ ಧರ್ಮವನ್ನು ಡೆಂಘೆ, ಮಲೇರಿಯಾ, ಸೊಳ್ಳೆಗಳು ಹಾಗೂ ಕೊರೋನಾ ಎಂದು ಹೇಳಿದ್ದಲ್ಲದೆ, ಇವುಗಳನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದಾರೆ. ನಾವು ಸನಾತನ ಧರ್ಮವನ್ನು ವಿರೋಧಿಸುವುದು ಮಾತ್ರವನ್ನು ಸದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಎಂದು ಕರೆ ನೀಡಿದ್ದಾರೆ ಎಂದು ಬಿಜೆಪಿ ಪೋಸ್ಟರ್‌ನಲ್ಲಿ ಹಂಚಿಕೊಂಡಿದೆ.

 

ನಾನು ಮತ್ತೆ ಮತ್ತೆ ಅದನ್ನೇ ಹೇಳುವೆ; ಸನಾತನ ಧರ್ಮ ನಿರ್ಮೂಲನೆ ಆಗಬೇಕೆಂಬ ಹೇಳಿಕೆ ಬದಲಿಲ್ಲ: ಉದಯನಿಧಿ ಸಮರ್ಥನೆ 

“ಇದು ಈ ದೇಶದ ಸಾಮಾಜಿಕ ರಚನೆಯನ್ನು ಹಾಳು ಮಾಡಿ ಅಧಿಕಾರಕ್ಕೆ ಬರಲು ಒಟ್ಟಾಗಿ ಕೈಜೋಡಿಸುತ್ತಿರುವ ಪಕ್ಷಗಳ ಗುಂಪಿನ ಮನಸ್ಥಿತಿಯಾಗಿದೆ. ಅವರು ಯಾವುದೇ ಬೆಲೆ ತೆತ್ತಾದರೂ ಅಧಿಕಾರಕ್ಕೆ ಬರಲು ಬಯಸುತ್ತಾರೆ. ಇದು ಪ್ರಜಾಪ್ರಭುತ್ವ ವಿರೋಧಿ ಮತ್ತು ಮಾನವೀಯತೆಯ ವಿರೋಧಿ ಎಂಬುದು ಸ್ಪಷ್ಟವಾಗಿದೆ. ಅವರಿಗೆ ಉದಯನಿಧಿ ಹಿಟ್ಲರ್ ಸರಿಯಾದ ಪದ” ಎಂದು ಇದಕ್ಕೂ ಮುನ್ನ ಬಸವರಾಜ್‌ ಬೊಮ್ಮಾಯಿ ಹೇಳಿದ್ದರು.

ಸ್ಟಾಲಿನ್ ಬಳಿಕ ಸನಾತನ ಧರ್ಮದ ವಿರುದ್ಧ ಪ್ರಕಾಜ್ ರಾಜ್ ವಿವಾದ್ಮಾಕ ಟ್ವೀಟ್, ನೆಟ್ಟಿಗರಿಂದ ಮಂಗಳಾರತಿ!

ಚಿತ್ರಕೂಟದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಜೆಪಿ ನಡ್ಡಾ, ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮವನ್ನು ತೊಡೆದುಹಾಕಬೇಕು ಎಂದು ಹೇಳುತ್ತಾರೆ, ಅವರು ಡೆಂಗ್ಯೂ ಮತ್ತು ಮಲೇರಿಯಾದಂತೆ ಸನಾತನ ಧರ್ಮವನ್ನು ತೊಡೆದುಹಾಕಬೇಕು ಎಂದು ಹೇಳುತ್ತಾರೆ. ಹೇಳಿಕೆಗಳು. ಉದಯನಿಧಿಯವರ ಹೇಳಿಕೆಯು ಭಾರತ ಮೈತ್ರಿಕೂಟದ ರಾಜಕೀಯ ತಂತ್ರದ ಒಂದು ಭಾಗವೇ?" ಎಂದು ಪ್ರಶ್ನೆ ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!