India Poverty ಬಹುತೇಕ ಬಡತನ ನಿರ್ಮೂಲನ ಮಾಡಿದ ಭಾರತ, ಪವರ್ಟಿ ಶೇ.12.3ಕ್ಕೆ ಇಳಿಕೆ ಎಂದು ವಿಶ್ವಬ್ಯಾಂಕ್ ವರದಿ

By Suvarna NewsFirst Published Apr 17, 2022, 9:49 PM IST
Highlights
  • ಮತ್ತೊಂದು ಮೈಲಿಗಲ್ಲು ನಿರ್ಮಿಸಿದ ಭಾರತ
  • ಭಾರತದ ತೀವ್ರ ಬಡತನ ಶೇಕಡಾ 12.3 ಕ್ಕೆ ಇಳಿಕೆ
  • ವಿಶ್ವಬ್ಯಾಂಕ್ ವರದಿಯಲ್ಲಿ ಬಹಿರಂಗ

ನವದೆಹಲಿ(ಏ.17): ವಿದೇಶಾಂಗ ನೀತಿ, ಆರ್ಥಿಕತೆ, ಜಿಡಿಪಿ, ಭದ್ರತೆ, ದ್ವಪಕ್ಷೀಯ ಸಂಬಂಧ ಸೇರಿದಂತೆ ಎಲ್ಲಾ ವಿಚಾರಗಳಲ್ಲಿ ಭಾರತ ವಿಶ್ವದ ಪ್ರಮುಖ ರಾಷ್ಟ್ರಗಳಿಗೆ ಸೆಡ್ಡು ಹೊಡೆಯುತ್ತಿದೆ. ಇದರ ನಡುವೆ ಇದೀಗ ಮತ್ತೊಂದು ಮೈಲಿಗಲ್ಲು ನಿರ್ಮಿಸಿದೆ. ಭಾರತದ ಅತೀ ಬಡತನ ತೀವ್ರವಾಗಿ ಇಳಿಮುಖವಾಗಿದೆ. ವಿಶ್ವಬ್ಯಾಂಕ್ ಸಂಶೋಧನಾ ವರದಿ ಬಿಡುಗಡೆಯಾಗಿದ್ದು ಭಾರತದ ತೀವ್ರ ಬಡನ ಸೇಕಡಾ 12.3ಕ್ಕೆ ಇಳಿಕೆಯಾಗಿದೆ.

2011ರಿಂದ 2019ರ ಅವಧಿಯಲ್ಲಿ ಭಾರತದ ತೀವ್ರ ಬಡನತ ರೇಖೆ ಇಳಿಮುಖವಾಗಿದೆ. 2011ರಲ್ಲಿ ಶೇಕಡಾ 22.5ರಷ್ಟಿದ್ದ ಕಡು ಬಡತನ ಪ್ರಮಾಣ 2019ರಲ್ಲಿ ಶೇಕಜಾ 10.2ಕ್ಕೆ ಕುಸಿತ ಕಂಡಿದೆ. ಬಡತನ ಇಳಿಮುಖ ಪ್ರಮಾಣದಲ್ಲಿ ಗ್ರಾಮೀಣ ಭಾಗಗಳಲ್ಲೇ ಹೆಚ್ಚಾಗಿದೆ ಎಂದು ವರದಿ ಹೇಳಿದೆ.

ಭಾರತದಲ್ಲಿ ಬಡತನ ಏರಿಕೆ ತಡೆದ ಮೋದಿ ಧಾನ್ಯ ಸ್ಕೀಂ

ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಕೂಡ ಭಾರತದಲ್ಲಿ ಕಡುಬಡತನ ಬಹುತೇಕ ನಿರ್ಮೂಲನೆಯಾಗಿದೆ. ಸರ್ಕಾರಗಳು ಉಚಿತ ಆಹಾರ ಪೂರೈಸುತ್ತಿರುವುದರಿಂದ ಭಾರತದಲ್ಲಿನ ತೀವ್ರತರ ಬಡತನ ಕಳೆದ 40 ವರ್ಷಗಳಲ್ಲೇ ಈಗ ಕನಿಷ್ಠಕ್ಕೆ ಕುಸಿದಿದೆ ಎಂದು ಹೇಳಿತ್ತು. ಅದರ ಬೆನ್ನಲ್ಲೇ ಈಗ ವಿಶ್ವಬ್ಯಾಂಕ್‌ ಕೂಡ ಭಾರತದಲ್ಲಿ ಕಡುಬಡವರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಕುಸಿದಿರುವ ಬಗ್ಗೆ ಹೇಳಿರುವುದು ಆಶಾಭಾವನೆ ಮೂಡಿಸಿದೆ.

ವಿಶೇಷವೆಂದರೆ, ಭಾರತದ ನಗರ ಪ್ರದೇಶಗಳಿಗಿಂತ ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿ ಬಡತನ ಇಳಿಕೆಯ ಪ್ರಮಾಣ ಹೆಚ್ಚಿದೆ. ನಗರ ಪ್ರದೇಶಗಳಲ್ಲಿ ಬಡತನ ಕುಸಿತದ ಪ್ರಮಾಣ ಶೇ.7.9 ಇದ್ದರೆ ಗ್ರಾಮೀಣ ಪ್ರದೇಶದಲ್ಲಿ ಶೇ.14.7ರಷ್ಟಿದೆ. ‘ಭಾರತದಲ್ಲಿ ಬಡವರ ಸಂಖ್ಯೆ ಇಳಿಕೆಯಾಗಿದೆ. ಆದರೆ, ಈ ಹಿಂದೆ ಅಂದುಕೊಂಡಷ್ಟುಪ್ರಮಾಣದಲ್ಲಿ ಇಳಿಕೆಯಾಗಿಲ್ಲ’ ಎಂದೂ ವರದಿ ಹೇಳಿದೆ.

ಕೊರೋನಾ ಸಂಕಷ್ಟದಲ್ಲಿ ಭಾರತದ ದಿಟ್ಟ ನಡೆ: PMGKAY ಯೋಜನೆಗೆ IMF ಶ್ಲಾಘನೆ!

ಸಣ್ಣ ಕೃಷಿಕರ ಆದಾಯ ಹೆಚ್ಚಳ:
ಭಾರತದಲ್ಲಿ 2011-2019ರ ನಡುವೆ ಅತಿ ಸಣ್ಣ ಕೃಷಿಕರ ನೈಜ ಆದಾಯ ಶೇ.10ರಷ್ಟುಹೆಚ್ಚಾಗಿದೆ. ದೊಡ್ಡ ಕೃಷಿಕರ ಆದಾಯ ಶೇ.2ರಷ್ಟುಮಾತ್ರ ಹೆಚ್ಚಾಗಿದೆ ಎಂದೂ ವಿಶ್ವಬ್ಯಾಂಕ್‌ನ ವರದಿ ತಿಳಿಸಿದೆ.

ವಿಶ್ವಬ್ಯಾಂಕ್‌ನ ಇಬ್ಬರು ಅರ್ಥಶಾಸ್ತ್ರಜ್ಞರಾದ ಸುತೀರ್ಥ ಸಿನ್ಹಾ ರಾಯ್‌ ಹಾಗೂ ರಾಯ್‌ ವ್ಯಾನ್‌ ಡೆರ್‌ ವೀಡ್‌ ಈ ವರದಿ ಸಿದ್ಧಪಡಿಸಿದ್ದಾರೆ. ಖಾಸಗಿ ದತ್ತಾಂಶ ಕಂಪನಿಯೊಂದು ಕನ್ಸ್ಯೂಮರ್‌ ಪಿರಾಮಿಡ್‌್ಸ ಹೌಸ್‌ಹೋಲ್ಡ್‌ ಸರ್ವೇ ಮೂಲಕ ಪಡೆದ ಅಂಕಿ-ಅಂಶಗಳನ್ನು ಬಳಸಿ ವರದಿ ಸಿದ್ಧಪಡಿಸಲಾಗಿದೆ.

ಬಡತನ ನಿರ್ಮೂಲನೆಯಲ್ಲಿ ಭಾರತ ಕಳೆದ 9 ವರ್ಷಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದೆ. ಆಹಾರ ಅಸಮಾನತೆಯನ್ನು ಹೋಗಲಾಡಿಸಲು ಕೇಂದ್ರದ ಉಚಿತ ಪಡಿತರ ಯೊಜನೆ ಸೇರದಂತೆ ಹಲವು ಯೋಜನೆಗಳು ನೆರವಾಗಿದೆ ಎಂದು ಇತ್ತೀಚೆಗೆ ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಪ್ರಕಟಿಸಿತ್ತು. ಇದರ ಬೆನ್ನಲ್ಲೇ ವಿಶ್ವ ಬ್ಯಾಂಕ್ ಕೂಡ ವರದಿ ನೀಡಿದೆ.

ಗ್ರಾಮೀಣ ಪ್ರದೇಶದಲ್ಲಿನ ಬಡತನ 2019ರಲ್ಲಿ ಶೇಕಾ 11.9ಕ್ಕೆ ಇಳಿಕೆಯಾಗಿದೆ. ಇದು 2011ರಲ್ಲಿ ಶೇಕಡಾ 26.3ರಷ್ಟಿತ್ತು. ಇನ್ನು ಭಾರತದ ನಗರದಲ್ಲಿ 2011ರಲ್ಲಿ 14.2 ರಷ್ಟು ಬಡತವಿತ್ತು. 2019ರ ವೇಳೆಗೆ ಇದೇ ಬಡತನ ಪ್ರಮಾಣ ಶೇಕಡಾ 6.3ಕ್ಕೆ ಇಳಿಕೆಯಾಗಿದೆ ಎಂದು ವಿಶ್ವ ಬ್ಯಾಂಕ್ ವರದಿ ಹೇಳಿದೆ.

ಮತ್ತೆ ವಿಸ್ತರಣೆಗೊಂಡಿದೆ ಉಚಿತ ಪಡಿತರ

 ದೇಶದಲ್ಲಿ ಕೋವಿಡ್‌ ಅಬ್ಬರ ಬಹುತೇಕ ಕಡಿಮೆಯಾಗಿದ್ದರೂ, ‘ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ್‌ ಅನ್ನ ಯೋಜನೆ (ಪಿಎಂಜಿಕೆಎವೈ)’ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿನ ವರ್ಗ(ಬಿಪಿಎಲ್‌)ದ ದೇಶದ 80 ಕೋಟಿ ಜನರಿಗೆ ಇನ್ನೂ 6 ತಿಂಗಳ ಕಾಲ ಉಚಿತ ಆಹಾರ ಧಾನ್ಯ ವಿತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಶನಿವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

click me!